ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ರೋಷಾವೇಷವನ್ನ ಮೈಗೂಡಿಸಿಕೊಂಡಿರೋ ಕ್ರಿಕೆಟಿಗ. ಮೈದಾನದಲ್ಲಿ ಬೆಂಕಿ ಚೆಂಡಿನಂತೆ ಸಿಡಿಯೋ ಕೊಹ್ಲಿ, ಮಾನವೀಯ ಮೌಲ್ಯಗಳ ಇನ್ನೊಂದು ಮುಖ ಇಲ್ಲಿದೆ.
ಕ್ರಿಕೆಟ್ ಅನ್ನೋ ರಣಾಂಗಣದಲ್ಲಿ ವಿರಾಟ್ ಕೊಹ್ಲಿ ಅಗ್ರೆಸ್ಸಿವ್ ಕ್ರಿಕೆಟಿಗ.. ಅಲ್ಲೇ ಡ್ರಾ. ಅಲ್ಲೇ ಬಹುಮಾನ ಅನ್ನೋ ವ್ಯಕ್ತಿತ್ವದ ಕ್ರಿಕೆಟಿಗ. ಕೆಣಕಿದವರನ್ನ ಮಣ್ಣು ಮುಕ್ಕಿಸಿದ ಮೇಲೆಯೇ ಕ್ಯಾಪ್ಟನ್ ಕೊಹ್ಲಿಗೆ ನಿದ್ದೆ ಹತ್ತೋದು.
ವಿರಾಟ್ ಎಷ್ಟೇ ಅಗ್ರೆಸ್ಸಿವ್ ಕ್ರಿಕೆಟಿಗನಾಗಿರಬಹುದು. ರನ್ ಮಳೆ ಹರಿಸಿ ದಾಖಲೆ ವೀರನಾಗಿರಬಹುದು. ಆದ್ರೆ ಕೊಹ್ಲಿಯಲ್ಲಿರೋ ಮಾನವೀಯ ಗುಣಗಳು ಅಷ್ಟೇ ಅದ್ಭುತವಾದದ್ದು. ಸ್ಟಾರ್ ಗಿರಿಯ ಅಮಲು ಕೊಹ್ಲಿಯ ಮಾನವೀಯ ಮೌಲ್ಯಗಳನ್ನ ಕಡಿಮೆ ಮಾಡಿಲ್ಲ.
2016ರ ಐಪಿಎಲ್ ಸಮಯದಲ್ಲಿ ವಿರಾಟ್ ಪುಣೆಯ ಓಲ್ಡೇಜ್ ಹೋಮ್ಗೆ ಭೇಟಿ ಕೊಟ್ಟಿದ್ರು. ಹೊತ್ತು ಹೆತ್ತ ಮಕ್ಕಳೇ ಹೆತ್ತವರನ್ನ ವೃದ್ಧಾಶ್ರಮಗಳಿಗೆ ಕಳಿಸಿದ್ದನ್ನ ನೋಡಿ, ಕೊಹ್ಲಿ ಮನಸ್ಸು ಮರುಗಿತ್ತು. ಆವತ್ತು ವಿರಾಟ್ ತಮ್ಮ ಹೆಸರಿನ ಫೌಂಡೇಷನ್ನಿಂದ ವೃದ್ಧಾಶ್ರಮಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನ ಒದಗಿಸೋದಾಗಿ ಹೇಳಿದಂತೆ ನಡೆದುಕೊಂಡ್ರು.
10 ಸಾವಿರ ಬಡ ಮಕ್ಕಳಿಗೆ ಪೌಷ್ಟಿ ಆಹಾರ ನೀಡೋದಕ್ಕೆ ಮುಂದಾಗಿದ್ದಾರೆ..
ಆದ್ರೀಗ ವಿರಾಟ್ ಇನ್ನೊಂದು ಹೆಜ್ಜೆಯನ್ನಿಟ್ಟಿದ್ದಾರೆ. ಅಪೌಷ್ಟಿಕತೆಯಿಂದ ಬಳಲೋ ದೇಶದ 10 ಸಾವಿರ ಬಡ ಮಕ್ಕಳಿಗೆ ಪೌಷ್ಟಿ ಆಹಾರ ನೀಡೋದಕ್ಕೆ ಮುಂದಾಗಿದ್ದಾರೆ. ಸದ್ಯ ವಿರಾಟ್ ವೈದ್ಯಕೀಯ ಸಂಸ್ಥೆಯೊಂದರ ಉತ್ಪನ್ನಗಳ ರಾಯಭಾರಿಯಾಗಿ ನೇಮಕೊಂಡಿದ್ದಾರೆ. ಈ ಸಂಸ್ಥೆಯಿಂದ ಬರೋ ಸಂಪೂರ್ಣ ಲಾಭವನ್ನ ಬಡ ಮಕ್ಕಳ ನೆರವಿಗೆ ನೀಡಲು ನಿರ್ಧರಿಸಿದ್ದಾರೆ.
ಹೀಗೆ ಮಾಡ್ರನ್ ಕ್ರಿಕೆಟ್ನಲ್ಲಿ ಕಿಂಗ್ ಆಗಿ ಮರೆಯುತ್ತಿರೋ ವಿರಾಟ್, ತಮ್ಮ ಸಾಮಾಜಿಕ ಕಳಕಳಿಯನ್ನ ಹಾಗೇ ಉಳಿಸಿಕೊಂಡು ಬಂದಿದ್ದಾರೆ. ಸ್ಟಾರ್ ಗಿರಿ ಇದ್ರೇನು.. ಕೈಲಾದ ಸಹಾಯ ಮಾಡೋದೇ ನಿಜವಾದ ಸ್ಟಾರ್ ಗಿರಿ ಅನ್ನೋ ಮಾತಿನಂತೆ, ಕೊಹ್ಲಿ ಮಾನವೀಯ ಮೌಲ್ಯಗಳನ್ನ ಮೈಗೂಡಿಸಿಕೊಂಡು ಬಂದಿದ್ದಾರೆ.
Published On - 7:30 am, Thu, 19 November 20