Indian Tigers & Tigresses: ಟ್ಯಾಲೆಂಟ್ ಹಂಟ್ ಭಾರತೀಯ ಫುಟ್ಬಾಲ್ ಅನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಿದೆ: ಬರುಣ್ ದಾಸ್

ದೇಶದ ನಂಬರ್ 1 ಸುದ್ದಿ ನೆಟ್‌ವರ್ಕ್ ಟಿವಿ9 ‘ಇಂಡಿಯನ್ ಟೈಗರ್ಸ್ ಮತ್ತು ಇಂಡಿಯನ್ ಟೈಗ್ರೆಸಸ್’ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಡಿಯಲ್ಲಿ ಯುವಕರಿಗೆ ಫುಟ್‌ಬಾಲ್ ಆಯೋಜಿಸಿದೆ. ಇನ್ನು ಈ ಬಗ್ಗೆ ಟಿವಿ9 ನೆಟ್‌ವರ್ಕ್ ಎಂಡಿ ಬರುಣ್ ದಾಸ್ ಮಾತನಾಡಿ, ಭಾರತದ ಫುಟ್ಬಾಲ್ ಆಟಗಾರರಿಗೆ ಇದು ಉತ್ತಮ ಅವಕಾಶ ಕಲ್ಪಿಸಿಕೊಡಲಿದೆ. ಅಲ್ಲದೇ ಟ್ಯಾಲೆಂಟ್ ಹಂಟ್ ಭಾರತೀಯ ಫುಟ್ಬಾಲ್ ಅನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಿದೆ ಎಂದಿದ್ದಾರೆ.

Indian Tigers & Tigresses: ಟ್ಯಾಲೆಂಟ್ ಹಂಟ್ ಭಾರತೀಯ ಫುಟ್ಬಾಲ್ ಅನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಿದೆ: ಬರುಣ್ ದಾಸ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Apr 11, 2024 | 7:15 PM

ದೇಶದ ನಂಬರ್ 1 ಸುದ್ದಿ ನೆಟ್‌ವರ್ಕ್ ಟಿವಿ9, ‘ಇಂಡಿಯನ್ ಟೈಗರ್ಸ್ ಮತ್ತು ಇಂಡಿಯನ್ ಟೈಗ್ರೆಸಸ್’ (Indian Tigers & Tigresses) ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಡಿಯಲ್ಲಿ ಯುವ ಫುಟ್‌ಬಾಲ್ (football) ಪ್ರತಿಭೆಗಳನ್ನು ಗುರುತಿಸಲು ವೇದಿಕೆಯನ್ನು ಸಿದ್ದಪಡಿಸಿದ್ದು, ಏಪ್ರಿಲ್ 10ರ ಬುಧವಾರದಂದು ಟಿವಿ9 ಇಂಗ್ಲಿಷ್ ನ್ಯೂಸ್ ಬ್ರ್ಯಾಂಡ್ ನ್ಯೂಸ್ 9, ಅನೇಕ ಪ್ರಸಿದ್ಧ ಜರ್ಮನ್ ಫುಟ್ಬಾಲ್ ಆಟಗಾರರ ಉಪಸ್ಥಿತಿಯಲ್ಲಿ ಗ್ರೇಟರ್ ನೋಯ್ಡಾದ ದೆಹಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಈ ಈವೆಂಟ್​ಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಇನ್ನು ಈ ಟ್ಯಾಲೆಂಟ್ ಹಂಟ್ ಬಗ್ಗೆ ಮಾತನಾಡಿದ ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್, ಇಂಡಿಯನ್ ಟೈಗರ್ಸ್ ಮತ್ತು ಇಂಡಿಯನ್ ಟೈಗ್ರೆಸಸ್ ಟ್ಯಾಲೆಂಟ್ ಹಂಟ್ ಈವೆಂಟ್ ಮೂಲಕ ಫುಟ್‌ಬಾಲ್ ಪ್ರತಿಭೆಗಳನ್ನು ಗುರುತಿಸಲು ಮತ್ತು ಉತ್ತೇಜಿಸಲು ನಮಗೆ ಅತ್ಯಂತ ಹೆಮ್ಮೆಯ ವಿಷಯವಾಗಿದೆ. ಇದು ಭಾರತೀಯ ಫುಟ್ಬಾಲ್ ಅನ್ನು ಹೊಸ ದಿಕ್ಕಿನಲ್ಲಿ ಕೊಂಡೊಯ್ಯಲ್ಲಿದೆ ಎಂದರು.

ಇಂಡಿಯನ್ ಟೈಗರ್ಸ್ ಮತ್ತು ಇಂಡಿಯನ್ ಟೈಗ್ರೆಸಸ್ ಟ್ಯಾಲೆಂಟ್ ಹಂಟ್ , ಭಾರತದ ಫುಟ್ಬಾಲ್ ಆಟಗಾರರಿಗೆ ಉತ್ತಮ ಅವಕಾಶ ಕಲ್ಪಿಸಿಕೊಡಲಿದೆ. ಇದರಿಂದಾಗಿ ಯುವಜನರಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಮನ್ನಣೆಯನ್ನು ನೀಡುತ್ತದೆ. ಹಾಗೇ ಚಿಕ್ಕ ವಯಸ್ಸಿನಲ್ಲಿ ಅವರ ವೃತ್ತಿಜೀವನದ ಪ್ರಮುಖ ಪ್ರಗತಿಗೆ ಅವಕಾಶವನ್ನು ನೀಡುತ್ತದೆ. ಇದರಿಂದ ಪ್ರತಿಭಾವಂತ ಆಟಗಾರರಿಗೆ ಹೆಚ್ಚು ಅವಕಾಶಗಳು ಸಿಗಲಿದ್ದು,ಅವರ ಕನಸುಗಳು ನನಸಾಗಲಿವೆ ಎಂದು ಬರುಣ್ ದಾಸ್ ವಿಶ್ವಾಸ ವ್ಯಕ್ತಪಡಿಸಿದರು.

ಟಿವಿ9 ನೆಟ್ವರ್ಕ್ ಪ್ರಸಿದ್ಧ ಜರ್ಮನ್ ಕಂಪನಿಗಳ ಸಹಯೋಗದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ಇದು ಫುಟ್‌ಬಾಲ್‌ನಲ್ಲಿ ಆಸಕ್ತಿ ಹೊಂದಿರುವ ಯುವ ಭಾರತೀಯ ಆಟಗಾರರಿಗೆ ಅವಕಾಶಗಳನ್ನು ಒದಗಿಸುತ್ತದೆ. ಭಾರತದಲ್ಲಿ ಫುಟ್ಬಾಲ್ ಪ್ರತಿಭೆಗಳನ್ನು ಉತ್ತೇಜಿಸಲು ಇದು ವಿಶ್ವ ದರ್ಜೆಯ ವೇದಿಕೆಯಾಗಲಿದೆ. ಇದು ಭಾರತದಲ್ಲಿ ನಡೆದ ಅತಿದೊಡ್ಡ ಕಾರ್ಯವಾಗಿದೆ. ಇದರಲ್ಲಿ 14 ವರ್ಷದೊಳಗಿನ ಯುವ ಫುಟ್ಬಾಲ್ ಆಟಗಾರರು ತಮ್ಮ ಸಾಮರ್ಥ್ಯವನ್ನು ತೋರಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:10 pm, Thu, 11 April 24