US Open: ಮೊದಲ ಸುತ್ತಿನ ಅರ್ಹತಾ ಪಂದ್ಯದಲ್ಲಿ ಗೆದ್ದ ಪ್ರಜ್ಞೇಶ್ ಗುಣೇಶ್ವರನ್; ಕ್ರಿಸ್ಟೋಫರ್ ಯುಬಾಂಕ್ಸ್ ಮುಂದಿನ ಎದುರಾಳಿ
US Open: ಯುಎಸ್ ಓಪನ್ ಅರ್ಹತಾ ಸುತ್ತಿನಲ್ಲಿ ಅಂತಿಮವಾಗಿ ಭಾರತೀಯ ಆಟಗಾರನಿಗೆ ಗೆಲುವು ದೊರೆತಿದೆ. ಮೊದಲ ದಿನ ಮೂವರು ಆಟಗಾರರು ಸೋತ ನಂತರ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಗುರುವಾರ ನಡೆದ ಅರ್ಹತಾ ಸುತ್ತಿನ ಮೊದಲ ಸುತ್ತಿನಲ್ಲಿ ಗೆಲುವು ಪಡೆದರು.

ಯುಎಸ್ ಓಪನ್ ಅರ್ಹತಾ ಸುತ್ತಿನಲ್ಲಿ ಅಂತಿಮವಾಗಿ ಭಾರತೀಯ ಆಟಗಾರನಿಗೆ ಗೆಲುವು ದೊರೆತಿದೆ. ಮೊದಲ ದಿನ ಮೂವರು ಆಟಗಾರರು ಸೋತ ನಂತರ ಭಾರತದ ಪ್ರಜ್ಞೇಶ್ ಗುಣೇಶ್ವರನ್ ಗುರುವಾರ ನಡೆದ ಅರ್ಹತಾ ಸುತ್ತಿನ ಮೊದಲ ಸುತ್ತಿನಲ್ಲಿ ಗೆಲುವು ಪಡೆದರು. ಅವರು ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯ ಅರ್ಹತಾ ಪಂದ್ಯಗಳ ಎರಡನೇ ಸುತ್ತಿಗಾಗಿ ಕೆನಡಾದ ಬ್ರೈಡನ್ ಶಾನರ್ ಅವರನ್ನು ನೇರ ಸೆಟ್ ಗಳಲ್ಲಿ ಸೋಲಿಸಿದರು. ಬುಧವಾರ ರಾತ್ರಿ ಒಂದು ಗಂಟೆ 37 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ವಿಶ್ವ ನಂಬರ್ 156 ರ ಸ್ಥಾನದಲ್ಲಿರುವ ಗುಣೇಶ್ವರನ್ ವಿಶ್ವದ 232 ನೇ ಶ್ರೇಯಾಂಕದ ಶಾನರ್ ಅವರನ್ನು 6-4, 7-6 ಅಂತರದಿಂದ ಸೋಲಿಸಿದರು. 31 ವರ್ಷದ ಭಾರತೀಯ ಆಟಗಾರ ಮುಂದೆ ಅಮೆರಿಕದ ಕ್ರಿಸ್ಟೋಫರ್ ಯುಬಾಂಕ್ಸ್ ಅವರನ್ನು ಎದುರಿಸಲಿದ್ದಾರೆ. ಗುಣೇಶ್ವರನ್ 2019 ರಲ್ಲಿ ಈ ಪಂದ್ಯಾವಳಿಯ ಮುಖ್ಯ ಡ್ರಾದಲ್ಲಿ ಸ್ಥಾನ ಪಡೆದಿದ್ದರು. ನಂತರ ಅವರು ಮೊದಲ ಸುತ್ತಿನಲ್ಲಿ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್ ಎದುರು ಸೋತರು.
ಸುಮಿತ್ ನಾಗಲ್ ಮತ್ತು ರಾಮಕುಮಾರ್ ಔಟ್ ಪುರುಷರ ಸಿಂಗಲ್ಸ್‌ನಲ್ಲಿ, ಸುಮಿತ್ ನಾಗಲ್ ಮತ್ತು ರಾಮಕುಮಾರ್ ರಾಮನಾಥನ್ ಮೊದಲ ಸುತ್ತಿನಿಂದ ಮುನ್ನಡೆಯಲು ವಿಫಲವಾದ ಕಾರಣ ಭಾರತದ ಭರವಸೆ ಈಗ ಗುನ್ನೇಶ್ವರನ ಮೇಲೆ ನಿಂತಿದೆ. ಮಹಿಳೆಯರ ಸಿಂಗಲ್ಸ್ ನಲ್ಲಿ ಅಂಕಿತಾ ರೈನಾ ಕೂಡ ಮೊದಲ ಸುತ್ತಿನಲ್ಲಿ ಸೋತರು. ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ನಾಗಲ್ 5-7, 6-4, 3-6ರಲ್ಲಿ ಅರ್ಜೆಂಟೀನಾದ ಜುವಾನ್ ಪ್ಯಾಬ್ಲೊ ಫಿಕೊವಿಚ್ ವಿರುದ್ಧ ಸೋತರು. ಈ ಪಂದ್ಯವು ಎರಡು ಗಂಟೆ 22 ನಿಮಿಷಗಳ ಕಾಲ ನಡೆಯಿತು. ಮೊದಲ ಸೆಟ್ ಗೆದ್ದರೂ, ರಾಮಕುಮಾರ್ ಅವರು ರಷ್ಯಾದ ಎವ್ಗೆನಿ ಡಾನ್ಸ್‌ಕೊಯ್ ವಿರುದ್ಧ 6-4, 6-7 (1), 4-6 ಅಂತರದಲ್ಲಿ ಎರಡು ಗಂಟೆ 35 ನಿಮಿಷಗಳ ಕಾಲದ ಆಟದಲ್ಲಿ ಸೋತರು. 2014 ರಿಂದ ಗ್ರ್ಯಾಂಡ್ ಸ್ಲಾಮ್ ನ ಮುಖ್ಯ ಸುತ್ತಿಗೆ ಪ್ರವೇಶಿಸಲು ಇದು ರಾಮಕುಮಾರ್ ಅವರ 21 ನೇ ಪ್ರಯತ್ನವಾಗಿದೆ.
ಕ್ರೀಡಾಂಗಣ ಪ್ರೇಕ್ಷಕರಿಂದ ತುಂಬಿದೆ ಮುಂದಿನ ವಾರ ಆರಂಭವಾಗಲಿರುವ ಯುಎಸ್ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿ ವೀಕ್ಷಕರು ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಅಥವಾ ಲಸಿಕೆ ಹಾಕುವ ಪುರಾವೆ ನೀಡುವುದು ಕಡ್ಡಾಯವಲ್ಲ. ಯುಎಸ್ ಓಪನ್ ಅನ್ನು ಒಂದು ವರ್ಷದ ಹಿಂದೆ ಪ್ರೇಕ್ಷಕರಿಲ್ಲದೆ ಆಯೋಜಿಸಲಾಗಿತ್ತು, ಆದರೆ ಈ ಬಾರಿ ಕ್ರೀಡಾಂಗಣವು ತುಂಬಿರುತ್ತದೆ.
