ಮುಂಬೈ: ಇಲ್ಲಿನ ವಾಂಖೆಡೆ ಮೈದಾನದಲ್ಲಿ ನಡೆಯುತ್ತಿರುವ ರಾಜಸ್ಥಾನ್ ರಾಯಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ರಾಹುಲ್ ತೆವಾಟಿಯಾ ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಪಂಜಾಬ್ ಪರ ಭರ್ಜರಿ ಪ್ರದರ್ಶನ ತೋರುತ್ತಿದ್ದ ನಾಯಕ ಕೆ.ಎಲ್. ರಾಹುಲ್ ವಿಕೆಟ್ ಕಿತ್ತ ಈ ಕ್ಯಾಚ್ಅನ್ನು ಈ ಸೀಸನ್ನ, ಇಲ್ಲಿಯವರೆಗಿನ ಸೂಪರ್ ಕ್ಯಾಚ್ ಎಂದು ಹೇಳಲಾಗುತ್ತಿದೆ.
ಪಂಜಾಬ್ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ರಾಹುಲ್, 50 ಬಾಲ್ಗೆ 91 ರನ್ ಗಳಿಸಿ ಶತಕದ ಅಂಚಿನಲ್ಲಿದ್ದರು. 5 ಸಿಕ್ಸರ್, 7 ಬೌಂಡರಿ ಬಾರಿಸಿ ರಾಯಲ್ಸ್ ಬೌಲರ್ಸ್ಗೆ ತಲೆನೋವಾಗಿದ್ದರು. ಯಾವ ಬೌಲರ್ ಎಂದು ನೋಡದೆ, ಎಲ್ಲಾ ಎಸೆತಗಳಿಗೂ ಸಿಕ್ಸರ್, ಬೌಂಡರಿ ಸುರಿಮಳೆಗೈಯುತ್ತಿದ್ದರು. ಇನ್ನೇನು ಶತಕ ತಲುಪುತ್ತಾರೆ ರಾಹುಲ್ ಎಂದೇ ಎಲ್ಲರೂ ಊಹಿಸಿದ್ದರು. ಆದರೆ, ಅಂತಿಮ ಓವರ್ನಲ್ಲಿ ರಾಹುಲ್ ಸಿಕ್ಸರ್ಗೆ ಎತ್ತಿದ ಚೆಂಡು ಅಚ್ಚರಿಯ ರೂಪದಲ್ಲಿ ರಾಹುಲ್ ತೆವಾಟಿಯಾ ಕೈ ಸೇರಿತು.
ಚೇತನ್ ಸಕಾರಿಯಾ ಎರಡನೇ ಎಸೆತವನ್ನು ಸಿಕ್ಸರ್ಗೆ ಎತ್ತಿದ ರಾಹುಲ್ ಸ್ವಲ್ಪದರಲ್ಲೇ ಸಿಕ್ಸ್ ತಪ್ಪಿಸಿಕೊಂಡರು. ಬೌಂಡರಿ ಬಳಿ ಇದ್ದ ರಾಹುಲ್ ತೆವಾಟಿಯಾ ಸಿಕ್ಸ್ ತಡೆದು, ಚೆಂಡನ್ನು ಮೈದಾನದ ಒಳಗೆ ತಳ್ಳಿ, ಬಳಿಕ ಮತ್ತೆ ತಾವೂ ಒಳ ಬಂದು ಕ್ಯಾಚ್ ಹಿಡಿದುಕೊಂಡರು. ಬಾಲ್ ತೆವಾಟಿಯಾ ಕೈಯಲ್ಲಿ ಸೇಫ್ ಆಗಿ ಸೇರಿಕೊಂಡಿತು. ಈ ಮೂಲಕ ರಾಹುಲ್ ಶತಕ ಸಿಡಿಸಬಹುದಾಗಿದ್ದ ಸಖತ್ ಆಟ ಕೊನೆಗೊಂಡಿತು.
Getting the best batsmen o out by taking spectacular catches is RAHUL TEWATIA’S work ?
Last year Virat kohli
Now KL Rahul #IPL2021 #RCB#PBKS #KLRahul #RR— ?ISHAN RCB? (@INDIANCRIKET_18) April 12, 2021
ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಸ್ಫೋಟಕ ಆಟವಾಡಿ 221 ರನ್ಗಳ ಬೃಹತ್ ಮೊತ್ತ ದಾಖಲಿಸಿದೆ. 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 221 ರನ್ ಪೇರಿಸಿದೆ. ಈ ಮೂಲಕ ರಾಜಸ್ಥಾನ್ ರಾಯಲ್ಸ್ಗೆ ಗೆಲ್ಲಲು 222 ರನ್ಗಳ ಬೃಹತ್ ಟಾರ್ಗೆಟ್ ನೀಡಿದೆ. ಪಂಜಾಬ್ ಪರ ನಾಯಕ ಕೆ.ಎಲ್. ರಾಹುಲ್ ಜವಾಬ್ದಾರಿಯುತ ಹಾಗೂ ವೇಗದ ಆಟವನ್ನು ಆಡಿದ್ದಾರೆ. 50 ಬಾಲ್ಗೆ 91 ರನ್ ಕಲೆಹಾಕಿದ್ದಾರೆ. ಹೂಡಾ ಸಿಕ್ಸರ್ಗಳ ಸುರಿಮಳೆಗೈದು 64 ರನ್ ನೀಡಿದರೆ, ಗೈಲ್ ಕೂಡ 40 ರನ್ಗಳ ಉತ್ತಮ ಮೊತ್ತ ಕೊಟ್ಟಿದ್ದಾರೆ. ರಾಜಸ್ಥಾನ್ ಪರ ಯಾವ ಬೌಲರ್ಗಳೂ ಹೇಳಿಕೊಳ್ಳುವ ಪ್ರದರ್ಶನ ತೋರಲಿಲ್ಲ. ರಾಹುಲ್ ಸಿಕ್ಸರ್ನ್ನು ಸ್ವಲ್ಪದರಲ್ಲೇ ತಪ್ಪಿಸಿ ತೆವಾಟಿಯಾ ಹಿಡಿದ ಕ್ಯಾಚ್ ರಾಜಸ್ಥಾನ್ ಪರ ಕಂಡುಬಂದ ಅದ್ಭುತ ಪ್ರದರ್ಶನವಾಗಿತ್ತಷ್ಠೆ.
ಇದನ್ನೂ ಓದಿ: IPL 2021: ಇಂಡಿಯನ್ ಪ್ರಿಮೀಯರ್ ಲೀಗ್ನಲ್ಲಿ ತಾನು ಕಿಂಗ್ ಅಂತ ಮತ್ತೊಮ್ಮೆ ನಿರೂಪಿಸಿದ ಪಂಜಾಬ್ ಕಿಂಗ್ಸ್ ನಾಯಕ ರಾಹುಲ್
Published On - 10:55 pm, Mon, 12 April 21