Virat Kohli: ವಿರಾಟ್​ ಕೊಯ್ಲಿಗೆ ‘ಮನಿ ಹೈಸ್ಟ್​’ ಪ್ರೊಫೆಸರ್ ಪಾತ್ರ? ವೈರಲ್​ ಆಯ್ತು ಹೊಸ ಲುಕ್​

ವಿರಾಟ್​ ಕೊಯ್ಲಿ ಮತ್ತು ‘ಮನಿ ಹೈಸ್ಟ್​’ ನಟ ಅಲ್ವರೋ ಮೋರ್ಟೆ ಅವರ ಫೋಟೋಗಳನ್ನು ಅಕ್ಕ-ಪಕ್ಕ ಇಟ್ಟು ವೈರಲ್​ ಮಾಡಲಾಗುತ್ತಿದೆ. ನೆಟ್ಟಿಗರು ಹಲವು ಬಗೆಯಲ್ಲಿ ಇದನ್ನು ವೈರಲ್​ ಮಾಡುತ್ತಿದ್ದಾರೆ. ವಿರಾಟ್​ ಕೊಯ್ಲಿ ಲುಕ್​ ಕಂಡವರು ಅನೇಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

Virat Kohli: ವಿರಾಟ್​ ಕೊಯ್ಲಿಗೆ ‘ಮನಿ ಹೈಸ್ಟ್​’ ಪ್ರೊಫೆಸರ್ ಪಾತ್ರ? ವೈರಲ್​ ಆಯ್ತು ಹೊಸ ಲುಕ್​
ವಿರಾಟ್ ಕೊಯ್ಲಿ - ಅಲ್ವರೋ ಮೋರ್ಟೆ

Updated on: May 25, 2021 | 5:03 PM

ಐಪಿಎಲ್​ ರದ್ದಾದ​ ಬಳಿಕ ಕ್ರಿಕೆಟಿಗ ವಿರಾಟ್​ ಕೊಯ್ಲಿ ಬೇರೆ ಬೇರೆ ಕಾರಣಗಳಿಂದ ಸುದ್ದಿ ಆಗುತ್ತಿದ್ದಾರೆ. ಲಾಕ್​ಡೌನ್ ಜಾರಿಯಾದ ಕಾರಣ ಅವರು ಹೊರಗೆಲ್ಲೂ ತಿರುಗಾಡುತ್ತಿಲ್ಲ. ಹೇರ್​ ಕಟ್​ ಕೂಡ ಮಾಡಿಸಿಲ್ಲ ಎನಿಸುತ್ತದೆ. ಸದಾ ಸ್ಟೈಲಿಶ್​ ಆಗಿ ಮಿಂಚುವ ಅವರು ಈಗ ಡಿಫರೆಂಟ್​ ಆಗಿ ಕಾಣಿಸಿಕೊಂಡಿದ್ದಾರೆ. ಮಾಮೂಲಿಗಿಂತಲೂ ಸ್ವಲ್ಪ ಉದ್ದ ಕೂದಲು, ಕುರುಚಲು ಗಡ್ಡದ ಲುಕ್​ನಲ್ಲಿರುವ ಅವರ ಒಂದು ಫೋಟೋ ವೈರಲ್​ ಆಗಿದೆ. ಅದನ್ನು ಕಂಡವರಿಗೆಲ್ಲ ಜನಪ್ರಿಯ ‘ಮನಿ ಹೈಸ್ಟ್​’ ವೆಬ್​ ಸಿರೀಸ್​ನ ಪ್ರೊಫೆಸರ್​ ಪಾತ್ರ ನೆನಪಾಗುತ್ತಿದೆ.

ಮನಿ ಹೈಸ್ಟ್​ ವೆಬ್​ ಸರಣಿಯಲ್ಲಿ ಪ್ರೊಫೆಸರ್​ ಪಾತ್ರ ತುಂಬ ಮುಖ್ಯವಾದದ್ದು. ಆ ಪಾತ್ರಕ್ಕೆ ಬಣ್ಣ ಹಚ್ಚಿದವರು ಸ್ಪ್ಯಾನಿಶ್​ ನಟ ಅಲ್ವರೋ ಮೋರ್ಟೆ. ಆ ಪಾತ್ರದ ಮೂಲಕ ಅವರು ವಿಶ್ವಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈಗ ವಿರಾಟ್​ ಕೊಯ್ಲಿ ಅವರ ಲಾಕ್​ಡೌನ್​ ಲುಕ್​ ಕೂಡ ಮನಿ ಹೈಸ್ಟ್​ ವೆಬ್​ ಸಿರೀಸ್​ನಲ್ಲಿ ಅಲ್ವರೋ ಮೋರ್ಟೆ ಅವರ ಪ್ರೊಫೆಸರ್​ ಪಾತ್ರಕ್ಕೆ ಹೋಲಿಕೆ ಆಗುತ್ತಿದೆ ಎಂದೇ ಎಲ್ಲರೂ ಹೇಳುತ್ತಿದ್ದಾರೆ.

ವಿರಾಟ್​ ಕೊಯ್ಲಿ ಮತ್ತು ಅಲ್ವರೋ ಮೋರ್ಟೆ ಅವರ ಫೋಟೋಗಳನ್ನು ಅಕ್ಕ-ಪಕ್ಕ ಇಟ್ಟು ವೈರಲ್​ ಮಾಡಲಾಗುತ್ತಿದೆ. ನೆಟ್ಟಿಗರು ಹಲವು ಬಗೆಯಲ್ಲಿ ಇದನ್ನು ವೈರಲ್​ ಮಾಡುತ್ತಿದ್ದಾರೆ. ವಿರಾಟ್​ ಕೊಯ್ಲಿ ಲುಕ್​ ಕಂಡವರು ಅನೇಕ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಆದಷ್ಟು ಬೇಗ ಅವರು ನಟನೆಗೆ ಬರಬೇಕು ಎಂದು ಅಭಿಮಾನಿಗಳು ಬಯಸುತ್ತಿದ್ದಾರೆ.

‘ಟ್ರೋಫಿ ಹೈಸ್ಟ್​ ವೆಬ್​ ಸಿರೀಸ್​ನ ಫಸ್ಟ್​ಲುಕ್​ ಇದು. ಜೂ.18ಕ್ಕೆ ರಿಲೀಸ್​ ಆಗಲಿದೆ’ ಎಂದು ನೆಟ್ಟಿಗರೊಬ್ಬರು ಹೇಳಿದ್ದಾರೆ. ಮನಿ ಹೈಸ್ಟ್​ ಭಾರತೀಯ ವರ್ಷನ್​ನ ವೆಬ್​ ಸರಣಿಯಲ್ಲಿ ಪ್ರೊಫೆಸರ್​ ಪಾತ್ರ ಮಾಡಲು ವಿರಾಟ್​ ಕೊಯ್ಲಿ ರೆಡಿ ಆಗಿದ್ದಾರೆ ಎಂಬ ಕ್ಯಾಪ್ಷನ್​ನೊಂದಿಗೆ ಅನೇಕರು ಈ ಫೋಟೋವನ್ನು ಹಂಚಿಕೊಂಡಿದ್ದಾರೆ. ಅನುಷ್ಕಾ ಶರ್ಮಾ ಅವರು ಮನಿ ಹೈಸ್ಟ್​ ರಿಮೇಕ್​ ಹಕ್ಕುಗಳನ್ನು ಖರೀದಿಸಬೇಕು ಹಾಗೂ ಅದರಲ್ಲಿ ವಿರಾಟ್​ ಕೊಯ್ಲಿ ಪ್ರೊಫೆಸರ್​ ಪಾತ್ರ ಮಾಡಬೇಕು ಎಂದೆಲ್ಲ ಜನರು ಕಮೆಂಟ್​ ಮಾಡಿದ್ದಾರೆ.

ನಿಜಕ್ಕೂ ಕೊಯ್ಲಿ ಈ ಲುಕ್​ನಲ್ಲಿ ಇದ್ದಾರಾ? ಯಾಕೋ ಅನುಮಾನ. ಕೆಲವೇ ದಿನಗಳ ಹಿಂದೆ ಅವರು ಸೋಷಿಯಲ್​ ಮೀಡಿಯಾದಲ್ಲಿ ಕ್ಯಾಮರಾ ಮುಂದೆ ಬಂದಿದ್ದರು. ಆಗ ಅವರು ಇಷ್ಟು ಉದ್ದ ಕೂದಲು ಬಿಟ್ಟಿರಲಿಲ್ಲ. ಇಷ್ಟು ಕಡಿಮೆ ಅವಧಿಯಲ್ಲಿ ಇಷ್ಟು ಕೂದಲು ಬೆಳೆಯಲು ಹೇಗೆ ಸಾಧ್ಯ ಎಂದು ಅನೇಕರು ಪ್ರಶ್ನಿಸಿದ್ದಾರೆ. ಅಂತಿಮವಾಗಿ ಇದು ಫೋಟೋಶಾಪ್​ನಲ್ಲಿ ಎಡಿಟ್​ ಮಾಡಿರುವ ಫೋಟೋ ಅಂದು ಕೂಡ ಹಲವರು ವಾದ ಮಂಡಿಸಿದ್ದಾರೆ.

ಇದನ್ನೂ ಓದಿ:

ಕೊವಿಡ್​ ಸಂಕಷ್ಟಕ್ಕೆ ಅನುಷ್ಕಾ-ವಿರಾಟ್​ 2 ಕೋಟಿ ರೂ. ದೇಣಿಗೆ; ನಿಧಿ ಸಂಗ್ರಹಕ್ಕೆ ಮುಂದಾದ ದಂಪತಿ

ಬಾಲ್ಯ ಸ್ನೇಹಿತರಾಗಿದ್ದ ಅನುಷ್ಕಾ ಶರ್ಮಾ ಮತ್ತು ಸಾಕ್ಷಿ ಧೋನಿ; ಪುರಾವೆ ಒದಗಿಸುತ್ತಿದೆ ವೈರಲ್​ ಫೋಟೋ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us