ಕಡಿಮೆ ಮಾತು, ಹೆಚ್ಚು ಕೆಲಸ. ನೊವಾಕ್ ಜೊಕೊವಿಕ್ (Novak Djokovic) ವಿಷಯದಲ್ಲೂ ಹಾಗೆಯೇ. ಸರ್ಬಿಯಾದ ಸೂಪರ್ ಸ್ಟಾರ್ ನೊವಾಕ್ ಜೊಕೊವಿಕ್ ಮತ್ತೊಮ್ಮೆ ವಿಂಬಲ್ಡನ್ (Wimbledon 2022) ಚಾಂಪಿಯನ್ ಆಗಿದ್ದಾರೆ. ಮೊದಲ ಶ್ರೇಯಾಂಕದ ಜೊಕೊವಿಕ್ 4-6, 6-2, 6-4, 7-6 ರಲ್ಲಿ ಆಸ್ಟ್ರೇಲಿಯಾದ ನಿಕ್ ಕೀರಿಯೊಸ್ ಅವರನ್ನು 4 ಸೆಟ್‌ಗಳ ಪಂದ್ಯದಲ್ಲಿ ಸೋಲಿಸಿದರು. ಇದರೊಂದಿಗೆ ಜೊಕೊವಿಕ್ ವಿಂಬಲ್ಡನ್‌ನಲ್ಲಿ ಏಳನೇ ಬಾರಿಗೆ ಪುರುಷರ ಸಿಂಗಲ್ಸ್ ಪ್ರಶಸ್ತಿ ಗೆದ್ದರು. ಈ ಅತಿದೊಡ್ಡ ಗ್ರಾಸ್ ಕೋರ್ಟ್ ಪಂದ್ಯಾವಳಿಯಲ್ಲಿ, ಜೊಕೊವಿಕ್ 2018 ರಿಂದ ಸೋತಿಲ್ಲ. ಆ ಮೂಲಕ ಅವರ ನಾಲ್ಕನೇ ಸತತ ಪ್ರಶಸ್ತಿಯನ್ನು ಗೆದ್ದರು.
ನಿಕ್ ಕಿರ್ಗಿಯೋಸ್ ಮೊದಲ ಸೆಟ್‌ನಲ್ಲಿ ನೊವಾಕ್ ಜೊಕೊವಿಕ್ ವಿರುದ್ಧ 6-4 ಅಂತರದಲ್ಲಿ ಗೆಲುವು ಸಾದಿಸಿದರು. ನೊವಾಕ್ ಈ ಹಿಂದೆ ನಿಕ್ ಕಿರ್ಗಿಯೋಸ್ ವಿರುದ್ಧ ಎರಡು ಬಾರಿ ಮಾತ್ರ ಆಡಿದ್ದರು. ಕಿರ್ಗಿಯೋಸ್ ಇತ್ತೀಚೆಗೆ ಹುಲ್ಲು ಅಂಕಣದಲ್ಲಿ ಎರಡು ಪಂದ್ಯಾವಳಿಗಳಲ್ಲಿ ಸೆಮಿಫೈನಲ್ ತಲುಪಿದರು. ಈ ಅಂಕಿಅಂಶಗಳು ಅಥವಾ ಸಂದರ್ಭಗಳಿಂದ ಜೊಕೊವಿಕ್ ಒತ್ತಡಕ್ಕೆ ಒಳಗಾಗಿರಲಿಲ್ಲ. ಎರಡನೇ ಸೆಟ್‌ನಲ್ಲಿ ಲಯಕಂಡುಕೊಂಡ ನೊವಾಕ್ 6-3 ರಿಂದ ಎರಡನೇ ಸೆಟ್ ಗೆದ್ದುಕೊಂಡರು. ನಂತರದ ಸೆಟ್ಟನ್ನೂ ನೊವಾಕ್ 6-4ರಲ್ಲಿ ಗೆಂದುಕೊಂಡರು. ನೊವಾಕ್ ನಂತರ ಟೈಬ್ರೇಕರ್‌ನಲ್ಲಿ ನಾಲ್ಕನೇ ಸೆಟ್ ಅನ್ನು 6-7 (6-3) ರಿಂದ ಗೆದ್ದರು. ಮೊದಲ ಸೆಟ್‌ನಲ್ಲಿ ಹಿನ್ನಡೆ ಕಂಡರೂ ಛಲಬಿಡದ ನೊವಾಕ್ ಪ್ರಶಸ್ತಿ ಕಳೆದುಕೊಳ್ಳಲಿಲ್ಲ. ಕೊನೆಯಲ್ಲಿ 4-6, 6-3, 6-4, 6-7 (6-3) ಸೆಟ್‌ಗಳಿಂದ ನೊವಾಕ್ ಜಯಗಳಿಸಿ ಇತಿಹಾಸ ನಿರ್ಮಿಸಿದರು.
ಚಾಂಪಿಯನ್ ಆದ ಬಳಿಕ ಗ್ಯಾಲರಿಯತ್ತ ಓಡಿದ ನೋವಾಕ್, ಗ್ಯಾಲರಿಯಲ್ಲಿ ಕುಳಿತಿದ್ದ ತನ್ನ ಮಡದಿ ಹಾಗೂ ಪೋಷಕರನ್ನು ತಬ್ಬಿಕೊಂಡು ಹರ್ಷ ವ್ಯಕ್ತಪಡಿಸಿದರು, ನಂತರ ಕೋರ್ಟ್ಗೆ ಬಂದ ನೊವಾಕ್ ದಾಖಲೆಯ ಟ್ರೋಪಿ ಎತ್ತಿಹಿಡಿದು ಸಂಭ್ರಮಿಸಿದರು.
Centre Court rises again for one of its great champions
Congratulations, @DjokerNole ?#Wimbledon | #CentreCourt100 pic.twitter.com/RAm2mm56pS
— Wimbledon (@Wimbledon) July 10, 2022
Seven-time champion. Four in a row.#Wimbledon | #CentreCourt100 pic.twitter.com/ZUcVtFsKUd
— Wimbledon (@Wimbledon) July 10, 2022
Published On - 10:59 pm, Sun, 10 July 22