ಏನಿದು! 2020ರ ಅಂತ್ಯಕ್ಕೆ ಅಪಖ್ಯಾತಿಗೆ ತುತ್ತಾದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ?

| Updated By: ಸಾಧು ಶ್ರೀನಾಥ್​

Updated on: Dec 02, 2020 | 6:13 PM

2008ರಲ್ಲಿ ವಿರಾಟ್​ ಕೊಹ್ಲಿ ಏಕದಿನ ಕ್ರಿಕೆಟ್​ಗೆ ಕಾಲಿಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಪ್ರತಿ ವರ್ಷ ಸಾಕಷ್ಟು ಶತಕಗಳು ಅವರ ಬ್ಯಾಟ್​ನಿಂದ ಸಿಡಿದಿವೆ.

ಏನಿದು! 2020ರ ಅಂತ್ಯಕ್ಕೆ ಅಪಖ್ಯಾತಿಗೆ ತುತ್ತಾದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ?
ವಿರಾಟ್ ಕೊಹ್ಲಿ
Follow us on

2020 ಅನೇಕರ ಪಾಲಿಗೆ ಕೆಟ್ಟ ವರ್ಷವಾಗಿದೆ. ಇದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್​ ಕೊಹ್ಲಿ ಕೂಡ ಹೊರತಾಗಿಲ್ಲ. ಪ್ರತಿ ವರ್ಷ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದ ಅವರನ್ನು ಈ ಬಾರಿ ಅಪಖ್ಯಾತಿ ಸುತ್ತಿಕೊಂಡಿದೆ.

ಈ ಬಾರಿಯ ಐಪಿಎಲ್​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿ ಕೊನೆಯಲ್ಲಿ ಎಡವಿತ್ತು. ಇದಕ್ಕೆ ವಿರಾಟ್​ ಕೊಹ್ಲಿ ಕಳಪೆ ನಾಯಕತ್ವವೇ ಕಾರಣ ಎನ್ನುವ ಮಾತು ಕೇಳಿ ಬಂದಿತ್ತು. ಅಲ್ಲದೆ, ಟೀಂ ಇಂಡಿಯಾಕ್ಕೆ ಟಿ20 ನಾಯಕನಾಗಿ ರೋಹಿತ್​ ಶರ್ಮಾ ನೇಮಕಗೊಳ್ಳಬೇಕು ಎನ್ನುವ ಆಗ್ರಹ ಕೂಡ ಕೇಳಿ ಬಂದಿತ್ತು. ಈ ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ ಕೊಹ್ಲಿ ಒಂದೂ ಶತಕ ಬಾರಿಸದೆ 2020ಅನ್ನು ಪೂರ್ಣಗೊಳಿಸಿದ್ದಾರೆ.

ಅವರ ಬ್ಯಾಟಿನಿಂದ ಒಂದೂ ಏಕದಿನ ಶತಕ ಸಿಡಿಯಲಿಲ್ಲ ಈ ಬಾರಿ!
2008ರಲ್ಲಿ ವಿರಾಟ್​ ಕೊಹ್ಲಿ ಏಕದಿನ ಕ್ರಿಕೆಟ್​ಗೆ ಕಾಲಿಟ್ಟಿದ್ದರು. ಅಲ್ಲಿಂದ ಇಲ್ಲಿಯವರೆಗೂ ಪ್ರತಿ ವರ್ಷ ಸಾಕಷ್ಟು ಶತಕಗಳು ಅವರ ಬ್ಯಾಟ್​ನಿಂದ ಸಿಡಿದಿವೆ. ಆದರೆ, ಇದೇ ವರ್ಷ ಅವರು ಏಕದಿನ ಪಂದ್ಯದಲ್ಲಿ ಯಾವುದೇ ಶತಕ ಸಿಡಿಸಿಲ್ಲ. ಅವರ 12 ವರ್ಷಗಳ ಕ್ರಿಕೆಟ್​ ಬದುಕಿನಲ್ಲಿ ಈ ರೀತಿ ಆಗಿದ್ದು ಇದೇ ಮೊದಲು.

ಕೊರೋನಾ ವೈರಸ್​ ಸೋಂಕಿನಿಂದ ಜಗತ್ತಿನ ಹಲವು ದೇಶಗಳಲ್ಲಿ ಲಾಕ್​ಡೌನ್​ ಘೋಷಣೆಯಾದ ಹಿನ್ನೆಲೆಯಲ್ಲಿ ಟೀಂ ಇಂಡಿಯಾದ ಸಾಕಷ್ಟು ಪ್ರವಾಸಗಳು ರದ್ದಾಗಿದ್ದವು. ಹೀಗಾಗಿ ಕೊಹ್ಲಿ ಈ ಬಾರಿ ಆಡಿದ್ದು ಕೇವಲ 9 ಏಕದಿನ ಪಂದ್ಯಗಳು.

ಈ ಪೈಕಿ ಅವರು ಐದು ಅರ್ಧಶತಕ ಸೇರಿ 431 ರನ್​ ಸಿಡಿಸಿದ್ದಾರೆ. ಸರಾಸರಿ ರನ್​ ಪ್ರಮಾಣ 47.88 ಇದೆ. ಈ ವರ್ಷದ ಕೊನೆಯ ಏಕದಿನ ಪಂದ್ಯ ಇಂದು ಆಸ್ಟ್ರೇಲಿಯಾದ ಕ್ಯಾನ್​ಬೆರಾದಲ್ಲಿ ಬುಧವಾರ ನಡೆಯಿತು. ಪಂದ್ಯದಲ್ಲಿ ಕೊಹ್ಲಿ 63 ರನ್​ ಸಿಡಿಸಿದ್ದಾರೆ.

ವಿರಾಟ್​ ಕೊಹ್ಲಿ 2017ರಲ್ಲಿ 6, 2018ರಲ್ಲಿ 6 ಹಾಗೂ 2019ರಲ್ಲಿ 5 ಏಕದಿನ ಶತಕ ಸಿಡಿಸಿದ್ದರು.

ಸಚಿನ್​ ತೆಂಡೂಲ್ಕರ್​​ ದಾಖಲೆಯನ್ನು ಹಿಂದಿಕ್ಕಿದ ವಿರಾಟ್​ ಕೊಹ್ಲಿ!