Viral Video: ಕ್ಯಾಚ್ ಹಿಡಿಯಲು ಹೋಗಿ ಮಾನ ಉಳಿಸಿಕೊಂಡ ಫೀಲ್ಡರ್..!

| Updated By: ಝಾಹಿರ್ ಯೂಸುಫ್

Updated on: May 29, 2022 | 2:25 PM

T20 Blast 2022: ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡರ್ಬಿಶೈರ್ ತಂಡವು ಶಾನ್ ಮಸೂದ್ ಅವರ ಅರ್ಧಶತಕದ ನೆರವಿನಿಂದ 20 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿತು.

Viral Video: ಕ್ಯಾಚ್ ಹಿಡಿಯಲು ಹೋಗಿ ಮಾನ ಉಳಿಸಿಕೊಂಡ ಫೀಲ್ಡರ್..!
dane vials viral video
Follow us on

ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳುವ ಫನ್ನಿ ಸನ್ನಿವೇಶಗಳು ಬಹುಬೇಗನೆ ವೈರಲ್ ಆಗುತ್ತೆ. ಇದಕ್ಕೆ ಒಂದು ಕಾರಣ ಆ ಕ್ಷಣಗಳನ್ನು ಸ್ಟೇಡಿಯಂನಲ್ಲಿರುವ ಇಡೀ ಪ್ರೇಕ್ಷಕರು ವೀಕ್ಷಿಸಿರುತ್ತಾರೆ. ಇದರ ಜೊತೆ ಕಾಮೆಂಟ್ರಿ ಪ್ಯಾನೆಲ್​ನಿಂದ ಕೇಳಿ ಬರುವ ಕಾಮೆಂಟ್ ಈ ವಿಡಿಯೋಗಳನ್ನು ಮತ್ತಷ್ಟು ಜನರಿಗೆ ತಲುವಂತೆ ಮಾಡುತ್ತೆ. ಅಂತಹದೊಂದು ಸನ್ನಿವೇಶಕ್ಕೆ ಸಾಕ್ಷಿಯಾಗಿ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​​ನ ಟಿ20 ಲೀಗ್ ವಿಟಾಲಿಟಿ ಬ್ಲಾಸ್ಟ್​.

ವಿಟಾಲಿಟಿ ಬಾಸ್ಟ್ ಕೌಂಟಿ ತಂಡಗಳು ಭಾಗವಹಿಸುವ ಇಂಗ್ಲೆಂಡ್​ನ T20 ಲೀಗ್ ಆಗಿದೆ. ಈ ಲೀಗ್​ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಲಂಕಾಶೈರ್​-ಯಾರ್ಕ್​ಶೈರ್​ ಮುಖಾಮುಖಿಯಾಗಿತ್ತು. ಆದರೆ ಈ ಪಂದ್ಯವು ವೈರಲ್ ಆಗಲು ಕಾರಣ ಡ್ಯಾನ್ ವಿಲಾಸ್ ಎನ್ನುವ ಆಟಗಾರ. ಪಂದ್ಯದ ಕೊನೆಯ ಓವರ್​ನಲ್ಲಿ ಡರ್ಬಿಶೈರ್ ಗೆಲುವಿಗೆ 2 ಎಸೆತಗಳಲ್ಲಿ 6 ರನ್ ಬೇಕಿತ್ತು. ಪಾಕಿಸ್ತಾನದ ಆಟಗಾರ ಶಹದಾಬ್ ಕ್ರೀಸ್​ನಲ್ಲಿದ್ದರು. ಶಹದಾಬ್ ಹೊಡೆದ ಚೆಂಡನ್ನು ಹಿಡಿಯಲು ಡ್ಯಾನ್ ವಿಯಾಲ್ಸ್ ಡೈವಿಂಗ್ ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲಿಲ್ಲ. ಇದಾಗ್ಯೂ ರನೌಟ್ ಮಾಡುವ ಅವಕಾಶ ಕೂಡ ಇತ್ತು. ಆದರೆ ಇತ್ತ ಪ್ಯಾಂಟ್ ಕಳಚಿ ಬಿದ್ದ ಕಾರಣ, ಅದು ಕೂಡ ಕೈತಪ್ಪಿತು. ಡ್ಯಾನ್ ವಿಯಾಲ್ಸ್ ಅವರ ಈ ಒದ್ದಾಟವನ್ನು ನೋಡಿ ಇತರೆ ಆಟಗಾರರಗೂ ಕೂಡ ನಗಲಾರಂಭಿಸಿದರು. ಇದೀಗ ಈ ಫನ್ನಿ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ
Rajat Patidar: ಸೆಂಚುರಿ ಸಿಡಿಸಿ ಭರ್ಜರಿ ದಾಖಲೆ ಬರೆದ ರಜತ್ ಪಾಟಿದಾರ್
IPL 2022: ಕೊನೆಯ ಓವರ್​ನಲ್ಲಿ ಚೇಸ್ ಮಾಡಿಯೇ ದಾಖಲೆ ಬರೆದ ಗುಜರಾತ್ ಟೈಟಾನ್ಸ್
IPL 2022: RCB ತಂಡಕ್ಕೆ ಸಿಡಿಲಮರಿ ABD ರಿ-ಎಂಟ್ರಿ​..!
IPL 2022: ವಿಶ್ವ ದಾಖಲೆ ನಿರ್ಮಿಸಿದ RCB ಅಭಿಮಾನಿಗಳು

ಮೊದಲು ಬ್ಯಾಟ್ ಮಾಡಿದ ಲಂಕಾಶೈರ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 183 ರನ್ ಗಳಿಸಿತು. ಈ ಬೃಹತ್ ಮೊತ್ತವನ್ನು ಬೆನ್ನತ್ತಿದ ಯಾರ್ಕ್‌ಷೈರ್ ತಂಡವನ್ನು 20 ಓವರ್‌ಗಳಲ್ಲಿ 183 ರನ್ ಗಳಿಗೆ ನಿಯಂತ್ರಿಸಿತು. ಇನ್ನಿಂಗ್ಸ್‌ನ ಕೊನೆಯ ಎಸೆತದಲ್ಲಿ ಹ್ಯಾರಿ ಬ್ರೂಕ್ ಎಲ್‌ಬಿಡಬ್ಲ್ಯೂ ಆಗಿ ಔಟಾಗುವುದರೊಂದಿಗೆ ಈ ಪಂದ್ಯ ಟೈನಲ್ಲಿ ಕೊನೆಗೊಂಡಿತು.

 

ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.