17 ಎಸೆತಗಳಲ್ಲಿ 90 ರನ್! ಈ ಆಂಗ್ಲ ಕ್ರಿಕೆಟಿಗನ ಸಿಕ್ಸರ್​ ಸುನಾಮಿಗೆ ಎದುರಾಳಿ ತಂಡ ಕೊಚ್ಚಿ ಹೋಗಿತ್ತು

20 ನೇ ಓವರ್‌ನಲ್ಲಿ ಔಟಾಗುವ ಮೊದಲು ಕ್ಲಾರ್ಕ್ 136 ರನ್ ಗಳಿಸಿದರು. ಅದರಲ್ಲಿ 90 ರನ್ಗಳು ಕೇವಲ 17 ಎಸೆತಗಳಲ್ಲಿ ಅಂದರೆ, ಸಿಕ್ಸರ್ ಮತ್ತು ಬೌಂಡರಿಗಳ ಸಹಾಯದಿಂದ ಬಂದವು.

17 ಎಸೆತಗಳಲ್ಲಿ 90 ರನ್! ಈ ಆಂಗ್ಲ ಕ್ರಿಕೆಟಿಗನ ಸಿಕ್ಸರ್​ ಸುನಾಮಿಗೆ ಎದುರಾಳಿ ತಂಡ ಕೊಚ್ಚಿ ಹೋಗಿತ್ತು
ಜೋ ಕ್ಲಾರ್ಕ್

Updated on: Jun 14, 2021 | 5:43 PM

ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್‌ಗಳ ಕಳಪೆ ಪ್ರದರ್ಶನವು ತಂಡದ ಅಭಿಮಾನಿಗಳಿಗೆ, ಇಂಗ್ಲೆಂಡ್ ಕ್ರಿಕೆಟ್ ಮಂಡಳಿಗೆ ಮತ್ತು ಮಾಜಿ ಅನುಭವಿಗಳಿಗೆ ಬೇಸರ ತಂದಿರಬಹುದು. ಆದರೆ ಇಂಗ್ಲಿಷ್ ಕ್ರಿಕೆಟ್ ನಿರಂತರವಾಗಿ ಟಿ20 ಕ್ರಿಕೆಟ್​ಗೆ ನಿರಂತರವಾಗಿ ಸ್ಪೋಟಕ ಆಟಗಾರರನ್ನು ಪಡೆದುಕೊಳ್ಳುತ್ತಿದೆ. ಈ ದಿನಗಳಲ್ಲಿ ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಟಿ 20 ಬ್ಲಾಸ್ಟ್ ಪಂದ್ಯಾವಳಿಯಲ್ಲಿ ಅಂತಹ ಒಬ್ಬ ಯುವ ಬ್ಯಾಟ್ಸ್‌ಮನ್ ಹುಟ್ಟುಕೊಂಡಿದ್ದಾನೆ. ಹೆಸರು- ಜೋ ಕ್ಲಾರ್ಕ್. ಈ ನಾಟಿಂಗ್ಹ್ಯಾಮ್ಶೈರ್ ಬ್ಯಾಟ್ಸ್‌ಮನ್‌ ಆರ್ಭಟವನ್ನು ನಿಲ್ಲಿಸುವುದು ಎದುರಾಳಿ ತಂಡದ ಬೌಲರ್​ಗಳಿಗೆ ದೊಡ್ಡ ಸವಾಲಾಗಿತ್ತು. 25 ವರ್ಷದ ಬ್ಯಾಟ್ಸ್‌ಮನ್ ಮೈದಾನದಲ್ಲಿ ತನ್ನ ಬ್ಯಾಟ್‌ನಿಂದ ಜ್ವಾಲಾಮುಖಿಯಂತಹ ವಿನಾಶವನ್ನು ಸೃಷ್ಟಿಸಿದ. ನಾರ್ಥಾಂಪ್ಟನ್ಶೈರ್ ವಿರುದ್ಧದ ಟಿ 20 ಬ್ಲಾಸ್ಟ್ ಪಂದ್ಯದಲ್ಲಿ ಕ್ಲಾರ್ಕ್ ಕೇವಲ 65 ಎಸೆತಗಳಲ್ಲಿ 136 ರನ್ ಗಳಿಸಿ ಅಬ್ಬರಿಸಿದ್ದ.

ನಾರ್ಥಾಂಪ್ಟನ್‌ನ ಕೌಂಟಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನಾಟಿಂಗ್ಹ್ಯಾಮ್ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 217 ರನ್ ಗಳಿಸಿತು. ಈ ಅರ್ಧದಷ್ಟು ರನ್ಗಳು ಕ್ಲಾರ್ಕ್ ಅವರ ಬ್ಯಾಟ್ನಿಂದ ಬಂದವು. ಕ್ಲಾರ್ಕ್ ಆರಂಭಿಕನಾಗಿ ಕಣಕ್ಕಿಳಿದು ಅಬ್ಬರಿಸುವುದನ್ನು ಯಾವ ಬೌಲರ್​ಗೂ ತಡೆಯಲಾಗಲಿಲ್ಲ. ಕ್ಲಾರ್ಕ್ ಕೇವಲ 49 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು, ಇದು ಟಿ 20 ವೃತ್ತಿಜೀವನದಲ್ಲಿ ಅವರ ಮೂರನೇ ಶತಕವಾಗಿದೆ.

17 ಎಸೆತಗಳಲ್ಲಿ 90 ರನ್
ಕ್ಲಾರ್ಕ್ ಅವರ ಈ ಇನ್ನಿಂಗ್ಸ್ನ ಪ್ರಮುಖ ವಿಷಯವೆಂದರೆ ಅವರು ಮೊದಲ ಓವರ್ನಿಂದ ಪ್ರಾರಂಭಿಸಿ ಕೊನೆಯ ಓವರ್ ವರೆಗೆ ತಮ್ಮ ಅಬ್ಬರವನ್ನು ಮುಂದುವರಿಸಿದರು. ಈ ಸಮಯದಲ್ಲಿ, ಕ್ಲಾರ್ಕ್ ಮೈದಾನದ ಸುತ್ತ ಸಿಕ್ಸರ್‌ಗಳ ಪಟಾಕಿ ಸಿಡಿಸಿದರು. 20 ನೇ ಓವರ್‌ನಲ್ಲಿ ಔಟಾಗುವ ಮೊದಲು ಕ್ಲಾರ್ಕ್ 136 ರನ್ ಗಳಿಸಿದರು. ಅದರಲ್ಲಿ 90 ರನ್ಗಳು ಕೇವಲ 17 ಎಸೆತಗಳಲ್ಲಿ ಅಂದರೆ, ಸಿಕ್ಸರ್ ಮತ್ತು ಬೌಂಡರಿಗಳ ಸಹಾಯದಿಂದ ಬಂದವು. ಈ ಸಮಯದಲ್ಲಿ, ಕ್ಲಾರ್ಕ್ 11 ಪ್ರಚಂಡ ಸಿಕ್ಸರ್‌ಗಳು ಮತ್ತು 6 ಬೌಂಡರಿಗಳನ್ನು ಸಹ ಗಳಿಸಿದರು.

ಇಂತಹ ಆರ್ಭಟ ಈಗಾಗಲೇ ಮಾಡಲಾಗಿದೆ
ಈ ಮೊದಲು ನಡೆದ ಟಿ 20 ಬ್ಲಾಸ್ಟ್‌ನ ಮೊದಲ ಪಂದ್ಯದಲ್ಲೂ ಕ್ಲಾರ್ಕ್ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದರು. ವೋರ್ಸೆಸ್ಟರ್‌ಶೈರ್ ವಿರುದ್ಧ ಆಡಿದ ಕ್ಲಾರ್ಕ್ ಕೇವಲ 21 ಎಸೆತಗಳಲ್ಲಿ 45 ರನ್ ಗಳಿಸಿದರು, ಇದರಲ್ಲಿ 4 ಸಿಕ್ಸರ್ ಮತ್ತು 2 ಬೌಂಡರಿಗಳು ಸೇರಿವೆ. ಕ್ಲಾರ್ಕ್ ಅವರ ಟಿ 20 ದಾಖಲೆ ಅದ್ಭುತವಾಗಿದೆ. ಕ್ಲಾರ್ಕ್ ಇದುವರೆಗೆ ಆಡಿದ 76 ಟಿ 20 ಪಂದ್ಯಗಳಲ್ಲಿ 3 ಶತಕ ಮತ್ತು 10 ಅರ್ಧಶತಕಗಳೊಂದಿಗೆ 2007 ರನ್ ಗಳಿಸಿದ್ದಾರೆ. ಈ ಸಮಯದಲ್ಲಿ, ಕ್ಲಾರ್ಕ್ ಅವರ ಸ್ಟ್ರೈಕ್ ದರವು ಸುಮಾರು 154 ರಷ್ಟಿದೆ.