Virat Kohli IPL 2021 RCB Team Player: ಆರ್​ಸಿಬಿ ರನ್ ಮಷಿನ್ ವಿರಾಟ್​ ಕೊಹ್ಲಿ ಈ ಬಾರಿಯಾದರೂ ತಂಡವನ್ನು ಚಾಂಪಿಯನ್ ಮಾಡ್ತಾರಾ?

| Updated By: Digi Tech Desk

Updated on: Apr 09, 2021 | 11:24 AM

Virat Kohli Profile: ನಾಯಕ ವಿರಾಟ್‌ ಕೊಹ್ಲಿ ಐಪಿಎಲ್‌ ಟೂರ್ನಿಯ 61 ಇನಿಂಗ್ಸ್‌ಗಳಲ್ಲಿ ಇನಿಂಗ್ಸ್ ಆರಂಭಿಸಿದ್ದು, 46.90ರ ಸರಾಸರಿಯಲ್ಲಿ 2345 ರನ್‌ ಕಲೆ ಹಾಕಿದ್ದಾರೆ.

Virat Kohli IPL 2021 RCB Team Player: ಆರ್​ಸಿಬಿ ರನ್ ಮಷಿನ್ ವಿರಾಟ್​ ಕೊಹ್ಲಿ ಈ ಬಾರಿಯಾದರೂ ತಂಡವನ್ನು ಚಾಂಪಿಯನ್ ಮಾಡ್ತಾರಾ?
ವಿರಾಟ್ ಕೊಹ್ಲಿ
Follow us on

ಕ್ರಿಕೆಟ್​ ದುನಿಯಾದ ರನ್ ಮೆಷಿನ್ ಎಂದು ಕರೆಯಲ್ಪಡುವ ಭಾರತೀಯ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿಯ ಸಾಮರ್ಥ್ಯ ಮತ್ತು ಸ್ಕೋರ್ ಮಾಡುವ ಹಸಿವು ಕೊಹ್ಲಿಯನ್ನು ಕ್ರಿಕೆಟ್ ಜಗತ್ತಿನಲ್ಲಿ ಸಾಮ್ರಾಟನನ್ನಾಗಿ ಮಾಡಿದೆ. ಏಕದಿನ ಪಂದ್ಯಗಳಲ್ಲಿ ನಂ .1, ಟೆಸ್ಟ್ ಕ್ರಿಕೆಟ್‌ನಲ್ಲಿ ನಂ .2 ಮತ್ತು ಟಿ 20 ಐಗಳಲ್ಲಿ ನಂ .3 ಸ್ಥಾನ ಪಡೆದಿರುವ ಸ್ಟೈಲಿಸ್ಟ್ ಬ್ಯಾಟ್ಸ್‌ಮನ್ ವರ್ಷದಿಂದ ವರ್ಷಕ್ಕೆ ಹೇಗೆ ವಿಕಸನಗೊಂಡಿದ್ದಾರೆ ಎಂಬುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿಯಾಗಿವೆ. ಈ ಕ್ರಿಕೆಟ್​ ಕಿಂಗ್ 2008 ರ ಐಸಿಸಿ ಅಂಡರ್​ 19 ಕ್ರಿಕೆಟ್ ವಿಶ್ವಕಪ್ ಗೆದ್ದ ಭಾರತೀಯ ತಂಡದ ನಾಯಕರಾಗಿದ್ದ ಕಿಂಗ್ ಕೊಹ್ಲಿ ಅಂದಿನಿಂದ ಹಿಂತಿರುಗಿ ನೋಡಿದ್ದೆ ಇಲ್ಲ.

2008 ರಲ್ಲಿ, ಕೊಹ್ಲಿಯನ್ನು ಆರ್‌ಸಿಬಿ ತಂಡದಲ್ಲಿ ಸೇರಿಸಿಕೊಳ್ಳಲಾಯಿತು. 2013 ರಲ್ಲಿ ಕೊಹ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಲು ಪ್ರಾರಂಭಿಸಿದರು. 2016 ರಲ್ಲಿ ಪ್ರಮುಖ ರನ್-ಸ್ಕೋರರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ ಕೊಹ್ಲಿ ಒಂಬತ್ತನೇ ಆವೃತ್ತಿಯ ಕೊನೆಯಲ್ಲಿ ಆರೆಂಜ್ ಕ್ಯಾಪ್ ಧರಿಸಿ ಮಿಂಚಿದರು. ಐಪಿಎಲ್‌ನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಆಗಿದ್ದಾರೆ. ಐಪಿಎಲ್ 2018 ಪ್ಲೇಯರ್ ಹರಾಜಿಗೆ ಮುಂಚಿತವಾಗಿ ತನ್ನ ಫ್ರ್ಯಾಂಚೈಸ್‌ನಿಂದ ಉಳಿಸಿಕೊಂಡ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದಲ್ಲದೇ ಈ ಬಾರಿಯು ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಈ ಐಪಿಎಲ್​ನಲ್ಲಿ ಓಪನರ್​ ಆಗಿ ಕಣಕ್ಕೆ
ಇಂಗ್ಲೆಂಡ್​ ವಿರುದ್ಧ ಅಂತಿಮ ಟಿ20 ಪಂದ್ಯದ ಗೆಲುವಿನ ಬಳಿಕ ಮಾತಾನಾಡಿದ ನಾಯಕ ಕೊಹ್ಲಿ ಹೌದು, ನಾನು ಐಪಿಎಲ್‌ನಲ್ಲೂ ಆರಂಭಿಕನಾಗಿ ಕಣಕ್ಕಿಳಿಯಲ್ಲಿದ್ದೇನೆ ಎಂದರು. ಹೀಗಾಗಿ ಈ ಬಾರಿಯ ಐಪಿಎಲ್​ನಲ್ಲಿ ನಾವು ಕೊಹ್ಲಿಯನ್ನು ಆರಂಭಿಕನಾಗಿ ಕಾಣಬಹುದು. ಜೊತೆಗೆ ಆರ್​ಸಿಬಿಗೆ ಬಹಳ ದಿನಗಳಿಂದ ಇರುವ ಆರಂಭಿಕರ ಕೊರತೆಯನ್ನು ಇದು ನೀಗಿಸಬಹುದಾಗಿದೆ. ನಾಯಕ ವಿರಾಟ್‌ ಕೊಹ್ಲಿ ಐಪಿಎಲ್‌ ಟೂರ್ನಿಯ 61 ಇನಿಂಗ್ಸ್‌ಗಳಲ್ಲಿ ಇನಿಂಗ್ಸ್ ಆರಂಭಿಸಿದ್ದು, 46.90ರ ಸರಾಸರಿಯಲ್ಲಿ 2345 ರನ್‌ ಕಲೆ ಹಾಕಿದ್ದಾರೆ. ಇದರಲ್ಲಿ 15 ಅರ್ಧಶತಕಗಳು ಒಳಗೊಂಡಿವೆ. ವಿರಾಟ್‌ ಕೊಹ್ಲಿ ಹಾಗೂ ದೇವದತ್‌ ಪಡಿಕ್ಕಲ್‌ ಆರ್‌ಸಿಬಿ ಓಪನಿಂಗ್‌ ಸಮಸ್ಯೆಯನ್ನು ನೀಗಿಸುತ್ತಾರೆಂದು ಆರ್​ಸಿಬಿ ಅಭಿಮಾನಿಗಳು ಭಾವಿಸಿದ್ದಾರೆ.

ಐಪಿಎಲ್​ನಲ್ಲಿ ಕೊಹ್ಲಿ ಸಾಧನೆ

ವರ್ಷ ಪಂದ್ಯ ರನ್ ಅತ್ಯಧಿಕ ರನ್ ಸರಾಸರಿ ಶತಕ ಅರ್ಧ ಶತಕ
2020 15 466 90 42.36 0 3
2019 14 464 100 33.14 1 2
2018 14 530 92* 48.18 0 4
2017 10 308 64 30.8 0 4
2016 16 973 113 81.08 4 7
2015 16 505 82* 45.9 0 3
2014 14 359 73 27.61 0 2
2013 16 634 99 45.28 0 6
2012 16 364 73* 28 0 2
2011 16 557 71 46.41 0 4
2010 16 307 58 27.9 0 1
2009 16 246 50 22.36 0 1
2008 13 165 38 15 0 0

 

ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಕೊಹ್ಲಿ ಸಾಧನೆ

ಆವೃತ್ತಿ ಪಂದ್ಯ ರನ್ ಅತ್ಯಧಿಕ ರನ್ ಸರಾಸರಿ ಶತಕ ದ್ವಿ ಶತಕ ಅರ್ಧ ಶತಕ
ಟೆಸ್ಟ್ 91 7490 254 52.38 27 7 25
ಏಕದಿನ 254 12169 183 59.07 43 0 62
T20 89 3159 94 52.65 0 0 28