ಪ್ರಪಂಚದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಈ ಸಮಯದಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಆದರೆ ಅವರ ಸಂಭ್ರಮಕ್ಕೆ ಈಗ ಆಘಾತವೊಂದು ಎದುರಾಗಿದೆ. ಏಕೆಂದರೆ ಒಂದು ಕಡೆ ಟೆಸ್ಟ್ ಕ್ರಿಕೆಟ್‌ನ ಅತಿದೊಡ್ಡ ಪಂದ್ಯ ಪ್ರಾರಂಭವಾಗಲು ಕೆಲವೇ ಗಂಟೆಗಳು ಉಳಿದಿವೆ. ಮತ್ತೊಂದೆಡೆ ಮಳೆಯ ಆತಂಕ, ಭಾರತ ಮತ್ತು ನ್ಯೂಜಿಲೆಂಡ್‌ನ ಆಟಗಾರರು ಸೇರಿದಂತೆ ಅಭಿಮಾನಿಗಳ ಖುಷಿಗೆ ತಣ್ಣಿರೆರುಚುತ್ತಿದೆ. ಜೂನ್ 18 ರಿಂದ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇನ್ನೇನೂ ಆರಂಭವಾಗಬೇಕು. ಪಂದ್ಯ ಆರಂಭವಾಗುವ ಮೊದಲೇ ಮಳೆ ಖಳನಾಯಕನಾಗುತ್ತಿದೆ. ಫೈನಲ್‌ಗೆ ಒಂದು ದಿನ ಮೊದಲು ಅಂದರೆ ಜೂನ್ 17 ರಂದು ಸೌತಾಂಪ್ಟನ್‌ನಲ್ಲಿ ಭಾರಿ ಮಳೆಯಾಯಿತು. ಅಲ್ಲದೆ ಇಂದು ಕೂಡ ಮಳೆಯಾಗುತ್ತಿರುವುದರಿಂದ ಟಾಸ್ ಪ್ರಕ್ರಿಯೆ ಕೊಂಚ ತಡವಾಗಿ ಆರಂಭವಾಗಲಿದೆ.
ನಾಲ್ಕು ದಿನಗಳವರೆಗೆ ಮಳೆಯಾಗುವ ಸಾಧ್ಯತೆ
ವಾಸ್ತವವಾಗಿ, ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಈ ಪಂದ್ಯವು ಜೂನ್ 18 ರಿಂದ ಪ್ರಾರಂಭವಾಗಿ ಜೂನ್ 22 ರವರೆಗೆ ನಡೆಯುತ್ತದೆ. ಆದರೆ ಸಮಸ್ಯೆಯೆಂದರೆ ಈ ಐದು ದಿನಗಳಲ್ಲಿ ಹವಾಮಾನ ಇಲಾಖೆ ನಾಲ್ಕು ದಿನಗಳವರೆಗೆ ಮಳೆಯಾಗುವ ಸಾಧ್ಯತೆಯನ್ನು ವ್ಯಕ್ತಪಡಿಸಿದೆ. ಒಂದು ಅಥವಾ ಎರಡು ದಿನ ಬಿರುಗಾಳಿ ಬೀಸುವ ಮುನ್ಸೂಚನೆಯೂ ಇದೆ ಎಂಬ ಆತಂಕವೂ ಇದೆ. ಹವಾಮಾನ ಇಲಾಖೆಯ ಪ್ರಕಾರ, ಪಂದ್ಯದ ನಾಲ್ಕನೇ ದಿನವಾದ ಜೂನ್ 21 ರಂದು ಹೊರತುಪಡಿಸಿ, ಉಳಿದ ಎಲ್ಲಾ ದಿನಗಳಲ್ಲಿ ಮಳೆ ಬೀಳಲಿದೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಇತ್ತೀಚಿನ ಟೆಸ್ಟ್ ಸರಣಿಯು ಮಳೆಯಿಂದ ಪ್ರಭಾವಿತವಾಗಿದೆ ಎಂದು ನಾವು ಈಗಾಗಲೇ ನೋಡಿದ್ದೇವೆ, ಈ ಕಾರಣದಿಂದಾಗಿ ಮೊದಲ ಪಂದ್ಯವು ಡ್ರಾದಲ್ಲಿ ಕೊನೆಗೊಂಡಿತು.
ಮೊದಲ ದಿನ 90 ಓವರ್ ಆಡುವುದು ಕಷ್ಟ
ಈಗ ಸೌತಾಂಪ್ಟನ್‌ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಮಳೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಇದರಿಂದ ಅಭಿಮಾನಿಗಳು ಆಘಾತಕ್ಕೊಳಗಾಗುವುದು ಖಚಿತ. ಆದರೆ ಇಂಗ್ಲೆಂಡ್‌ನಲ್ಲಿನ ಮಳೆ ತನ್ನದೇ ಆದ ಶೈಲಿಯನ್ನು ಹೊಂದಿದೆ. ಮಳೆ ಪ್ರಾರಂಭವಾಗಲು ಮತ್ತು ನಿಲ್ಲಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಮೊದಲ ದಿನದ ಮಳೆಯ ಮುನ್ಸೂಚನೆಯ ಪ್ರಕಾರ, ಪಂದ್ಯವು ಎರಡು ಮೂರು ಗಂಟೆಗಳವರೆಗೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ. ಇದರರ್ಥ ಮೊದಲ ದಿನ 90 ಓವರ್ ಬದಲು, ಅಭಿಮಾನಿಗಳು ಕೇವಲ 60 ರಿಂದ 70 ಓವರ್‌ಗಳನ್ನು ಮಾತ್ರ ನೋಡಬಹುದು. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಮೊದಲ ಪಂದ್ಯದಲ್ಲಿ ಎಷ್ಟು ಸಮಯ ಆಡಲಾಗುತ್ತದೆ ಎಂಬ ಪ್ರಶ್ನೆಗೆ ಈಗ ಎಲ್ಲರಿಗೂ ಉತ್ತರ ಸಿಕ್ಕಿದೆ. ಆದರೆ ದೊಡ್ಡ ಪ್ರಶ್ನೆಯೆಂದರೆ ಭಾರತ ಮತ್ತು ನ್ಯೂಜಿಲೆಂಡ್ ನಡುವೆ, ಯಾವ ತಂಡವು ಈ ಟ್ರೋಫಿಯನ್ನು ಎತ್ತಿಹಿಡಿಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
Published On - 2:47 pm, Fri, 18 June 21