ಸೌಥಾಂಪ್ಟನ್: ಆಡ್ತಾ ಆಡ್ತಾ ಅಲ್ಲ; ನೋಡ್ತಾ ನೋಡ್ತಾ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯ ನಾಲ್ಕನೆಯ ದಿನಕ್ಕೆ ಕಾಲಿಟ್ಟಿದೆ. ಆದರೆ ಮಳೆರಾಯನ ಕಾಟ ಹೇಗೋ ಎಂಬಂತಿದೆ ಅಲ್ಲಿನ ಪರಿಸ್ಥಿತಿ. ಮೋಡಗಳು ಶುಭ್ರವಾಗಿಲ್ಲ; ವಾತಾವರಣ ತಿಳಿಯಾಗಿಲ್ಲ. ಇತ್ತ ಭಾರತ ತಂಡದಲ್ಲೂ ವಾತಾವರಣ ಚೇತೋಹಾರಿಯಾಗಿಲ್ಲ. ಮಳೇಯಾಟ ಮೇಲುಗೈ ಆಗುತ್ತದಾ? ಅಥವಾ ಪವಾಡ ನಡೆದು ನಾವೇ ಮೇಲುಗೈ ಸಾಧಿಸುತ್ತೇವಾ ಎಂಬ ಚಿಂತೆ ಭಾರತ ತಂಡದ ಶಿಬಿರದಲ್ಲಿ ಮೂಡಿದೆ. ಹಾಗೆ ನೋಡಿದರೆ ಪಂದ್ಯವೇನೂ ಭಾರತದ ಕೈಜಾರಿದೆ ಅಂತೇನೂ ಇಲ್ಲ; ಇನ್ನೂ ಸಾಕಷ್ಟು ಏರಿಳಿತಗಳು ಪಂದ್ಯದಲ್ಲಿ ಕಾಣಬೇಕಿದೆ. ಈ ಮಧ್ಯೆ, ಇಂದು ನಾಲ್ಕನೆಯ ದಿನದ ಆಟ ನಡೆಯುತ್ತದಾ? ಪಂದ್ಯ ಸಕಾಲಕ್ಕೆ ಆರಂಭವಾಗುತ್ತದಾ? ಭಾರತದ ಬೌಲರುಗಳು ಇಂದು ವಿಜೃಂಭಿಸುತ್ತಾರಾ? ಎಂಬ ಪ್ರಶ್ನೆಗಳಿಗೆ ಉತ್ತರ ತಡಕಾಡಿದಾಗ…
ಬ್ಯಾಡ್ ನ್ಯೂಸ್ ಅದ್ರೆ ಸೌಥಾಂಪ್ಟನ್ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ಮಳೆರಾಯ ಇವತ್ತೂ ಬ್ಯಾಡ್ ಬಾಯ್ ಆಗಲಿದ್ದಾನೆ. ಅಂದ್ರೆ ಮಳೆ ಬರುವುದು ಖಚಿತವಾಗಿದೆ. ಮಳೆಯ ನಂತರ ಬ್ಯಾಡ್ ವೆದರ್ ಸಹ ಕಾಡಲಿದೆ. June 21 ಸೋಮವಾರ ಇಂಗ್ಲೆಂಡಿನ ಈ ಭಾಗದಲ್ಲಿ ಮಳೆಯಾಗಲಿದೆ ಅನ್ನುತ್ತಿದೆ ಹವಾಮಾನ ವರದಿಗಳು. ಇದೆಲ್ಲದರ ಹೊರತಾಗಿಯೂ ಆಟ ಶುರುವಾಗುತ್ತದೆ ಅಂದ್ರೆ ಆಟಗಾರರಿಗೆ ವಾತಾವರಣ ಇರುಸುಮುರುಸು ತರಲಿದೆ. ಏಕೆಂದ್ರೆ ಸೌಥಾಂಪ್ಟನ್ ಕ್ರೀಡಾಂಗಣದ ಆಸುಪಾಸು ತೇವಾಂಶ (humidity) ಜಾಸ್ತಿಯಿದೆ. ಇದರಿಂದ ಆಟಗಾರರು ಮೂರು ದಿನಗಳಿಂದ ಆಡಿದಂತೆ ಸ್ವೆಟರ್ ಮೇಲೆ ಸ್ವೆಟರ್ ಹಾಕಿಕೊಂಡು ಆಡಬೇಕಾದೀತು. ಅಷ್ಟರಮಟ್ಟಿಗೆ ಅಲ್ಲಿನ ಹವಾಮಾನ ಆಟಗಾರರನ್ನು ದಿಕ್ಕೆಡಿಸಿದೆ. ಇನ್ನೂ ನಾಲ್ಕು ದಿನ ಮಳೆಯಾಗುತ್ತದಾ? ಎಬ ಪ್ರಶ್ನೆಗೆ ಹವಾಮಾನ ವರದಿ ಪ್ರಕಾರ ಇಂದು ಮಳೆಯಾಗುತ್ತದೆ. ಆದರೆ ನಾಳೆ, ನಾಳಿದ್ದು ಅಷ್ಟಾಗಿ ಮಳೆಯಾಗುವುದಿಲ್ಲವಂತೆ. ಅಂದ್ರೆ 6ನೆಯ ದಿನಕ್ಕೂ (ರಿಸರ್ವ್ ಡೇ) ಪಂದ್ಯ ಮುಂದುವರಿದರೆ ಆಟಕ್ಕೇನೂ ತೊಂದರೆಯಾಗದು ಅನ್ನುತ್ತಿದೆ ಹವಾಮಾನ.
ಭಾರತ ಹಾಗೂ ನ್ಯೂಜಿಲ್ಯಾಂಡ್ ತಂಡಗಳ ನಡುವಿನ ಐತಿಹಾಸಿಕ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಮುಕ್ತಾಯಕ್ಕೆ ನ್ಯೂಜಿಲ್ಯಾಂಡ್ ತಂಡ 49 ಓವರ್ಗಳನ್ನು ಆಡಿ 101 ದಾಖಲಿಸಿದೆ. ತನ್ನ ಎರಡು ಮುಖ್ಯ ವಿಕೆಟ್ಗಳನ್ನು ಕಳೆದುಕೊಂಡಿದೆ. ದಿನದ ಕೊನೆಯ ಓವರ್ನಲ್ಲಿ 2ನೇ ವಿಕೆಟ್ ಪಡೆದು ಭಾರತ ನಿಟ್ಟುಸಿರು ಬಿಟ್ಟಿದೆ. ಅರ್ಧ ಶತಕ ಬಾರಿಸಿ ಆಡುತ್ತಿದ್ದ ಕಾನ್ವೇ, ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ಶಮಿಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ನಾಯಕ ವಿಲಿಯಮ್ಸನ್ ಹಾಗೂ ಟೇಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ನ್ಯೂಜಿಲ್ಯಾಂಡ್ ತಂಡ ಭಾರತಕ್ಕಿಂತ 116 ರನ್ ಹಿಂದಿದೆ.
ಭಾರತಕ್ಕೆ ನ್ಯೂಜಿಲ್ಯಾಂಡ್ ದಾಂಡಿಗರ ವಿಕೆಟ್ ಪಡೆದು ರನ್ ಕಟ್ಟಿಹಾಕುವುದು ಅವಶ್ಯವಾಗಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಆಲೌಟ್ ಆಗಿತ್ತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ, 92.1 ಓವರ್ ಆಟವಾಡಿ, 217 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಭಾರತದ ಪರ ನಾಯಕ ವಿರಾಟ್ ಕೊಹ್ಲಿ 44, ಉಪನಾಯಕ ಅಜಿಂಕ್ಯ ರಹಾನೆ 49, ರೋಹಿತ್ ಶರ್ಮಾ 34 ಹಾಗೂ ಶುಬ್ಮನ್ ಗಿಲ್ 28 ರನ್ ದಾಖಲಿಸಿದ್ದರು. ನ್ಯೂಜಿಲ್ಯಾಂಡ್ ಪರವಾಗಿ ಕೈಲ್ ಜಾಮಿಸನ್ ಅದ್ಭುತ ದಾಳಿ ನಡೆಸಿ 5 ವಿಕೆಟ್ ಕಬಳಿಸಿದ್ದರು.
(WTC Final Southampton weather Day 4 looks worse humidity higher things uncomfortable for players )
India vs New Zealand, WTC Final 2021, Day 3: ಮೂರನೇ ದಿನದಾಟ ಮುಕ್ತಾಯ; ನಾಳೆಯ ಆಟದ ಮೇಲೆ ಹೆಚ್ಚಿದ ಕುತೂಹಲ!
Published On - 9:44 am, Mon, 21 June 21