Tokyo Olympics: ಸೆಮಿ ಫೈನಲ್​ಗೆ ಲಗ್ಗೆಯಿಟ್ಟ ಭಜರಂಗ್‌ ಪುನಿಯ: ಪದಕದ ನಿರೀಕ್ಷೆಯಲ್ಲಿ ಭಾರತ

Bajrang Punia: ಪುರುಷರ 65 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇರಾನಿನ ಕುಸ್ತಿಪಟು ಮೋರ್ತೆಜಾ ಗಿಯಾಸಿ ವಿರುದ್ಧ 2-1 ಅಂಕಗಳ ಮುನ್ನಡೆ ಸಾಧಿಸಿ ಭಜರಂಗ್‌ ಪುನಿಯ ಸೆಮೀಸ್​ಗೆ ತಲುಪಿದ್ದಾರೆ.

Tokyo Olympics: ಸೆಮಿ ಫೈನಲ್​ಗೆ ಲಗ್ಗೆಯಿಟ್ಟ ಭಜರಂಗ್‌ ಪುನಿಯ: ಪದಕದ ನಿರೀಕ್ಷೆಯಲ್ಲಿ ಭಾರತ
bajrang punia
Updated By: Vinay Bhat

Updated on: Aug 06, 2021 | 10:22 AM

ಟೋಕಿಯೋ ಒಲಿಂಪಿಕ್ಸ್ 2020 ರಲ್ಲಿ ಭಾರತದ ಕುಸ್ತಿಪಟು ಭಜರಂಗ್‌ ಪುನಿಯ ಸೆಮಿ ಫೈನಲ್​ಗೆ ಪ್ರವೇಶ ಪಡೆದಿದ್ದಾರೆ. ಪುರುಷರ 65 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇರಾನಿನ ಕುಸ್ತಿಪಟು ಮೋರ್ತೆಜಾ ಗಿಯಾಸಿ ವಿರುದ್ಧ 2-1 ಅಂಕಗಳ ಮುನ್ನಡೆ ಸಾಧಿಸಿ ಸೆಮೀಸ್​ಗೆ ತಲುಪಿದ್ದಾರೆ.

 

ಸೆಮಿಫೈನಲ್ ಕದನವು ಭಾರತೀಯ ಕಾಲಮಾನ ಅಪರಾಹ್ನ 2.52ಕ್ಕೆ ಸರಿಯಾಗಿ ಆರಂಭವಾಗಲಿದೆ. ಈ ಮೊದಲು ಪ್ರೀ-ಕ್ವಾರ್ಟರ್ಫೈನಲ್ ಮುಖಾಮುಖಿಯಲ್ಲಿ ಬಜರಂಗ್, ಕಿರ್ಗಿಸ್ತಾನದ ಎರ್ನಾಜರ್ ಅಕ್ಮಟಾಲೀವ್ ವಿರುದ್ಧ ಮೇಲುಗೈ ಸಾಧಿಸಿದ್ದರು. ಏತನ್ಮಧ್ಯೆ ಮಹಿಳೆಯರ 50 ಕೆ.ಜಿ. ವಿಭಾಗದಲ್ಲಿ ಸೋಲಿನ ಆಘಾತ ಎದುರಿಸಿರುವ ಸೀಮಾ ಬಿಸ್ಲಾ, ಹೊರಬಿದ್ದಿದ್ದಾರೆ.

ಗುರುವಾರ ಪುರುಷರ 57 ಕೆ.ಜಿ ವಿಭಾಗದಲ್ಲಿ ಭಾರತದ 23 ವರ್ಷದ ರವಿಕುಮಾರ್ ದಹಿಯಾ ಬೆಳ್ಳಿ ಪದಕ ಜಯಿಸಿದ್ದರು. ಈ ಮೂಲಕ ಒಲಿಂಪಿಕ್ಸ್ ಕುಸ್ತಿಯಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತದ ಎರಡನೇ ಕುಸ್ತಿಪಟುವೆಂಬ ಹೆಗ್ಗಳಿಕೆಗೆ ಪಾತ್ರರಾದರು. 2012ರಲ್ಲಿ ನಡೆದ ಲಂಡನ್ ಒಲಿಂಪಿಕ್ಸ್ನಲ್ಲಿ ಸುಶೀಲ್ ಕುಮಾರ್ 66ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಜಯಿಸಿದ್ದರು.

Published On - 9:59 am, Fri, 6 August 21