AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Wimbledon 2021: ಸುಲಭವಾಗಿ ಗೆದ್ದು, 10 ನೇ ಬಾರಿಗೆ ವಿಂಬಲ್ಡನ್ ಸೆಮಿಫೈನಲ್ ತಲುಪಿದ ನೊವಾಕ್ ಜೊಕೊವಿಕ್

Wimbledon 2021: ಐದು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ 10 ನೇ ಬಾರಿಗೆ ವಿಂಬಲ್ಡನ್ ಸೆಮಿಫೈನಲ್ ತಲುಪಿದ್ದಾರೆ. ಜುಲೈ 7 ರಂದು ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಹಂಗರಿಯ ಮಾರ್ಟನ್ ಫುಕ್ಸೊವಿಕ್ಸ್ ಅವರನ್ನು 6-3, 6-4, 6-4 ನೇರ ಸೆಟ್‌ಗಳಿಂದ ಸೋಲಿಸಿದರು.

Wimbledon 2021: ಸುಲಭವಾಗಿ ಗೆದ್ದು, 10 ನೇ ಬಾರಿಗೆ ವಿಂಬಲ್ಡನ್ ಸೆಮಿಫೈನಲ್ ತಲುಪಿದ ನೊವಾಕ್ ಜೊಕೊವಿಕ್
ನೊವಾಕ್ ಜೊಕೊವಿಕ್
ಪೃಥ್ವಿಶಂಕರ
|

Updated on: Jul 07, 2021 | 10:02 PM

Share

ವಿಶ್ವದ ಪ್ರಥಮ ಶ್ರೇಯಾಂಕಿತ ಪುರುಷ ಟೆನಿಸ್ ಆಟಗಾರ ಮತ್ತು ಐದು ಬಾರಿಯ ಚಾಂಪಿಯನ್ ನೊವಾಕ್ ಜೊಕೊವಿಕ್ 10 ನೇ ಬಾರಿಗೆ ವಿಂಬಲ್ಡನ್ ಸೆಮಿಫೈನಲ್ ತಲುಪಿದ್ದಾರೆ. ಜುಲೈ 7 ರಂದು ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಹಂಗರಿಯ ಮಾರ್ಟನ್ ಫುಕ್ಸೊವಿಕ್ಸ್ ಅವರನ್ನು 6-3, 6-4, 6-4 ನೇರ ಸೆಟ್‌ಗಳಿಂದ ಸೋಲಿಸಿದರು. ತಮ್ಮ 20 ನೇ ಗ್ರ್ಯಾಂಡ್ ಸ್ಲ್ಯಾಮ್ಗಾಗಿ ಸೆಣಸುತ್ತಿರುವ ಜೊಕೊವಿಕ್, ಕೆನಡಾದ ಡೆನಿಸ್ ಶಪೋವೊಲೊವ್ ಅವರನ್ನು ಎದುರಿಸಲಿದ್ದಾರೆ. ತಮ್ಮ ಪಂದ್ಯದಲ್ಲಿ, ಶಪೋವೊಲೊವ್ ಐದು ಸೆಟ್‌ಗಳ ಪಂದ್ಯದಲ್ಲಿ ರಷ್ಯಾದ ಕರಣ್ ಖಚಾನೋವ್ ಅವರನ್ನು ಸೋಲಿಸಿದರು. 34 ವರ್ಷದ ಜೊಕೊವಿಕ್ ಅವರು ಕ್ವಾರ್ಟರ್ ಫೈನಲ್ ಪಂದ್ಯಗಳನ್ನು ಗೆದ್ದಿದ್ದರಿಂದ ಹುಲ್ಲು ಅಂಕಣದಲ್ಲಿ ತಮ್ಮ 100 ನೇ ಜಯ ದಾಖಲಿಸಿದರು. ಅಲ್ಲದೆ, ಅವರು 41 ನೇ ಬಾರಿಗೆ ಪ್ರಮುಖ ಟೆನಿಸ್ ಪಂದ್ಯಾವಳಿಯ ಸೆಮಿಫೈನಲ್ ತಲುಪಿದ್ದಾರೆ.

ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಗೆದ್ದಿದ್ದಾರೆ ಗೆಲುವಿನ ನಂತರ, ಜೊಕೊವಿಕ್, ಇದು ಅದ್ಭುತ ಪ್ರದರ್ಶನವಾಗಿದೆ. ನಾನು ಚೆನ್ನಾಗಿ ಪ್ರಾರಂಭಿಸಿದೆ ಮತ್ತು ಮೊದಲ ಐದು ಪಂದ್ಯಗಳಲ್ಲಿ ಹೆಚ್ಚು ತಪ್ಪುಗಳನ್ನು ಮಾಡಲಿಲ್ಲ. ಎರಡನೇ ಮತ್ತು ಮೂರನೇ ಸೆಟ್‌ಗಳಲ್ಲಿ ಒಮ್ಮೆ ಸರ್ವ್ ಬ್ರೇಕಿಂಗ್ ಗೆಲ್ಲಲು ಸಾಕು. ಆದರೆ ಮಾರ್ಟನ್ ಪೈಪೋಟಿ ನೀಡುತ್ತಾ ಸತತ ಪ್ರಯತ್ನ ಮಾಡಿದರು. ಇದರ ಮನ್ನಣೆ ಅವರಿಗೆ ಸಲ್ಲುತ್ತದೆ. ಮಾರ್ಟನ್ ಪಂದ್ಯಾವಳಿಯನ್ನು ಚೆನ್ನಾಗಿ ಆಡಿದರು. ಜೊಕೊವಿಕ್ ಕಳೆದ ತಿಂಗಳು ಫ್ರೆಂಚ್ ಓಪನ್ ಗೆದ್ದರು. ಈ ಮೂಲಕ, ಅವರು ನಾಲ್ಕು ಗ್ರ್ಯಾಂಡ್ ಸ್ಲ್ಯಾಮ್‌ಗಳನ್ನು ಒಂದಕ್ಕಿಂತ ಹೆಚ್ಚು ಬಾರಿ ಗೆದ್ದ ಮೂರನೇ ಪುರುಷ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈಗ ಅವರು 1969 ರಿಂದ ಪ್ರಾರಂಭವಾದ ವೃತ್ತಿಜೀವನದ ಗ್ರ್ಯಾಂಡ್ ಸ್ಲ್ಯಾಮ್ ಪೂರ್ಣಗೊಳಿಸಿದ ಮೊದಲ ಪುರುಷ ಆಟಗಾರರಾಗುವ ಅವಕಾಶವನ್ನು ಹೊಂದಿದ್ದಾರೆ. ಜೊತೆಗೆ ಟೆನಿಸ್ ಇತಿಹಾಸದಲ್ಲಿ ವೃತ್ತಿಜೀವನದ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದ ಮೂರನೇ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಪೋವೊಲೊವ್ ಮೊದಲ ಬಾರಿಗೆ ಸೆಮಿಫೈನಲ್ ಆಡಲಿದ್ದಾರೆ ಕೆನಡಾದ ಡೆನಿಸ್ ಶಪೋವೊಲೊವ್ ಮೊದಲ ಬಾರಿಗೆ ವಿಂಬಲ್ಡನ್ ಸೆಮಿಫೈನಲ್ ತಲುಪಿದ್ದಾರೆ. ಅವರು ಖಚಾನೋವ್ ಅವರನ್ನು 6-4, 3-6, 5-7, 6-1, 6-4ರಿಂದ ಸೋಲಿಸಿದರು. ಕೊನೆಯ ನಾಲ್ಕರಲ್ಲಿ ಜೊಕೊವಿಕ್ ಅವರನ್ನು ಎದುರಿಸಲು ಅವರಿಗೆ ತುಂಬಾ ಕಷ್ಟವಾಗುತ್ತದೆ. ಶಪೋವೊಲೊವ್ ಸರ್ಬಿಯಾದ ಆಟಗಾರನೊಂದಿಗೆ ಆರು ಪಂದ್ಯಗಳನ್ನು ಆಡಿದ್ದು ಎಲ್ಲವನ್ನು ಕಳೆದುಕೊಂಡಿದ್ದಾರೆ. ಆದರೆ, 22 ವರ್ಷದ ಕೆನಡಾದ ಆಟಗಾರ ಈ ಬಾರಿ ಫಲಿತಾಂಶವನ್ನು ಬದಲಾಯಿಸಬಹುದೆಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಸಂಸತ್ತಿನಲ್ಲಿ ವಿರೋಧಪಕ್ಷ ವಿನಾಕಾರಣ ಗದ್ದಲವೆಬ್ಬಿಸುತ್ತಿದೆ: ಸೋಮಣ್ಣ
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಜೈಲಿನಲ್ಲಿ ಇರುವ ಕೈದಿಗೆ ಹಾಡುವ ಅವಕಾಶ ನೀಡಿದ ಕೆ. ಕಲ್ಯಾಣ್
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
ಮಚ್ಚಿನೊಂದಿಗೆ ಆರೋಪಿ ನ್ಯಾಯಾಲಯ ಪ್ರವೇಶಿಸಿದ್ದು ಪೊಲೀಸರ ಕರ್ತವ್ಯಲೋಪ
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
‘ಜೂನಿಯರ್’ ಸಿನಿಮಾದ ಯಶಸ್ಸು, ನಿರ್ದೇಶಕ ರಾಧಾಕೃಷ್ಣ ಹೇಳಿದ್ದೇನು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಏನೂ ಅರಿಯದ ಮಗುವನ್ನು ಸಾಯಿಸುವ ಮಾನಸಿಕತೆಗೆ ಏನೆನ್ನಬೇಕು?
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ಸ್ಟಂಟ್ ದೃಶ್ಯಕ್ಕೆ ಎಷ್ಟು ಶ್ರಮ ಪಟ್ಟಿದ್ದಾರೆ ಕಿರೀಟಿ: ವಿಡಿಯೋ ನೋಡಿ
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ರೌಡಿಶೀಟರ್ ಬಿಕ್ಲು ಶಿವ ಬರ್ಬರ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಸಿದ್ದರಾಮಯ್ಯ ಗಾವುದ ದೂರ: ಮಹದೇವಪ್ಪ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ಖಜಾನೆ ತುಂಬಿಸಿಕೊಳ್ಳಲು ರಾಜ್ಯ ಸರ್ಕಾರ ವಾಮಮಾರ್ಗ ಅನುಸರಿಸಿದೆ: ಸಿಟಿ ರವಿ
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್
ನಾಲ್ಕು ದಿನಗಳ ಅಂತರದಲ್ಲಿ ಇಬ್ಬರು ಮಹಿಳೆಯರನ್ನು ಬಲಿಪಡೆದ ಬಿಎಂಟಿಸಿ ಬಸ್