SRH vs RCB: ಕೈತಪ್ಪಿ ಹೋಗಿದ್ದ ಪಂದ್ಯಕ್ಕೆ ಟರ್ನ್​ ನೀಡಿದ್ದು ಶಹಬಾಜ್​ ಮಾಡಿದ ಆ ಒಂದು ಓವರ್​!

SRH vs RCB: ಕೈತಪ್ಪಿ ಹೋಗಿದ್ದ ಪಂದ್ಯಕ್ಕೆ ಟರ್ನ್​ ನೀಡಿದ್ದು ಶಹಬಾಜ್​ ಮಾಡಿದ ಆ ಒಂದು ಓವರ್​!
ಶಹಬಾಜ್​ ಅಹ್ಮದ್​

17ನೇ ಓವರ್​ನಲ್ಲಿ ಶಹಬಾಜ್​ ಅಹ್ಮದ್​ ಅಟ್ಯಾಕ್​ಗೆ ಇಳಿದಿದ್ದರು. ಮೊದಲ ಬಾಲ್​ನಲ್ಲೇ ಜಾನಿ ಬೇರ್​ಸ್ಟೋ ಔಟ್​ ಆದರೆ, ನಂತರದ ಬಾಲ್​ನಲ್ಲಿ ಮನೀಶ್ ಪಾಂಡೆಯನ್ನು ಪೆವಿಲಿಯನ್​ಗೆ ಕಳುಹಿಸಿದರು.

Rajesh Duggumane

|

Apr 14, 2021 | 11:40 PM

ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರ್​ಸಿಬಿ ಗೆದ್ದು ಬೀಗಿದೆ. ಈ ಮೂಲಕ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಸುಲಭ ಮ್ಯಾಚ್​ ಅನ್ನು ಸೋಲುವ ಮೂಲಕ ಹೈದರಾಬಾದ್​ ಆರನೇ ಸ್ಥಾನಕ್ಕೆ ಕುಸಿದಿದೆ. ಕೈ ತಪ್ಪಿ ಹೋಗಿದ್ದ ಪಂದ್ಯಕ್ಕೆ ಟರ್ನ್ ನೀಡಿದ್ದು ಶಹಬಾಜ್​ ಅಹ್ಮದ್​ ಮಾಡಿದ ಆ ಒಂದು ಓವರ್. ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದಿದ್ದ ಆರ್​ಸಿಬಿ ಕಳಪೆ ಆರಂಭ ಕಂಡಿತ್ತು. ದೇವದತ್​ ಪಡಿಕ್ಕಲ್​ (11), ಶಹಬಾಜ್​ ಅಹ್ಮದ್ (14)​, ವಿರಾಟ್​ ಕೊಹ್ಲಿ (33) ರನ್​ಗಳಿಗೆ ಔಟ್​ ಆದರು. ನಂತರ ಬಂದ ಮ್ಯಾಕ್ಸ್​ವೆಲ್​ ಹೊರತುಪಡಿಸಿ ಯಾರೂ ಅಷ್ಟು ಉತ್ತಮವಾಗಿ ಬ್ಯಾಟ್ ಬೀಸಿಲ್ಲ. ಮ್ಯಾಕ್ಸ್​ವೆಲ್​ 41 ಬಾಲ್​​ಗಳಿಗೆ 59 ರನ್​ ಸಿಡಿಸಿ ತಂಡದ ಮೊತ್ತವನ್ನು 149ರನ್​ ಗಡಿ ಮುಟ್ಟಿಸಿದರು.

ಸಾಮಾನ್ಯ  ಗುರಿ ಬೆನ್ನು ಹತ್ತಿದ ಹೈದರಾಬಾದ್ ತಂಡಕ್ಕೆ ಆರಂಭಿಕ ಆಘಾತ ಉಂಟಾಗಿತ್ತು. ವೃದ್ಧಿಮಾನ್​ ಸಹಾ ಕೇವಲ ಒಂದು ರನ್​ಗೆ ಔಟ್​ ಆದರು. ನಂತರ ಜತೆಯಾದ ಡೇವಿಡ್​ ವಾರ್ನರ್​ ಹಾಗೂ ಮನೀಶ್​ ಪಾಂಡೆ ತಂಡಕ್ಕೆ ಉತ್ತಮ ಅಡಿಪಾಯ ಹಾಕಿದರು. 96 ರನ್​ಗಳಿಸಿ ಆಡುವಾಗ ವಾರ್ನರ್​ ಔಟ್​ ಆದರು. ನಂತರ ಆಗಿದ್ದು ಮಾತ್ರ ಮ್ಯಾಜಿಕ್​.

17ನೇ ಓವರ್​ನಲ್ಲಿ ಶಹಬಾಜ್​ ಅಹ್ಮದ್​ ಅಟ್ಯಾಕ್​ಗೆ ಇಳಿದರು. ಮೊದಲ ಬಾಲ್​ನಲ್ಲೇ ಜಾನಿ ಬೇರ್​ಸ್ಟೋ ಔಟ್​ ಆದರೆ, ನಂತರದ ಬಾಲ್​ನಲ್ಲಿ ಮನೀಶ್ ಪಾಂಡೆಯನ್ನು ಪೆವಿಲಿಯನ್​ಗೆ ಕಳುಹಿಸಿದರು. ಇದೇ ಓವರ್​ನ ಕೊನೆಯ ಬಾಲ್​ಗೆ ಅಬ್ದುಲ್​ ಸಮಾದ್ ಔಟ್​ ಆದರು. ಒಂದೇ ಓವರ್​ನಲ್ಲಿ ಮೂರು ವಿಕೆಟ್​ ಕೀಳುವ ಮೂಲಕ ಶಹಬಾಜ್​ ತಂಡದ ಗತಿಯನ್ನೇ ಬದಲಿಸಿ ಬಿಟ್ಟರು. ಅಂತಿಮವಾಗಿ ಆರ್​ಸಿಬಿ 6 ರನ್​ಗಳ ಗೆಲುವು ಕಂಡಿತು. ಆರ್​ಸಿಬಿ ಪರ ಹರ್ಷಲ್​ ಪಟೇಲ್​ 2, ಮೊಹ್ಮದ್​ ಸಿರಾಜ್​ 2 ಹಾಗೂ ಜೇಮಿಸನ್​ ಒಂದು ವಿಕೆಟ್​ ಕಿತ್ತಿದ್ದಾರೆ.

ಇದನ್ನೂ ಓದಿ: Virat Kohli: ಔಟ್​ ಆಗಿದ್ದಕ್ಕೆ ಕೊಹ್ಲಿ ರೌದ್ರರೂಪ ; ಪೆವಿಲಿಯನ್​ ಚೇರ್​ಗಳು ಚೆಲ್ಲಾಪಿಲ್ಲಿ, ವಿಡಿಯೋ ವೈರಲ್​

Follow us on

Related Stories

Most Read Stories

Click on your DTH Provider to Add TV9 Kannada