Virat Kohli: ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ; ವಿರಾಟ್ ಕೊಹ್ಲಿ ಮಾತು ಕೇಳಿ ಅಭಿಮಾನಿಗಳು ಫುಲ್ ಖುಷ್!

ವಿರಾಟ್ ಕೊಹ್ಲಿ ಅಭಿಮಾನಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ತಮ್ಮ ಡಯಟ್ ಪ್ಲ್ಯಾನ್, ದಿನಚರಿ, ಧೋನಿ ಬಗ್ಗೆ ಅಭಿಪ್ರಾಯ, ಫ್ರೀ ಟೈಂ ಹೇಗೆ ಕಳೆಯುತ್ತಾರೆ ಇತ್ಯಾದಿ ವಿಚಾರ ಹಂಚಿಕೊಂಡಿದ್ದಾರೆ. ಬಾಲ್ಯದ ಫೊಟೊವನ್ನೂ ಶೇರ್ ಮಾಡಿದ್ದಾರೆ.

Virat Kohli: ಸ್ವಲ್ಪ ಸ್ವಲ್ಪ ಕನ್ನಡ ಬರುತ್ತೆ; ವಿರಾಟ್ ಕೊಹ್ಲಿ ಮಾತು ಕೇಳಿ ಅಭಿಮಾನಿಗಳು ಫುಲ್ ಖುಷ್!
ವಿರಾಟ್​ ಕೊಹ್ಲಿ
Updated By: ganapathi bhat

Updated on: Aug 14, 2021 | 1:06 PM

ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಅತಿ ಹೆಚ್ಚು ಪ್ರೀತಿಸುವ ಒಂದಷ್ಟು ವಿಷಯಗಳ ಪೈಕಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಎಬಿ ಡಿವಿಲಿಯರ್ಸ್, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಅಷ್ಟೇ ಅಲ್ಲದೆ ಮತ್ತೊಂದು ಹೆಸರೂ ಇದ್ದೇ ಇರುತ್ತದೆ. ಬಹಳಷ್ಟು ಫೇವರಿಟ್​ಗಳ ಸಾಲಿನಲ್ಲಿ ಮುಂಚೂಣಿಯ ಸಾಲಿನಲ್ಲೇ ಕಂಡುಬರುವ ಈ ಆಟಗಾರ ಮತ್ಯಾರೂ ಅಲ್ಲ. ಭಾರತೀಯ ಕ್ರಿಕೆಟ್ ತಂಡದ ಯಂಗ್ ಅಂಡ್ ಎನರ್ಜಿಟಿಕ್ ಆಟಗಾರ ಕ್ಯಾಪ್ಟನ್ ವಿರಾಟ್ ಕೊಹ್ಲಿ. ಹೊಸ ತಲೆಮಾರಿನ ಕ್ರಿಕೆಟ್ ಫ್ಯಾನ್ಸ್ ಹಾಗೂ ಹುಡುಗಿಯರಂತೂ ಬಹಳಷ್ಟು ಇಷ್ಟಪಡುವ ಕ್ರಿಕೆಟರ್ ಕೊಹ್ಲಿ.

ಕೊಹ್ಲಿ ಆಟವೂ ಹಾಗೆಯೇ. ಅಂತಾರಾಷ್ಟ್ರೀಯ ಪಂದ್ಯ ಆಡಲು ಆರಂಭಿಸಿದ ಅಂದಿನಿಂದ ಇಂದಿನವರೆಗೆ ಅತ್ಯುತ್ತಮ ಪರ್ಫಾಮೆನ್ಸ್ ತೋರಿದವರು ವಿರಾಟ್. ಒಂದೊಮ್ಮೆ ಸಚಿನ್ ತೆಂಡೂಲ್ಕರ್ ದಾಖಲೆಗಳನ್ನು ಮುರಿಯುವ ಸಾಧ್ಯತೆ ಇದ್ದರೆ ಅದು ಭಾರತದ ಮತ್ತೊಬ್ಬ ಆಟಗಾರ ವಿರಾಟ್ ಕೊಹ್ಲಿಗೆ ಮಾತ್ರ ಎಂದು ಕೂಡ ಹೇಳಲಾಗುತ್ತದೆ. ಅದೆಲ್ಲಾ ಇರಲಿ. ಈಗ ಕೊಹ್ಲಿ ವಿಚಾರ ಯಾಕೆ ಬಂತು ಅಂತೀರಾ. ಒಂದು ವಿಶೇಷ ಸುದ್ದಿ ನಿಮಗಾಗಿ ಇಲ್ಲಿದೆ.

ವಿರಾಟ್ ಕೊಹ್ಲಿ ಇಂಗ್ಲೆಂಡ್​ಗೆ ಹಾರಲು ಸಜ್ಜಾಗಿದ್ದಾರೆ. ಭಾರತ-ಇಂಗ್ಲೆಂಡ್ ಟೆಸ್ಟ್ ಸೀರೀಸ್​ಗೆ ತಯಾರಾಗಿದ್ದಾರೆ. ಈ ನಡುವೆ ತಮ್ಮ ಇನ್​ಸ್ಟಾಗ್ರಾಂ ಖಾತೆಯ ಮೂಲಕ ಅವರು ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ. ಅಭಿಮಾನಿಗಳೊಂದಿಗೆ ವರ್ಚುವಲ್ ಆಗಿ ಸಮಯ ಕಳೆದಿದ್ದಾರೆ. ನಿಮ್ಮ ಪ್ರಶ್ನೆಗಳನ್ನು ಕೇಳಿ ಎಂದು ಕೊಹ್ಲಿ ಇನ್​ಸ್ಟಾಗ್ರಾಂ ಸ್ಟೋರಿ ಹಾಕಿಕೊಂಡಿದ್ದಾರೆ. ಅದಕ್ಕೆ ಪ್ರತಿಯಾಗಿ ಅಭಿಮಾನಿಗಳು ಹಲವು ಪ್ರಶ್ನೆ ಕೇಳಿದ್ದಾರೆ. ಕೊಹ್ಲಿ ಕೆಲವಕ್ಕೆ ಉತ್ತರವನ್ನು ಕೊಟ್ಟಿದ್ದಾರೆ.

ಈ ಪ್ರಶ್ನೋತ್ತರ ಸಂದರ್ಭದಲ್ಲಿ ಒಬ್ಬ ಅಭಿಮಾನಿ ಕೊಹ್ಲಿ ಬಳಿ, ನಿಮಗೆ ಕನ್ನಡ ಮಾತನಾಡಲು ಬರುತ್ತಾ? ಕನ್ನಡ ಅರ್ಥವಾಗುತ್ತಾ? ಎಂದು ಕೇಳಿದ್ದಾರೆ. ಅದಕ್ಕೆ ಕೊಹ್ಲಿ ಉತ್ತರಿಸಿದ್ದಾರೆ. ಸ್ವಲ್ಪ ಸ್ವಲ್ಪ ಸರ್ ಎಂದು ಹೇಳಿದ್ದಾರೆ. ಆದರೆ, ಕನ್ನಡ ಅರ್ಥಮಾಡಿಕೊಳ್ಳೋಕೆ ಮಾತ್ರ ಬಹಳ ಕಷ್ಟವಾಗುತ್ತೆ. ಅರ್ಥವೇ ಆಗುವುದಿಲ್ಲ ಎಂದು ಹೇಳಿದ್ದಾರೆ. ಈ ಪ್ರಶ್ನೋತ್ತರ ವಿಚಾರವೀಗ ಸದ್ದುಮಾಡುತ್ತಿದೆ.

ಅಷ್ಟು ಮಾತ್ರವಲ್ಲದೆ ವಿರಾಟ್ ಕೊಹ್ಲಿ ಅಭಿಮಾನಿಗಳು ಕೇಳಿದ ಹಲವಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ತಮ್ಮ ಡಯಟ್ ಪ್ಲ್ಯಾನ್, ದಿನಚರಿ, ಧೋನಿ ಬಗ್ಗೆ ಅಭಿಪ್ರಾಯ, ಫ್ರೀ ಟೈಂ ಹೇಗೆ ಕಳೆಯುತ್ತಾರೆ ಇತ್ಯಾದಿ ವಿಚಾರ ಹಂಚಿಕೊಂಡಿದ್ದಾರೆ. ಬಾಲ್ಯದ ಫೊಟೊವನ್ನೂ ಶೇರ್ ಮಾಡಿದ್ದಾರೆ.

ಇದನ್ನೂ ಓದಿ: ನಂಬಿಕೆ, ಗೌರವ; ಧೋನಿ ಬಗ್ಗೆ ಎರಡು ಪದಗಳಲ್ಲಿ ಉತ್ತರಿಸಿ ಭಾರತೀಯರ ಹೃದಯ ಗೆದ್ದ ಕಿಂಗ್ ಕೊಹ್ಲಿ

ಜಡೇಜಾ ಟ್ವಿಟರ್ ಪೋಸ್ಟ್; ಇಂಗ್ಲೆಂಡ್​ನಲ್ಲಿ 90 ರ ದಶಕವನ್ನು ನೆನಪಿಸಲಿದೆ ಕೊಹ್ಲಿ ಪಡೆ; ಫೋಟೋ ನೋಡಿ

Published On - 3:00 pm, Sun, 30 May 21