AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tokyo Olympics: ಒಲಿಂಪಿಕ್ಸ್​ನಲ್ಲಿ ಭಾಗಿಯಾಗುವ ಮಾಧ್ಯಮ ಸಿಬ್ಬಂದಿಗಳಿಗೆ ಕಠಿಣ ನಿಯಮ ಜಾರಿ! ಮದ್ಯಪಾನ ನಿಷೇಧಕ್ಕೆ ಚಿಂತನೆ?

Tokyo Olympics: ಟೋಕಿಯೊದಲ್ಲಿ ಕೊರೊನಾದ ಪರಿಣಾಮಗಳನ್ನು ತಡೆಗಟ್ಟಲು, ಜೂನ್ 20 ರವರೆಗೆ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ, ಅಲ್ಲಿ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ.

Tokyo Olympics: ಒಲಿಂಪಿಕ್ಸ್​ನಲ್ಲಿ ಭಾಗಿಯಾಗುವ ಮಾಧ್ಯಮ ಸಿಬ್ಬಂದಿಗಳಿಗೆ ಕಠಿಣ ನಿಯಮ ಜಾರಿ! ಮದ್ಯಪಾನ ನಿಷೇಧಕ್ಕೆ ಚಿಂತನೆ?
ಟೋಕಿಯೊ ಒಲಿಂಪಿಕ್ಸ್‌
ಪೃಥ್ವಿಶಂಕರ
|

Updated on:Jun 11, 2021 | 7:30 PM

Share

ಕೊರೊನಾದಿಂದಾಗಿ, ಈ ಬಾರಿ ಒಲಿಂಪಿಕ್ ಕ್ರೀಡಾಕೂಟವು ತುಂಬಾ ವಿಭಿನ್ನವಾಗಿರುತ್ತದೆ. ವಿದೇಶಿ ಅಭಿಮಾನಿಗಳ ಆಗಮನಕ್ಕೂ ನಿಷೇಧ ಹೇರಲಾಗಿದೆ. ಕೊರೊನಾ ಕಾರಣದಿಂದಾಗಿ, ದೇಶೀಯ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬರಲು ಸಾಧ್ಯವಿದೆಯೇ ಅಥವಾ ಇಲ್ಲವೇ ಎಂಬುದು ಇನ್ನೂ ನಿರ್ಧರಿಸಿಲ್ಲ. ಈ ಬಾರಿ ಹಿಂದೆಂದೂ ಇಲ್ಲದ ರೀತಿಯಲ್ಲಿ ಆಟಗಾರರಿಗೆ ಕ್ಯಾರೆಂಟೈನ್ ಕಟ್ಟುನಿಟ್ಟಿನ ನಿಯಮಗಳಿವೆ. ಈ ಬಾರಿ ಸಂಘಟಕರು ಕ್ರೀಡಾ ಗ್ರಾಮದಲ್ಲಿ ಅನೇಕ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರಲು ಹೊರಟಿದ್ದಾರೆ, ಇದರಲ್ಲಿ ಮದ್ಯ ನಿಷೇಧವೂ ಸೇರಬಹುದು.

ಟೋಕಿಯೊ ಒಲಿಂಪಿಕ್ಸ್ ಸಮಯದಲ್ಲಿ, ಗೇಮ್ ವಿಲೇಜ್ನ ಪ್ರದೇಶಗಳಲ್ಲಿ ಸಾರ್ವಜನಿಕ ಪ್ರದೇಶಗಳಲ್ಲಿ ಮದ್ಯಪಾನ ಮಾಡುವುದನ್ನು ನಿಷೇಧಿಸಬಹುದು. ಈ ಬಗ್ಗೆ ಮಾತನಾಡಿದ ಟೋಕಿಯೊ ಒಲಿಂಪಿಕ್ ಕ್ರೀಡಾಕೂಟದ ಸಂಘಟನಾ ಸಮಿತಿಯ ಸಿಇಒ ತೋಷಿಹಿರಿ ಮುಟೊ, ಆಟಗಾರರು ತಮ್ಮ ಕೋಣೆಗಳಲ್ಲಿ ಕುಡಿಯುತ್ತಿದ್ದರೆ, ನಾವು ನಮ್ಮ ಸ್ವಂತ ಮನೆಯಲ್ಲಿ ಕುಡಿಯುವಂತೆಯೇ ಇರುತ್ತದೆ ಎಂದು ಹೇಳಿದರು. ಕೋಣೆಯೊಳಗೆ ಕುಡಿಯುವುದನ್ನು ನಾವು ತಡೆಯಲು ಸಾಧ್ಯವಿಲ್ಲ ಮತ್ತು ಹಾಗೆ ಮಾಡುವುದು ತುಂಬಾ ಕಷ್ಟವಾಗುತ್ತದೆ ಎಂದಿದ್ದಾರೆ.

ಈ ತಿಂಗಳ ಕೊನೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗುವುದು ಟೋಕಿಯೊದಲ್ಲಿ ಕೊರೊನಾದ ಪರಿಣಾಮಗಳನ್ನು ತಡೆಗಟ್ಟಲು, ಜೂನ್ 20 ರವರೆಗೆ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ, ಅಲ್ಲಿ ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳಲ್ಲಿ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ನಾವು ಇನ್ನೂ ಮದ್ಯದ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಈ ನಿಟ್ಟಿನಲ್ಲಿ ಈ ತಿಂಗಳ ಅಂತ್ಯದ ವೇಳೆಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ನಾವು ಭಾವಿಸುತ್ತೇವೆ ಎಂದಿದ್ದಾರೆ.

ಮಾಧ್ಯಮ ಸಿಬ್ಬಂದಿಗಳಿಗೆ ಕಠಿಣ ನಿಯಮ ಜಾರಿ ವಿದೇಶಿ ಮಾಧ್ಯಮ ಸಿಬ್ಬಂದಿಗಳು ಸಾರ್ವಜನಿಕರೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿಲ್ಲ ಎಂದು ಖಚಿತಪಡಿಸಿಕೊಳ್ಳಲು ಒಲಿಂಪಿಕ್ ಕ್ರೀಡಾಕೂಟಕ್ಕಾಗಿ ಜಪಾನ್‌ಗೆ ಪ್ರವೇಶಿಸಿದ ನಂತರ ಜಿಪಿಎಸ್ ಮೂಲಕ ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಟೋಕಿಯೊ ಒಲಿಂಪಿಕ್ ಮುಖ್ಯಸ್ಥ ಸೈಕೊ ಹಶಿಮೊಟೊ ಮಾಹಿತಿಯನ್ನು ನೀಡಿದರು. ಜಪಾನ್ ಇನ್ನೂ ಬಹಳ ಕಷ್ಟದ ಸ್ಥಿತಿಯಲ್ಲಿದೆ ಮತ್ತು ವಿದೇಶಿ ಮಾಧ್ಯಮ ಸಿಬ್ಬಂಧಿಗಳು ತಾವು ಹೋಗಲು ನೋಂದಾಯಿಸಲ್ಪಟ್ಟ ಸ್ಥಳಗಳನ್ನು ಹೊರತುಪಡಿಸಿ ಬೇರೆ ಸ್ಥಳಗಳಿಗೆ ಹೋಗದಂತೆ ನೋಡಿಕೊಳ್ಳಲು, ನಾವು ಅವರ ಮೇಲೆ ನಿಗಾ ಇಡುತ್ತೇವೆ ಎಂದು ಹಶಿಮೊಟೊ ಕಾರ್ಯನಿರ್ವಾಹಕ ಮಂಡಳಿಯ ಸಭೆಯಲ್ಲಿ ಹೇಳಿದರು. ಇದಕ್ಕಾಗಿ ಜಿಪಿಎಸ್ ಬಳಸುತ್ತದೆ.

ಕ್ರೀಡಾಕೂಟದಲ್ಲಿ ವಿದೇಶದಿಂದ ಆಗಮಿಸುವ ಮಾಧ್ಯಮ ವ್ಯಕ್ತಿಗಳು ಪೂರ್ವ ನಿರ್ಧಾರಿತ ಸ್ಥಳಗಳನ್ನು ಪ್ರಸ್ತುತಪಡಿಸುವ ಅವಶ್ಯಕತೆಯಿದೆ ಮತ್ತು ಜಿಪಿಎಸ್ ಬಳಕೆಯೊಂದಿಗೆ, ಆಗಮನದ ನಂತರದ ಮೊದಲ 14 ದಿನಗಳಲ್ಲಿ ಅವರು ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅವರನ್ನು ಸಂಘಟಕರು ಟ್ರ್ಯಾಕ್ ಮಾಡಬಹುದು ಎಂದಿದ್ದಾರೆ.

Published On - 7:29 pm, Fri, 11 June 21