AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Usain Bolt: ಅವಳಿ ಗಂಡು ಮಕ್ಕಳಿಗೆ ತಂದೆಯಾದ ಉಸೇನ್ ಬೋಲ್ಟ್.. ನವಜಾತ ಶಿಶುಗಳ ಹೆಸರೇನು ಗೊತ್ತಾ?

Usain Bolt: ಈ ಖುಷಿಯ ವಿಚಾರವನ್ನು ದಂಪತಿಗಳು ಅವಳಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ನವಜಾತ ಶಿಶುಗಳಿಗೆ ಥಂಡರ್ ಬೋಲ್ಟ್ ಮತ್ತು ಸೇಂಟ್ ಲಿಯೋ ಬೋಲ್ಟ್ ಎಂದು ಹೆಸರಿಡಲಾಗಿದೆ.

Usain Bolt: ಅವಳಿ ಗಂಡು ಮಕ್ಕಳಿಗೆ ತಂದೆಯಾದ ಉಸೇನ್ ಬೋಲ್ಟ್.. ನವಜಾತ ಶಿಶುಗಳ ಹೆಸರೇನು ಗೊತ್ತಾ?
ಅವಳಿ ಗಂಡು ಮಕ್ಕಳಿಗೆ ತಂದೆಯಾದ ಉಸೇನ್ ಬೋಲ್ಟ್
ಪೃಥ್ವಿಶಂಕರ
|

Updated on: Jun 21, 2021 | 5:32 PM

Share

ಸಾರ್ವಕಾಲಿಕ ಒಲಿಂಪಿಕ್ ಶ್ರೇಷ್ಠ ಓಟಗಾರ ಉಸೇನ್ ಬೋಲ್ಟ್ ಮತ್ತು ಅವರ ಪತ್ನಿ ಕೇಸಿ ಬೆನೆಟ್ ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದರು. ಈ ಖುಷಿಯ ವಿಚಾರವನ್ನು ದಂಪತಿಗಳು ಅವಳಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜೊತೆಗೆ ಈ ನವಜಾತ ಶಿಶುಗಳಿಗೆ ಥಂಡರ್ ಬೋಲ್ಟ್ ಮತ್ತು ಸೇಂಟ್ ಲಿಯೋ ಬೋಲ್ಟ್ ಎಂದು ಹೆಸರಿಡಲಾಗಿದೆ. ತಂದೆಯ ದಿನಾಚರಣೆಯ ಸಂದರ್ಭದಲ್ಲಿ ಬೋಲ್ಟ್ ಕುಟುಂಬದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅವಳಿ ಮಕ್ಕಳು ಯಾವಾಗ ಜನಿಸಿದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಉಸೇನ್ ಬೋಲ್ಟ್ ದಂಪತಿಗಳ ಫೋಟೋವನ್ನು ತಮ್ಮ ಅವಳಿ ಮತ್ತು ಮಗಳ ಜೊತೆ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.

ಉಸೇನ್ ಬೋಲ್ಟ್ ಅವರ ಮಗಳು ‘ಒಲಿಂಪಿಯಾ ಬೋಲ್ಟ್’ ಮೇ 2020 ರಲ್ಲಿ ಜನಿಸಿದರು. ಬೋಲ್ಟ್ ಎರಡು ತಿಂಗಳ ನಂತರ ತನ್ನ ಮಗಳ ಹೆಸರನ್ನು ಬಹಿರಂಗಪಡಿಸಿದರು. 2008, 2012 ಮತ್ತು 2016 ಕ್ರೀಡಾಕೂಟಗಳಲ್ಲಿ ಎಂಟು ಚಿನ್ನದ ಪದಕಗಳನ್ನು ಗೆದ್ದ 34 ವರ್ಷದ ಬೋಲ್ಟ್ 2017 ರಲ್ಲಿ ನಿವೃತ್ತಿ ಘೋಷಿಸಿದ್ದಾರೆ.

ಬೋಲ್ಟ್ ವೃತ್ತಿ ಜೀವನ ಬೋಲ್ಟ್ 100 ಮೀಟರ್ ಮತ್ತು 200 ಮೀಟರ್ ಓಟದಲ್ಲಿ ವಿಶ್ವ ದಾಖಲೆಗಳನ್ನು ನಿರ್ಮಿಸಿದರು, ಇದು ಇತಿಹಾಸದಲ್ಲಿ ಅತೀ ಕಡಿಮೆ ಸಮಯದಲ್ಲಿ ವೇಗವಾಗಿ ಓಡಿದ ಓಟವಾಗಿದೆ. ಅತಿ ವೇಗದ ವ್ಯಕ್ತಿಯಾಗಿ ಇತಿಹಾಸದಲ್ಲಿ ದಾಖಲೆ ಬರೆದ ಬೋಲ್ಟ್ 100 ಮತ್ತು 200 ಮೀಟರ್ ಓಟದಲ್ಲಿ ಸತತ ಮೂರು ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ತಮ್ಮ ವೃತ್ತಿಜೀವನದಲ್ಲಿ 23 ಚಾಂಪಿಯನ್‌ಶಿಪ್ ಚಿನ್ನ ಗೆದ್ದಿರುವ ಬೋಲ್ಟ್, ತಮ್ಮ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದಾಗಿನಿಂದ ಫುಟ್‌ಬಾಲ್ ಆಡಲು ಆಸಕ್ತಿ ಹೊಂದಿದ್ದಾರೆ. ಆದಾಗ್ಯೂ, ಈ ಆಟದಲ್ಲಿ ಒಪ್ಪಂದವನ್ನು ಪಡೆದುಕೊಳ್ಳಲು ಅವರಿಗೆ ಸಾಧ್ಯವಾಗಲಿಲ್ಲ. ನಂತರ ಅವರು 2019 ರಲ್ಲಿ ಎಲ್ಲಾ ಕ್ರೀಡೆಗಳಿಂದ ನಿವೃತ್ತಿ ಘೋಷಿಸಿದರು.

ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
‘ಕರ್ನಾಟಕ ಸಹೋದರನ ಮನೆ, ಕನ್ನಡವೇ ಸತ್ಯ, ಕನ್ನಡವೇ ನಿತ್ಯ: ಬಾಲಯ್ಯ
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಸ್ಕೈಡೈವ್ ಮಾಡುವಾಗ ವಿಮಾನದ ರೆಕ್ಕೆಗೆ ಸಿಲುಕಿದ ಪ್ಯಾರಾಚೂಟ್
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಡಿಕೆ ಶಿವಕುಮಾರ್ ಡಿನ್ನರ್ ಮೀಟಿಂಗ್ ರಹಸ್ಯ ಇಲ್ಲಿದೆ ನೋಡಿ
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!
ಹುಬ್ಬಳ್ಳಿ: ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸಿದವನಿಗೆ ಧರ್ಮದೇಟು!