AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಯತೆ ಮಾತ್ರ ಮರೆಯಬೇಡ… ಪುತ್ರನಿಗೆ ಸೆಹ್ವಾಗ್ ಕೊಟ್ಟ ಸಂದೇಶ ವೈರಲ್!

ಯಶಸ್ಸು ತಲೆಗೇರಬಾರದು, ಸಾಧನೆ ಆಕಾಶದಷ್ಟಿದ್ದರೂ ಪಾದಗಳು ನೆಲದ ಮೇಲೆಯೇ ಇರಬೇಕು. ಪಾಕಿಸ್ತಾನದ ವಿರುದ್ಧದ ರೋಚಕ ಫೈನಲ್ ಪಂದ್ಯದಲ್ಲಿ ಭಾರತಕ್ಕೆ ಕಪ್ ಗೆದ್ದುಕೊಟ್ಟ ಪುತ್ರ ಆರ್ಯವೀರ್ ಸೆಹ್ವಾಗ್‌ಗೆ ತಂದೆ ವೀರೇಂದ್ರ ಸೆಹ್ವಾಗ್ ನೀಡಿದ ಈ ಹೃದಯಸ್ಪರ್ಶಿ ಕಿವಿಮಾತು ಈಗ ಇಡೀ ಕ್ರೀಡಾ ಜಗತ್ತಿನ ಮನಗೆದ್ದಿದೆ.

ವಿನಯತೆ ಮಾತ್ರ ಮರೆಯಬೇಡ... ಪುತ್ರನಿಗೆ ಸೆಹ್ವಾಗ್ ಕೊಟ್ಟ ಸಂದೇಶ ವೈರಲ್!
Virender Sehwag -Aaryavir Image Credit source: x.com
ಝಾಹಿರ್ ಯೂಸುಫ್
|

Updated on: Nov 16, 2026 | 11:57 AM

Share

ಕ್ರಿಕೆಟ್ ಮೈದಾನದಲ್ಲಿ ಎಷ್ಟೇ ದೊಡ್ಡ ದಾಖಲೆಗಳನ್ನು ಬರೆದರೂ, ಎಷ್ಟೇ ಟ್ರೋಫಿಗಳನ್ನು ಗೆದ್ದರೂ ಒಬ್ಬ ತಂದೆಗೆ ತನ್ನ ಮಗನ ಯಶಸ್ಸನ್ನು ಕಣ್ಣಾರೆ ಕಾಣುವುದಕ್ಕಿಂತ ದೊಡ್ಡ ಸಂಭ್ರಮ ಮತ್ತೊಂದಿಲ್ಲ. ಭಾರತದ ಮಾಜಿ ಸ್ಫೋಟಕ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ಮತ್ತು ಅವರ ಪುತ್ರ ಆರ್ಯವೀರ್ ಸೆಹ್ವಾಗ್ ನಡುವಿನ ಅಪ್ಪ-ಮಗನ ಬಾಂಧವ್ಯ ಈಗ ಇಡೀ ಕ್ರೀಡಾ ಜಗತ್ತಿನ ಮನಗೆದ್ದಿದೆ.

2026ರ ಅಂಡರ್-19 ಏಷ್ಯಾ ಕಪ್ ಫೈನಲ್‌ನಲ್ಲಿ ಪಾಕಿಸ್ತಾನವನ್ನು ಮಣಿಸಿ ಭಾರತ ಚಾಂಪಿಯನ್ ಆದ ಬೆನ್ನಲ್ಲೇ, ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದ ಮಗನಿಗೆ ಸೆಹ್ವಾಗ್ ನೀಡಿರುವ ಸಂದೇಶ ಈಗ ಎಲ್ಲೆಡೆ ವೈರಲ್ ಆಗುತ್ತಿದೆ.

ಸೆಹ್ವಾಗ್ ಮನದಾಳದ ಮಾತುಗಳೇನು?

ತಮ್ಮ ಪುತ್ರ ಆರ್ಯವೀರ್ ಜೊತೆಗಿನ ವಿಡಿಯೋ ಕರೆಯ ಸಂಭಾಷಣೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವೀರೇಂದ್ರ ಸೆಹ್ವಾಗ್, ಮಗನ ಸಾಧನೆಗೆ ಹೆಮ್ಮೆಪಡುತ್ತಲೇ ಜೀವನದ ಬಹುದೊಡ್ಡ ಪಾಠವನ್ನು ಹೇಳಿದ್ದಾರೆ. ಅವರ ಆ ಹೃದಯಸ್ಪರ್ಶಿ ಸಾಲುಗಳು ಹೀಗಿವೆ:

“ಕೆಲವು ಕ್ಷಣಗಳು ಪ್ರಶಸ್ತಿಗಳು, ರನ್‌ಗಳು ಮತ್ತು ಟ್ರೋಫಿಗಳಿಗಿಂತಲೂ ದೊಡ್ಡದಾಗಿರುತ್ತವೆ. ಇವು ಒಬ್ಬ ತಂದೆ ತನ್ನ ಜೀವನಪರ್ಯಂತ ನೆನಪಿಟ್ಟುಕೊಳ್ಳುವ ಸುಂದರ ನೆನಪುಗಳು. ನಿನ್ನ ಪಾದಗಳು ಯಾವಾಗಲೂ ನೆಲದ ಮೇಲೆಯೇ ಭದ್ರವಾಗಿರಲಿ ಮತ್ತು ನಿನ್ನ ಕಠಿಣ ಪರಿಶ್ರಮ ಹಾಗೂ ಪ್ರತಿಭೆಯಿಂದ ನೀನು ಆಕಾಶವನ್ನು ಮುಟ್ಟುವಂತಾಗಲಿ.” ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, “ಎಷ್ಟೇ ಎತ್ತರಕ್ಕೆ ಬೆಳೆದರೂ ವಿನಯದಿಂದ ಇರಬೇಕು ಮತ್ತು ಕಠಿಣ ಪರಿಶ್ರಮ ಮುಂದುವರಿಸಬೇಕು”  ಎಂದು ವೀರೇಂದ್ರ ಸೆಹ್ವಾಗ್ ಆರ್ಯವೀರ್​ಗೆ ಕಿವಿಮಾತು ಹೇಳಿದ್ದಾರೆ.

ಆ ಒಂದು ವಿಡಿಯೋ ಕರೆಯಲ್ಲೇನಿತ್ತು?

ಪಾಕಿಸ್ತಾನ ನೀಡಿದ್ದ 338 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ಭಾರತ ಕೊನೆಯ ಎಸೆತದಲ್ಲಿ ರೋಚಕ ಜಯ ಸಾಧಿಸಿತು. ಈ ಗೆಲುವಿನ ಸಂಭ್ರಮದಲ್ಲಿದ್ದ ಆರ್ಯವೀರ್, ತಕ್ಷಣವೇ ತಂದೆಗೆ ವಿಡಿಯೋ ಕಾಲ್ ಮಾಡಿ ತಮ್ಮ ಮನದಾಳ ಹಂಚಿಕೊಂಡರು.

 ‘ಸೀತಾ ರಾಮ್’ ಜಪ: ಕೊನೆಯ ಓವರ್‌ಗಳಲ್ಲಿ ಪಂದ್ಯ ರೋಚಕ ಘಟ್ಟ ತಲುಪಿದಾಗ ತಮಗಾದ ಒತ್ತಡವನ್ನು ಆರ್ಯವೀರ್ ತಂದೆಯ ಮುಂದೆ ಬಿಚ್ಚಿಟ್ಟರು. “ಪಪ್ಪಾ, ಕೊನೆಯಲ್ಲಿ ನನಗೆ ತುಂಬಾನೇ ನರ್ವಸ್ ಆಗಿತ್ತು. ಗೆಲ್ಲುವವರೆಗೂ ನಾನು ಮನಸ್ಸಿನಲ್ಲೇ ‘ಸೀತಾ ರಾಮ್, ಸೀತಾ ರಾಮ್’ ಎಂದು ಜಪಿಸುತ್ತಿದ್ದೆ” ಎಂದು ಆರ್ಯವೀರ್ ಹೇಳಿದ್ದಾರೆ.

ಪಾಕ್ ಅಭಿಮಾನಿಗಳಿಂದಲೂ ಬೆಂಬಲ: ಬಲ ಮೊಣಕೈಗೆ ಪೆಟ್ಟು ಬಿದ್ದಿದ್ದರೂ ನೋವಿನ ನಡುವೆಯೇ 58 ರನ್ ಗಳಿಸಿ ಭಾರತಕ್ಕೆ ಭದ್ರ ಬುನಾದಿ ಹಾಕಿದ ಆರ್ಯವೀರ್ ಬ್ಯಾಟಿಂಗ್ ನೋಡಿ, ಮೈದಾನದಲ್ಲಿದ್ದ ಸುಮಾರು 2,000 ಪಾಕಿಸ್ತಾನಿ ಅಭಿಮಾನಿಗಳು ಕೂಡ “ಸೆಹ್ವಾಗ್! ಸೆಹ್ವಾಗ್!” ಎಂದು ಕೂಗಿ ಹುರಿದುಂಬಿಸಿದ ವಿಶೇಷ ಕ್ಷಣವನ್ನೂ ಅವರು ತಂದೆಗೆ ತಿಳಿಸಿದರು.

ಇದನ್ನೂ ಓದಿ: ಒನ್ ಪ್ಲಸ್ ತ್ರಿ… ಏಕದಿನ ವಿಶ್ವಕಪ್​ನ ಅರ್ಹತಾ ಸುತ್ತಿನ ಹೊಸ ಸ್ವರೂಪ ಪ್ರಕಟ

ಸರಳತೆ ಮತ್ತು ಸಾಧನೆಯ ಸಂಗಮ:

ಇಡೀ ಟೂರ್ನಿಯಲ್ಲಿ 361 ರನ್ ಗಳಿಸಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರೂ, ಆರ್ಯವೀರ್ ತೋರಿದ ವಿನಯವಂತಿಕೆ ಮತ್ತು ದೇವರ ಮೇಲಿನ ನಂಬಿಕೆ ತಂದೆ ವೀರೇಂದ್ರ ಸೆಹ್ವಾಗ್ ಅವರ ಮನಸ್ಸನ್ನು ತುಂಬಿದೆ. “ಎಷ್ಟೇ ಎತ್ತರಕ್ಕೆ ಬೆಳೆದರೂ ನಿನ್ನ ಪಾದಗಳು ನೆಲದ ಮೇಲೆಯೇ ಇರಲಿ” ಎಂಬ ಸೆಹ್ವಾಗ್ ಅವರ ಕಿವಿಮಾತು, ಇಂದಿನ ಯುವ ಪೀಳಿಗೆಯ ಎಲ್ಲಾ ಕ್ರೀಡಾಪಟುಗಳಿಗೂ ಒಂದು ಉತ್ತಮ ಸಂದೇಶವಾಗಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More