Jofra Archer IPL 2021 RR Team Player: ವಿಂಡೀಸ್​ನಿಂದ ಇಂಗ್ಲೆಂಡ್​ಗೆ ಹೋಗಿ ವೇಗದ ಬೌಲರ್​ಗಳ ಅಧಿಪತಿಯಾಗಿರುವ ಆರ್ಚರ್​ಗೆ ರಾಜಸ್ತಾನ್ ರಾಯಲ್ಸ್​ನಲ್ಲೂ ರಾಜಮರ್ಯಾದೆ!

Jofra Archer Profile: 2018ರ ಐಪಿಎಲ್ ಟೂರ್ನಿಯಲ್ಲಿ ಆರ್ಚರ್ 10 ಪಂದ್ಯಗಳನ್ನಾಡಿ 15 ವಿಕೆಟ್ ಪಡೆದರು, ಮರುವರ್ಷದ ಸೀಸನಲ್ಲಿ ಅವರು 11 ಪಂದ್ಯಗಳಲ್ಲಿ ಕಾಣಿಸಿಕೊಂಡು 11 ವಿಕೆಟ್​ ಪಡೆದರು.

Jofra Archer IPL 2021 RR Team Player: ವಿಂಡೀಸ್​ನಿಂದ ಇಂಗ್ಲೆಂಡ್​ಗೆ ಹೋಗಿ ವೇಗದ ಬೌಲರ್​ಗಳ ಅಧಿಪತಿಯಾಗಿರುವ ಆರ್ಚರ್​ಗೆ ರಾಜಸ್ತಾನ್ ರಾಯಲ್ಸ್​ನಲ್ಲೂ ರಾಜಮರ್ಯಾದೆ!
ಜೊಫ್ರಾ ಆರ್ಚರ್
Follow us
ಅರುಣ್​ ಕುಮಾರ್​ ಬೆಳ್ಳಿ
| Updated By: Digi Tech Desk

Updated on:Apr 14, 2021 | 1:49 PM

ಇಂಗ್ಲೆಂಡ್​ನ ವೇಗದ ಬೌಲರ್ ಜೊಫ್ರಾ ಆರ್ಚರ್ ಅವರ ದೇಹದಾರ್ಢ್ಯತೆ ಮತ್ತು ಬೌಲಿಂಗ್ ಶೈಲಿಯನ್ನು ಗಮನಿಸಿದರೆ ಈ ನೀಳಕಾಯದ ಮನುಷ್ಯ ಗಂಟೆಗೆ 150 ಕಿ.ಮೀ ವೇಗದಲ್ಲಿ ಬೌಲ್ ಮಾಡಬಲ್ಲನೇ ಎಂಬ ಸಂಶಯ ಹುಟ್ಟುತ್ತದೆ. ಅದರೆ, ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ಸ್ಮಿತ್ ಮತ್ತು ಮಧ್ಯಮ ಕ್ರಮಾಂಕದ ಆಟಗಾರ ಮಾರ್ನಸ್ ಲಬುಶೇನ್ ಅವರನ್ನೊಮ್ಮೆ ಕೇಳಿದರೆ, ಆರ್ಚರ್ ಯಾವ ವೇಗದಲ್ಲಿ ಮಾಡುತ್ತಾರೆ ಮತ್ತು ಅವರ ಎಸೆತ ಪಿಚ್​ ಆದ ಮೇಲೆ ಹೇಗೆ ವಿಕೆಟ್ ಮತ್ತು ಬ್ಯಾಟ್ಸ್​ಮನ್ ದೇಹದೆಡೆ ಚಿಮ್ಮುತ್ತದೆ ಎನ್ನುವುದನ್ನು ಹೇಳುತ್ತಾರೆ. 2019ರ ಆ್ಯಶಸ್​ನಲ್ಲಿ ಇವರಿಬ್ಬರ ಹೆಲ್ಮೆಟ್​ಗಳಿಗೆ ಆರ್ಚರ್ ಬೌನ್ಸರ್​ಗಳು ಅಪ್ಪಳಿಸಿದ್ದವು. ಸ್ಮಿತ್ ಪೆಟ್ಟು ತಿಂದು ನೆಲಕ್ಕುರುಳಿದಾಗ ತನಗೆ ಆಸ್ಟ್ರೇಲಿಯಾದ ಆರಂಭ ಆಟಗಾರ ಫಿಲ್ ಹ್ಯೂಸ್ ಅವರ ನೆನಪಾಯಿತು ಎಂದು ಖುದ್ದು ಆರ್ಚರ್ ಹೇಳಿದ್ದರು. 2014 ರಲ್ಲಿ ಶೆಫೀಲ್ಡ್​ ಷೀಲ್ಡ್​ ಪಂದ್ಯವೊಂದನ್ನು ಆಡುತ್ತಿದ್ದಾಗ ಬೌನ್ಸರೊಂದು ಹ್ಯೂಸ್ ತಲೆಗೆ ಅಪ್ಪಳಿಸಿ ಅವರನ್ನು ಬಲಿತೆಗೆದುಕೊಂಡಿತ್ತು.

ಕೇವಲ ಮೂರು ವರ್ಷಗಳ ಅವಧಿಯಲ್ಲಿ ಅರ್ಚರ್ ವಿಶ್ವದ ಅಗ್ರಮಾನ್ಯ ಬೌಲರ್​ಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ. ಅಸಲಿಗೆ ಅವರನ್ನು ಆಲ್​ರೌಂಡರ್​ಗಳ ಪಟ್ಟಿಗೆ ಸೇರಿಸಲಾಗಿದೆ. ಹಾಗೆ ನೋಡಿದರೆ, ಬ್ಯಾಟಿಂಗ್ ಮಾಡಲು ಕ್ರೀಸಿಗೆ ಆಗಮಿಸಿದಾಗ ಅವರು ಲಾಂಗ್ ಹ್ಯಾಂಡಲ್ ಉಪಯೋಗಿಸಿ ಒಂದಷ್ಟು ಭರ್ಜರಿ ಹೊಡೆತಗಳನ್ನು ಬಾರಿಸುವುದು ಬಿಟ್ಟರೆ ಹೇಳಿಕೊಳ್ಳುವ ಸಾಧನೆಯೇನೂ ಮಾಡಿಲ್ಲ. ಅವರ ಬ್ಯಾಟಿಂಗ್ ಅಂಕಿ-ಅಂಶಗಳು ಇದನ್ನು ಸಾಬೀತು ಮಾಡುತ್ತವೆ. ಇದುವರೆಗೆ ಆಡಿರುವ 13 ಟೆಸ್ಟ್​ಗಳಲ್ಲಿ ಅವರ ಗರಿಷ್ಠ ಸ್ಕೋರ್ 30 ಆಗಿದೆ, 17 ಒಡಿಐಗಳಲ್ಲಿ ಅಜೇಯ 8 ಮತ್ತು 12 ಟಿ20ಐ ಪಂದ್ಯಗಳಲ್ಲಿ 18 ಅವರ ಅತ್ಯಧಿಕ ಸ್ಕೋರ್​ಗಳಾಗಿವೆ. ಪ್ರಥಮ ದರ್ಜೆ ಪಂದ್ಯಗಳಲ್ಲಿ ಅವರ ಗರಿಷ್ಠ ಸ್ಕೋರ್ ಅಜೇಯ 81 ಆಗಿದೆ.

ಆರ್ಚರ್ ಅಸಲಿಗೆ ಬ್ರಿಟಿಷ್ ಪ್ರಜೆಯೇ ಅಲ್ಲ, ಮೂಲತಃ ವೆಸ್ಟ್ ಇಂಡೀಸ್​ನ ಬಾರ್ಬೊಡಾಸ್​ನವರು. ಅವರ ತಂದೆ ಇಂಗ್ಲಿಷ್ ಮತ್ತು ತಾಯಿ ಬಾಜನ್ (ಬಾರ್ಬೊಡಾಸ್​) ಮೂಲದವರು. 2014 ರಲ್ಲಿ ಆರ್ಚರ್ ವೆಸ್ಟ್ ಇಂಡೀಸ್ ಪರ ಅಂಡರ್-19 ತಂಡದಲ್ಲಿ ಆಡಿದ್ದರು. ಆದರೆ ಇಂಗ್ಲೆಂಡ್​ ತಂಡಕ್ಕೆ ಆಡುವುದು ಅವರ ಒಲವು ಮತ್ತು ಕನಸಾಗಿತ್ತು. ಹಾಗಾಗಿ ಇಂಗ್ಲೆಂಡ್​ಗೆ ತೆರಳಿ ಸ​ಸ್ಸೆಕ್ಸ್ ಕೌಂಟಿ ಕ್ಲಬ್ ಪರ ಆಡಲಾರಂಭಿಸಿದ್ದರು. ಅವರ ಪ್ರತಿಭೆಯನ್ನು ಗಮನಿಸಿದ್ದ ಈಸಿಬಿ (ಇಂಗ್ಲಿಷ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ) ಅವರು 2019 ರ ವಿಶ್ವಕಪ್​ನಲ್ಲಿ ಆಡುವಂತೆ ಮಾಡಲು ಅರ್ಹತೆಯ ನಿಯಮಗಳನ್ನು ಬದಲಿಸಿ ಟೀಮಿನಲ್ಲಿ ಅವಕಾಶ ಕಲ್ಪಿಸಿತು. ಅಲ್ಲಿಂದ ಅರ್ಚರ್ ಹಿಂತಿರುಗಿ ನೋಡಿಲ್ಲ. ಈಗ ಎಲ್ಲ ಫಾರ್ಮಾಟ್​ಗಳಲ್ಲೂ ಅವರು ಇಂಗ್ಲೆಂಡ್ ಟೀಮಿನ ಭಾಗವಾಗಿದ್ದಾರೆ.

Steve Smith hit by Archer's bouncer

ಆರ್ಚರ್ ಬೌಲಿಂಗ್​ನಲ್ಲಿ ತಲೆಗೆ ಪೆಟ್ಟು ತಿಂದಿರುವ ಸ್ಟೀವ್ ಸ್ಮಿತ್

ಗಮನಿಸಬೇಕಾದ ಸಂಗತಿಯೆಂದರೆ, ಈಸಿಬಿ ಆರ್ಚರ್ ಅವರ ಪ್ರತಿಭೆಯನ್ನು ಗಮನಿಸುವ ಮೊದಲೇ ಇಂಡಿಯನ್ ಪ್ರಿಮೀಯರ್ ಲೀಗ್​ನ ಫ್ರಾಂಚೈಸಿಗಳು ಅವರ ಬೆಳವಣಿಗೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದವು. ಆದರೆ, ಅವರನ್ನು 2018ರಲ್ಲಿ 7.20 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದು ರಾಜಸ್ತಾನ ರಾಯಲ್ಸ್. ಟಿ20 ಕ್ರಿಕೆಟ್​ನಲ್ಲಿ ಆರ್ಚರ್ ಯುಟಿಲಿಟಿ ಆಟಗಾರ ಎನ್ನುವುದರಲ್ಲಿ ಸಂದೇಹವೇ ಇಲ್ಲ. ಚೆಂಡನ್ನು ತಮ್ಮ ಅತ್ಯದ್ಭುತ ಶಕ್ತಿ ಮೂಲಕ ಮೈದಾನದಾಚೆ ಕಳಿಸಬಲ್ಲರು ಮತ್ತು ಅದೇ ಚೆಂಡು ಬೌಲಿಂಗ್ ಮಾಡುವಾಗ ಕೈಗೆ ಬಂದರೆ ಅದನ್ನು ಬಿರುಗಾಳಿ ವೇಗದಲ್ಲಿ ಎಸೆಯಬಲ್ಲರು. ಗಂಟೆಗೆ 150ಕಿ.ಮೀ ವೇಗದಲ್ಲಿ ನುಗ್ಗುವ ಅವರ ಎಸೆತಗಳು ನಿಜಕ್ಕೂ ಬೆಂಕಿಯುಗಳುತ್ತವೆ!

ಟಿ20 ಕ್ರಿಕೆಟ್, ಕೆರಿಬೀಯನ್​ ದ್ವೀಪಗಳ ಆಟಗಾರರಿಗೆ ಹೆಚ್ಚು ಸೂಕ್ತವಾಗುತ್ತದೆ ಅಂತ ಕ್ರಿಕೆಟ್​ ಪ್ರೇಮಿಗಳು ಹೇಳುತ್ತಾರೆ. ಮೊದಲೆಲ್ಲ ಸೀಮಿತ ಓವರ್​ಗಳ ಕ್ರಿಕೆಟ್​ನಲ್ಲಿ ಅವರದ್ದೇ ದರ್ಬಾರು ನಡೆಯುತ್ತಿತ್ತು. ನಿಮಗೆ ನೆನಪಿದೆ ತಾನೆ, ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್​ ಇಂಡೀಸ್ ತಂಡ 1975 ಮತ್ತು 1979 ರ ವಿಶ್ವಕಪ್ ಗೆದ್ದಿತ್ತು. ಆರ್ಚರ್ ವಿಂಡೀಸ್ ಮೂಲದವರಾಗಿರುವುದರಿಂದ ಅವರು ಟಿ20 ಕ್ರಿಕೆಟ್​ನಲ್ಲಿ ಉತ್ಕೃಷ್ಟ ಪ್ರದರ್ಶನಗಳನ್ನು ನೀಡುತ್ತಿರುವುದು ಆಶ್ಚರ್ಯ ಹುಟ್ಟಿಸದು.

ತಮ್ಮ ಚೊಚ್ಚಲ ಐಪಿಎಲ್ ಸೀಸನ್​ನಲ್ಲಿ (2018) ಆರ್ಚರ್ ಬ್ಯಾಟಿಂಗ್​ನಲ್ಲಿ ಹೇಳಿಕೊಳ್ಳುವಂಥ ಪರಾಕ್ರಮವೇನೂ ಮೆರೆಯಲಿಲ್ಲ. ಆದರೆ ಅವರ ಬೌಲಿಂಗ್ ದಾಳಿಗಳು ಎದುರಾಳಿ ಆಟಗಾರರನ್ನು ದಿಗಿಲುಗೊಳಿಸಿದವು. ಒಬ್ಬ ವೇಗದ ಬೌಲರ್​ನ​ಲ್ಲಿರಬೇಕಾದ ಎಲ್ಲ ಅಸ್ತ್ರಗಳು ಅವರಲ್ಲಿವೆ; ಬೌನ್ಸರ್, ಸ್ಲೋ ಬೌನ್ಸರ್, ಹೆಬ್ಬೆಟ್ಟನ್ನು ಜಜ್ಜಿ ಬಿಡುವ ಯಾರ್ಕರ್, ನಿಧಾನ ಗತಿಯ ಎಸೆತ ಮೊದಲಾದವುಗಳೆಲ್ಲ ಅವರ ಬತ್ತಳಿಕೆಯಲ್ಲಿವೆ.

2019ರ ವಿಶ್ವಕಪ್ ಗೆದ್ದ ಇಂಗ್ಲೆಂಡ್​ ತಂಡದ ನಾಯಕ ಅಯಾನ ಮೋರ್ಗನ್ ಅವರಿಗೆ ಆರ್ಚರ್ ಅವರ ಬೌಲಿಂಗ್ ಸಾಮರ್ಥ್ಯದ ಮೇಲೆ ಎಲ್ಲಿಲ್ಲದ ವಿಶ್ವಾಸ. ನಿಮಗೆ ನೆನಪಿರಬಹುದು, ಆ ಟೂರ್ನಿಯ ಫೈನಲ್ ಪಂದ್ಯದ ಸೂಪರ್ ಓವರ್​ ಎಸೆಯಲು ಮೊರ್ಗನ್ ಚೆಂಡನ್ನು ಆರ್ಚರ್ ಅವರತ್ತ ಎಸೆದರು. ಆಗವರು ತಂಡಕ್ಕೆ ಇನ್ನೂ ಹೊಸಬ. ನಾಯಕನ ವಿಶ್ವಾಸವನ್ನು ಉಳಿಸಿಕೊಂಡು ಅವರು ಅದ್ಭುತವಾಗಿ ಆ ಓವರನ್ನು ಬೌಲ್ ಮಾಡಿದರು. ಸೂಪರ್ ಓವರ್ ನಂತರವೂ ಅ ಪಂದ್ಯ ಟೈ ಆಗಿದ್ದರಿಂದ ಪಂದ್ಯದಲ್ಲಿ ಹೆಚ್ಚು ಬೌಂಡರಿಗಳನ್ನು ಬಾರಿಸಿದ ತಂಡಕ್ಕೆ (ಇಂಗ್ಲೆಂಡ್) ಚಾಂಪಿಯನ್ ಪಟ್ಟ ನೀಡಲಾಯಿತು.

2018ರ ಐಪಿಎಲ್ ಟೂರ್ನಿಯಲ್ಲಿ ಆರ್ಚರ್ 10 ಪಂದ್ಯಗಳನ್ನಾಡಿ 15 ವಿಕೆಟ್ ಪಡೆದರು, ಮರುವರ್ಷದ ಸೀಸನಲ್ಲಿ ಅವರು 11 ಪಂದ್ಯಗಳಲ್ಲಿ ಕಾಣಿಸಿಕೊಂಡು 11 ವಿಕೆಟ್​ ಪಡೆದರು. ಯುಏಈಯಲ್ಲಿ ನಡೆದ 2020ರ ಐಪಿಎಲ್​ನಲ್ಲಿ ಅವರು 20ವಿಕೆಟ್​ಗಳನ್ನು 14 ಪಂದ್ಯಗಳಲ್ಲಿ ಪಡೆದರು. ಇದುವರೆಗೆ ಅವರು 35 ಪಂದ್ಯಗಳನ್ನಾಡಿ 46 ವಿಕೆಟ್ ಪಡೆದಿದ್ದಾರೆ.

ಇದನ್ನೆಲ್ಲಾ ಗಮನಿಸಿದರೆ 2021 ರ ಸೀಸನ್​ ಅವರು ರಾಜಸ್ತಾನ ರಾಯಲ್ಸ್ ಟ್ರಂಪ್​ಕಾರ್ಡ್​ ಅಗಲಿದ್ದಾರೆ ಎಂದು ಕ್ರಿಕೆಟ್​ ಪರಿಣಿತರು ಹೇಳುತ್ತಿದ್ದರೂ, ಇಂಜೂರಿಯಿಂದ ಬಳಲುತ್ತಿರುವ ಆರ್ಚರ್ ಈ ಬಾರಿಯ ಐಪಿಎಲ್​ ಟೂರ್ನಿಯಲ್ಲಿ ಆಟವಾಡುತ್ತಿಲ್ಲ.

ಇದನ್ನೂ ಓದಿ: IPL: ಮಿಲಿಯನ್​ ಡಾಲರ್​ ಟೂರ್ನಿಗೆ 2 ಹೊಸ ತಂಡಗಳ ಸೇರ್ಪಡೆ.. ಈ ವರ್ಷದ ಮೇ ತಿಂಗಳಲ್ಲಿ ಹರಾಜು ಪ್ರಕ್ರಿಯೆ!

Published On - 8:24 am, Mon, 12 April 21

Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Devotional: ವಾಕಿಂಗ್​ ಮಾಡುವುದರಿಂದ ಏನೆಲ್ಲಾ ಪ್ರಯೋಜನ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
Daily Horoscope: ಈ ರಾಶಿಯವರ ಉದ್ದೇಶಗಳು ಇಂದು ಈಡೇರಲಿವೆ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ