AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಐಪಿಎಲ್​ನಲ್ಲಿ ದುಬಾರಿ ಮೊತ್ತ ಪಡೆದ ಪ್ಯಾಟ್ ಕಮಿನ್ಸ್ ಹಣವನ್ನ ಏನ್ ಮಾಡ್ತಾರೆ ಗೊತ್ತಾ?

ಆತ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ಮೊತ್ತಕ್ಕೆ ಹರಾಜಾಗಿರೋ ಆಸ್ಟ್ರೇಲಿಯಾದ ಕ್ರಿಕೆಟಿಗ. ಕೇವಲ ಒಂದೇ ಒಂದು ಬಾಲ್ ಎಸೆದ್ರೂ ಆತ ನಾಲ್ಕು ಲಕ್ಷ ಜೇಬಿಗಿಳಿಸ್ತಾನೆ. ಆದ್ರೀಗ ಆತ ತನಗೆ ಬಂದಿರೋ ಹಣವನ್ನ ತನ್ನ ಪ್ರೇಯಸಿಯ ಆಸೆ ಪೂರೈಸೋಕೆ ಹೋಗಿ, ಟ್ರೋಲ್​ಗೆ ಗುರಿಯಾಗಿದ್ದಾನೆ. ಪ್ಯಾಟ್ ಕಮಿನ್ಸ್. ಸದ್ಯ ವಿಶ್ವ ಕ್ರಿಕೆಟ್​ನಲ್ಲಿ ಸಾಕಷ್ಟು ಸದ್ದು ಮಾಡ್ತಿರೋ ಆಸಿಸ್ ಕ್ರಿಕೆಟಿಗ. 2ಕೋಟಿ ಮೂಲಬೆಲೆ ಹೊಂದಿದ್ದ ಆಸಿಸ್ ಆಲ್​ರೌಂಡರ್ ಪ್ಯಾಟ್ ಕಮಿನ್ಸ್ ಕೆಕೆಆರ್ ಫ್ರಾಂಚೈಸಿ 15.50ಕೋಟಿ ನೀಡಿ ಖರೀದಿಸಿತ್ತು. ಬಿಗ್ […]

ಐಪಿಎಲ್​ನಲ್ಲಿ ದುಬಾರಿ ಮೊತ್ತ ಪಡೆದ ಪ್ಯಾಟ್ ಕಮಿನ್ಸ್ ಹಣವನ್ನ ಏನ್ ಮಾಡ್ತಾರೆ ಗೊತ್ತಾ?
ಸಾಧು ಶ್ರೀನಾಥ್​
ಸಾಧು ಶ್ರೀನಾಥ್​|

Updated on: Dec 26, 2019 | 8:29 AM

Share

ಆತ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕೋಟಿ ಕೋಟಿ ಮೊತ್ತಕ್ಕೆ ಹರಾಜಾಗಿರೋ ಆಸ್ಟ್ರೇಲಿಯಾದ ಕ್ರಿಕೆಟಿಗ. ಕೇವಲ ಒಂದೇ ಒಂದು ಬಾಲ್ ಎಸೆದ್ರೂ ಆತ ನಾಲ್ಕು ಲಕ್ಷ ಜೇಬಿಗಿಳಿಸ್ತಾನೆ. ಆದ್ರೀಗ ಆತ ತನಗೆ ಬಂದಿರೋ ಹಣವನ್ನ ತನ್ನ ಪ್ರೇಯಸಿಯ ಆಸೆ ಪೂರೈಸೋಕೆ ಹೋಗಿ, ಟ್ರೋಲ್​ಗೆ ಗುರಿಯಾಗಿದ್ದಾನೆ.

ಪ್ಯಾಟ್ ಕಮಿನ್ಸ್. ಸದ್ಯ ವಿಶ್ವ ಕ್ರಿಕೆಟ್​ನಲ್ಲಿ ಸಾಕಷ್ಟು ಸದ್ದು ಮಾಡ್ತಿರೋ ಆಸಿಸ್ ಕ್ರಿಕೆಟಿಗ. 2ಕೋಟಿ ಮೂಲಬೆಲೆ ಹೊಂದಿದ್ದ ಆಸಿಸ್ ಆಲ್​ರೌಂಡರ್ ಪ್ಯಾಟ್ ಕಮಿನ್ಸ್ ಕೆಕೆಆರ್ ಫ್ರಾಂಚೈಸಿ 15.50ಕೋಟಿ ನೀಡಿ ಖರೀದಿಸಿತ್ತು. ಬಿಗ್ ಮನಿಗೆ ಮಾರಾಟವಾಗಿರೋ ಕಮಿನ್ಸ್, ಐಪಿಎಲ್ ಇತಿಹಾಸದಲ್ಲೇ ಚರಿತ್ರೆಯನ್ನ ಸೃಷ್ಟಿಸಿದ್ದಾರೆ. ಐಪಿಎಲ್​ನಲ್ಲಿ ಅತಿ ದೊಡ್ಡ ಮೊತ್ತಕ್ಕೆ ಬಿಕರಿಯಾದ ಮೊದಲ ವಿದೇಶಿ ಕ್ರಿಕೆಟಿಗ ಅನ್ನೋ ದಾಖಲೆ ಬರೆದಿದ್ದಾರೆ.

ಚರಿತ್ರೆ ಸೃಷ್ಟಿಸಿರೋ ಕಮಿನ್ಸ್ $15.50ಕೋಟಿಯನ್ನ ಏನ್ ಮಾಡ್ತಾರೆ? ಬರೋಬ್ಬರಿ 15.50ಕೋಟಿಗೆ ಸೇಲ್ ಆಗಿ ಇಡೀ ವಿಶ್ವ ಕ್ರಿಕೆಟೇ ದಂಗಾಗುವಂತೆ ಮಾಡಿರೋ ಕಮಿನ್ಸ್, ಇದೀಗ ಇಷ್ಟೊಂದು ದೊಡ್ಡ ಮೊತ್ತವನ್ನ ಏನ್ ಮಾಡ್ತಾರೆ ಅನ್ನೋ ಪ್ರಶ್ನೆ ಅಭಿಮಾನಿಗಳನ್ನ ಕಾಡ್ತಿದೆ.

ಪ್ರೇಯಸಿಯ ಆಸೆ ಪೂರೈಸಲು ಮುಂದಾದ ಕಮಿನ್ಸ್! ಆಲ್​ರೌಂಡರ್ ಪ್ಯಾಟ್ ಕಮಿನ್ಸ್ ಸ್ಟೈಲ್​ಗೆ ಇಂಗ್ಲೆಂಡ್ ಯುವತಿಯೊಬ್ಳು ಕ್ಲೀನ್ ಬೌಲ್ಡ್ ಆಗಿದ್ದಾಳೆ. ಆಕೆಯೇ ಚೆಂದುಳ್ಳಿ ಚೆಲುವೆ ಬೆಕಿ ಬೋಸ್ಟನ್. ಮೂಲತಃ ಇಂಗ್ಲೆಂಡ್​ನ ಯಾರ್ಕ್​ಶೈರ್​ನ ಬೆಕಿ ಬೋಸ್ಟನ್, ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ವಾಸವಾಗಿದ್ದಾಳೆ. ಅದ್ರೆ ಈಕೆ ಕಮಿನ್ಸ್ ಪ್ರೇಮಬಲೆಯಲ್ಲಿ ಬಿದ್ದಿದ್ದಾಳೆ. ಇದೀಗ ಐಪಿಎಲ್​ನಲ್ಲಿ ಬಂದ ಹಣದಲ್ಲಿ ಪ್ರೇಯಸಿ ಬೋಸ್ಟನ್ ಡಿಮ್ಯಾಂಡ್ ಪೂರೈಸಲು ಕಮಿನ್ಸ್ ಮುಂದಾಗಿದ್ದಾರೆ.

ನಾಯಿಮರಿಗೆ ಅಟಿಕೆಗಳನ್ನ ಕೊಡಿಸೋಕೆ ಕೋಟಿ ಕೋಟಿ ವ್ಯಯ! ಪ್ರೇಯಸಿ ಬೆಕಿ ಬೋಸ್ಟನ್ ಕಪ್ಪು ಬಣ್ಣದಿಂದ ಕೂಡಿರೋ ಮುದ್ದಾದ ನಾಯಿಮರಿಯೊಂದನ್ನ ಸಾಕಿದ್ದಾರೆ. ಐಪಿಎಲ್​ನಲ್ಲಿ ಬಿಗ್ ಮನಿ ಸೇಲ್ ಆಗಿರೋ ಕಮಿನ್ಸ್, ಬೋಸ್ಟನ್​ಗೆ ಒಂದು ಗಿಫ್ಟ್ ನೀಡಲು ಮುಂದಾಗಿದ್ರು. ಆದ್ರೆ, ಬೋಸ್ಟನ್, ತನ್ನ ನಾಯಿಮರಿಗೆ ಅಟಿಕೆಗಳನ್ನ ಕೊಡಿಸಿ ಅಂತ ಕೇಳಿಕೊಂಡಿದ್ದಾರೆ. ಪ್ರೇಯಸಿಯ ಬೇಡಿಕೆಯನ್ನ ಈಡೇರಿಸೋದಾಗಿ ಕಮಿನ್ಸ್, ಒಪ್ಪಿಕೊಂಡಿದ್ದಾರೆ.

ಬೇಡಿಕೆಯನ್ನ ಈಡೇರಿಸುತ್ತೇನೆ.. ‘‘ನನ್ನ ಪ್ರೇಯಸಿ, ಆಕೆಯ ನಾಯಿಮರಿಗೆ ಕೆಲವು ಆಟಿಕೆಗಳನ್ನ ಕೊಡಿಸುವ ಬೇಡಿಕೆ ಇಟ್ಟಿದ್ದಾಳೆ. ನಾನು ಈಡೇರಿಸುತ್ತೇನೆ.’’ – ಪ್ಯಾಟ್ ಕಮಿನ್ಸ್, ಆಸ್ಟ್ರೇಲಿಯಾ ಆಟಗಾರ

ಒಟ್ನಲ್ಲಿ ತನ್ನ ಪ್ರೇಯಸಿ ಆಸೆಯನ್ನ ಈಡೇರಿಸಲು ಮಿಲಿಯನ್ ಡಾಲರ್ ಬೇಬಿ ಮುಂದಾಗಿದ್ದಾರೆ. ಆದ್ರೆ, ನಾಯಿಮರಿಗೆ ಇಷ್ಟೊಂದು ಹಣ ಖರ್ಚು ಮಾಡ್ತಿರೋದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರು ಕಮಿನ್ಸ್ ಕಾಲೆಳೆಯೋದಕ್ಕೆ ಶುರುಮಾಡಿದ್ದಾರೆ. ಅದಕ್ಕೆ ಏನೋ ದುಡ್ಡಿದ್ರೆ ಹೇಗೆ ಖರ್ಚು ಮಾಡ್ಬೇಕು ಅನ್ನೋದೇ ಕೆಲವರಿಗೆ ಗೊತ್ತಾಗೋದಿಲ್ಲ ಅನ್ನೋ ಅಣಿ ಮುತ್ತು ಚಾಲ್ತಿಗೆ ಬಂದಿರೋದು.

Follow Us
sadhu srinath
sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು