WTC Final: ಚಳಿ ತಡೆಯಲಾಗದೆ ಟವಲ್ ಮೊರೆ ಹೋದ ಶಮಿ! ನೆಟ್ಟಿಗರ ಮೀಮ್ಸ್ಗೆ ಆಹಾರವಾದ ಸ್ವಿಂಗ್ ಮಾಸ್ಟರ್
WTC Final: ಬೌಲಿಂಗ್ನಲ್ಲಿ ಮಿಂಚು ಹರಿಸುತ್ತಿದ್ದ ಶಮಿ ಕೂಡ ಚಳಿ ತಡೆಯಲಾಗದೆ ಮೈದಾನದಲ್ಲೇ ನಡುಗಲು ಆರಂಭಿಸಿದರು. ಇದೂ ಸಾಲದೆಂಬಂತೆ ಶಮಿ ಟವಲ್ ತರಿಸಿಕೊಂಡು ಫೀಲ್ಡಿಂಗ್ ಮಾಡುವ ವೇಳೆ ತಮ್ಮ ದೇಹದ ಸುತ್ತ ಟವಲ್ ಸುತ್ತಿಕೊಂಡರು.
ಸೌತಾಂಪ್ಟನ್‌ನ ಹ್ಯಾಂಪ್‌ಶೈರ್ ಬೌಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಎರಡೂ ತಂಡಗಳ ಬೌಲಿಂಗ್ ವಿಭಾಗದಿಂದ ಕೆಲವು ಉತ್ತಮ ಪ್ರದರ್ಶನಗಳು ಬಂದಿವೆ. ಅದರಲ್ಲಿ ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ ತಮ್ಮ ಸ್ವಿಂಗ್ ಬೌಲಿಂಗ್ನಿಂದ ಕಿವೀಸ್ ಬ್ಯಾಟ್ಸ್ಮನ್ಗಳನ್ನು ಪೆವಿಲಿಯನ್ಗಟ ಅಟ್ಟುವುದರಲ್ಲಿ ಯಶಸ್ವಿಯಾದರು. ಶಮಿ ನಾಲ್ಕು ವಿಕೆಟ್ ಪಡೆಯುವುದರ ಜೊತೆಗೆ ನ್ಯೂಜಿಲೆಂಡ್ ದೊಡ್ಡ ಸ್ಕೋರ್ ಮಾಡುವುದನ್ನು ತಡೆದರು. ಈ ಸಮಯದಲ್ಲಿ ಅವರು ಭಾರತದ ಕಡೆಯಿಂದ ಅದ್ಭುತ ಸಾಧನೆ ಮಾಡಿದರು. ಐಸಿಸಿ ಪಂದ್ಯಾವಳಿಯ ಫೈನಲ್‌ನಲ್ಲಿ ನಾಲ್ಕು ವಿಕೆಟ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈಗ ಅವರು ಐಸಿಸಿ ಫೈನಲ್‌ನಲ್ಲಿ ಭಾರತಕ್ಕೆ ಹೆಚ್ಚು ವಿಕೆಟ್ ಪಡೆದ ದಾಖಲೆ ಹೊಂದಿದ್ದಾರೆ. ಇದರ ಜೊತೆಗೆ ಶಮಿ ನಿನ್ನೆ ಮೈದಾನದಲ್ಲಿ ಮಾಡಿದ ಒಂದು ಕೆಲಸದಿಂದ ನೆಟ್ಟಿಗರ ಮೀಮ್ಸ್ಗಳಿಗೆ ಒಳ್ಳೇಯ ಆಹಾರವಾಗಿದ್ದಾರೆ.
ಶಮಿ ಟವಲ್ ಪ್ರಸಂಗ ಸೌತಾಂಪ್ಟನ್‌ನಲ್ಲಿ ಅಧಿಕ ಮಳೆಯಿಂದಾಗಿ ಹಾಗೂ ಚಳಿಯ ವಾತಾವರಣದಿಂದಾಗಿ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲೇ ನಡುಗಲು ಶುರುಮಾಡಿದ್ದರು. ನಾಯಕ ಕೊಹ್ಲಿ ಕೂಡ ಚಳಿ ತಡೆಯಲಾಗದೆ ಮೈದಾನದಲ್ಲೇ ಕುಣಿಯಲು ಆರಂಭಿಸಿದರು. ಜೊತೆಗೆ ಯುವ ಆಟಗಾರ ಗಿಲ್ ಕೂಟ ಪದೇ ಪದೇ ಕೈ ಬೆಚ್ಚಗೆ ಮಾಡಿಕೊಳ್ಳುತ್ತಿದ್ದರು. ಇವರೆಲ್ಲರ ಹೊರತಾಗಿ ಬೌಲಿಂಗ್ನಲ್ಲಿ ಮಿಂಚು ಹರಿಸುತ್ತಿದ್ದ ಶಮಿ ಕೂಡ ಚಳಿ ತಡೆಯಲಾಗದೆ ಮೈದಾನದಲ್ಲೇ ನಡುಗಲು ಆರಂಭಿಸಿದರು. ಇದೂ ಸಾಲದೆಂಬಂತೆ ಶಮಿ ಟವಲ್ ತರಿಸಿಕೊಂಡು ಫೀಲ್ಡಿಂಗ್ ಮಾಡುವ ವೇಳೆ ತಮ್ಮ ದೇಹದ ಸುತ್ತ ಟವಲ್ ಸುತ್ತಿಕೊಂಡರು. ಇದನ್ನು ಕಂಡ ನೆಟ್ಟಿಗರು ಶಮಿಯನ್ನು ತರಹೆವಾರಿ ಮೀಮ್ಗಳಿಂದ ಕಾಲೆಳೆಯುತ್ತಿದ್ದಾರೆ.
ಶಮಿ ಪ್ರದರ್ಶನ ಶಮಿ ಐದನೇ ದಿನದ ಮೊದಲ ಯಶಸ್ಸನ್ನು ಭಾರತಕ್ಕೆ ನೀಡಿದರು. ಅವರು ರಾಸ್ ಟೇಲರ್ (11) ಅವರನ್ನು ಬಲಿ ಪಡೆದರು. ನಂತರ ಇಶಾಂತ್ ಹೆನ್ರಿ ನಿಕೋಲ್ಸ್ (7) ಅವರನ್ನು ತಮ್ಮ ಬಲೆಗೆ ಬೀಳಿಸಿಕೊಂಡರು. ನಂತರ ಶಮಿ ಕೊನೆಯ ಟೆಸ್ಟ್ ಪಂದ್ಯವನ್ನಾಡುತ್ತಿರುವ ವಾಟ್ಲಿಂಗ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದರು. ಅಬ್ಬರದ ಬ್ಯಾಟಿಂಗ್ ಮಾಡುತ್ತಿದ್ದ ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (13) ಎಲ್‌ಬಿಡಬ್ಲ್ಯೂ ಬಲೆಗೆ ಬಿದ್ದರು. ಕೈಲ್ ಜಾಮಿಸನ್ (21) ಅವರನ್ನು ಆಕ್ರಮಣಕಾರಿ ಮನೋಭಾವದಿಂದ ಪೆವಿಲಿಯನ್‌ಗೆ ಕಳುಹಿಸಿದರು. ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ ನಂತರ ಮುಂದಿನ ಶಾರ್ಟ್ ಪಿಚ್ ಚೆಂಡನ್ನು ಬೌಂಡರಿಗೆ ಕಳುಹಿಸಲು ಜೇಮೀಸನ್ ಪ್ರಯತ್ನಿಸಿದರು ಆದರೆ ಜಸ್ಪ್ರೀತ್ ಬುಮ್ರಾ ಅದನ್ನು ಲಾಂಗ್ ಲೆಗ್ ನಲ್ಲಿ ಕ್ಯಾಚ್ ಆಗಿ ಪರಿವರ್ತಿಸಿದರು.
Who needs a cape when your superpowers can make do with a towel? ?#ICCWTCFinal #TheUltimateTest #INDvNZ #WTCFinal2021 #WTC21 #Shami pic.twitter.com/MEHq0Tt3sG
— Star Sports (@StarSportsIndia) June 22, 2021
*When someone offers 'Towel' on ground*
Other Players Shami pic.twitter.com/BGFfHRg86s
— Samyak Vohra (@sAmeone1901) June 22, 2021
Shami with Towel, Crossover you didn't expect ? #WTCFinal #INDvNZ pic.twitter.com/ONzlZrInzz
— Roshan Rai (@ItsRoshanRai) June 22, 2021
That towel around Shami's body… trying to keep his lower back warm? Heh. pic.twitter.com/BHEPR5Ar43
— Ashish Magotra (@clutchplay) June 22, 2021
Shami using a towel after getting BJ. #WTCFinal pic.twitter.com/YYgIV4j2n6
— Manya (@CSKian716) June 22, 2021
#Shami on fire ? #WTC21final
Towel Wale Wicket Le Jayenge ? pic.twitter.com/8Jw69ijhSL
— Roshan Agrawal (@CalmDevta) June 22, 2021