12 ವರ್ಷಗಳ ಬಳಿಕ ತಪ್ಪೊಪ್ಪಿಕೊಂಡ ಅಂಪೈರ್ ಸ್ಟೀವ್ ಬಕ್ನರ್!

| Updated By: ಆಯೇಷಾ ಬಾನು

Updated on: Jul 20, 2020 | 11:26 AM

ಬರೋಬ್ಬರಿ 12 ವರ್ಷಗಳ ಬಳಿಕ ಮಾಜಿ ಅಂಪೈರ್ ಸ್ಟೀವ್ ಬಕ್ನರ್ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಎರಡು ತಪ್ಪು ನಿರ್ಣಯಗಳನ್ನ ತೆಗೆದುಕೊಂಡಿರೋದಾಗಿ ಒಪ್ಪಿಕೊಂಡಿದ್ದಾರೆ. ತಾನು ಮಾಡಿದ ಆ ಎರಡು ತಪ್ಪುಗಳಿಂದಲೇ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಶರಣಾಗಬೇಕಾಯ್ತು ಎಂದಿದ್ದಾರೆ. ಜಮೈಕಾ ಮೂಲದ ಸ್ಟೀವ್ ಬಕ್ನರ್ ಸಚಿನ್ ತೆಂಡೂಲ್ಕರ್​ಗೆ ಬೇಕು ಅಂತಾನೇ ಔಟ್ ನೀಡ್ತಾರೆ ಅನ್ನೋ ಆರೋಪವಿತ್ತು. ಈ ವಿಚಾರವನ್ನ ಕೆಲ ದಿನಗಳ ಹಿಂದೆಯಷ್ಟೇ ಬಕ್ನರ್ ಒಪ್ಪಿಕೊಂಡಿದ್ರು. ನಾನು ಸಚಿನ್ […]

12 ವರ್ಷಗಳ ಬಳಿಕ ತಪ್ಪೊಪ್ಪಿಕೊಂಡ ಅಂಪೈರ್ ಸ್ಟೀವ್ ಬಕ್ನರ್!
Follow us on

ಬರೋಬ್ಬರಿ 12 ವರ್ಷಗಳ ಬಳಿಕ ಮಾಜಿ ಅಂಪೈರ್ ಸ್ಟೀವ್ ಬಕ್ನರ್ ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ವಿರುದ್ಧದ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಎರಡು ತಪ್ಪು ನಿರ್ಣಯಗಳನ್ನ ತೆಗೆದುಕೊಂಡಿರೋದಾಗಿ ಒಪ್ಪಿಕೊಂಡಿದ್ದಾರೆ. ತಾನು ಮಾಡಿದ ಆ ಎರಡು ತಪ್ಪುಗಳಿಂದಲೇ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿಗೆ ಶರಣಾಗಬೇಕಾಯ್ತು ಎಂದಿದ್ದಾರೆ.

ಜಮೈಕಾ ಮೂಲದ ಸ್ಟೀವ್ ಬಕ್ನರ್ ಸಚಿನ್ ತೆಂಡೂಲ್ಕರ್​ಗೆ ಬೇಕು ಅಂತಾನೇ ಔಟ್ ನೀಡ್ತಾರೆ ಅನ್ನೋ ಆರೋಪವಿತ್ತು. ಈ ವಿಚಾರವನ್ನ ಕೆಲ ದಿನಗಳ ಹಿಂದೆಯಷ್ಟೇ ಬಕ್ನರ್ ಒಪ್ಪಿಕೊಂಡಿದ್ರು. ನಾನು ಸಚಿನ್ ವಿಚಾರದಲ್ಲಿ ಎರಡು ಸಲ ತಪ್ಪಾಗಿ ಔಟ್ ಕೊಟ್ಟಿದ್ದೇನೆ ಎಂದಿದ್ರು. ಆದರೆ ಈಗ 2008ರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಬಕ್ನರ್ ತಾವು ಮಾಡಿದ ಆ ಎರಡು ಲೋಪಗಳನ್ನ ಬಿಚ್ಚಿಟ್ಟಿದ್ದಾರೆ.

ನಾನು 2008ರ ಸಿಡ್ನಿ ಟೆಸ್ಟ್ ಪಂದ್ಯದಲ್ಲಿ ಎರಡು ತಪ್ಪುಗಳನ್ನ ಮಾಡಿದ್ದೆ. ಭಾರತ ಸಿಡ್ನಿ ಟೆಸ್ಟ್ ಪಂದ್ಯದ ಮೇಲೆ ಉತ್ತಮವಾದ ಹಿಡಿತ ಸಾಧಿಸಿತ್ತು. ಈ ಸಮಯದಲ್ಲಿ ನಾನು ಆಸ್ಟ್ರೇಲಿಯಾ ಬ್ಯಾಟ್ಸ್​ಮನ್​ಗಳಿಗೆ ನೆರವಾಗುವಂಥ ಎರಡು ತೀರ್ಪುಗಳನ್ನ ನೀಡಿಬಿಟ್ಟೆ. ಒಂದೇ ಟೆಸ್ಟ್ ಪಂದ್ಯದಲ್ಲಿ ಎರಡು ತಪ್ಪುಗಳನ್ನು ಮಾಡಿದ ಮೊದಲ ಅಂಪೈರ್ ನಾನು. ಆ ಎರಡು ತಪ್ಪುಗಳು ನನ್ನನ್ನು ಈಗಲೂ ಕಾಡುತ್ತಿದೆ ಎಂದು ಮರುಗಿದ್ದಾರೆ

ಇದೇ ಸಿಡ್ನಿ ಟೆಸ್ಟ್ ಪಂದ್ಯದಲ್ಲೇ ಭಾರತದ ಹರ್ಭಜನ್ ಸಿಂಗ್ ಮತ್ತು ಆಸ್ಟ್ರೇಲಿಯಾದ ಌಂಡ್ರ್ಯೂ ಸೈಮಂಡ್ಸ್ ನಡುವಿನ Monkeygate ಪ್ರಕರಣ ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿತ್ತು.