ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್, ಕ್ರಿಕೆಟ್‌ನ ಅತ್ಯಂತ ಶ್ರೇಷ್ಠ ಸ್ಥಳ ಲಾರ್ಡ್ಸ್‌ನಲ್ಲಿ ನಡೆಯಬೇಕಿತ್ತು. ಇದೀಗ ಸೌತಾಂಪ್ಟನ್‌ನ ಹ್ಯಾಂಪ್‌ಶೈರ್ ಬೌಲ್ ಕ್ರೀಡಾಂಗಣದಲ್ಲಿ ಆಡಿಸಲಾಗುವುದು ಎಂದು ಐಸಿಸಿ ಅಧಿಕೃತವಾಗಿ ಪ್ರಕಟಿಸಿದೆ. ಫೈನಲ್ ಪಂದ್ಯವನ್ನು ಜೂನ್ 18 ರಿಂದ 22 ರವರೆಗೆ ಆಡಲಾಗುತ್ತದೆ. ಅಲ್ಲದೆ ಜೂನ್ 23 ಅನ್ನು ಮೀಸಲು ದಿನವಾಗಿ ಇರಿಸಲಾಗುತ್ತದೆ. ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ (ಇಸಿಬಿ) ಜೊತೆಗಿನ ಚರ್ಚೆಯ ಆದಾರದ ಮೇಲೆ ಐಸಿಸಿ ಮಂಡಳಿಯು ಈ ನಿರ್ಧಾರ ತೆಗೆದುಕೊಂಡಿದೆ.
ಸೌತಾಂಪ್ಟನ್ ಅನ್ನು ಅಂತಿಮಗೊಳಿಸಿಲಾಗಿದೆ.
ಆರಂಭದಲ್ಲಿ ಲಾರ್ಡ್ಸ್ ಸ್ಟೇಡಿಯಂನಲ್ಲಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನಡೆಸಲು ಐಸಿಸಿ ಯೋಚಿಸಿತ್ತು. ಆದರೆ ಈಗ ಸೌತಾಂಪ್ಟನ್ ಅನ್ನು ಅಂತಿಮಗೊಳಿಸಿಲಾಗಿದೆ. ಯಾಕೆಂದರೆ ಸೌತಾಂಪ್ಟನ್‌ನ ಸ್ಟೇಡಿಯಂ ಒಳಗೆ ಫೈವ್ ಸ್ಟಾರ್ ಹೋಟೆಲ್‌ನ ಸೌಲಭ್ಯವಿದೆ. ಐಸಿಸಿ ವರ್ಲ್ಡ್ ಟೆಸ್ಟ್ ಫೈನಲ್‌ನಲ್ಲಿ ಸ್ಪರ್ಧಿಸುವ ಭಾರತ, ಇಂಗ್ಲೆಂಡ್ ತಂಡಗಳಿಗೆ ಬಯೋಬಬಲ್ ಸೃಷ್ಠಿಸಲು ಸುಲಭವಾಗಲಿದೆ. ಹೀಗಾಗಿ ಆಟಗಾರರು ಪಂದ್ಯಾವಳಿಗು ಮುನ್ನ ಆ ಮೈದಾನದಲ್ಲೇ ಅಭ್ಯಾಸ ನಡೆಸಿ, ಆ ಕ್ರೀಡಾಂಗಣದಲ್ಲಿರುವ ಹೋಟೆಲ್ನಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಅದರಿಂದ ಆಟಗಾರರು ಹೊರಹೋಗುವ ಅವಶ್ಯಕತೆ ಇರುವುದಿಲ್ಲ. ಇದರಿಂದಾಗಿ ಆಟಗಾರರು ಕೊರೊನಾ ಸೋಂಕಿಗೆ ಒಳಗಾಗುವ ಬೀತಿಯು ಇರುವುದಿಲ್ಲ. ಈ ಕಾರಣದಿಂದಾಗಿ ಸೌತಾಂಪ್ಟನ್‌ನಲ್ಲಿ ಫೈನಲ್ ಪಂದ್ಯ ಆಯೋಜಿಸಲಾಗಿದೆ.
ಬಯೋ ಬಬಲ್ ಎಂದರೇನು?
ಆಟಗಾರರಿಗೆ ಕೊರೊನಾ ಸೋಂಕು ಹರಡದ್ದಂತೆ ತಡೆಯಲು ಈ ಬಯೋ ಬಬಲ್ ನಿಯಮ ಸೃಷ್ಟಿಸಲಾಗಿದೆ. ಈ ಬಯೋ ಬಬಲ್ ನಿಯಮದಡಿ ಬರುವ ಕ್ರಿಕೆಟಿಗರ ಚಲನವಲನಗಳು ಕಡಿಮೆ ಇರುತ್ತದೆ. ಆಟಗಾರರಿಗೆ ಹೆಚ್ಚು ಓಡಾಡಲು ಅವಕಾಶವಿರುವುದಿಲ್ಲ. ಕ್ರಿಕೆಟಿಗರು ಪಂದ್ಯ ನಡೆಯುವ ಜಾಗಕ್ಕೆ ಹೋದಂತೆ ಸೆಲ್ಫ್ಕ್ವಾರಂಟೈನ್ ಆಗಲಿದ್ದಾರೆ. ಅದರ ಜೊತೆಗೆ ಆಟಗಾರರಿಗೆ ನೀಡಲಾಗುವ ಹೋಟೆಲ್ ಅಥವಾ ರೂಂನಲ್ಲಿ ಸೆಲ್ಫ್ ಕ್ವಾರಟೈಂನ್ ಆಗಬೇಕು. ಫ್ಯಾಮಿಲಿ, ಪ್ರೆಂಡ್ಸನ್ನು ಕೂಡ ಕ್ರಿಕೆಟಿಗರು ಭೇಟಿ ಮಾಡುವುದನ್ನು ನಿರ್ಬಂಧಿಸಲಾಗಿರುತ್ತದೆ. ಹೊರಗಿನಿಂದ ಬರುವ ಯಾರೊಬ್ಬರು ಆಟಗಾರರನ್ನು ಭೇಟಿ ಮಾಡುವಂತಿಲ್ಲ. ಇದರಿಂದ ಆಟಗಾರರಿಗೆ ಕೊರೊನಾ ಸೋಂಕು ಹರಡುವುದು ತಪ್ಪುತ್ತದೆ ಎಂಬುದೆ ಈ ನಿಯಮದ ಉದ್ದೇಶ
ಭಾರತ ತಂಡ ನ್ಯೂಜಿಲೆಂಡ್ ಅನ್ನು ಸೋಲಿಸಲಿದೆ.
ಈ ಹಿಂದೆ ಪಿಟಿಐ ಜೊತೆ ಮಾತನಾಡಿದ ಸೌರವ್ ಗಂಗೂಲಿ, ಹೌದು, ಐಸಿಸಿ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯ ಏಜಸ್ ಬೌಲ್‌ನಲ್ಲಿ ನಡೆಯಲಿದೆ. ನಾನಲ್ಲಿಗೆ ಹೋಗಲಿದ್ದೇನೆ. ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ಅನ್ನು ಸೋಲಿಸಲಿದೆ ಎಂಬ ಭರವಸೆ ನನಗಿದೆ ಎಂದು ಹೇಳಿದ್ದರು.
ಇತ್ತೀಚೆಗಷ್ಟೆ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತ 3-1ರ ಗೆಲುವು ಕಂಡಿತ್ತು. ಹೀಗಾಗಿ ಭಾರತ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿತ್ತು. ಕೊನೇ ಟೆಸ್ಟ್‌ನಲ್ಲಿ ಭಾರತ ಸೋತಿದ್ದರೆ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ತಂಡಗಳು ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಆಡುತ್ತಿದ್ದವು.
ಸೀಮಿತ ಸಂಖ್ಯೆಯ ಅಭಿಮಾನಿಗಳಿಗೆ ಅವಕಾಶ.
COVID-19 ಲಾಕ್‌ಡೌನ್ ಕ್ರಮಗಳನ್ನು ಯುಕೆ ಸರ್ಕಾರವು ಹಂತಹಂತವಾಗಿ ಸಡಿಲಗೊಳಿಸಲು ನೋಡುತ್ತಿದೆ. ಹೀಗಾಗಿ ಫೈನಲ್ ಪಂದ್ಯವನ್ನು ವೀಕ್ಷಿಸಲು ಸೀಮಿತ ಸಂಖ್ಯೆಯ ಅಭಿಮಾನಿಗಳನ್ನು ಹ್ಯಾಂಪ್‌ಶೈರ್ ಬೌಲ್ ಕ್ರೀಡಾಂಗಣಕ್ಕೆ ಆಗಮಿಸಲು ಅನುಮತಿಸಲಾಗುವುದು ಎಂದು ಊಹಿಸಲಾಗಿದೆ.
ಹ್ಯಾಂಪ್‌ಶೈರ್ ಬೌಲ್‌ನಲ್ಲಿ ಉದ್ಘಾಟನಾ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯವನ್ನು ಆಯೋಜಿಸಲು ಐಸಿಸಿ ಆಯ್ಕೆ ಮಾಡಿಕೊಂಡಿರುವುದು ನಮಗೆ ಸಂತೋಷ ತಂದಿದೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಟಾಮ್ ಹ್ಯಾರಿಸನ್ ಹೇಳಿದರು.
ಉದ್ಘಾಟನಾ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಆತಿಥೇಯ ವೇದಿಕೆಯಾಗಿ ಹ್ಯಾಂಪ್‌ಶೈರ್ ಬೌಲ್ ಕ್ರೀಡಾಂಗಣವನ್ನು ಆಯ್ಕೆ ಮಾಡಿರುವುದು ನಮಗೆ ಗೌರವ ಮತ್ತು ಸಂತೋಷ ತಂದಿದೆ. ಐಸಿಸಿಯ ಈ ನಿರ್ಧಾರಕ್ಕಾಗಿ ನಾನು ಪ್ರಾಮಾಣಿಕವಾಗಿ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹ್ಯಾಂಪ್‌ಶೈರ್ ಕ್ರಿಕೆಟ್ ಅಧ್ಯಕ್ಷ ರಾಡ್ ಬ್ರಾನ್ಸ್‌ಗ್ರೋವ್ ಅವರು ಹೇಳಿದರು.
Published On - 6:25 pm, Wed, 10 March 21