MI vs KKR IPL 2021 Match Prediction: ಕೊಲ್ಕತ್ತಾ ಮತ್ತು ಮುಂಬೈ ಮಧ್ಯೆ ನಡೆಯುವ ಪಂದ್ಯದಲ್ಲಿ ರೋಹಿತ್ ತಂಡ ಗೆಲ್ಲುವ ಫೇವರಿಟ್ ಎನಿಸುತ್ತಿದೆ
ಆರಂಭಿಕ ಆಟಗಾರರಾಗಿ ಶುಬ್ಮನ್ ಗಿಲ್ ಮತ್ತು ನಿತಿಶ್ ರಾಣಾ ಕಣಕ್ಕಿಳಿಯಲಿದ್ದಾರೆ, ಗಿಲ್ ಮೊದಲ ಪಂದ್ಯದಲ್ಲಿ ವಿಫಲಾಗಿದ್ದು ನಿಜವಾದರೂ ಆವರು ಭರವಸೆಯ ಆಟಗಾರ. ರಾಣಾ ಮತ್ತು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಾಹುಲ್ ತ್ರಿಪಾಠಿ ಭರ್ಜರಿ ಅರ್ಧ ಶತಕಗಳನ್ನು ಬಾರಿಸಿದರು.

ಇಂಡಿಯನ್ ಪ್ರಿಮೀಯರ್ ಲೀಗ್ 14ನೇ ಸೀಸನ್ನಿನ 5ನೇ ಪಂದ್ಯ ಮಂಗಳವಾರದಂದು 5 ಬಾರಿ ಪ್ರಶಸ್ತಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ನಡೆಯಲಿದೆ. ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ಟೀಮಿನ ನಾಯಕ ರೋಹಿತ್ ಶರ್ಮ ನಾಯಕತ್ವ ಮತ್ತು ಬ್ಯಾಟ್ ಎರಡರಲ್ಲೂ ಬೇರೆಯವರು ಆಸೂಯೆಪಟ್ಟುಕೊಳ್ಳುವಂಥ ದಾಖಲೆ ಹೊಂದಿದ್ದಾರೆ. ಈಗ ರಾಷ್ಟ್ರೀಯ ತಂಡಕ್ಕೂ ಆಡುತ್ತಿರುವ ಸೂರ್ಯಕುಮಾರ್ ಯಾದವ್ ಅವರೊಂದಿಗೆ ಪಾಂಡೆ ಸಹೋದರರು ಕೃಣಾಲ್ ಮತ್ತು ಹಾರ್ದಿಕ್ ಸಹ ಮುಂಬೈ ಟೀಮಿನ ಪ್ರಮುಖ ಸದಸ್ಯರು. ಆಲ್ರೌಂಡರ್ ಕೈರನ್ ಪೊಲ್ಲಾರ್ಡ್ ಮತ್ತು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವೈಯಕ್ತಿಕ ಸಾಧನೆಗಳ ಮೂಲಕ ಮುಂಬೈಗೆ ಹಲವು ಬಾರಿ ಗೆಲುವುಗಳನ್ನು ಕೊಡಿಸಿದ್ದಾರೆ. ಆರಂಭ ಆಟಗಾರರ ಕ್ವಿಂಟನ್ ಡಿ ಕಾಕ್ ಮತ್ತು ಮೂರನೇ ಕ್ರಮಾಂಕದಲ್ಲಿ ಆಡುವ ಇಶಾನ್ ಕಿಷನ್ ಸ್ಫೋಟಕ ಬ್ಯಾಟಿಂಗ್ಗೆ ಖ್ಯಾತರು.
ಡಿ ಕಾಕ್ ಅವರು ಪಾಕಿಸ್ತಾನದ ವಿರುದ್ಧ ಆಡಿದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನಗಳನ್ನು ನೀಡಿರುವುದರಿಂದ ಅವರು ಆಡುವುದು ನಿಶ್ಚಿತ. ಹಾಗಾದರೆ, ಲಿನ್ ಅವರನ್ನು ಡ್ರಾಪ್ ಮಾಡಲಾಗುವುದೆ? ಡಿ ಕಾಕ್ ಅವರನ್ನು ಆಡಿಸಬೇಕಾದರೆ ಲಿನ್ ಇಲ್ಲವೇ ಪೊಲ್ಲಾರ್ಡ್ ಅವರನ್ನು ಕೈ ಬಿಡಬೇಕಾಗುತ್ತದೆ. ಆದರೆ ಪೊಲ್ಲಾರ್ಡ್ ಅತ್ಯುತ್ತಮ ಫಿನಿಶರ್ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಮುಂಬೈ ಟೀಮಿಗೆ ಖಂಡಿತ ಗೊಂದಲದಲ್ಲಿದೆ. ವಿದೇಶಿ ಮೂಲದ ಆಟಗಾರರ ಪೈಕಿ ನ್ಯೂಜಿಲೆಂಡ್ನ ಆಲ್ರೌಂಡರ್ ಜೇಮ್ಸ್ ನಿಷಮ್ ಇಲ್ಲವೇ ದಕ್ಷಿಣ ಆಫ್ರಿಕಾದ ಆಲ್ರೌಂಡರ್ ಮಾರ್ಕೊ ಜಾನ್ಸೆನ್ ಇಬ್ಬರಲ್ಲಿ ಒಬ್ಬರು ಸ್ಥಾನ ಪಡೆಯಬಹುದು. ವೇಗದ ಬೌಲರ್ ನ್ಯೂಜಿಲೆಂಡ್ನ ಟ್ರೆಂಟ್ ಬೌಲ್ಟ್ ನಾಲ್ಕನೇ ಆಟಗಾರರಾಗಲಿದ್ದಾರೆ.
ಈ ಸೀಸನ್ನಿನ ಮೊದಲ ಪಂದ್ಯವನ್ನು ಮುಂಬೈ, ಆರ್ಸಿಬಿ ವಿರುದ್ಧ ಸೋತಿತ್ತು. ಅತ್ತ ಕೆಕೆಆರ್ ರವಿವಾರದಂದು ಹೈದರಾಬಾದ್ ತಂಡವನ್ನು ಸೋಲಿಸಿ ಆತ್ಮವಿಶ್ವಾಸದಿಂದ ಬೀಗುತ್ತಿದೆ. ಹಾಗಾಗಿ, ಮುಂಬೈ ವಿರುದ್ಧ ನಡೆಯಲಿರುವ ಪಂದಕ್ಕೆ ತಂಡದಲ್ಲಿ ಬದಲಾವಣೆಗಳನ್ನು ಮಾಡುವ ಸಾಧ್ಯತೆಯಿಲ್ಲ.
ಆರಂಭಿಕ ಆಟಗಾರರಾಗಿ ಶುಬ್ಮನ್ ಗಿಲ್ ಮತ್ತು ನಿತಿಶ್ ರಾಣಾ ಕಣಕ್ಕಿಳಿಯಲಿದ್ದಾರೆ, ಗಿಲ್ ಮೊದಲ ಪಂದ್ಯದಲ್ಲಿ ವಿಫಲಾಗಿದ್ದು ನಿಜವಾದರೂ ಆವರು ಭರವಸೆಯ ಆಟಗಾರ. ರಾಣಾ ಮತ್ತು ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ರಾಹುಲ್ ತ್ರಿಪಾಠಿ ಭರ್ಜರಿ ಅರ್ಧ ಶತಕಗಳನ್ನು ಬಾರಿಸಿದರು. ಆದ್ರೆ ರಸೆಲ್ ಬಗ್ಗೆ ಯಾರಿಗೆ ಗೊತ್ತಿಲ್ಲ? ಚೆಂಡಿನ ಮೇಲಿನ ಹೊಲಿಗೆಗಳು ಬಿಚ್ಚುತ್ತವೆಯೇನೋ ಎನ್ನುವಷ್ಟು ಬಲದೊಂದಿಗೆ ಅವರು ಹೊಡೆತಗಳನ್ನು ಬಾರಿಸುತ್ತಾರೆ.
ನಾಯಕ ಮೋರ್ಗನ್ ಮತ್ತು ಕಳೆದ ಸೀಸನ್ವರೆಗೆ ನಾಯಕರಾಗಿದ್ದ ದಿನೇಶ್ ಕಾರ್ತಿಕ್ ಮಧ್ಯಮ ಕ್ರಮಾಂಕದಲ್ಲಾಡುತ್ತಾರೆ. ಕಾರ್ತಿಕ್ ಮೇಲೆ ವಿಕೆಟ್ ಕೀಪಿಂಗ್ ಮಾಡುವ ಹೆಚ್ಚುವರಿ ಹೊಣೆಗಾರಿಕೆ ಇದೆ. ಶಕೀಬ್ ಅಲ್ ಹಸನ್ ವಿಶ್ವದ ಅತ್ಯುತ್ತಮ ಆಲ್ರೌಂಡರ್ಗಳಲ್ಲಿ ಒಬ್ಬರೆನಿಸಿಕೊಂಡಿದ್ದಾರೆ. ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಸಹ ಆಲ್ರೌಂಡರ್ ಎನ್ನುವುದು ನಿಜವೇ.
ಬೌಲಿಂಗ್ ವಿಭಾಗಕ್ಕೆ ಬಂದರೆ, ಕಮಿನ್ಸ್ ಮತ್ತು ಪ್ರಸಿಧ್ ಕೃಷ್ಣ ಅವರ ಆರಂಭಿಕ ಜೋಡಿಯು ಯಾವುದೇ ಎದುರಾಳಿ ತಂಡಕ್ಕೆ ಘಾತಕವೇ. ನಿನ್ನೆಯ ಪಂದ್ಯದಲ್ಲಿ ದಾಳಿ ಆರಂಭಿಸಿದ ವೆಟೆರನ್ ಆಫೀ, ಹರ್ಭಜನ್ ಸಿಂಗ್ ಮಿತವ್ಯಯಿಯಾಗುವುದರ ಜೊತೆಗೆ ವಿಕೆಟ್ಗಳನ್ನು ಸಹ ಪಡೆಯುತ್ತಾರೆ. ಉದಯೋನ್ಮುಖ ಬೌಲರ್ ಶಿವಮ್ ಮಾವಿ ಮೇಲೆ ಜಾಸ್ತಿ ಭರವಸೆಯಿದೆ.
ಟೀಮುಗಳ ಕಂಪೊಸಿಷನ್ ಸಾಮರ್ಥ್ಯವನ್ನು ಗಮನಿಸಿದರೆ ಮುಂಬೈ ಗೆಲ್ಲುವ ನೆಚ್ಚಿನ ತಂಡವಾಗಿದೆ
