WTC Final | ಮೊಹಮ್ಮದ್ ಶಮಿ ಇಂಗ್ಲೆಂಡ್​ನಲ್ಲಿ ಬೌಲ್​ ಮಾಡುವಾಗ ಅದೃಷ್ಟಹೀನ ಎನ್ನುವುದನ್ನು ಅಂಕಿ-ಅಂಶಗಳು ಸಾಬೀತು ಮಾಡುತ್ತವೆ.

|

Updated on: Jun 21, 2021 | 5:15 PM

ಪಿಚ್​ ಕಂಡೀಶನ್ ಹೇಗಿದ್ದರೂ ಉತ್ತಮವಾಗಿ ಬೌಲ್​ ಮಾಡುವ ಮೊಹಮ್ಮದ್ ಶಮಿ, ರವಿವಾರವೂ ತಮ್ಮ ಖ್ಯಾತಿಗೆ ತಕ್ಕ ದಾಳಿ ನಡೆಸಿದರು. ಆದರೆ ಅದೃಷ್ಟ ಅವರಿಗೆ ಸಾತ್ ನೀಡಲಿಲ್ಲ. ಅವರ ಬೌಲಿಂಗ್​ನಲ್ಲಿ ಬ್ಯಾಟ್​ಗಳ ಅಂಚಿಗೆ ತಾಕಿದ ಬಾಲು ಕೆಲ ಸಲ ಫೀಲ್ಡರ್​ಗಳ ತಲೆ ಮೇಲಿಂದ ಹಾರಿದರೆ, ಒಂದೆರಡು ಸಲ ಫೀಲ್ಡರ್​ಗಳ ಮುಂದೆ ಗ್ರೌಂಡ್​ ಆಯಿತು.

WTC Final | ಮೊಹಮ್ಮದ್ ಶಮಿ ಇಂಗ್ಲೆಂಡ್​ನಲ್ಲಿ ಬೌಲ್​ ಮಾಡುವಾಗ ಅದೃಷ್ಟಹೀನ ಎನ್ನುವುದನ್ನು ಅಂಕಿ-ಅಂಶಗಳು ಸಾಬೀತು ಮಾಡುತ್ತವೆ.
ಮೊಹಮ್ಮದ್ ಶಮಿ
Follow us on

ಸೌತಾಂಪ್ಟನ್ ರೋಸ್​ ಬೋಲ್​ನಲ್ಲಿ ನಡೆಯುತ್ತಿರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಪೈನಲ್ ಪಂದ್ಯದಲ್ಲಿ ಮೂರು ದಿನಗಳ ಆಟ ಮುಗಿದಿದೆಯಾರೂ ಪಂದ್ಯ ಕೇವಲ ಕಾಲು ಭಾಗದಷ್ಟು ಆಟ ಮಾತ್ರ ಸಾಧ್ಯವಾಗಿದೆ, ಮಳೆರಾಯ ಈ ಪಂದ್ಯವನ್ನು ಬೆಂಬಿಡದೆ ಕಾಡುತ್ತಿದ್ದಾನೆ. ಪಂದ್ಯದ ನಾಲ್ಕನೇ ದಿನವಾಗಿರುವ ಸೋಮವಾರವೂ ಮಳೆ ಮತ್ತು ಮೈದಾನದ ಔಟ್​ಫೀಲ್ಟ್ ಒದ್ದೆಯಾಗಿರುವುದರಿಂದ ದಿನದಾಟದ ಆರಂಭ ವಿಳಂಬಗೊಂಡಿದೆ. ರವಿವಾರ ಅಂದರೆ ಪಂದ್ಯದ ಮೂರನೇ ದಿನ ಭಾರತ 217 ಮೊತ್ತಕ್ಕೆ ತನ್ನೆಲ್ಲ ವಿಕೆಟ್​ ಕಳೆದುಕೊಂಡ ಮೇಲೆ, ತನ್ನ ಇನ್ನಿಂಗ್ಸ್ ಆಂಭಿಸಿದ ನ್ಯೂಜಿಲೆಂಡ್​ ದಿನದಾಟದ ಅಂತ್ಯಕ್ಕೆ 2 ವಿಕೆಟ್​ ಕಳೆದುಕೊಂಡು 101 ರನ್ ಗಳಿಸಿತ್ತು. ಅದರರ್ಥ ಇಂಗ್ಲಿಷ್ ಕಂಡೀಷನ್​ಗಳಲ್ಲಿ ಟೀಮ್ ಇಂಡಿಯಾದ ಬೌಲರ್​ಗಳು ಕಿವೀಸ್ ಬೌಲರ್​ಗಳಷ್ಟು ಪರಿಣಾಮಕಾರಿಯಾಗಿ ಬೌಲ್ ಮಾಡಲಿಲ್ಲ. ಆರಂಭ ಆಟಗಾರ ಡೆವೊನ್ ಕಾನ್ವೇ ಅರ್ಧ ಶತಕ ಬಾರಿಸಿದ ನಂತರ ಮೂರನೇ ದಿನದಾಟದ ಕೊನೆಯ ಓವರ್​ನಲ್ಲಿ ಔಟಾಗಿರದಿದ್ದರೆ, ನ್ಯೂಜಿಲೆಂಡ್ ಸ್ಥಿತಿ ಮತ್ತಷ್ಟು ಇಂಪೋಸಿಂಗ್ ಅನಿಸುತಿತ್ತ್ತು. ಭಾರತದ ಬೌಲರ್​ಗಳು ಉತ್ತಮ ಏರಿಯಾಗಳಲ್ಲಿ ಬಾಲನ್ನು ಪಿಚ್​ ಮಾಡಿ ಎದುರಾಳಿ ಬ್ಯಾಟ್ಸ್​ಮನ್​ಗಳನ್ನು ತೊಂದರೆಗೆ ಸಿಲುಕಿಸುವಲ್ಲಿ ವಿಫಲರಾದರು ಎನ್ನುವುದರಲ್ಲಿ ಅನುಮಾನವಿಲ್ಲ.

ಅದರೆ ಗಮನಿಸಬೇಕಾದ ಅಂಶವೆಂದರೆ, ಪಿಚ್​ ಕಂಡೀಶನ್ ಹೇಗಿದ್ದರೂ ಉತ್ತಮವಾಗಿ ಬೌಲ್​ ಮಾಡುವ ಮೊಹಮ್ಮದ್ ಶಮಿ, ರವಿವಾರವೂ ತಮ್ಮ ಖ್ಯಾತಿಗೆ ತಕ್ಕ ದಾಳಿ ನಡೆಸಿದರು. ಆದರೆ ಅದೃಷ್ಟ ಅವರಿಗೆ ಸಾತ್ ನೀಡಲಿಲ್ಲ. ಅವರ ಬೌಲಿಂಗ್​ನಲ್ಲಿ ಬ್ಯಾಟ್​ಗಳ ಅಂಚಿಗೆ ತಾಕಿದ ಬಾಲು ಕೆಲ ಸಲ ಫೀಲ್ಡರ್​ಗಳ ತಲೆ ಮೇಲಿಂದ ಹಾರಿದರೆ, ಒಂದೆರಡು ಸಲ ಫೀಲ್ಡರ್​ಗಳ ಮುಂದೆ ಗ್ರೌಂಡ್​ ಆಯಿತು. ನಿನ್ನೆ ನ್ಯೂಜಿಲೆಂಡ್ ಕಳೆದುಕೊಂಡ 2 ವಿಕೆಟ್​ಗಳಲ್ಲಿ ಶಮಿಗೆ ಒಂದೂ ಸಿಗಲಿಲ್ಲವಾದರೂ ಭಾರತೀಯ ಬೌಲರ್​ಗಳ ಪೈಕಿ ಅವರೇ (11 ಓವರ್​ಗಳಲ್ಲಿ 0/19) ಹೆಚ್ಚು ಪರಿಣಾಮಕಾರಿಯಾಗಿದ್ದರು. ಹಾಗಾಗಿ ಭಾರತೀಯ ವೀಕ್ಷಕ ವಿವರಣೆಕಾರರು ಶಮಿಯನ್ನು ಅದೃಷ್ಟಹೀನ ಬೌಲರ್​ ಎಂದು ಹೇಳುತ್ತಲೇ ಇದ್ದರು.

ಅವರ ದಾಳಿಯಲ್ಲಿ ಅದೃಷ್ಟದ ಬೆಂಬಲ ಪಡೆದವರಲ್ಲಿ ಮೊದಲಿಗರೆಂದರೆ, ಕಾನ್ವೇ. ಶಮಿಯ ಒಂದು ಎಸೆತ ಎಡಗೈ ಆಟಗಾರನ ಬ್ಯಾಟ್​ ಹೊರ ಅಂಚನ್ನು ಸವರಿ ಮೂರನೇ ಸ್ಲಿಪ್​ನಲ್ಲಿದ್ದ ವಿರಾಟ್​ ಕೊಹ್ಲಿ ತಲೆ ಮೇಲಿಂದ ಹಾರಿತು. ಎರಡು ಓವರ್​ಗಳ ನಂತರ ಮತ್ತ್ತೊಬ್ಬ ಆರಂಭಿಕ ಟಾಮ್ ಲಾಥಮ್ ಅವರ ಬ್ಯಾಟಿನ ಅಂಚಿಗೆ ತಾಕಿದ ಚೆಂಡು ಗಲ್ಲಿಯಲ್ಲಿ ಡೈವ್ ಮಾಡಿ ಕ್ಯಾಚ್​ ಹಿಡಿಯಲೆತ್ನಿಸಿದ ಅಜಿಂಕ್ಯಾ ರಹಾನೆ ಅವರ ಮುಂದೆ ಬಿತ್ತು. ಮತ್ತೆರಡು ಎಸೆತಗಳ ನಂತರ ಅವರ ದಾಳಿಯಲ್ಲೇ ಬಾಲು ಲಾಥಮ್ ಅವರ ಬ್ಯಾಟಿನ ಒಳ ಅಂಚಿಗೆ ತಾಕಿದ ಬಾಲು ವಿಕೆಟ್​​ಗಳ ಮೇಲಿಂದ ಹಾರಿತು.

2018ರಲ್ಲಿ ಬಾರತ ಇಂಗ್ಲೆಂಡ್ ಪ್ರವಾಸ ಕೈಗೊಂಡಾಗಲೂ, ಅದೃಷ್ಟ ಶಮಿಯನ್ನು ಹಲವು ಸಲ ವಂಚಿಸಿತ್ತು. ಸಹಜವಾಗೇ ಭಾರತದ ಕಾಮೆಂಟೇಟರ್​ಗಳು ಶಮಿ ಈಗಲೂ ಅದೃಷ್ಟಹೀನರಾಗಿದ್ದಾರೆ ಎಂದು ಹೇಳಿದರು.
‘ಅದೆಷ್ಟು ಸಲ ನೀವು ಶಮಿ ಇಂಗ್ಲೆಂಡ್​ನಲ್ಲಿ ಅದೃಷ್ಟಹೀನ ಬೌಲರ್ ಅಂತ ಉಲ್ಲೇಖಿಸುವಿರಿ?’ ಎಂದು ಇಂಗ್ಲೆಂಡ್​ ಮಾಜಿ ನಾಯಕ ಮತ್ತು ಈಗ ಕಾಮೆಂಟೇಟರ್ ಆಗಿರರುವ ಮೈಕೆಲ್ ಆಥರ್ಟನ್ ಕೇಳಿದರಲ್ಲದೆ. ಶಮಿ ಇಂಗ್ಲೆಂಡ್​ನಲ್ಲಿ ಆಡಿರುವ 9 ಟೆಸ್ಟ್​ಗಳಲ್ಲಿ 47 ಸರಾಸರಿಯಲ್ಲಿ ಕೇವಲ 21 ವಿಕೆಟ್ ಪಡೆದಿರುವ ಅಂಕಿ-ಅಂಶಗಳನ್ನು ಮುಂದಿಟ್ಟರು.

ಅವರ ಜೊತೆ ಕಾಮೆಂಟೇಟರ್ ಮತ್ತು 2018ರಲ್ಲಿ ಶಮಿಯೊಂದಿಗೆ ಟೀಮ್ ಇಂಡಿಯಾದ ಸದಸ್ಯರಾಗಿದ್ದ ದಿನೇಶ್ ಕಾರ್ತೀಕ್, ಬೌಲರ್​ಗಳು ಪಡೆಯುವ ವಿಕೆಟ್​ಗಳೊಂದಿಗೆ ಅವರ ದಾಳಿಯಲ್ಲಿ ಮಿಸ್​ ಆದ ಚಾನ್ಸ್​ಗಳ ಬಗ್ಗೆಯೂ ದಾಖಲೆಗಳಿರುವಂತಿದ್ದರೆ ಚೆನ್ನಾಗಿರುತಿತ್ತು ಎಂದು ಹೇಳಿದರು.

‘ಕೆಲವು ಸಲ ದುರಾದೃಷ್ಟ ಬೌಲರ್​ಗಳನ್ನು ವಿಪರೀತವಾಗಿ ಕಾಡುತ್ತದೆ,’ಎಂದು ಕಾಮೆಂಟೇಟರ್​ಗಳು ಚರ್ಚೆಯನ್ನು ಮುಗಿಸಿದರು.

ಆದರೆ ಫ್ರೆಡ್ಡೀ ವೈಲ್ಡ್​ ಎನ್ನುವ ಕ್ರಿಕೆಟ್​ ಪ್ರೇಮಿ 2018 ರಲ್ಲಿ ಶಮಿ ಎಷ್ಟು ಅದ್ಭುತವಾಗಿ ಬೌಲ್ ಮಾಡಿದರು ಎನ್ನುವದನ್ನು ಅಂಕಿ-ಅಂಶಗಳಲ್ಲಿ ತೋರಿಸಿದ್ದಾರೆ

ಕ್ರಿಕ್ವಿಜ್, 2018 ರಲ್ಲಿ ಶಮಿಯ ದಾಳಿಯಲ್ಲಿ ಮಿಸ್ ಆದ ಚಾನ್ಸ್​ಗಳ ಬಗ್ಗೆ ಲೆಕ್ಕವಿಟ್ಟಿದೆ. ಆ ಪ್ರವಾಸದಲ್ಲಿ, ಶಮಿ ಬೌಲ್​ ಮಾಡಿದ ಒಟ್ಟು ಎಸೆತಗಳ ಪೈಕಿ ಶೇಕಡಾ 26ರಷ್ಟು ಎಸೆತಗಳು ಬ್ಯಾಟ್​ಗಳ ಅಂಚಿಗೆ ತಾಕಿದವು ಇಲ್ಲವೇ ಬ್ಯಾಟ್ಸ್​ಮನ್​ಗಳನ್ನು ವಂಚಿಸಿದವು. ವಿಕೆಟ್​ ಪಡೆಯಲು ಅವರು ಸೃಷ್ಟಿಸಿದ ಅವಕಾಶಗಳಲ್ಲಿ ಶೇಕಡಾ 55 ರಷ್ಟು ಮಾತ್ರ ಯಶಕಂಡವು. ಅವರ ಬೌಲಿಂಗ್​ನಲ್ಲಿ ಭಾರತದ ಫೀಲ್ಟರ್​ಗಳು 5 ಬಾರಿ ಕ್ಯಾಚ್​ಗಳನ್ನು ನೆಲಸಮಗೊಳಿಸಿದರು.

2018 ರ ಪ್ರವಾಸದ ಓವಲ್​ ಟೆಸ್ಟ್​ನಲ್ಲಿ ಭಾರತ ಸೋಲು ಅನುಭವಿಸಿದ ನಂತರ, ‘ಕೆಲವು ಸಲ ಯಶಸ್ಸು ಅದೃಷ್ಟ ಮೇಲೆ ಅವಲಂಬಿತವಾಗಿರುತ್ತದೆ,’ ಎಂದು ಹೇಳಿದ್ದ ಶಮಿ, ‘ಒಬ್ಬ ಬೌಲರ್​ನಿಗೆ ಸರಿಯಾದ ಏರಿಯಾಗಳಲ್ಲಿ ಬಾಲನ್ನು ಪಿಚ್​ ಮಾಡುವುದು ಮೊದಲ ಆದ್ಯತೆ ಆಗಿರಬೇಕು, ವಿಕೆಟ್ ಸಿಗುತ್ತವೆಯೋ ಇಲ್ಲವೋ ಅನ್ನೋದು ಬೇರೆ ವಿಷಯ. ಅದರೆ ಅದೃಷ್ಟ ಕೈಕೊಟ್ಟಾಗ ಬಹಳ ಬೇಸರವಾಗುತ್ತದೆ, ಬಹಲ ಸಲ ಬಾಲು ಬ್ಯಾಟನ್ನು ವಂಚಿಸಿತ್ತು. ಆದಾಗ್ಯೂ ನಾನು ಪಡೆದ ವಿಕೆಟ್​ಗಳಿಂದ ಸಂತುಷ್ಟನಾಗಿದ್ದೇನೆ.’ ಎಂದಿದ್ದರು.

ಸೌತಾಂಪ್ಟನ್​ನಲ್ಲಿ ಅದೇ ಕತೆ ಪುರಾವರ್ತನೆಯಾಗುತ್ತಿದೆ ಎಂದು ಭಾರತೀಯ ಕಾಮೆಂಟೇಟರ್​ಗಳು ಭಾವಿಸಿದ್ದರೆ ಅದರಲ್ಲಿ ತಪ್ಪೇನೂ ಇಲ್ಲ. ಅದರೆ ಆಥರ್ಟನ್​ಗೆ ಗೊತ್ತಿರದ ವಿಷಯವೆಂದರೆ, 2014 ಪ್ರವಾಸದಲ್ಲಿ ಶಮಿಯ ದಾಖಲೆ ಮತ್ತೂ ಕೆಟ್ಟದ್ದಾಗಿದೆ. ಆಗ ಆಡಿದ 3 ಪಂದ್ಯಗಳಲ್ಲಿ 73ರ ಸರಾಸರಿಯಲ್ಲಿ ಅವರು ಕೇವಲ 5 ವಿಕೆಟ್​ ಪಡೆದಿದ್ದರು. ಆದರೆ ಶಮಿ ಯಾವಾಗಲೂ ಎರಡನೇ ಇನ್ನಿಂಗ್ಸ್​ಗಳಲ್ಲಿ ಅತ್ಯುತ್ತಮವಾಗಿ ಬೌಲ್​ ಮಾಡುತ್ತಾರೆ. ಸೌತಾಂಪ್ಟನಲ್ಲೂ ಅವರು ತಮ್ಮ ಈ ಈ ಹೆಗ್ಗಳಿಕೆಯನ್ನು ಕಾಯ್ದುಕೊಂಡರೆ ಆಶ್ಚರ್ಯಪಡಬೇಕಿಲ್ಲ

ಇದನ್ನೂ ಓದಿ: WTC Final Weather Update: 4ನೇ ದಿನದಾಟಕ್ಕೆ ವರುಣನ ಅಡ್ಡಿ! ಒಂದು ಬಾಲ್ ಆಡುವುದು ಕಷ್ಟವಾಗಿದೆ ಎಂದ ದಿನೇಶ್ ಕಾರ್ತಿಕ್