WTC Final 2021 Live Streaming:​ ಪಂದ್ಯದ ನೇರ ಪ್ರಸಾರ, ಸ್ಥಳ, ಆರಂಭವಾಗುವ ಸಮಯ, ಸಂಪೂರ್ಣ ವಿವರ ಇಲ್ಲಿದೆ

| Updated By: Skanda

Updated on: Jun 18, 2021 | 8:52 AM

WTC Final 2021 Live Streaming:​ ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಡಬ್ಲ್ಯುಟಿಸಿ ಫೈನಲ್ ಪಂದ್ಯವು ಭಾರತದ ಸಮಯ ಮಧ್ಯಾಹ್ನ 3:00 ಗಂಟೆಗೆ (ಅಲ್ಲಿನ ಕಾಲಮಾನ ಬೆಳಿಗ್ಗೆ 11ಗಂಟೆ) ಪ್ರಾರಂಭವಾಗಲಿದೆ.

WTC Final 2021 Live Streaming:​ ಪಂದ್ಯದ ನೇರ ಪ್ರಸಾರ, ಸ್ಥಳ, ಆರಂಭವಾಗುವ ಸಮಯ, ಸಂಪೂರ್ಣ ವಿವರ ಇಲ್ಲಿದೆ
ಜೂನ್ 18 ರಂದು ನ್ಯೂಜಿಲೆಂಡ್ ವಿರುದ್ಧ ಭಾರತ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಆಡಲಿದೆ.
Follow us on

ಇತ್ತೀಚಿನ ಐಸಿಸಿ ಟೆಸ್ಟ್ ತಂಡದ ಶ್ರೇಯಾಂಕದಲ್ಲಿ ಭಾರತ ಎರಡನೇ ಸ್ಥಾನದಲ್ಲಿರಬಹುದು, ಆದರೆ ವಿರಾಟ್ ಕೊಹ್ಲಿ ನೇತೃತ್ವದಲ್ಲಿ ಕಳೆದ ಎರಡು ವರ್ಷಗಳಲ್ಲಿ ಭಾರತೀಯ ಕ್ರಿಕೆಟ್ ಕೈಗೊಂಡ ದೈತ್ಯ ದಾಪುಗಾಲುಗಳನ್ನು ಇದು ಇನ್ನೂ ನಿಖರವಾಗಿ ಬಿಂಬಿಸುವುದಿಲ್ಲ. ಮತ್ತು, ಶುಕ್ರವಾರ ಅಗ್ರ ಶ್ರೇಯಾಂಕಿತ ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್‌ಗೆ ಕಾಲಿಡುತ್ತಿರುವ ಕೊಹ್ಲಿ ತಂಡವು ಸೌತಾಂಪ್ಟನ್‌ನಲ್ಲಿ ಡಬ್ಲ್ಯುಟಿಸಿಯ ಉದ್ಘಾಟನಾ ಆವೃತ್ತಿಯನ್ನು ಗೆಲ್ಲುವ ವಿಶ್ವಾಸ ಹೊಂದಿದೆ.

ಕಳೆದ ಟೆಸ್ಟ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ 1-0 ಅಂತರದಿಂದ ಜಯಗಳಿಸಿದ ನಂತರ ಕಿವೀಸ್ ತಂಡ ಶ್ರೇಯಾಂಕದ ಅಗ್ರಸ್ಥಾನಕ್ಕೆ ಏರಿತು. ಆದರೆ, ಜೂನ್ 18 ರಂದು ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಟಾಸ್‌ಗೆ ಹೊರಟಾಗ, ಅವೆಲ್ಲವೂ ಮರೆತುಹೋಗುತ್ತದೆ. ಕೊಹ್ಲಿ ನೇತೃತ್ವದ ಭಾರತೀಯ ತಂಡವು ತಾವು ಗೆಲ್ಲಲು ಕೊನೆವರೆಗೂ ಹೋರಾಡುವುದನ್ನು ಪದೇ ಪದೇ ಪ್ರದರ್ಶಿಸಿದೆ, ಸೋಲಿನ ದವಡೆಯಿಂದ ವಿಜಯವನ್ನು ಅನೇಕಬಾರಿ ಕಸಿದುಕೊಂಡಿದೆ.

ಭಾರತ ಮತ್ತು ನ್ಯೂಜಿಲೆಂಡ್ ಡಬ್ಲ್ಯೂಟಿಸಿ ಲೈವ್ ಟೆಲಿಕಾಸ್ಟ್, ಸ್ಟ್ರೀಮಿಂಗ್ ಮತ್ತು ಲೈವ್ ಟಾಸ್ ಸಮಯಗಳ ಬಗ್ಗೆ ಇಲ್ಲಿದೆ ವಿವರ

ಭಾರತ ಮತ್ತು ನ್ಯೂಜಿಲೆಂಡ್ ಡಬ್ಲ್ಯೂಟಿಸಿ ಫೈನಲ್ ಯಾವಾಗ ನಡೆಯಲಿದೆ?
ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಡಬ್ಲ್ಯುಟಿಸಿ ಫೈನಲ್ ಜೂನ್ 18 ರಿಂದ ಪ್ರಾರಂಭವಾಗಲಿದೆ.

ಡಬ್ಲ್ಯೂಟಿಸಿ ಫೈನಲ್ ಎಲ್ಲಿ ನಡೆಯಲಿದೆ?
ಐಸಿಸಿ ಡಬ್ಲ್ಯೂಟಿಸಿ ಫೈನಲ್‌ಗೆ ಸೌತಾಂಪ್ಟನ್‌ನ ದಿ ಏಗಾಸ್ ಬೌಲ್ ಸಿದ್ದವಾಗಿದೆ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಟೆಸ್ಟ್ ಪಂದ್ಯದ ಆರಂಭದ ಸಮಯ?
ಭಾರತ ಮತ್ತು ನ್ಯೂಜಿಲೆಂಡ್‌ ನಡುವಿನ ಡಬ್ಲ್ಯುಟಿಸಿ ಫೈನಲ್ ಪಂದ್ಯವು ಭಾರತದ ಸಮಯ ಮಧ್ಯಾಹ್ನ 3:00 ಗಂಟೆಗೆ (ಅಲ್ಲಿನ ಕಾಲಮಾನ ಬೆಳಿಗ್ಗೆ 11ಗಂಟೆ) ಪ್ರಾರಂಭವಾಗಲಿದೆ.

ಯಾವ ಟಿವಿ ಚಾನೆಲ್‌ಗಳು ಭಾರತದಲ್ಲಿ ಡಬ್ಲ್ಯೂಟಿಸಿ ಫೈನಲ್ ಅನ್ನು ನೇರ ಪ್ರಸಾರ ಮಾಡುತ್ತವೆ?
ಇಂಡಿಯಾ ವರ್ಸಸ್ ನ್ಯೂಜಿಲೆಂಡ್ ಡಬ್ಲ್ಯೂಟಿಸಿ ಫೈನಲ್ ಅನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್ನಲ್ಲಿ ನೇರ ಪ್ರಸಾರ ಮಾಡಲಾಗುವುದು. ಸ್ಟಾರ್ ಸ್ಪೋರ್ಟ್ಸ್ 1 ಎಚ್‌ಡಿ / ಎಸ್‌ಡಿ ಇಂಗ್ಲಿಷ್ ವ್ಯಾಖ್ಯಾನದೊಂದಿಗೆ ಪಂದ್ಯಗಳನ್ನು ನೇರ ಪ್ರಸಾರ ಮಾಡುತ್ತದೆ.

ಭಾರತದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ಡಬ್ಲ್ಯೂಟಿಸಿ ಫೈನಲ್ ಅನ್ನು ಹೇಗೆ ಲೈವ್ ಸ್ಟ್ರೀಮ್ ನೋಡಬಹುದು?
ಡಿಸ್ನಿ + ಹಾಟ್‌ಸ್ಟಾರ್ ವಿಐಪಿಯಲ್ಲಿ ಅಂತಿಮ ಟೆಸ್ಟ್ ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ನೀವು ವೀಕ್ಷಿಸಬಹುದು.

ಇದನ್ನೂ ಓದಿ:
WTC Final: ಡಬ್ಲ್ಯೂಟಿಸಿ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಪ್ರಕಟ! ಆಡುವ 11 ಆಟಗಾರರ ಪಟ್ಟಿ ಹೀಗಿದೆ