ಅಂದು ಸ್ವಿಟ್ಜರ್ಲ್ಯಾಂಡ್ ಬಾಸೆಲ್ ನಗರದಿಂದಲೇ ಭಾರತೀಯರ ಮನದಲ್ಲಿ ಸಂಭ್ರಮ ಮನೆಮಾಡಿತ್ತು. ಈ ಸಂಭ್ರಮ, ಖುಷಿಯನ್ನು ಭಾರತೀಯರಿಗೆ ತಂದುಕೊಟ್ಟಿದ್ದು ಬೇರಾರೂ ಅಲ್ಲ. ಆಕ್ರಮಣಕಾರಿ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು. ಹೌದು ವಿಶ್ವಚಾಂಪಿಯನ್ ಶಿಪ್ನಲ್ಲಿ ಚಿನ್ನದ ಪದಕ ಗೆದ್ದ ಮೊಟ್ಟ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಪಾತ್ರರಾದ ಕ್ರೀಡಾ ತಾರೆ.
ಪುಸರ್ಲಾ ವೆಂಕಟ ಸಿಂಧು ತಮ್ಮ ಬಹುದಿನದ ಕನಸನ್ನು ಈಗಾಗ್ಲೇ ನನಸು ಮಾಡಿದ್ದಾರೆ. ಕಂಚಿ ಮತ್ತು ಬೆಳ್ಳಿಯ ಪದಕವನ್ನು ಬಾಚುತ್ತಿದ್ದ ಸಿಂಧು ಅವರಿಗೆ ಹಲವು ವರ್ಷಗಳಿಂದ ಪದಕದ ಬಣ್ಣವನ್ನು ಬದಲಾಯಿಸಬೇಕೆಂಬ ಮಹದಾಸೆ ಇತ್ತು. ಹೌದು ಇದು ಸಿಂಧು ಅವರ ಒಬ್ಬರ ಕನಸಾಗಿರಲಿಲ್ಲ, ಬದಲಾಗಿ ಇಡೀ ಭಾರತೀಯರ ಕನಸಾಗಿತ್ತು. ಅದಕ್ಕಾಗಿಯೇ 2019ರ ವಿಶ್ವ ಚಾಂಪಿಯನ್ಶಿಪ್ನಲ್ಲಿ ಸಿಂಧು ಚಿನ್ನ ಬೇಟೆಯನ್ನಾಡುವ ಮೂಲಕ ಬ್ಯಾಡ್ಮಿಂಟನ್ ಪ್ರಿಯರಲ್ಲಿ ಆನಂದಭಾಷ್ಪವನ್ನೇ ಸುರಿಸಿದ್ದರು.
6ರಿಂದ 8ಗಂಟೆಗಳ ಕಾಲ ವರ್ಕೌಟ್:
ಸಾಮಾನ್ಯವಾಗಿ ಕ್ರೀಡಾಪಟುಗಳು ಔಟ್ ಡೋರ್ ಎಕ್ಸ್ ಸೈಜ್ ಕಡೆ ಹೆಚ್ಚು ಗಮನ ಹರಿಸ್ತಾರಂತ ಕೇಳಲ್ಪಟ್ಟಿರ್ತೀವಿ. ಆದ್ರೆ ಸಿಂಧು ಅವರ ವಿಷಯಕ್ಕೆ ಬಂದ್ರೆ ಅದು ಸುಳ್ಳಾಗಿರುತ್ತೆ. ಯಾಕಂದ್ರೆ ಇವರ ವರ್ಕೌಟ್ ನಲ್ಲಿ ಯೋಗ, ಪ್ರಾಣಾಯಾಮ, ಕಪಾಲಭಾತಿ, ಮತ್ತು ಈಜುವಿಕೆ ಕೂಡಾ ಒಳಗೊಂಡಿದೆ. ಉತ್ತುಂಗಕ್ಕೆ ಏರಬೇಕಾದ್ರೆ ಒಂದು ನಮ್ಮ ಪರಿಶ್ರಮ, ಜೊತೆಗೆ ಕೆಲವೊಂದು ತರಬೇತಿ ಕೂಡ ಬೇಕಾಗಿರುತ್ತೆ. ಹಾಗಾಗಿ ತರಬೇತಿಯ ಮೊದಲ ಸೆಸ್ಶನ್ ಬೆಳಗ್ಗೆ 4: 30ಕ್ಕೆ ಪ್ರಾರಂಭವಾಗುತ್ತಂತೆ. ಮತ್ತು ಇದು ಬೆಳಗ್ಗೆ 7 ಗಂಟೆಯವರೆಗೂ ಮುಂದುವರೆಯುತ್ತೆ. ಇಲ್ಲಿ ಸಿಂಧು ಅವರ ಚಿನ್ನದ ಪದಕದ ಹಿಂದೆ ತರಬೇತುದಾರರ ಪಾತ್ರವೂ ಶ್ಲಾಘನೀಯವಾಗಿದೆ.
Published On - 2:14 pm, Fri, 4 October 19