ಫೆಬ್ರವರಿ 7, ಮಂಗಳವಾರ ಬೆಳಗ್ಗೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ(Virat Kohli) ತಮ್ಮ ಮೊಬೈಲ್ ಕಳೆದಿರುವುದಾಗಿ ಟ್ವೀಟ್ ಮಾಡಿದ್ದರು. ಇನ್ನೂ ಅನ್ ಬಾಕ್ಸ್ ಮಾಡದ ಮೊಬೈಲ್ ಕಾಣೆಯಾಗಿದೆ. ನಿಮಗೂ ಇಂತಹ ಅನುಭವ ಆಗಿದೆಯಾ? ಎಂದು ಫ್ಯಾನ್ಸ್ ಬಳಿ ಬಹಳ ಬೇಸರದಿಂದ ಕೇಳಿದ್ದರು. ಇದೀಗ ಈ ಟ್ವೀಟ್ ಗೆ ಜೊಮ್ಯಾಟೊ, ಫುಡ್ ಡೆಲಿವರಿ ಆಪ್ ಪ್ರತಿಕ್ರಿಯಿಸಿದೆ. ಈ ಪ್ರತಿಕ್ರಿಯೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ವೈರಲ್ ಆಗಿದೆ.
ಕೊಹ್ಲಿ ಬೇಸರದಿಂದ ಮಾಡಿದೆ ಟ್ವೀಟ್ ಗೆ ಜೊಮ್ಯಾಟೊ (Zomato) ಒಂದು ಪರಿಹಾರವನ್ನು ನೀಡಿದೆ. ಮೊಬೈಲ್ ಕಳೆದುಕೊಂಡು ಬೇಸರದಲ್ಲಿರುವ ನೀವು ಅನುಷ್ಕಾ ಅತ್ತಿಗೆಯ ಮೊಬೈಲ್’ನಲ್ಲಿರುವ ಜೊಮ್ಯಾಟೊದಿಂದ ಐಸ್ ಕ್ರೀಮ್ ಆರ್ಡರ್ ಮಾಡಿ. ಇದು ನಿಮ್ಮನ್ನು ಸ್ವಲ್ಪ ಮಟ್ಟಿಗೆ ಸಮಾಧಾನ ಮಾಡಬಹುದು ಎಂದು ಒಂದು ವಿಶೇಷವಾದ ಐಡಿಯಾ ನೀಡಿದ್ದಾರೆ.
ಇದನ್ನೂ ಓದಿ: ಹೊಸ ಮೊಬೈಲ್ ಕಳೆದುಕೊಂಡ ವಿರಾಟ್ ಕೊಹ್ಲಿ: ನಿಮಗೆ ಸಿಕ್ಕಿದ್ಯಾ?
ಈ ಟ್ವೀಟ್’ಗೆ ಈಗಾಗಲೇ ಬಹಳಷ್ಟು ಪ್ರತಿಕ್ರಿಯೆಗಳು ಬಂದಿದೆ. ಒಬ್ಬರು ಅತ್ತಿಗೆ ಮೊಬೈಲ್ ಅಲ್ಲಿ ಜೊಮ್ಯಾಟೊ ಬದಲು ಸ್ವಿಗ್ಗಿ (Swiggy) ಇದ್ದರೆ ಏನು ಮಾಡೋದು? ಎಂದು ಕೇಳಿದರೆ ಮತ್ತೊಬ್ಬರು ಇಂತಹ ಸಂದರ್ಭದಲ್ಲೂ ನೀವು ಲಾಭ ಮಾಡುವ ದಾರಿಯನ್ನು ನೋಡುತ್ತಿದ್ದೀರಿ ಎಂದು ಕಾಮೆಂಟ್ ಮಾಡಿದ್ದಾರೆ.
ಇನ್ನೂ ಹೆಚ್ಚು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:35 pm, Tue, 7 February 23