WTC Final Weather Update: 4ನೇ ದಿನದಾಟಕ್ಕೆ ವರುಣನ ಅಡ್ಡಿ! ಒಂದು ಬಾಲ್ ಆಡುವುದು ಕಷ್ಟವಾಗಿದೆ ಎಂದ ದಿನೇಶ್ ಕಾರ್ತಿಕ್

|

Updated on: Jun 21, 2021 | 2:40 PM

WTC Final Weather Update: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಟ್ವಿಟ್ಟರ್ ಖಾತೆಯಲ್ಲಿ ಮೈದಾನದ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದೆ. ಈ ಚಿತ್ರಗಳಲ್ಲೂ ಸಹ ಮಳೆ ಕಾಟ ಕೊಡುತ್ತಿರುವುದು ಕಂಡು ಬರುತ್ತದೆ.

WTC Final Weather Update: 4ನೇ ದಿನದಾಟಕ್ಕೆ ವರುಣನ ಅಡ್ಡಿ! ಒಂದು ಬಾಲ್ ಆಡುವುದು ಕಷ್ಟವಾಗಿದೆ ಎಂದ ದಿನೇಶ್ ಕಾರ್ತಿಕ್
4ನೇ ದಿನದಾಟಕ್ಕೆ ವರುಣನ ಅಡ್ಡಿ
Follow us on

ಇಂಗ್ಲೆಂಡ್‌ನ ಸೌತಾಂಪ್ಟನ್‌ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಹವಾಮಾನ ಅಡೆತಡೆಗಳಾದ ಮಳೆ ಮತ್ತು ಕಡಿಮೆ ಸೂರ್ಯನ ಬೆಳಕು ಮೊದಲ ದಿನದಿಂದಲೂ ಸಮಸ್ಯೆಯಾಗಿದೆ. ಮೊದಲ ದಿನ ಇಡೀ ಆಟವು ಮಳೆಯಿಂದಾಗಿ ರದ್ದಾಯಿತು. ಅಂತಿಮವಾಗಿ ಅಂಪೈರ್‌ಗಳು ಎರಡನೇ ದಿನದಲ್ಲಿ ಅನೇಕ ಹಿನ್ನಡೆಗಳ ನಂತರ ಕಳಪೆ ಬೆಳಕಿನಿಂದಾಗಿ 64.4 ಓವರ್‌ಗಳ ನಂತರ ಆಟವನ್ನು ನಿಲ್ಲಿಸಲು ನಿರ್ಧರಿಸಿದರು. ಮೂರು ವಿಕೆಟ್‌ಗಳ ನಷ್ಟಕ್ಕೆ ಭಾರತ ತಂಡ 146 ರನ್ ಗಳಿಸಿತ್ತು. ಮೂರನೇ ದಿನ, ಸೋಮವಾರ, ಇಡೀ ಇನ್ನಿಂಗ್ಸ್ ಅನ್ನು 92.1 ಓವರ್‌ಗಳಿಗೆ ಇಳಿಸಿದ ನಂತರ, ನ್ಯೂಜಿಲೆಂಡ್ 49 ಓವರ್‌ಗಳನ್ನು ಆಡಲು ಸಾಧ್ಯವಾಯಿತು. ನ್ಯೂಜಿಲೆಂಡ್ 116 ರನ್‌ಗಳ ಹಿನ್ನಡೆಯಲ್ಲಿದ್ದರೂ, ಇಂದು ಕೇವಲ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿರುವುದು ಪಂದ್ಯಕ್ಕೆ ನಿರ್ಣಾಯಕವಾಗಿದೆ. ಆದರೆ ಸೌತಾಂಪ್ಟನ್‌ನಲ್ಲಿನ ಹವಾಮಾನದ ಇತ್ತೀಚಿನ ಫೋಟೋವೊಂದು ಇಂದಿನ ಪಂದ್ಯದಲ್ಲೂ ಮಳೆ ಬಿಕ್ಕಟ್ಟು ಹೆಚ್ಚುತ್ತಿದೆ ಎಂದು ಬಹಿರಂಗಪಡಿಸಿದೆ.

ದಿನೇಶ್ ಮಾಹಿತಿ
ಎರಡನೇ ದಿನದ ಆಟ ಪ್ರಾರಂಭವಾಗುವ ಮೊದಲು, ಹವಾಮಾನ ಪರಿಸ್ಥಿತಿಗಳನ್ನು ಭಾರತೀಯ ಕ್ರಿಕೆಟಿಗ ದಿನೇಶ್ ಕಾರ್ತಿಕ್ ನೀಡಿದ್ದಾರೆ. ಅವರು ಪ್ರಸ್ತುತ ಇಂಗ್ಲೆಂಡ್‌ನಲ್ಲಿ ಕಾಮೆಂಟೆಟರ್​ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ದಿನೇಶ್ ಅವರು ಮೈದಾನದ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದ್ದು, ಸೂರ್ಯ ಉದಯಿಸಿದ್ದಾನೆ ಮತ್ತು ಇಂದಿನ ಆಟ ನಡೆಯಲಿದೆ ಎಂದು ಹೇಳಿದರು. ಆದರೆ ಇದೀಗ ದಿನೇಶ್ ಅವರು ಮೈದಾನದ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ ಮತ್ತು ಹವಾಮಾನ ಅಷ್ಟು ಸೂಕ್ತವಾಗಿಲ್ಲ ಎಂದು ಶೀರ್ಷಿಕೆ ನೀಡಿದ್ದಾರೆ.

ಬಿಸಿಸಿಐ ಕೂಡ ಫೋಟೋಗಳನ್ನು ಹಂಚಿಕೊಂಡಿದೆ
ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಟ್ವಿಟ್ಟರ್ ಖಾತೆಯಲ್ಲಿ ಮೈದಾನದ ಇತ್ತೀಚಿನ ಫೋಟೋಗಳನ್ನು ಹಂಚಿಕೊಂಡಿದೆ. ಈ ಚಿತ್ರಗಳಲ್ಲೂ ಸಹ ಮಳೆ ಕಾಟ ಕೊಡುತ್ತಿರುವುದು ಕಂಡು ಬರುತ್ತದೆ.

ಪಂದ್ಯದ ಮಾಹಿತಿ
ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ (ಡಬ್ಲ್ಯುಟಿಸಿ ಫೈನಲ್ 2021) ನ್ಯೂಜಿಲೆಂಡ್ ಬಲವಾದ ಹಿಡಿತವನ್ನು ಹೊಂದಿದೆ. ಪಂದ್ಯದ ಮೂರನೇ ದಿನದಲ್ಲಿ ಕಿವಿ ಆಟಗಾರರು ಸಂಪೂರ್ಣವಾಗಿ ಪ್ರಾಬಲ್ಯ ಹೊಂದಿದ್ದರು. ಇದಕ್ಕೂ ಮುನ್ನ ನ್ಯೂಜಿಲೆಂಡ್ ಬೌಲರ್‌ಗಳು ಭಾರತವನ್ನು 217 ರನ್‌ಗಳಿಗೆ ಆಲೌಟ್ ಮಾಡಿದರು. ಅದರ ನಂತರ, ಬ್ಯಾಟ್ಸ್‌ಮನ್‌ಗಳು ಭಾರತೀಯ ಬೌಲರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು. ಮೂರನೇ ದಿನದ ಅಂತ್ಯದ ವೇಳೆಗೆ ನ್ಯೂಜಿಲೆಂಡ್ ಎರಡು ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿತ್ತು. ಭಾರತ ಪ್ರಸ್ತುತ 116 ರನ್‌ಗಳ ಮುನ್ನಡೆ ಹೊಂದಿದೆ. ಆದರೆ ಭಾರತ 49 ಓವರ್‌ಗಳಲ್ಲಿ ಕೇವಲ ಎರಡು ವಿಕೆಟ್‌ಗಳನ್ನು ಕಬಳಿಸಿದೆ. ಹೀಗಾಗಿ ನ್ಯೂಜಿಲೆಂಡ್ ಪ್ರಸ್ತುತ ಪಂದ್ಯದಲ್ಲಿ ಮುನ್ನಡೆ ಸಾಧಿಸಿದೆ.