ಐಪಿಎಲ್ 2021ರಲ್ಲಿ ಕೊವಿಡ್ ಪಾಸಿಟಿವ್ ಎಂದು ಕಂಡುಬಂದ ಆಟಗಾರರಲ್ಲಿ ಭಾರತೀಯ ಟೆಸ್ಟ್ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮತ್ತು ಸನ್‌ರೈಸರ್ಸ್ ಹೈದರಾಬಾದ್ ವೃದ್ಧಿಮಾನ್ ಸಹಾ ಒಬ್ಬರು. ಕೊವಿಡ್ 19 ರ ಸತತ ಪ್ರಕರಣಗಳ ನಂತರವೇ ಲೀಗ್‌ನ 14 ನೇ ಆವೃತ್ತಿಯನ್ನು ಅನಿರ್ದಿಷ್ಟವಾಗಿ ಮುಂದೂಡಲಾಯಿತು. ಸಹಾ ಅವರ ಕೊವಿಡ್ ವರದಿ ಶುಕ್ರವಾರ ಮತ್ತೊಮ್ಮೆ ಪಾಸಿಟಿವ್ ಬಂದಿದ್ದು, ಇದರ ನಂತರ ಅವರು ತಮ್ಮ ಬಗ್ಗೆ ವದಂತಿಗಳನ್ನು ಹರಡಬಾರದು ಎಂದು ಸಾಮಾಜಿಕ ಮಾಧ್ಯಮಗಳ ಮೂಲಕ ಜನರಿಗೆ ಮನವಿ ಮಾಡಿದ್ದಾರೆ. ಅವರ ಒಂದು ವರದಿ ಪಾಸಿಟಿವ್ ಆಗಿದ್ದರೆ, ಇನ್ನೊಂದು ವರದಿ ನೆಗೆಟಿವ್ ಆಗಿದೆ ಎಂದು ಸಹಾ ಹೇಳಿದ್ದಾರೆ. ಸಹಾ ಪ್ರಸ್ತುತ ದೆಹಲಿಯಲ್ಲಿ ಕ್ವಾರಂಟೈನ್‌ನಲ್ಲಿದ್ದು, ಮೊದಲಿಗಿಂತ ಉತ್ತಮವಾಗಿದ್ದಾರೆ.
ಸಹಾ ಟ್ವೀಟ್ ಮಾಡಿ, ನನ್ನ ಕ್ವಾರಂಟೈನ್ ಅವಧಿ ಇನ್ನೂ ಮುಗಿದಿಲ್ಲ. ವಾಡಿಕೆಯ ತಪಾಸಣೆಯಂತೆ, ಎರಡು ಪರೀಕ್ಷೆಗಳು ನಡೆದಿವೆ, ಅವುಗಳಲ್ಲಿ ಒಂದು ನೆಗೆಟಿವ್ ಮತ್ತು ಇನ್ನೊಂದು ಪಾಸಿಟಿವ್ ಎಂದು ಬಂದಿದೆ. ನಾನು ಎಲ್ಲರಿಗೂ ಮನವಿ ಮಾಡುತ್ತೇನೆ ನನ್ನ ಕೊರೊನಾ ವರದಿಯ ಬಗ್ಗೆ ಯಾವುದೇ ವದಂತಿಗಳನ್ನು ಹರಡಬೇಡಿ ಎಂದಿದ್ದಾರೆ.
— Wriddhiman Saha (@Wriddhipops) May 14, 2021
ಮೇ 4 ರಂದು ಪಾಸಿಟಿವ್
ಮೇ 4 ರಂದು ಹೈದರಾಬಾದ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಮೊದಲು ಸಹಾ ಕೊರೊನಾ ಪಾಸಿಟಿವ್ ಆಗಿದ್ದರು. ಐಪಿಎಲ್ 2021 ಅನ್ನು ಅದೇ ದಿನ ಮುಂದೂಡಲಾಯಿತು. ಎರಡನೇ ವರದಿಯ ಪಲಿತಾಂಶ ನೆಗೆಟಿವ್ ಬರದ ಕಾರಣ, ಸಹಾ ದೆಹಲಿಯಲ್ಲಿ ಕ್ವಾರಂಟೈನ್ ಅನ್ನು ಮುಂದುವರಿಸಬೇಕಾಗುತ್ತದೆ ಮತ್ತು ಪರೀಕ್ಷೆಯ ಫಲಿತಾಂಶವು ನೆಗೆಟಿವ್ ಆದಾಗ ಮಾತ್ರ ವೈದ್ಯರು ಅವರನ್ನು ಕ್ವಾರಂಟೈನ್ನಿಂದ ಬಿಡುಗಡೆ ಮಾಡುತ್ತಾರೆ.
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ತಂಡ ಆಯ್ಕೆ
ಸಹಾ ಶೀಘ್ರವಾಗಿ ಚೇತರಿಸಿಕೊಳ್ಳುತ್ತಾನೆ ಎಂದು ಟೀಮ್ ಇಂಡಿಯಾ ಕೂಡ ಭರವಸೆ ಹೊಂದಿದೆ. ಇತ್ತೀಚೆಗೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ಗಾಗಿ ಬಿಸಿಸಿಐ ಆಯ್ಕೆ ಮಾಡಿದ ತಂಡದಲ್ಲಿ ಸಹಾ ಕೂಡ ಇದ್ದಾರೆ. ಆದರೆ ಕೊರೊನಾ ಆಗಿರುವುದರಿಂದ ಈಗ ಅವರ ಫಿಟ್‌ನೆಸ್‌ನ ಆಧಾರದ ಮೇಲೆ ಮಾತ್ರ ತಂಡದಲ್ಲಿ ಸ್ಥಾನ ಪಡೆಯುವುದನ್ನು ಖಚಿತಪಡಿಸಲಾಗುತ್ತದೆ. ತಂಡವನ್ನು ಘೋಷಿಸುವಾಗ, ಬಿಸಿಸಿಐ ಸಹಾ ಬಗ್ಗೆ ಇಂಗ್ಲೆಂಡ್‌ಗೆ ತೆರಳುವುದು ಅವರ ಫಿಟ್‌ನೆಸ್‌ನ ಮೇಲೆ ಅವಲಂಬಿತವಾಗಿರುತ್ತದೆ ಎಂದು ಹೇಳಿತ್ತು.
ಇದನ್ನೂ ಓದಿ:
ನನಗೆ ಮಾನಸಿಕ ಹಿಂಸೆ ನೀಡುತ್ತಿದ್ದರು! ಪಾಕ್ ಕ್ರಿಕೆಟಿಗನ ಆರೋಪ; ಐಪಿಎಲ್ನಲ್ಲಿ ಆಡುವ ಅವಕಾಶ?