ಐಪಿಎಲ್ 2021 ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವರ್ಸಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪಂದ್ಯದ 17ನೇ ಓವರ್ನಲ್ಲಿ ಶಹಬಾಜ್ ಅಹ್ಮದ್ ವಿಕೆಟ್ ಕಬಳಿಸಿ ಇಡೀ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು. ಶಹಬಾಜ್ ಸಾಲುಸಾಲಾಗಿ ವಿಕೆಟ್ ಪಡೆದದ್ದನ್ನು ವೀಕ್ಷಿಸುತ್ತಿದ್ದ ಸನ್ರೈಸರ್ಸ್ ಹೈದರಾಬಾದ್ ಸಿಇಒ ಕವಿಯಾ ಮಾರನ್ ತಲೆಮೇಲೆ ಕೈಹೊತ್ತ ವಿಡಿಯೋ ಇದೀಗ ವೈರಲ್ ಆಗಿದೆ.
ಪಂದ್ಯದ ಕೊನೆಯಲ್ಲಿ ಹೈದರಾಬಾದ್ಗೆ 24 ಎಸೆತದಲ್ಲಿ 35 ರನ್ ಬೇಕಿತ್ತು. ಮನೀಶ್ ಪಾಂಡೆ ಮತ್ತು ಜಾನಿ ಬೈರ್ಸ್ಟೋ ಕ್ರಿಸ್ನಲ್ಲಿ ನಿಂತಿದ್ದರು. 17ನೇ ಓವರ್ನಲ್ಲಿ ಶಹಬಾಜ್ ಅಹ್ಮದ್ ಬಂದು ಅವರಿಬ್ಬರನ್ನೂ ಔಟ್ ಮಾಡಿದರು. ಜೊತೆಗೆ ಅಬ್ದುಲ್ ಸಮದ್ ಅವರ ವಿಕೆಟ್ ಕೂಡಾ ಪಡೆದರು. ಮನೀಶ್ ಪಾಂಡೆ ವಿಕೆಟ್ ಕಳೆದುಕೊಂಡದ್ದನ್ನು ಕಂಡ ಸನ್ರೈಸರ್ಸ್ ಹೈದರಾಬಾದ್ ಸಿಇಒ ಕವಿಯಾ ಮಾರನ್ ಆಶ್ಚರ್ಯಚಕಿತರಾದರು. ಮನೀಶ್ ಪಾಂಡೆ ಔಟ್ ಆಗಿರುವುದನ್ನು ಕಂಡ ಸಿಇಒ ತಲೆಮೇಲೆ ಕೈಹೊತ್ತು ಕೂತ ವಿಡಿಯೋ ಇದೀಗ ವೈರಲ್ ಆಗಿದೆ.
ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡು 149 ರನ್ ದಾಖಲಿಸಿತ್ತು. ಈ ಮೂಲಕ ಸನ್ರೈಸರ್ಸ್ ಹೈದರಾಬಾದ್ಗೆ ಗೆಲ್ಲಲು 150 ರನ್ಗಳ ಸುಲಭ ಟಾರ್ಗೆಟ್ ನೀಡಿತ್ತು. ನಂತರ, ಹೈದರಾಬಾದ್ ತಂಡದ ಪರ ನಾಯಕ ಡೇವಿಡ್ ವಾರ್ನೆರ್ ಹಾಗೂ ಮನೀಶ್ ಪಾಂಡೆ ಉತ್ತಮ ಆಟವಾಡಿ ಗೆಲ್ಲುವ ಸೂಚನೆ ನೀಡಿದ್ದರು. ಆದರೆ, ಅವರಿಬ್ಬರು ಔಟ್ ಆದ ಬಳಿಕ ಕ್ರೀಸ್ಗೆ ಇಳಿದ ಆಟಗಾರರು ತಂಡವನ್ನು ಮುನ್ನಡೆಸುವ ಮನಮಾಡಲಿಲ್ಲ. ಆರ್ಸಿಬಿ ಬೌಲರ್ಗಳು ಡೆತ್ ಓವರ್ಗಳಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದರು. ಸನ್ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಲೈನ್ಅಪ್ ಧೂಳಿಪಟ ಮಾಡಿದರು. ಆರ್ಸಿಬಿ ಪರ ಶಹಬಾಜ್ ಅಹ್ಮದ್ 2 ಓವರ್ ಬೌಲ್ ಮಾಡಿ ಕೇವಲ 7 ರನ್ ಬಿಟ್ಟುಕೊಟ್ಟು 3 ವಿಕೆಟ್ ಕಬಳಿಸಿದರು. ಒಂದೇ ಓವರ್ನಲ್ಲಿ ಶಹಬಾಜ್ 3 ವಿಕೆಟ್ ಪಡೆದಿದ್ದು ಪಂದ್ಯದ ದಿಕ್ಕನ್ನೇ ಬದಲಿಸಿತು.
Well Done Shahbaz Ahmed ??❤️#SRHvRCB pic.twitter.com/HSjsg4O5s9
— Oreo (@Oreohotchoco) April 14, 2021
ಈ ಮೂಲಕ, ಆರ್ಸಿಬಿ-ಎಸ್ಆರ್ಎಚ್ ನಡುವಿನ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ರನ್ಗಳ ರೋಚಕ ಗೆಲುವು ದಾಖಲಿಸಿದೆ. ಆರ್ಸಿಬಿ ಪರ ನಾಯಕ ವಿರಾಟ್ ಕೊಹ್ಲಿ 33(29) ಹಾಗೂ ಗ್ಲೆನ್ ಮ್ಯಾಕ್ಸ್ವೆಲ್ 59(41) ಹೊರತುಪಡಿಸಿ ಉಳಿದ ಆಟಗಾರರು ಇನ್ನಿಂಗ್ಸ್ ಕಟ್ಟುವ ಆಟ ಆಡಿಲ್ಲ. ಸನ್ರೈಸರ್ಸ್ ಹೈದರಾಬಾದ್ ಪರ ಬೌಲರ್ಗಳು ಅತ್ಯುತ್ತಮ ಪ್ರದರ್ಶನ ತೋರಿದ್ದರು. ರಶೀದ್ ಖಾನ್ 4 ಓವರ್ನಲ್ಲಿ 18 ರನ್ ಬಿಟ್ಟುಕೊಟ್ಟು 2 ವಿಕೆಟ್ ಕಬಳಿಸಿದ್ದರು. ಜೇಸನ್ ಹೋಲ್ಡರ್ 4 ಓವರ್ನಲ್ಲಿ 30 ರನ್ ನೀಡಿ 3 ವಿಕೆಟ್ ಪಡೆದಿದ್ದರು.
ಇದನ್ನೂ ಓದಿ: SRH vs RCB: ಕೈತಪ್ಪಿ ಹೋಗಿದ್ದ ಪಂದ್ಯಕ್ಕೆ ಟರ್ನ್ ನೀಡಿದ್ದು ಶಹಬಾಜ್ ಮಾಡಿದ ಆ ಒಂದು ಓವರ್!
Published On - 6:06 pm, Thu, 15 April 21