WTC Final: ಡಬ್ಲ್ಯೂಟಿಸಿ ಫೈನಲ್ನಲ್ಲಿ ರಿಷಭ್ 4 ರನ್ಗಳಿಗೆ ಔಟ್! ಸಖತ್ ಟ್ರೋಲ್ ಆಗ್ತಿದ್ದಾನೆ ಧೋನಿಯ ಉತ್ತರಾಧಿಕಾರಿ
WTC Final: ಪ್ರತಿ ಐಸಿಸಿ ಈವೇಂಟ್ನಲ್ಲೂ ಪಂತ್ ಹೀಗೆ ನಿರಾಸೆ ಮೂಡಿಸುತ್ತಿದ್ದಾರೆ ಎಂದು ಡಿಸೈನ್ ಡಿಸೈನ್ ಆಗಿ ಟ್ರೋಲ್ ಮಾಡುತ್ತಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ 3ನೇ ದಿನದಾಟದಲ್ಲಿ ಟೀಮ್ ಇಂಡಿಯಾ ಕೇವಲ 217 ರನ್ಗಳಿಗೆ ಆಲೌಟ್ ಆಗಿದೆ. ಇದಕ್ಕೆ ಪ್ರತಿಯಾಗಿ ಮೊದಲ ಇನಿಂಗ್ಸ್ ಆರಂಭಿಸಿರುವ ಕಿವೀಸ್, 2 ವಿಕೆಟ್ ನಷ್ಟಕ್ಕೆ 101 ರನ್ಗಳಿಸಿದೆ. ಆದ್ರೆ ಕೊಹ್ಲಿ ಪಡೆಯ ಬ್ಯಾಟಿಂಗ್ ವೈಫಲ್ಯದಲ್ಲಿ ಪರಾಕ್ರಮ ತೋರಿಸಿಬೇಕಿದ್ದ ಪಂತ್, ಬೇಗನೇ ಔಟಾಗಿ ಟ್ರೋಲ್ ಆಗ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ಉತ್ತರಾಧಿಕಾರಿ… ಧೋನಿ ಅಪರಾವತಾರ.. ಭಾರತೀಯ ಕ್ರಿಕೆಟ್ನಲ್ಲಿ ದುರ್ಬೀನು ಹಾಕಿ ಹುಡುಕಿದ್ರೂ, ಈತನಂತ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ ಸಿಗೋದಿಲ್ಲ. ಒಂದಾ ಎರಡಾ.. ರಿಷಬ್ ಪಂತ್ ವಿಚಾರದಲ್ಲಿ ಹಾಡಿ ಹೊಗಳಿದ್ದು. ಆದ್ರೆ ವಿಶ್ವ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲೇ ನಿರಾಸೆ ಮೂಡಿಸಿದ್ದಾರೆ.
ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ರಿಷಭ್ ಪಂತ್ ಕಲೆ ಹಾಕಿದ್ದು, ಕೇವಲ 4 ರನ್ಗಳನ್ನ. ಕೈಲ್ ಜೆಮಿಸನ್ ಎಸೆದ ಔಟ್ ಸೈಡ್ ಆಫ್ ಸ್ಟಂಪ್ ಎಸೆತವನ್ನ ಸುಖಾ ಸುಮ್ಮನೆ ಕೆಣಕಿದ ಪಂತ್, ಈಸೀಯಾಗಿ ವಿಕೆಟ್ ಒಪ್ಪಿಸಿದ್ರು.
ಟೆಸ್ಟ್ ಕ್ರಿಕೆಟ್ಗೆ ಬೇಕಾಗಿದ್ದಿದ್ದು ತಾಳ್ಮೆ.. ಆದ್ರೆ 22 ಬಾಲ್ಗಳಲ್ಲಿ ನಾಲ್ಕು ರನ್ ಕೆಲಹಾಕುವಷ್ಟರಲ್ಲೇ ಪಂತ್, ಸುಲಭವಾಗಿ ವಿಕೆಟ್ ಒಪ್ಪಿಸಿದ್ರು. ಹೀಗೆ ಬೇಜಾವಬ್ದಾರಿಯಿಂದ ವಿಕೆಟ್ ಒಪ್ಪಿಸಿದ ಪಂತ್ನನ್ನ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡುತ್ತಿದ್ದಾರೆ. ಸ್ವತಃ ಟೆಸ್ಟ್ ಸ್ಪೆಷಲಿಸ್ಟ್ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್, ಪಂತ್ ವಿಚಾರದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ..
ನೀವು ತಾಳ್ಮೆ, ಶಿಸ್ತು ತೋರಿಸಬೇಕು ರಿಷಭ್ ಪಂತ್ ಎದುರಿಸುವ ಸವಾಲಿನ ಬಗ್ಗೆ ನಮಗೆ ಗೊತ್ತಿತ್ತು. ಸ್ವಾಭಾವಿಕವಾಗಿ ಪಂತ್ ಆಕ್ರಮಣಕಾರಿ ಬ್ಯಾಟ್ಸ್ಮನ್. ಈ ರೀತಿಯ ಪಿಚ್ನಲ್ಲಿ ನೀವು ಆಕ್ರಮಣಶೀಲತೆಯೊಂದಿಗೆ ಎಚ್ಚರಿಕೆಯನ್ನ ಸೇರಿಸಿ ಆಡಬೇಕು. ನೀವು ಬೌಲರ್ಗಳನ್ನ ಯಾವ ಕ್ಷೇತ್ರದಲ್ಲಿ ಟಾರ್ಗೆಟ್ ಮಾಡಬೇಕು ಎಂಬುದನ್ನ ಮೊದಲು ಅರ್ಥೈಸಿಕೊಳ್ಳಬೇಕು. ನೀವು ತಾಳ್ಮೆ ಮತ್ತು ಶಿಸ್ತು ತೋರಿಸಬೇಕು. ವಿವಿಎಸ್ ಲಕ್ಷ್ಮಣ್, ಮಾಜಿ ಕ್ರಿಕೆಟಿಗ
ವಿವಿಎಸ್ ಅಷ್ಟೇ ಅಲ್ಲ.. ಇಂಗ್ಲೆಂಡ್ ತಂಡದ ಮಾಜಿ ನಾಯಕ ನಾಸಿರ್ ಹುಸೈನ್ ಕೂಡ, ಪಂತ್ ಔಟಾದ ರೀತಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಪಂತ್ನನ್ನ ಮುಂದಿನ ದಿನಗಳಲ್ಲಿ ನಾಯಕ ಕೊಹ್ಲಿ ಮತ್ತು ಟೀಮ್ ಮ್ಯಾನೇಜ್ಮೆಂಟ್ ಹೇಗೆ ನಿಭಾಯುಸುತ್ತೆ ಎನ್ನುವುದು ನಿರ್ಣಾಯಕವಾಗಿದೆ ಎಂದಿದ್ದಾರೆ.
ಇನ್ನು ಸೋಷಿಯಲ್ ಮೀಡಿಯಾದಲ್ಲಿ ಕ್ರಿಕೆಟ್ ಪ್ರೇಮಿಗಳು, ತರಹೇವಾರಿಯಾಗಿ ಕಾಲೆಳೆಯುತ್ತಿದ್ದಾರೆ. ಪ್ರತಿ ಐಸಿಸಿ ಈವೇಂಟ್ನಲ್ಲೂ ಪಂತ್ ಹೀಗೆ ನಿರಾಸೆ ಮೂಡಿಸುತ್ತಿದ್ದಾರೆ ಎಂದು ಡಿಸೈನ್ ಡಿಸೈನ್ ಆಗಿ ಟ್ರೋಲ್ ಮಾಡುತ್ತಿದ್ದಾರೆ. ಇನ್ನು ಕೆಲವರು ಪಂತ್, ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಆದ್ರೆ ಪಂತ್, ಜೆಮಿಸನ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದ ರೀತಿ ಮಾತ್ರ, ತುಂಬಾನೇ ಸಿಲ್ಲಿಯಾಗಿತ್ತು ಅನ್ನೋದನ್ನ ಯಾರೂ ಅಲ್ಲಗೆಳೆಯೋದಿಲ್ಲ.
Series of Event :Spiderman Came. Spiderman Goes#RishabhPant#INDvNZ #WTC2021 pic.twitter.com/re8RuaeQOH
— T? (@Its_tanvi_) June 20, 2021
Rishabh pant scored 4 runs in 22 balls
Meanwhile wriddhiman Saha :-#WTCFinal #INDvNZ pic.twitter.com/AyYi4TjHx4
— Sense-कारी (@gupta96_) June 20, 2021
First Virat Kohli gets out & Now, Rishabh Pant.
Le Virat Kohli: #INDvNZ | #WTCFinal21 pic.twitter.com/uhUwlwEN5y
— UrMiL07™ (@urmilpatel30) June 20, 2021