ಶ್ರೀನಿವಾಸಪುರದಲ್ಲಿ ಕ್ರಿಕೆಟ್​ ಜೋಶ್​! ಆಟಗಾರರ ಮಧ್ಯೆ ಡಿಕ್ಕಿ, ಪ್ರಜ್ಞೆತಪ್ಪಿ ಆಸ್ಪತ್ರೆ ಪಾಲು

|

Updated on: Dec 25, 2019 | 3:21 PM

ಕೋಲಾರ: ಕ್ರಿಕೆಟ್​ ಜೋಶ್​ ಅಂದ್ರೇನೇ ಹಾಗೆ. ಅದು ದಿಲ್ಲಿ ಕ್ರಿಕೆಟ್ಟೇ ಇರಲಿ ಗಲ್ಲಿ ಕ್ರಿಕೆಟ್ಟೇ ಆಗಿರಲಿ. ಹಳ್ಳಿ ಕ್ರಿಕೆಟ್ಟು ಅದರಲ್ಲೂ ನಮ್ಮೂರಲ್ಲಿಯೇ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದ್ರೆ ಅಟಗಾರರಲ್ಲಷ್ಟೇ ಅಲ್ಲ ಪ್ರೇ್ಷಕರಲ್ಲೂ ಫುಲ್​ ಜೋಶ್​ ಇರುತ್ತದೆ. ಅಪ್ಪಂದಿರು ತಮ್ಮ ಮಕ್ಕಳ ಕೈಹಿಡಿದು ಮೈದಾನಕ್ಕೆ ಬಂದೇ ಬಿಡ್ತಾರೆ. ಇದನ್ನೆಲ್ಲ ನೋಡಿ, ಆಟಗಾರರ ಹುಮ್ಮಸ್ಸು ಗಗನ ಸಂಚಾರಿಯಾಗಿಬಿಡುತ್ತದೆ. ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿಯಲ್ಲಿ ನಡೆದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿಯೂ ಇದೇ ತರಹದ ಜೋಶ್​ ಕಂಡುಬಂದಿದೆ. ಆದ್ರೆ ದುರಂತವೂ ಘಟಿಸಿದೆ. ಅದೇ ಬೇಜಾರು. […]

ಶ್ರೀನಿವಾಸಪುರದಲ್ಲಿ ಕ್ರಿಕೆಟ್​ ಜೋಶ್​! ಆಟಗಾರರ ಮಧ್ಯೆ ಡಿಕ್ಕಿ, ಪ್ರಜ್ಞೆತಪ್ಪಿ ಆಸ್ಪತ್ರೆ ಪಾಲು
Follow us on

ಕೋಲಾರ: ಕ್ರಿಕೆಟ್​ ಜೋಶ್​ ಅಂದ್ರೇನೇ ಹಾಗೆ. ಅದು ದಿಲ್ಲಿ ಕ್ರಿಕೆಟ್ಟೇ ಇರಲಿ ಗಲ್ಲಿ ಕ್ರಿಕೆಟ್ಟೇ ಆಗಿರಲಿ. ಹಳ್ಳಿ ಕ್ರಿಕೆಟ್ಟು ಅದರಲ್ಲೂ ನಮ್ಮೂರಲ್ಲಿಯೇ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದ್ರೆ ಅಟಗಾರರಲ್ಲಷ್ಟೇ ಅಲ್ಲ ಪ್ರೇ್ಷಕರಲ್ಲೂ ಫುಲ್​ ಜೋಶ್​ ಇರುತ್ತದೆ. ಅಪ್ಪಂದಿರು ತಮ್ಮ ಮಕ್ಕಳ ಕೈಹಿಡಿದು ಮೈದಾನಕ್ಕೆ ಬಂದೇ ಬಿಡ್ತಾರೆ. ಇದನ್ನೆಲ್ಲ ನೋಡಿ, ಆಟಗಾರರ ಹುಮ್ಮಸ್ಸು ಗಗನ ಸಂಚಾರಿಯಾಗಿಬಿಡುತ್ತದೆ.

ಶ್ರೀನಿವಾಸಪುರ ತಾಲೂಕಿನ ಸೋಮಯಾಜಲಹಳ್ಳಿಯಲ್ಲಿ ನಡೆದ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿಯಲ್ಲಿಯೂ ಇದೇ ತರಹದ ಜೋಶ್​ ಕಂಡುಬಂದಿದೆ. ಆದ್ರೆ ದುರಂತವೂ ಘಟಿಸಿದೆ. ಅದೇ ಬೇಜಾರು. ಬಾಲ್​ ಆಕಾಶದತ್ತ ಚಿಮ್ಮಿದಾಗ, ಕ್ಯಾಚ್ ಹಿಡಿಯುವ ವೇಳೆ ಆಟಗಾರರಿಬ್ಬರು ಪರಸ್ಪರ ಡಿಕ್ಕಿ ಹೊಡೆದುಕೊಂಡು, ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ.

ಭಾನು ಮತ್ತು ಶ್ರೀನಿವಾಸ್‌ ಎಂಬ ಇಬ್ಬರು ಆಟಗಾರರು ಇಂದು ಸೋಮಯಾಜಲಹಳ್ಳಿಯಲ್ಲಿ ರೈಸಿಂಗ್ ಸ್ಟಾರ್ಸ್ ಮತ್ತು ಎಸ್.ಎ.ಎಸ್ ಕ್ರಿಕೆಟರ್ಸ್ ನಡುವೆ ನಡೆಯುತ್ತಿದ್ದ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸಿದ್ದರು. ಆಟದ ವೇಳೆ ಟೆನಿಸ್ ಬಾಲನ್ನು ಈ ಇಬ್ಬರು ಆಟಗಾರರು ಹಿಡಿಯಲು ಪ್ರಯತ್ನಿಸಿದ್ದಾರೆ. ಈ ವೇಳೆ ಪರಸ್ಪರ ಡಿಕ್ಕಿ ಹೊಡೆದು ಪ್ರಜ್ಞೆ ತಪ್ಪಿದ್ದಾರೆ. ಆಟಗಾರರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

Published On - 3:16 pm, Wed, 25 December 19