ಭಾರತದಲ್ಲಿ ಫುಟ್ಬಾಲ್ ಕ್ರಾಂತಿಗೆ ಹೊಸ ಹೆಜ್ಜೆಯಿಟ್ಟ ಟಿವಿ9; ಚಾಲನೆ ನೀಡಿದ CEO ಬರುಣ್ ದಾಸ್

|

Updated on: May 29, 2024 | 9:51 PM

ಇಂಡಿಯಾಸ್ ಟೈಗರ್ಸ್ & ಟೈಗ್ರೆಸಸ್’ ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಡಿಯಲ್ಲಿ ಭಾರತದಾದ್ಯಂತ 14 ವರ್ಷದೊಳಗಿನ ಪ್ರತಿಭಾವಂತ ಯುವ ಫುಟ್ಬಾಲ್ ಪಟುಗಳ ಆಯ್ಕೆ ಮಾಡಲಾಗುತ್ತದೆ. ಹಾಗೆಯೇ ಭಾರತದಲ್ಲಿ ಜರ್ಮನ್ ಫುಟ್ಬಾಲ್ ಅನ್ನು ಜನಪ್ರಿಯಗೊಳಿಸುವ ಸಲುವಾಗಿ ‘ಫುಟ್ಬಾಲ್ 9’ ಹೆಸರಿನ ಡಿಜಿಟಲ್ ವೇದಿಕೆ ಕೂಡ ಪ್ರಾರಂಭವಾಗಲಿದೆ ಎಂದರು.

ಭಾರತದಲ್ಲಿ ಫುಟ್ಬಾಲ್ ಕ್ರಾಂತಿಗೆ ಹೊಸ ಹೆಜ್ಜೆಯಿಟ್ಟ ಟಿವಿ9; ಚಾಲನೆ ನೀಡಿದ CEO ಬರುಣ್ ದಾಸ್
CEO ಬರುಣ್ ದಾಸ್
Follow us on

ಭಾರತದಲ್ಲಿ ಫುಟ್ಬಾಲ್​ (Football) ಜನಪ್ರಿಯತೆಯನ್ನು ಇನ್ನಷ್ಟು ಹೆಚ್ಚಿಸುವ ಕೆಲಸಕ್ಕೆ ಮುಂದಾಗಿರುವ ದೇಶದ ಅತಿದೊಡ್ಡ ನ್ಯೂಸ್ ನೆಟ್‌ವರ್ಕ್ ಟಿವಿ9 ಕಳೆದ ಕೆಲವು ತಿಂಗಳುಗಳಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅಲ್ಲದೆ ಇದರ ಅಡಿಪಾಯದ ಕೆಲಸ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿದೆ. ಜರ್ಮನಿಯ ಫುಟ್ಬಾಲ್ ಕ್ಲಬ್‌ಗಳು ಮತ್ತು ಫುಟ್‌ಬಾಲ್ ಆಟಗಾರರಿಂದ ದೇಶಾದ್ಯಂತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ಯುವ ಫುಟ್ಬಾಲ್ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ಕೆಲಸ ಮುಂದುವರೆದಿದೆ. ಏತನ್ಮಧ್ಯೆ, ಜರ್ಮನಿಯ ಅತಿದೊಡ್ಡ ಡಿಎಫ್‌ಬಿ-ಪೋಕಲ್ ಫೈನಲ್ (DFB-Pokal final) ಪಂದ್ಯದಲ್ಲಿ ಉಪಸ್ಥಿತರಿದ್ದ ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್ (MD & CEO Mr Barun Das) ಮೂರು ಪ್ರಮುಖ ಉಪಕ್ರಮಗಳನ್ನು ಘೋಷಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಜರ್ಮನಿಯಲ್ಲಿರುವ ಭಾರತದ ರಾಯಭಾರಿ ಪರ್ವತನೇನಿ ಹರೀಶ್ ಕೂಡ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಅವರಲ್ಲದೆ ಜರ್ಮನ್ ಫುಟ್ಬಾಲ್ ಅಸೋಸಿಯೇಷನ್ ​​(DFB) ಅಧ್ಯಕ್ಷ ಶ್ರೀ ಬರ್ಂಡ್ ನ್ಯೂಯೆಂಡಾರ್ಫ್, ಆಸ್ಟ್ರಿಯಾದ ಭಾರತ ಫುಟ್ಬಾಲ್ ಕೇಂದ್ರದ ಸಂಸ್ಥಾಪಕ ಶ್ರೀ ಗೆರ್ಹಾರ್ಡ್ ರೀಡ್ಲ್ ಮತ್ತು ಇತರ ಭಾರತೀಯ ಮತ್ತು ಜರ್ಮನ್ ಗಣ್ಯರು ಉಪಸ್ಥಿತರಿದ್ದರು.

ಎಂಡಿ, ಸಿಇಒ ಬರುಣ್ ದಾಸ್ ಹೇಳಿದ್ದಿದು

ಈ ವೇಳೆ ಮಾತನಾಡಿದ ಟಿವಿ9 ನೆಟ್‌ವರ್ಕ್‌ನ ಎಂಡಿ ಮತ್ತು ಸಿಇಒ ಬರುಣ್ ದಾಸ್, ‘ಟಿವಿ9 ವಾಟ್ ಇಂಡಿಯಾ ಥಿಂಕ್ಸ್ ಟುಡೇ ಶೃಂಗಸಭೆಯ ಮೊದಲ ಅಂತರರಾಷ್ಟ್ರೀಯ ಆವೃತ್ತಿಯನ್ನು ಈ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳುಗಳಲ್ಲಿ ಜರ್ಮನಿಯಲ್ಲಿ ಆಯೋಜಿಸಲಾಗುವುದು. ಇದರಿಂದ ಉಭಯ ದೇಶಗಳ ನಡುವಿನ ಸಂಬಂಧವನ್ನು ಇನ್ನಷ್ಟು ಬಲಪಡಿಸಬಹುದಾಗಿದೆ.

ಇದಲ್ಲದೆ, ಫುಟ್ಬಾಲ್​ಗೆ ಸಂಬಂಧಿಸಿದಂತೆ ಎರಡು ಕಾರ್ಯಕ್ರಮಗಳನ್ನು  ಪ್ರಾರಂಭಿಸುವುದಾಗಿ ಘೋಷಿಸಿದ ಬರುಣ್ ದಾಸ್, ಇಂಡಿಯಾಸ್ ಟೈಗರ್ಸ್ & ಟೈಗ್ರೆಸಸ್’ ಟ್ಯಾಲೆಂಟ್ ಹಂಟ್ ಕಾರ್ಯಕ್ರಮದಡಿಯಲ್ಲಿ ಭಾರತದಾದ್ಯಂತ 14 ವರ್ಷದೊಳಗಿನ ಪ್ರತಿಭಾವಂತ ಯುವ ಫುಟ್ಬಾಲ್ ಪಟುಗಳ ಆಯ್ಕೆ ಮಾಡಲಾಗುತ್ತದೆ. ಈ ಟ್ಯಾಲೆಂಟ್ ಹಂಟ್ ಯಶಸ್ಸಿಗೆ ಸಹಭಾಗಿಯಾಗಿರುವ ಡಿಎಫ್‌ಬಿ ಅಪಾರ ಕೊಡುಗೆ ನೀಡುತ್ತಿದೆ. ಈ ಮೂಲಕ ಭಾರತವು ಅಗ್ರ ಫುಟ್‌ಬಾಲ್ ರಾಷ್ಟ್ರಗಳಲ್ಲಿ ಒಂದಾಗಲು ಸಹಾಯ ಮಾಡುತ್ತದೆ ಎಂದು ನನಗೆ ವಿಶ್ವಾಸವಿದೆ. ಹಾಗೆಯೇ ಭಾರತದಲ್ಲಿ ಜರ್ಮನ್ ಫುಟ್ಬಾಲ್ ಅನ್ನು ಜನಪ್ರಿಯಗೊಳಿಸುವ ಸಲುವಾಗಿ ‘ಫುಟ್ಬಾಲ್ 9’ ಹೆಸರಿನ ಡಿಜಿಟಲ್ ವೇದಿಕೆ ಕೂಡ ಪ್ರಾರಂಭವಾಗಲಿದೆ ಎಂದರು.

ಪ್ರತಿಭೆ ವಿನಿಮಯಕ್ಕೆ ಸಹಕಾರಿ

ಜರ್ಮನಿಯಲ್ಲಿರುವ ಭಾರತೀಯ ರಾಯಭಾರಿ ಪರ್ವತನೇನಿ ಹರೀಶ್ ಮಾತನಾಡಿ, ‘ಭಾರತ-ಜರ್ಮನಿ ಈಗಾಗಲೇ ಕಾರ್ಯತಂತ್ರದ ಪಾಲುದಾರರಾಗಿದ್ದಾರೆ. ಜಜರ್ಮನಿ ಮತ್ತು ಯುರೋಪ್‌ನೊಂದಿಗೆ ಭಾರತವು ಅತಿದೊಡ್ಡ ವ್ಯಾಪಾರ ಪಾಲುದಾರಿಕೆಯನ್ನು ಹೊಂದಿದೆ. ಆದರೆ ಜರ್ಮನಿಯಲ್ಲಿ ನುರಿತ ಕೆಲಸಗಾರರ ಕೊರತೆಯನ್ನು ಗಮನಿಸಿದರೆ, ದ್ವಿಪಕ್ಷೀಯ ವ್ಯಾಪಾರ, ತಂತ್ರಜ್ಞಾನ ಮತ್ತು ಪ್ರತಿಭೆ ವಿನಿಮಯಕ್ಕೆ ವಿಶೇಷವಾಗಿ ಭಾರತದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಮರ್ಥ್ಯವಿದೆ. ಉಭಯ ದೇಶಗಳ ಸಂಬಂಧವನ್ನು ಮತ್ತಷ್ಟು ಬೆಸೆಯುವ ಕೆಲಸ ಮಾಡುತ್ತಿರುವ ಟಿವಿ9 ಈ ಉಪಕ್ರಮದಿಂದ ನನಗೆ ಸಂತೋಷವಾಗಿದೆ’ ಎಂದರು.

ಟಿವಿ9 ಜೊತೆಗೆ ಕೈಜೋಡಿಸಿರುವುದು ಸಂತಸಕರ ಸಂಗತಿ

ಡಿಎಫ್‌ಬಿ ಅಧ್ಯಕ್ಷ ಬರ್ಂಡ್ ನ್ಯೂಯೆಂಡಾರ್ಫ್ ಮಾತನಾಡಿ, ‘ಭಾರತದಲ್ಲಿ ಯುವ ಫುಟ್‌ಬಾಲ್ ಪ್ರತಿಭೆಗಳನ್ನು ಉತ್ತೇಜಿಸಲು ಅತಿದೊಡ್ಡ ಸುದ್ದಿ ನೆಟ್‌ವರ್ಕ್ ಟಿವಿ9 ಜೊತೆಗೆ ಕೈಜೋಡಿಸಿರುವುದು ಸಂತಸಕರ ಸಂಗತಿಯಾಗಿದೆ. ಅಲ್ಲದೆ ಜರ್ಮನಿಯಲ್ಲಿ ನಡೆಯುವ ಟಿವಿ 9 ವಾಟ್ ಇಂಡಿಯಾ ಥಿಂಕ್ ಟುಡೇ ದ್ವಿಪಕ್ಷೀಯ ಶೃಂಗಸಭೆಯಲ್ಲಿ ನಾವು ನಮ್ಮ ಸಹಕಾರವನ್ನು ನೀಡುತ್ತಿವೆ ಎಂದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ