AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Virat Kohli: ಕಿಂಗ್​ ಕೊಹ್ಲಿಯ ಖಡಕ್​ ಲುಕ್​ಗೆ ದಂಗಾದ ಕ್ಯಾಮೆರಾಮ್ಯಾನ್

India vs England: 2-1 ಅಂತರದಿಂದ ಮುನ್ನಡೆ ಹೊಂದಿರುವ ಭಾರತ ತಂಡಕ್ಕೆ ಇಂಗ್ಲೆಂಡ್‌ನಲ್ಲಿ ಟೆಸ್ಟ್​ ಸರಣಿ ಗೆಲ್ಲುವ ಅವಕಾಶವಿದೆ. ಈ ಸರಣಿ ಗೆದ್ದರೆ 15 ವರ್ಷಗಳ ಬಳಿಕ ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಲಿದೆ.

Virat Kohli: ಕಿಂಗ್​ ಕೊಹ್ಲಿಯ ಖಡಕ್​ ಲುಕ್​ಗೆ ದಂಗಾದ ಕ್ಯಾಮೆರಾಮ್ಯಾನ್
Virat Kohli
TV9 Web
| Updated By: ಝಾಹಿರ್ ಯೂಸುಫ್|

Updated on: Jun 30, 2022 | 1:24 PM

Share

ಟೀಮ್ ಇಂಡಿಯಾ (Team India) ಆಟಗಾರರು ಇಂಗ್ಲೆಂಡ್ (India vs England) ಪ್ರವಾಸದಲ್ಲಿದ್ದಾರೆ. ಜುಲೈ 1 ರಿಂದ ಶುರುವಾಗಲಿರುವ ಇಂಗ್ಲೆಂಡ್ ವಿರುದ್ದದ ಟೆಸ್ಟ್ ಪಂದ್ಯಕ್ಕೆ ಭಾರತೀಯ ಆಟಗಾರರು ಭರ್ಜರಿ ಸಿದ್ದತೆಯಲ್ಲಿದ್ದಾರೆ. ಇತ್ತ ಕಳಪೆ ಫಾರ್ಮ್​ನಿಂದ ಬಳಲುತ್ತಿರುವ ವಿರಾಟ್ ಕೊಹ್ಲಿ (Virat Kohli) ಕೂಡ ಹೆಚ್ಚಿನ ಸಮಯವನ್ನು ನೆಟ್ಸ್​​ನಲ್ಲಿ ಕಳೆಯುತ್ತಿದ್ದಾರೆ. ಹೀಗೆ ಕಿಂಗ್ ಕೊಹ್ಲಿ ಅಭ್ಯಾಸ ಮುಗಿಸಿ ಮರಳುತ್ತಿರುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿರಾಟ್ ಕೊಹ್ಲಿಗೆ ತಿಳಿಯದಂತೆ ಈ ವಿಡಿಯೋವನ್ನು ಆರಂಭದಲ್ಲಿ ಚಿತ್ರೀಕರಿಸಲಾಗಿದ್ದು, ಈ ವಿಡಿಯೋ ತುಣುಕು ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ವಿರಾಟ್ ಕೊಹ್ಲಿ ತಮ್ಮ ಸಹ ಆಟಗಾರ ಶುಭ್‌ಮಾನ್ ಗಿಲ್ ಜೊತೆ ಅಭ್ಯಾಸ ಮುಗಿಸಿ ಮರಳುತ್ತಿರುವುದು ಕಾಣಬಹುದು. ಅಭ್ಯಾಸ ಅವಧಿಯ ನಂತರ ಮಾತನಾಡುತ್ತಾ ಇಬ್ಬರೂ ಆಟಗಾರರು ಡ್ರೆಸ್ಸಿಂಗ್ ರೂಮ್ ಕಡೆಗೆ ಹೋಗುತ್ತಿದ್ದರು. ಈ ವೇಳೆ ಒಬ್ಬ ಕ್ಯಾಮೆರಾಮ್ಯಾನ್ ಕೂಡ ಅವರನ್ನು ಹಿಂಬಾಲಿಸಿದ್ದಾರೆ. ಆದರೆ ಈ ವಿಚಾರ ಕೊಹ್ಲಿಗೆ ತಿಳಿದಿರಲಿಲ್ಲ.

ಆದರೆ ಇದಕ್ಕಿದ್ದಂತೆ ಯಾರೋ ಹಿಂಬಾಲಿಸುತ್ತಿರುದನ್ನು ಗಮನಿಸಿದ ವಿರಾಟ್ ಕೊಹ್ಲಿ ಖಡಕ್ ಲುಕ್ ನೀಡಿದ್ದರು. ಇದೇ ವೇಳೆ ಆತ ಎಡ್ಜ್‌ಬಾಸ್ಟನ್ ಟ್ವಿಟರ್​ ಹ್ಯಾಂಡಲ್​ ರಿಪೋರ್ಟರ್ ಎಂಬುದು ತಿಳಿಯುತ್ತಿದ್ದಂತೆ ಕೊಹ್ಲಿ ಮುಗುಳು ನಕ್ಕರು. ಇದೀಗ ಈ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಎಡ್ಜ್‌ಬಾಸ್ಟನ್ ಟ್ವಿಟರ್​ ಹ್ಯಾಂಡಲ್​  ನನ್ನ ಜೀವನ ಪರಿಪೂರ್ಣವಾಗಿದೆ ಎಂದು ಬರೆದುಕೊಂಡಿದ್ದಾರೆ.

ಭಾರತ ಜುಲೈ 1 ರಿಂದ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡಲಿದೆ. ಕಳೆದ ವರ್ಷ ಉಭಯ ತಂಡಗಳ ನಡುವೆ ನಡೆದ ಟೆಸ್ಟ್ ಸರಣಿಯ ಭಾಗವಾಗಿರುವ ಈ ಪಂದ್ಯವು ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ವರ್ಷ ಈ ಸರಣಿಯಲ್ಲಿ 4 ಟೆಸ್ಟ್ ಪಂದ್ಯಗಳನ್ನು ಆಡಲಾಗಿದ್ದು, ಇದರಲ್ಲಿ ಭಾರತ ತಂಡ 2-1 ಮುನ್ನಡೆ ಸಾಧಿಸಿದೆ.

2-1 ಅಂತರದಿಂದ ಮುನ್ನಡೆ ಹೊಂದಿರುವ ಭಾರತ ತಂಡಕ್ಕೆ ಇಂಗ್ಲೆಂಡ್‌ನಲ್ಲಿ ಟೆಸ್ಟ್​ ಸರಣಿ ಗೆಲ್ಲುವ ಅವಕಾಶವಿದೆ. ಈ ಸರಣಿ ಗೆದ್ದರೆ 15 ವರ್ಷಗಳ ಬಳಿಕ ಇಂಗ್ಲೆಂಡ್​ನಲ್ಲಿ ಟೆಸ್ಟ್​ ಸರಣಿ ಗೆದ್ದ ಐತಿಹಾಸಿಕ ಸಾಧನೆ ಮಾಡಲಿದೆ. ಇದಕ್ಕೂ ಮುನ್ನ 2007ರಲ್ಲಿ ಭಾರತ ತಂಡ ಈ ಸಾಧನೆ ಮಾಡಿತ್ತು. ಆಗ ರಾಹುಲ್ ದ್ರಾವಿಡ್ ತಂಡದ ನಾಯಕರಾಗಿದ್ದರು. ಈ ಬಾರಿ ದ್ರಾವಿಡ್ ಕೋಚ್ ಆಗಿರುವುದರಿಂದ ಇತಿಹಾಸ ಪುನರಾರ್ವತನೆಯಾಗುವ ನಿರೀಕ್ಷೆಯಿದೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ