India vs New Zealand, WTC Final 2021, Day 3: ಮೂರನೇ ದಿನದಾಟ ಮುಕ್ತಾಯ; ನಾಳೆಯ ಆಟದ ಮೇಲೆ ಹೆಚ್ಚಿದ ಕುತೂಹಲ!
India vs New Zealand: ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟಯ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ, ನ್ಯೂಜಿಲ್ಯಾಂಡ್ನ ಆರಂಭಿಕ ಆಟಗಾರರ ಎರಡೂ ವಿಕೆಟ್ ಪಡೆಯಲು ಶಕ್ತವಾಗಿದ್ದು, ನಾಳೆಯ ಆಟದಲ್ಲಿ ಬೌಲರ್ಗಳು ಮತ್ತಷ್ಟು ಪ್ರಾಬಲ್ಯ ಸಾಧಿಸಬೇಕಿದೆ.
ಸೌಥಾಂಪ್ಟನ್: ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಟೆಸ್ಟ್ ಪಂದ್ಯದ ಮೂರನೇ ದಿನದಾಟ ಮುಕ್ತಾಯವಾಗಿದೆ. ನ್ಯೂಜಿಲ್ಯಾಂಡ್ ತಂಡ 49 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 101 ರನ್ ದಾಖಲಿಸಿದೆ. ನಾಯಕ ಕೇನ್ ವಿಲಿಯಮ್ಸನ್ ಹಾಗೂ ರಾಸ್ ಟಯ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತ, ನ್ಯೂಜಿಲ್ಯಾಂಡ್ನ ಆರಂಭಿಕ ಆಟಗಾರರ ಎರಡೂ ವಿಕೆಟ್ ಪಡೆಯಲು ಶಕ್ತವಾಗಿದ್ದು, ನಾಳೆಯ ಆಟದಲ್ಲಿ ಬೌಲರ್ಗಳು ಮತ್ತಷ್ಟು ಪ್ರಾಬಲ್ಯ ಸಾಧಿಸಬೇಕಿದೆ. ಭಾರತಕ್ಕೆ ನ್ಯೂಜಿಲ್ಯಾಂಡ್ ದಾಂಡಿಗರ ವಿಕೆಟ್ ಪಡೆದು ರನ್ ಕಟ್ಟಿಹಾಕುವುದು ಅವಶ್ಯವಾಗಿದೆ. ನ್ಯೂಜಿಲ್ಯಾಂಡ್ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಆಲೌಟ್ ಆಗಿತ್ತು. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ, 92.1 ಓವರ್ ಆಟವಾಡಿ, 217 ರನ್ ಗಳಿಸಲಷ್ಟೇ ಶಕ್ತವಾಗಿತ್ತು. ಭಾರತದ ಪರ ನಾಯಕ ವಿರಾಟ್ ಕೊಹ್ಲಿ 44, ಉಪನಾಯಕ ಅಜಿಂಕ್ಯ ರಹಾನೆ 49, ರೋಹಿತ್ ಶರ್ಮಾ 34 ಹಾಗೂ ಶುಬ್ಮನ್ ಗಿಲ್ 28 ರನ್ ದಾಖಲಿಸಿದ್ದರು. ನ್ಯೂಜಿಲ್ಯಾಂಡ್ ಪರವಾಗಿ ಕೈಲ್ ಜಾಮಿಸನ್ ಅದ್ಭುತ ದಾಳಿ ಸಂಘಟಿಸಿದ್ದರು. ಜಾಮಿಸನ್ ಮುಖ್ಯ 5 ವಿಕೆಟ್ ಕಬಳಿಸಿದ್ದರು.
ಭಾರತ- ನ್ಯೂಜಿಲ್ಯಾಂಡ್ ಪಂದ್ಯದ ಸಂಪೂರ್ಣ ಅಪ್ಡೇಟ್ಗಳನ್ನು ಈ ಕೆಳಗೆ ಓದಿರಿ
LIVE NEWS & UPDATES
-
ಮೂರನೇ ದಿನದಾಟ ಮುಕ್ತಾಯ
ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಮೂರನೇ ದಿನದಾಟ ಮುಕ್ತಾಯವಾಗಿದೆ. ನ್ಯೂಜಿಲ್ಯಾಂಡ್ ತಂಡ 49 ಓವರ್ಗಳನ್ನು ಆಡಿ 101 ದಾಖಲಿಸಿದೆ. ತನ್ನ ಎರಡು ಮುಖ್ಯ ವಿಕೆಟ್ಗಳನ್ನು ಕಳೆದುಕೊಂಡಿದೆ. ದಿನದ ಕೊನೆಯ ಓವರ್ನಲ್ಲಿ 2ನೇ ವಿಕೆಟ್ ಪಡೆದು ಭಾರತ ನಿಟ್ಟುಸಿರು ಬಿಟ್ಟಿದೆ. ಅರ್ಧಶತಕ ಬಾರಿಸಿ ಆಡುತ್ತಿದ್ದ ಕಾನ್ವೆ ಇಶಾಂತ್ ಶರ್ಮಾ ಬೌಲಿಂಗ್ಗೆ ಶಮಿಗೆ ಕ್ಯಾಚ್ ನೀಡಿ ಔಟ್ ಆಗಿದ್ದಾರೆ. ನಾಯಕ ವಿಲಿಯಮ್ಸನ್ ಹಾಗೂ ಟಯ್ಲರ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ನ್ಯೂಜಿಲ್ಯಾಂಡ್ ತಂಡ ಭಾರತಕ್ಕಿಂತ 116 ರನ್ ಹಿಂದಿದೆ.
New Zealand lose their openers in the final session as they go to stumps on 101/2, trailing India by 116 runs.#WTC21 Final | #INDvNZ | https://t.co/384ZivHQu3 pic.twitter.com/QUv88e6OXB
— ICC (@ICC) June 20, 2021
-
ಮೂರನೇ ದಿನದಾಟದ ಕೆಲಕ್ಷಣಗಳು
ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೂರನೇ ದಿನದಾಟವಾದ ಇಂದು ಕಂಡ ಕೆಲವು ಕ್ಷಣಗಳನ್ನು ಹೀಗೆ ಸೆರೆಹಿಡಿಯಲಾಗಿದೆ. ಅದನ್ನು ಐಸಿಸಿ ಟ್ವಿಟರ್ ಖಾತೆ ಹಂಚಿಕೊಂಡಿದೆ. ನೋಡಿ.
The focus was on New Zealand's skills on Day 3 of the #WTC21 Final.#INDvNZ
These are your @bira91 Best Fielding Moments ? pic.twitter.com/7tD0UyAvBz
— ICC (@ICC) June 20, 2021
Some beautiful drives from Ravindra Jadeja, R Ashwin, Tom Latham and Devon Conway feature in today’s @bharatpeindia Fiery Fours ?#WTC21 Final | #INDvNZ pic.twitter.com/SIWjJ9ovn9
— ICC (@ICC) June 20, 2021
-
ಶತಕ ಪೂರೈಸಿದ ನ್ಯೂಜಿಲ್ಯಾಂಡ್
ನ್ಯೂಜಿಲ್ಯಾಂಡ್ ತಂಡ 100 ರನ್ ಗಡಿದಾಟಿದೆ. ಕಾನ್ವೆ ಅರ್ಧಶತಕದ ಬೆನ್ನಲ್ಲೇ ತಂಡದ ಮೊತ್ತ 101 ಆಗಿದೆ. 45 ಓವರ್ಗಳು ಮುಕ್ತಾಯವಾಗಿದ್ದು 1 ವಿಕೆಟ್ನ್ನು ಭಾರತ ಪಡೆದುಕೊಂಡಿದೆ. ಮೊದಲನೇ ಇನ್ನಿಂಗ್ಸ್ನಲ್ಲಿ ನ್ಯೂಜಿಲ್ಯಾಂಡ್ ಭಾರತಕ್ಕಿಂತ 116 ರನ್ ಹಿಂದಿದೆ.
ಮೊದಲ ವಿಕೆಟ್ ಪಡೆದ ಸಂಭ್ರಮದಲ್ಲಿ ಭಾರತ. ಆ ಬಳಿಕ ಮತ್ತೊಂದು ವಿಕೆಟ್ನ ಅವಶ್ಯಕತೆ ಭಾರತಕ್ಕೆ ಇದೆ. ಆದರೆ, ಯಾವುದೇ ವಿಕೆಟ್ ಉರುಳಿಲ್ಲ.
That moment when Ashwin and Virat combined to get the first breakthrough for #TeamIndia.
Live – https://t.co/CmrtWsugSK #WTC21 pic.twitter.com/kst77o91Am
— BCCI (@BCCI) June 20, 2021
ಕಾನ್ವೆ ಅರ್ಧಶತಕ
ನ್ಯೂಜಿಲ್ಯಾಂಡ್ ಪರ ದಾಂಡಿಗ ಡೆವಾನ್ ಕಾನ್ವೆ ಅರ್ಧಶತಕ ಪೂರೈಸಿದ್ದಾರೆ. 137 ಬಾಲ್ಗೆ 52 ರನ್ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದಾರೆ. 44 ಓವರ್ಗೆ ನ್ಯೂಜಿಲ್ಯಾಂಡ್ ಮೊತ್ತ 1 ವಿಕೆಟ್ ನಷ್ಟಕ್ಕೆ 99 ರನ್ ಆಗಿದೆ. ನಾಯಕ ಕೇನ್ ವಿಲಿಯಮ್ಸನ್ 12 ರನ್ ಗಳಿಸಿ ಆಡುತ್ತಿದ್ದಾರೆ. ಮೊದಲನೇ ವಿಕೆಟ್ ಪತನದ ಬಳಿಕ ಮತ್ತೆ ವಿಕೆಟ್ ಪಡೆಯುವ ಅನಿವಾರ್ಯತೆ ಭಾರತಕ್ಕಿದೆ.
ಮೊದಲ ವಿಕೆಟ್ ಪತನ
ನ್ಯೂಜಿಲ್ಯಾಂಡ್ ತಂಡದ ಮೊದಲ ವಿಕೆಟ್ ಪತನವಾಗಿದೆ. ಆರಂಭಿಕರಾಗಿ ಕಣಕ್ಕಿಳಿದ ಟಾಮ್ ಲತಮ್ 104 ಬಾಲ್ಗೆ 30 ರನ್ ಗಳಿಸಿ ಔಟ್ ಆಗಿದ್ದಾರೆ. ರವಿಚಂದ್ರನ್ ಅಶ್ವಿನ್ ಬಾಲ್ಗೆ ಕೊಹ್ಲಿ ಕ್ಯಾಚ್ ಪಡೆದಿದ್ದಾರೆ. ನ್ಯೂಜಿಲ್ಯಾಂಡ್ ಒಂದು ವಿಕೆಟ್ ಬಿದ್ದಿರುವುದು ಭಾರತದ ಪಾಲಿಗೆ ಇನ್ನಷ್ಟು ವಿಕೆಟ್ ಉರುಳಿಸುವ ಆಶಯ ಉಳಿಸಿಕೊಂಡಿದೆ. ನ್ಯೂಜಿಲ್ಯಾಂಡ್ ಪರ ನಾಯಕ ಕೇನ್ ವಿಲಿಯಮ್ಸನ್ ಕ್ರೀಸ್ಗೆ ಇಳಿದಿದ್ದಾರೆ. ತಂಡದ ಮೊತ್ತ 35 ಓವರ್ಗೆ 1 ವಿಕೆಟ್ ಕಳೆದುಕೊಂಡು 71 ರನ್ ಆಗಿದೆ.
ನ್ಯೂಜಿಲ್ಯಾಂಡ್ 69-0 (33 ಓವರ್)
33 ಓವರ್ಗಳ ಬಳಿಕ ನ್ಯೂಜಿಲ್ಯಾಂಡ್ ತಂಡದ ಮೊತ್ತ ವಿಕೆಟ್ ನಷ್ಟವಿಲ್ಲದೆ 69 ರನ್ ಆಗಿದೆ. ಆರಂಭಿಕರಾದ ಲತಮ್ ಹಾಗೂ ಕಾನ್ವೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಟಾಮ್ ಲತಮ್ 30 ಮತ್ತು ಡೆವಾನ್ ಕಾನ್ವೆ 38 ರನ್ ಗಳಿಸಿದ್ದಾರೆ.
50 ರನ್ ಪೂರೈಸಿದ ನ್ಯೂಜಿಲ್ಯಾಂಡ್
ಟಾಸ್ ಗೆದ್ದು ಬೌಲಿಂಗ್ ಮಾಡಿದ ನ್ಯೂಜಿಲ್ಯಾಂಡ್ ತಂಡ ಭಾರತವನ್ನು 217 ರನ್ಗಳಿಗೆ ಕಟ್ಟಿಹಾಕಿತು. ಇದೀಗ, ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ನ್ಯೂಜಿಲ್ಯಾಂಡ್ 50 ರನ್ ಪೂರೈಸಿ ಮುಂದೆ ಸಾಗುತ್ತಿದೆ. ಇಲ್ಲಿಯವರೆಗೂ ಯಾವುದೇ ವಿಕೆಟ್ ಬೀಳದಿರುವುದು ಭಾರತದ ಬೌಲರ್ಗಳ ಒತ್ತಡ ಹೆಚ್ಚು ಮಾಡಿದೆ. ನ್ಯೂಜಿಲ್ಯಾಂಡ್ ತಂಡ 29 ಓವರ್ಗಳ ಬಳಿಕ ವಿಕೆಟ್ ನಷ್ಟವಿಲ್ಲದೆ 57 ರನ್ ಕಲೆಹಾಕಿದೆ. ಆರಂಭಿಕ ದಾಂಡಿಗರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ.
50 up for the @BLACKCAPS!
A good opening partnership between Tom Latham and Devon Conway ?#WTC21 Final | #INDvNZ | https://t.co/384ZivHQu3 pic.twitter.com/leVl45t1ZA
— ICC (@ICC) June 20, 2021
ಕೊನೆಗೂ 1 ರನ್ ದಾಖಲು
ಕಳೆದ ನಾಲ್ಕು ಓವರ್ಗಳಿಂದ ಕೇವಲ 1 ರನ್ ದಾಖಲಾಗಿದೆ. 23, 24 ಹಾಗೂ 25ನೇ ಓವರ್ನಲ್ಲಿ ಯಾವುದೇ ರನ್ ಬಂದಿರಲಿಲ್ಲ. ಅಶ್ವಿನ ಹಾಗೂ ಇಶಾಂತ್ ಶರ್ಮಾ ಬೌಲಿಂಗ್ ಮಾಡಿದ ಕೊನೆಯ ಮೂರು ಓವರ್ಗಳು ಮೇಡನ್ ಆಗಿದ್ದವು. ಇದೀಗ ಇಶಾಂತ್ ಶರ್ಮಾ ಬೌಲಿಂಗ್ನ 26ನೇ ಓವರ್ನಲ್ಲಿ 1 ರನ್ ದಾಖಲಾಗಿದೆ. ಈ ಮೂಲಕ ನ್ಯೂಜಿಲ್ಯಾಂಡ್ ತಂಡ 26 ಓವರ್ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 44 ರನ್ ದಾಖಲಿಸಿದೆ. ಕಾನ್ವೆ ಹಾಗೂ ಲತಮ್ ಆಡುತ್ತಿದ್ದಾರೆ.
ಮೂರನೇ ಸೆಷನ್ ಆರಂಭ
ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಮೂರನೇ ದಿನದ, ಮೂರನೇ ಸೆಷನ್ ಆರಂಭವಾಗಿದೆ. ನ್ಯೂಜಿಲ್ಯಾಂಡ್ ತಂಡ 22 ಓವರ್ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 43 ರನ್ ಕಲೆಹಾಕಿದೆ. ಡೆವಾನ್ ಕಾನ್ವೆ ಹಾಗೂ ಟಾಮ್ ಲತಮ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ಭಾರತದ ಪರವಾಗಿ ಇದುವರೆಗೆ ಇಶಾಂತ್ ಶರ್ಮಾ, ಜಸ್ಪ್ರೀತ್ ಬುಮ್ರಾ, ಮೊಹಮದ್ ಶಮಿ ಹಾಗೂ ರವಿಚಂದ್ರನ್ ಅಶ್ವಿನ್ ಬೌಲಿಂಗ್ ಮಾಡಿದ್ದಾರೆ.
ಚಹಾ ವಿರಾಮ
ಚಹಾ ವಿರಾಮದ ವೇಳೆ ನ್ಯೂಜಿಲ್ಯಾಂಡ್ ತಂಡ 21 ಓವರ್ಗಳನ್ನು ಆಡಿ 36 ರನ್ ದಾಖಲಿಸಿದೆ. ಯಾವುದೇ ವಿಕೆಟ್ ಕಳೆದುಕೊಂಡಿಲ್ಲ. 1.71 ರನ್ ಸರಾಸರಿಯಲ್ಲಿ ನ್ಯೂಜಿಲ್ಯಾಂಡ್ ಬ್ಯಾಟಿಂಗ್ ಮಾಡುತ್ತಿದ್ದು, ಭಾರತ ವಿಕೆಟ್ ಪಡೆಯುವ ತವಕದಲ್ಲಿದೆ. ಮೊದಲನೇ ಇನ್ನಿಂಗ್ಸ್ನಲ್ಲಿ ನ್ಯೂಜಿಲ್ಯಾಂಡ್ ತಂಡ ಭಾರತಕ್ಕಿಂತ 181 ರನ್ ಹಿಂದಿದೆ. ಇನ್ನೂ ಸುಮಾರು ಮೂರು ಗಂಟೆಗಳ ಆಟ ಉಳಿದಿದ್ದು, ನ್ಯೂಜಿಲ್ಯಾಂಡ್ ಮಣಿಸಲು ಭಾರತ ಕೆಲವಷ್ಟು ಪ್ರಮುಖ ವಿಕೆಟ್ಗಳನ್ನಾದರೂ ಇಂದೇ ಉರುಳಿಸಬೇಕಿದೆ.
ನ್ಯೂಜಿಲ್ಯಾಂಡ್ 24-0 (16 ಓವರ್)
16ನೇ ಓವರ್ ಅಂತ್ಯಕ್ಕೆ ನ್ಯೂಜಿಲ್ಯಾಂಡ್ ತಂಡ ಒಂದೂ ವಿಕೆಟ್ ಕಳೆದುಕೊಳ್ಳದೆ 24 ರನ್ ದಾಖಲಿಸಿದೆ. 1.54 ಸರಾಸರಿಯಲ್ಲಿ ನಿಧಾನಗತಿಯ ಆಟವನ್ನು ನ್ಯೂಜಿಲ್ಯಾಂಡ್ ನೆಚ್ಚಿಕೊಂಡಿದೆ. ಮಳೆಯ ಕಾರಣದಿಂದಲೂ ಪಿಚ್ ವರ್ತನೆ ಗಮನಿಸಿ, ಜಾಗ್ರತೆಯ ಆಟಕ್ಕೆ ನ್ಯೂಜಿಲ್ಯಾಂಡ್ ಆರಂಭಿಕ ಬ್ಯಾಟ್ಸ್ಮನ್ಗಳು ಮುಂದಾಗಿದ್ದಾರೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತಕ್ಕಿಂತ 193 ರನ್ ಹಿಂದಿದ್ದಾರೆ.
ಆಟ ಮತ್ತೆ ಆರಂಭ; ನ್ಯೂಜಿಲ್ಯಾಂಡ್ 20-0
ಮಳೆಯಿಂದಾಗಿ ಸ್ವಲ್ಪವೇ ಹೊತ್ತು ಸ್ಥಗಿತಗೊಂಡಿದ್ದ ಪಂದ್ಯ ಮತ್ತೆ ಆರಂಭವಾಗಿದೆ. ನ್ಯೂಜಿಲ್ಯಾಂಡ್ ತಂಡ ವಿಕೆಟ್ ಕಳೆದುಕೊಳ್ಳದೇ 13 ಓವರ್ಗೆ ವಿಕೆಟ್ ನಷ್ಟವಿಲ್ಲದೆ 20 ರನ್ ಕಲೆಹಾಕಿದೆ.
ಮೂರನೇ ದಿನವೂ ಮಳೆ ಅಡ್ಡಿ
ಮೂರನೇ ದಿನವೂ ಪಂದ್ಯಕ್ಕೆ ಹವಾಮಾನ ಅಡ್ಡಿಪಡಿಸಿದೆ. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಳ್ಳುವಂತಾಗಿದೆ. ಭಾರತೀಯ ಬೌಲರ್ಗಳು ವಿಕೆಟ್ ಪಡೆಯುವ ಒತ್ತಡದಲ್ಲಿ ಇದ್ದಾರೆ. ನ್ಯೂಜಿಲ್ಯಾಂಡ್ ಆಟಗಾರರು ಸಮಾಧಾನದಿಂದಲೇ ಕ್ರೀಸ್ ಬಿಟ್ಟು ಪೆವಿಲಿಯನ್ ಕಡೆಗೆ ಹೆಜ್ಜೆ ಹಾಕಿದ್ದಾರೆ. ಮಳೆಯಿಂದಾಗಿ ಪಂದ್ಯ ಸ್ಥಗಿತಗೊಂಡಿದೆ. ನ್ಯೂಜಿಲ್ಯಾಂಡ್ ತಂಡ 10.4 ಓವರ್ಗೆ ವಿಕೆಟ್ ಕಳೆದುಕೊಳ್ಳದೇ 19 ರನ್ ದಾಖಲಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ಭಾರತದ ಮೊತ್ತಕ್ಕಿಂತ 198 ರನ್ ಹಿಂದಿದೆ.
And, it resumes! #WTC21 Final https://t.co/uPeac4f27y
— BCCI (@BCCI) June 20, 2021
ನ್ಯೂಜಿಲ್ಯಾಂಡ್ 19-0 (10 ಓವರ್)
ನ್ಯೂಜಿಲ್ಯಾಂಡ್ ತಂಡ 10 ಓವರ್ಗೆ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದ್ದಾರೆ. ಲತಮ್ 36 ಬಾಲ್ ಆಟವಾಡಿ 11 ರನ್ ಗಳಿಸಿದ್ದಾರೆ. ಕಾನ್ವೆ 25 ಬಾಲ್ಗೆ 8 ರನ್ ಗಳಿಸಿದ್ದಾರೆ. ಇಶಾಂತ್ ಶರ್ಮಾ 5, ಜಸ್ಪ್ರೀತ್ ಬುಮ್ರಾ 4 ಹಾಗೂ ಮೊಹಮದ್ ಶಮಿ 1 ಓವರ್ ಬೌಲಿಂಗ್ ಮಾಡಿದ್ದಾರೆ.
ನ್ಯೂಜಿಲ್ಯಾಂಡ್ 12-0 (7 ಓವರ್)
ಮೊದಲನೇ ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲ್ಯಾಂಡ್ ತಂಡ 7 ಓವರ್ಗಳ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 12 ರನ್ ದಾಖಲಿಸಿದೆ. ಕಾನ್ವೆ 4 ರನ್ ಹಾಗೂ ಲತಮ್ 8 ರನ್ ಪೇರಿಸಿ ಕ್ರೀಸ್ನಲ್ಲಿದ್ದಾರೆ. ಜಸ್ಪ್ರೀತ್ ಬುಮ್ರಾ ಹಾಗೂ ಇಶಾಂತ್ ಶರ್ಮಾ ಬೌಲಿಂಗ್ ಮಾಡುತ್ತಿದ್ದಾರೆ. ನ್ಯೂಜಿಲ್ಯಾಂಡ್ ವಿಕೆಟ್ ಪಡೆಯುವ ಒತ್ತಡ ಭಾರತೀಯ ಬೌಲರ್ಗಳಿಗೆ ಇದೆ.
ಬ್ಯಾಟಿಂಗ್ ಆರಂಭಿಸಿದ ನ್ಯೂಜಿಲ್ಯಾಂಡ್
ನ್ಯೂಜಿಲ್ಯಾಂಡ್ ತಂಡ ಬ್ಯಾಟಿಂಗ್ ಆರಂಭಿಸಿದೆ. ಟಾಮ್ ಲತಮ್ ಹಾಗೂ ಡೆವಾನ್ ಕಾನ್ವೇ ಆರಂಭಿಕರಾಗಿ ಕ್ರೀಸ್ಗೆ ಇಳಿದಿದ್ದಾರೆ. ಇಶಾಂತ್ ಶರ್ಮಾ ಮತ್ತು ಜಸ್ಪ್ರೀತ್ ಬುಮ್ರಾ ಬೌಲಿಂಗ್ ಮಾಡುತ್ತಿದ್ದಾರೆ. 3ನೇ ಓವರ್ ಅಂತ್ಯಕ್ಕೆ ನ್ಯೂಜಿಲ್ಯಾಂಡ್ ತಂಡದ ಮೊತ್ತ ವಿಕೆಟ್ ನಷ್ಟವಿಲ್ಲದೆ 3 ರನ್ ಆಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ನ್ಯೂಜಿಲ್ಯಾಂಡ್ ಭಾರತಕ್ಕಿಂತ 214 ರನ್ ಹಿಂದಿದೆ.
ಭಾರತ 217 ರನ್ಗೆ ಆಲೌಟ್
ನ್ಯೂಜಿಲ್ಯಾಂಡ್ ವಿರುದ್ಧದ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಭಾರತ ಆಲೌಟ್ ಆಗಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ, 92.1 ಓವರ್ ಆಟವಾಡಿ, 217 ರನ್ ಗಳಿಸಲಷ್ಟೇ ಶಕ್ತವಾಗಿದೆ. ಭಾರತದ ಪರ ನಾಯಕ ವಿರಾಟ್ ಕೊಹ್ಲಿ 44, ಉಪನಾಯಕ ಅಜಿಂಕ್ಯ ರಹಾನೆ 49, ರೋಹಿತ್ ಶರ್ಮಾ 34 ಹಾಗೂ ಶುಬ್ಮನ್ ಗಿಲ್ 28 ರನ್ ದಾಖಲಿಸಿದ್ದಾರೆ. ನ್ಯೂಜಿಲ್ಯಾಂಡ್ ಪರವಾಗಿ ಕೈಲ್ ಜಾಮಿಸನ್ ಅದ್ಭುತ ದಾಳಿ ಸಂಘಟಿಸಿದ್ದಾರೆ. ಜಾಮಿಸನ್ ಮುಖ್ಯ 5 ವಿಕೆಟ್ ಕಬಳಿಸಿದ್ದಾರೆ. ನ್ಯೂಜಿಲ್ಯಾಂಡ್ ಇನ್ನಷ್ಟೇ ಬ್ಯಾಟಿಂಗ್ ಆರಂಭಿಸಬೇಕಿದೆ.
ಬೌಂಡರಿ ಹೊಡೆದು ಹ್ಯಾಟ್ರಿಕ್ ತಪ್ಪಿಸಿದ ಶಮಿ
ಕೈಲ್ ಜಾಮಿಸನ್ ಬೌಲಿಂಗ್ನ ಕೊನೆಯ ಓವರ್ನಲ್ಲಿ ಭಾರತ ಬೆನ್ನುಬೆನ್ನಿಗೆ ಎರಡು ವಿಕೆಟ್ ಕಳೆದುಕೊಂಡಿತು. ಇಶಾಂತ್ ಶರ್ಮಾ ಹಾಗೂ ಬುಮ್ರಾ, ಜಾಮಿಸನ್ ಓವರ್ನ 4 ಹಾಗೂ 5ನೇ ಬಾಲ್ಗೆ ಔಟ್ ಆದರು. ಆ ಮೂಲಕ, ಜಾಮಿಸನ್ಗೆ ಹ್ಯಾಟ್ರಿಕ್ ಪಡೆಯುವ ಅವಕಾಶ ನೀಡಿದ್ದರು. ಆದರೆ, ಮೊಹಮ್ಮದ್ ಶಮಿ ಹ್ಯಾಟ್ರಿಕ್ ಬಾಲ್ಗೆ ಬೌಂಡರಿ ಬಾರಿಸಿ ಮುಜುಗರ ತಪ್ಪಿಸಿದರು.
ಜಾಮಿಸನ್ ಬೌಲಿಂಗ್ ಕಮಾಲ್
Kyle Jamieson celebrates the fifth five-wicket haul of his career ?
Gets back-to-back dismissals of Ishant Sharma and Jasprit Bumrah after lunch.
?? are 217/9.#WTC21 Final | #INDvNZ | https://t.co/UPFl7kUbGh pic.twitter.com/RNAOEeufTl
— ICC (@ICC) June 20, 2021
ಎರಡನೇ ಸೆಷನ್ ಆರಂಭ; ಭಾರತ ತತ್ತರ!
ನ್ಯೂಜಿಲ್ಯಾಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನ ಎರಡನೇ ದಿನವಾದ ಇಂದು, ಭಾರತ ತನ್ನ ವಿಕೆಟ್ಗಳನ್ನು ಬೇಗನೇ ಕಳೆದುಕೊಳ್ಳುತ್ತಿದೆ. ಜಾಮಿಸನ್ ಕೊನೆಯ ಓವರ್ನಲ್ಲಿ ಮತ್ತೆ ಎರಡು ವಿಕೆಟ್ ಉರುಳಿಸಿದ್ದಾರೆ. ಇಶಾಂತ್ ಶರ್ಮಾ 4 ರನ್ ಗಳಿಸಿ ಟೆಯ್ಲರ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ. ನಂತರ ಬಂದ ಬುಮ್ರಾ ಸೊನ್ನೆ ಸುತ್ತಿದ್ದಾರೆ. ಭಾರತ ತಂಡದ ಮೊತ್ತ 92 ಓವರ್ಗೆ 217-9 ಆಗಿದೆ.
ಊಟದ ವಿರಾಮದ ವೇಳೆ ಭಾರತ 211-7 (89 ಓವರ್)
ಮೂರನೇ ದಿನದಾಟದ ಊಟದ ವಿರಾಮದ ವೇಳೆಗೆ ಭಾರತ ತಂಡದ ಮೊತ್ತ 89 ಓವರ್ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 211 ರನ್ ಆಗಿದೆ. ಬ್ಯಾಟ್ಸ್ಮನ್ಗಳ ಬೇಗನೇ ವಿಕೆಟ್ ಒಪ್ಪಿಸಿ ನಿರಾಸೆ ಮೂಡಿಸಿದ್ದಾರೆ. ಇದೀಗ ಬೌಲರ್ಗಳು ಕಣದಲ್ಲಿದ್ದಾರೆ. 300 ರನ್ಗಳಾದರೂ ದಾಟಬೇಕು ಎಂಬುದು ಭಾರತದ ಕ್ರಿಕೆಟ್ ಅಭಿಮಾನಿಗಳ ಆಶಯವಾಗಿತ್ತು. ಇಂದಿನ ದಿನದ ಮುಂದಿನ ಆಟ ಹೇಗೆ ಸಾಗುತ್ತದೆ ಎಂದು ಕಾದುನೋಡಬೇಕಿದೆ.
ಭಾರತ 200 ರನ್ ಗಡಿದಾಟಿದ ಸಂಭ್ರಮ
200 up for #TeamIndia
Live – https://t.co/CmrtWsugSK #WTC21 pic.twitter.com/F35tfjBcLR
— BCCI (@BCCI) June 20, 2021
ಅಶ್ವಿನ್ ಔಟ್
ಬಲಾಢ್ಯ ಬ್ಯಾಟ್ಸ್ಮನ್ಗಳ ವಿಕೆಟ್ ಪತನದ ಬಳಿಕ ಉತ್ತಮ ಆಟ ಆಡುತ್ತಿದ್ದ ಸ್ಪಿನ್ನರ್ ಜೋಡಿಯೂ ಬೇರ್ಪಟ್ಟಿದೆ. ರವೀಂದ್ರ ಜಡೇಜಾ ಜೊತೆಯಾಗಿದ್ದ ಅಶ್ವಿನ್ ವಿಕೆಟ್ ಒಪ್ಪಿಸಿದ್ದಾರೆ. 27 ಬಾಲ್ಗೆ 22 ರನ್ ಗಳಿಸಿ ಟಿಮ್ ಸೌಥಿ ಬೌಲಿಂಗ್ಗೆ ಲತಮ್ಗೆ ಕ್ಯಾಚ್ ನೀಡಿ ನಿರ್ಗಮಿಸಿದ್ದಾರೆ.
Tim Southee gets his first wicket of the game ?
Dismisses Ravichandran Ashwin, whose enterprising knock of 22 comes to an end.
?? are 205/7. #WTC21 Final | #INDvNZ | https://t.co/sJbdAn7fZ5 pic.twitter.com/eeY4iuUzmO
— ICC (@ICC) June 20, 2021
200 ರನ್ ಗಡಿ ದಾಟಿದ ಭಾರತದ ಸ್ಕೋರ್
ಮುಖ್ಯ ದಾಂಡಿಗರ ವಿಕೆಟ್ ಪತನದ ಬಳಿಕವೂ ಭಾರತ ಸ್ಪಿನ್ನರ್ಗಳ ಆಟದ ನೆರವಿನಿಂದ 200 ರನ್ ಗಡಿ ದಾಟಿದೆ. ಭಾರತ ತಂಡದ ಮೊತ್ತ 86 ಓವರ್ಗಳ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 205 ರನ್ ಆಗಿದೆ. ಆದರೆ, ಈ ಸಂಭ್ರಮದ ನಡುವೆ ರವಿಚಂದ್ರನ್ ಅಶ್ವಿನ್ ಔಟ್ ಆಗಿದ್ದಾರೆ. ಇದೀಗ ರವೀಂದ್ರ ಜಡೇಜಾ ಜೊತೆಗೆ ಇಶಾಂತ್ ಶರ್ಮಾ ಬ್ಯಾಟಿಂಗ್ ಮಾಡುತ್ತಿದ್ದಾರೆ.
ಭಾರತ 182-6 (82 ಓವರ್)
ಭಾರತ ತಂಡ 82 ಓವರ್ಗಳ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 182 ರನ್ ದಾಖಲಿಸಿದೆ. ತಂಡದ ಪರವಾಗಿ ಇಬ್ಬರು ಸ್ಪಿ್ನರ್ಗಳು ಬ್ಯಾಟಿಂಗ್ ಮಾಡುತ್ತಿದ್ದಾರೆ. ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಕ್ರೀಸ್ನಲ್ಲಿದ್ದಾರೆ.
ಅಜಿಂಕ್ಯ ರಹಾನೆ ಕೂಡ ಔಟ್ ಆಗಿರುವುದು ಭಾರತದ ಬ್ಯಾಟಿಂಗ್ಗೆ ಆಘಾತ ನೀಡಿದೆ..
#TeamIndia vice-captain batted with a lot of grit and gumption.
He departs after scoring 49 off 117 deliveries.
Live – https://t.co/CmrtWsugSK #WTC21 Final pic.twitter.com/7rlEi9ROXt
— BCCI (@BCCI) June 20, 2021
49 ರನ್ ಗಳಿಸಿ ರಹಾನೆ ಔಟ್
ವಿರಾಟ್ ಕೊಹ್ಲಿ ಜೊತೆ ಉತ್ತಮ ಆಟ ಆಡುತ್ತಿದ್ದ ಅಜಿಂಕ್ಯ ರಹಾನೆ ಕೂಡ ಅರ್ಧಶತಕ ವಂಚಿತರಾಗಿ ಮರಳಿದ್ದಾರೆ. ವಿರಾಟ್ ಕೊಹ್ಲಿ ಬೆನ್ನಲ್ಲೇ ರಹಾನೆ ಕೂಡ ನಿರ್ಗಮಿಸಿದ್ದಾರೆ. ರಹಾನೆ, 117 ಬಾಲ್ಗೆ 49 ರನ್ ಗಳಿಸಿ ವಾಗ್ನರ್ಗೆ ವಿಕೆಟ್ ಒಪ್ಪಿಸಿದ್ದಾರೆ. ಇದೀಗ ರವೀಂದ್ರ ಜಡೇಜಾ ಜೊತೆ ರವಿಚಂದ್ರನ್ ಅಶ್ವಿನ್ ಕ್ರೀಸ್ನಲ್ಲಿದ್ದಾರೆ. ಇಬ್ಬರು ಸ್ಪಿನ್ನರ್ಗಳ ಆಟ ತಂಡಕ್ಕೆ ಎಷ್ಟು ಸಹಕಾರಿ ಆಗಿರುತ್ತದೆ ಎಂದು ಕಾದುನೋಡಬೇಕಿದೆ. ಮೂರನೇ ದಿನದಾಟದ ಆರಂಭ ಮಾತ್ರ ಭಾರತಕ್ಕೆ ಆಶಾದಾಯಕವಾಗಿ ಕಂಡುಬರುತ್ತಿಲ್ಲ.
ಭಾರತ 166-5 (76 ಓವರ್)
ಭಾರತ ತಂಡ 76 ಓವರ್ಗಳ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 166 ರನ್ ದಾಖಲಿಸಿದೆ. ಅಜಿಂಕ್ಯಾ ರಹಾನೆ ಹಾಗೂ ರವೀಂದ್ರ ಜಡೇಜಾ ಬ್ಯಾಟಿಂಗ್ ಮಾಡುತ್ತಿದ್ದಾರೆ. ರಹಾನೆ 39 ರನ್ ಪೇರಿಸಿದ್ದಾರೆ. ಜಡೇಜಾ 1 ಬೌಂಡರಿ ಸಹಿತ 6 ರನ್ ಕಲೆಹಾಕಿದ್ದಾರೆ. ಮೂರನೇ ದಿನದಾಟದಲ್ಲಿ ಕೈಲ್ ಜಾಮಿಸನ್ ಭಾರತದ ಎರಡು ವಿಕೆಟ್ ಕಸಿದು ನ್ಯೂಜಿಲ್ಯಾಂಡ್ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ್ದಾರೆ.
Kyle Jamieson strikes again to dismiss Rishabh Pant.
A fantastic catch by Tom Latham in the slips ?
?? are 156/5.
#WTC21 Final | #INDvNZ | https://t.co/fbqJuBk9wF pic.twitter.com/GysPNoY8Xs
— ICC (@ICC) June 20, 2021
ರಿಷಭ್ ಪಂತ್ ಔಟ್
ಭಾರತದ 5ನೇ ವಿಕೆಟ್ ಪತನವಾಗಿದೆ. ಕೈಲ್ ಜಾಮಿಸನ್ ಬೌಲಿಂಗ್ ದಾಳಿಗೆ ಭಾರತ ತನ್ನ ಮುಖ್ಯ ವಿಕೆಟ್ಗಳನ್ನು ಕಳೆದುಕೊಳ್ಳುತ್ತಿದೆ. ವಿರಾಟ್ ಕೊಹ್ಲಿ ಬಳಿಕ ಇದೀಗ ರಿಷಭ್ ಪಂತ್ ಔಟ್ ಆಗಿದ್ದಾರೆ. 22 ಬಾಲ್ಗೆ 4 ರನ್ ಗಳಿಸಿದ್ದ ಪಂತ್ ನಿರ್ಗಮಿಸಿದ್ದಾರೆ. ಇದೀಗ ಅಇಂಕ್ಯ ರಹಾನೆ ಜೊತೆಗೆ ರವೀಂದ್ರ ಜಡೇಜಾ ಕ್ರೀಸ್ಗೆ ಇಳಿದಿದ್ದಾರೆ. ಭಾರತ ತಂಡದ ಮೊತ್ತ 74 ಓವರ್ಗೆ 5 ವಿಕೆಟ್ ಕಳೆದುಕೊಂಡು 156 ರನ್ ದಾಖಲಿಸಿದೆ.
ಭಾರತ 150-4 (71 ಓವರ್)
ಭಾರತ ತಂಡ 71 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 150 ರನ್ ದಾಖಲಿಸಿದೆ. ಉಪನಾಯಕ ಅಜಿಂಕ್ಯ ರಹಾನೆ ಹಾಗೂ ರಿಷಭ್ ಪಂತ್ ಬ್ಯಾಟಿಂಗ್ ಮಾಡುತ್ತಿದ್ದಾರೆ. ರಹಾನೆ 32 ರನ್ ಗಳಿಸಿ ಆಡುತ್ತಿದ್ದಾರೆ. ರಿಷಭ್ ಪಂತ್ 13 ಬಾಲ್ಗೆ ಖಾತೆ ತೆರೆಯದೇ ಆಡುತ್ತಿದ್ದಾರೆ. ಕೈಲ್ ಜಾಮಿಸನ್ 2 ವಿಕೆಟ್ ಪಡೆದು ಬೌಲಿಂಗ್ ಮಾಡುತ್ತಿದ್ದಾರೆ.
ಕೊಹ್ಲಿ ವಿಕೆಟ್ ಕಿತ್ತ ಕೈಲ್ ಜಾಮಿಸನ್
Kyle Jamieson gets the massive scalp of Virat Kohli!
The Indian captain is out for 44.
?? are 149/4.
#WTC21 Final | #INDvNZ | https://t.co/IvsdXSZmbs pic.twitter.com/j8dJTqbaBm
— ICC (@ICC) June 20, 2021
ವಿರಾಟ್ ಕೊಹ್ಲಿ ಔಟ್
ಭಾರತದ ಪರವಾಗಿ ಉತ್ತಮ ಆಟವಾಡುತ್ತಿದ್ದ ನಾಯಕ ವಿರಾಟ್ ಕೊಹ್ಲಿ ಅರ್ಧಶತಕದ ಅಂಚಿನಲ್ಲಿ ಔಟ್ ಆಗಿದ್ದಾರೆ. ಅಜಿಂಕ್ಯ ರಹಾನೆ ಜೊತೆಯಾಗಿ ಇನ್ನಿಂಗ್ಸ್ ಕಟ್ಟುವ ಭರವಸೆ ನೀಡಿದ್ದ ಕೊಹ್ಲಿ ಮೂರನೇ ದಿನದಾಟದ ಆರಂಭದಲ್ಲೇ ನಿರ್ಗಮಿಸಿದ್ದಾರೆ. 132 ಬಾಲ್ಗೆ 44 ರನ್ ಗಳಿಸಿ ಕೈಲ್ ಜಾಮಿಸನ್ ಎಲ್ಬಿಡಬ್ಲ್ಯು ಬಲೆಗೆ ಬಿದ್ದಿದ್ದಾರೆ. ಇದೀಗ, ಉಪನಾಯಕ ಅಜಿಂಕ್ಯ ರಹಾನೆ ಜೊತೆಗೆ ರಿಷಭ್ ಪಂತ್ ಕಣಕ್ಕಿಳಿದಿದ್ದಾರೆ.
ಮೊದಲ ಸೆಷನ್ ಆರಂಭ
ಭಾರತ- ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ಡಬ್ಲ್ಯುಟಿಸಿ ಫೈನಲ್ ಪಂದ್ಯದ, ಮೂರನೇ ದಿನದ ಮೊದಲ ಸೆಷನ್ ಆರಂಭವಾಗಿದೆ. ಭಾರತ ತಂಡ 66 ಓವರ್ಗೆ 3 ವಿಕೆಟ್ ಕಳೆದುಕೊಂಡು 147 ರನ್ ದಾಖಲಿಸಿದೆ. ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಬ್ಯಾಟಿಂಗ್ ಮಾಡುತ್ತಿದ್ದಾರೆ. ಕೈಲ್ ಜಾಮಿಸನ್ ಮತ್ತು ಟ್ರೆಂಟ್ ಬೋಲ್ಟ್ ಬೌಲಿಂಗ್ ದಾಳಿ ಆರಂಭಿಸಿದ್ದಾರೆ.
ಪಂದ್ಯಕ್ಕೂ ಮುನ್ನ ಸೌಥಾಂಪ್ಟನ್ ಮೈದಾನ ಕಂಡುಬಂದಿದ್ದು ಹೀಗೆ:
Good news from Southampton ?
Day three of the #WTC21 Final will get underway at 11:00 am local time!#INDvNZ pic.twitter.com/12WYxdnsMl
— ICC (@ICC) June 20, 2021
2ನೇ ದಿನದಾಟ ಹೇಗಿತ್ತು?
ಭಾರತ ನ್ಯೂಜಿಲ್ಯಾಂಡ್ ನಡುವಿನ ಎರಡನೇ ದಿನದಾಟ ಹೇಗಿತ್ತು? ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯಾ ರಹಾನೆ ಜೊತೆಯಾಟ, ರೋಹಿತ್ ಶರ್ಮಾ ಮತ್ತು ಶುಬ್ಮನ್ ಗಿಲ್ ಆರಂಭಿಕ ಆಟ, ನ್ಯೂಜಿಲ್ಯಾಂಡ್ ಬೌಲಿಂಗ್.. ಪಂದ್ಯದ ಹೈಲೈಟ್ಸ್ನ್ನು ನೀವು ಇಲ್ಲಿ ನೋಡಬಹುದು.
As we gear up for Day 3 of the #WTC21 Final, here's a quick recap of how the action unfolded on Day 2 in Southampton ?️ ? #TeamIndia
— BCCI (@BCCI) June 20, 2021
ಪಂದ್ಯ ಆರಂಭ ವಿಳಂಬ
ಬೆಳಗ್ಗೆ ಸುರಿದ ಮಳೆಯ ಕಾರಣದಿಂದ ಮೈದಾನ ಪಂದ್ಯ ಆಡಲು ಸೂಕ್ತವಾಗಿ ತಯಾರಾಗಿಲ್ಲ. ಈ ಬಗ್ಗೆ 10.20ಕ್ಕೆ (ಸ್ಥಳೀಯ ಕಾಲಮಾನ) 2.50 (ಭಾರತೀಯ ಕಾಲಮಾನ) ಪರಿಶೀಲನೆ ನಡೆಸಲಾಗಿದೆ. ಅದರಂತೆ ಪಂದ್ಯ ಭಾರತೀಯ ಕಾಲಮಾನ 3 ಗಂಟೆಗೆ ಆರಂಭವಾಗಲಿದೆ.
It's been a rainy morning here in Southampton and the covers have just been removed.
Next inspection will take place at 10.20 AM local time, 14.50 IST.#WTC21 pic.twitter.com/mYnewHrWup
— BCCI (@BCCI) June 20, 2021
ನ್ಯೂಜಿಲ್ಯಾಂಡ್ ಬೌಲಿಂಗ್ ಅಂಕಿಅಂಶ
ಭಾರತದ ವಿರುದ್ಧ ಬೌಲಿಂಗ್ಗೆ ಇಳಿದ ನ್ಯೂಜಿಲ್ಯಾಂಡ್ ಬೌಲರ್ಗಳು 3 ವಿಕೆಟ್ ಕಬಳಿಸಿದರು. ಕೈಲ್ ಜಾಮಿಸನ್, ನೀಲ್ ವಾಗ್ನರ್ ಹಾಗೂ ಟ್ರೆಂಟ್ ಬೋಲ್ಟ್ ತಲಾ 1 ವಿಕೆಟ್ ಕಬಳಿಸಿದರು. ಟಿಮ್ ಸೌಥಿ ಅತಿಹೆಚ್ಚು ಅಂದರೆ 17 ಓವರ್ ಬೌಲಿಂಗ್ ಮಾಡಿದರು.
ಎರಡನೇ ದಿನದಾಟದ ಅಂತ್ಯದ ಸ್ಕೋರ್ ಹೀಗಿದೆ
ನಿನ್ನೆ (ಜೂನ್ 19) ದಿನದಾಟ ಅಂತ್ಯವಾಗುವ ವೇಳೆಗೆ ಭಾರತದ ಸ್ಕೋರ್ 64.4 ಓವರ್ಗೆ 3 ವಿಕೆಟ್ ಕಳೆದುಕೊಂಡು 146 ರನ್ ಆಗಿತ್ತು. ಆರಂಭಿಕರಾದ ರೋಹಿತ್ ಶರ್ಮಾ 34 (68), ಶುಬ್ಮನ್ ಗಿಲ್ 28 (64), ನಂತರ ಆಡಿದ ಚೇತೇಶ್ವರ ಪೂಜಾರ 8 (54) ರನ್ ಗಳಿಸಿ ಔಟ್ ಆಗಿದ್ದರು. ಬಳಿಕ ಜೊತೆಯಾದ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ಉತ್ತಮ ಜೊತೆಯಾಟ ನೀಡಿದ್ದರು. ಕೊಹ್ಲಿ 124 ಬಾಲ್ಗೆ 44 ರನ್ ಗಳಿಸಿ ಕಣದಲ್ಲಿದ್ದಾರೆ. ರಹಾನೆ 79 ಬಾಲ್ 29 ರನ್ ಗಳಿಸಿ ವಿಕೆಟ್ ಉಳಿಸಿಕೊಂಡಿದ್ದಾರೆ.
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿಸುದ್ದಿ
ಭಾರತ ಮತ್ತು ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಸಂಪೂರ್ಣ ಲೈವ್ ಮಾಹಿತಿಗಳು ಇಲ್ಲಿ ನಿಮಗೆ ಲಭ್ಯವಿರುತ್ತದೆ. ಪಂದ್ಯದ ಕುತೂಹಲವನ್ನು ಅಕ್ಷರಗಳಲ್ಲಿ ನೀವು ಆಸ್ವಾದಿಸಬಹುದು. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ- ನ್ಯೂಜಿಲೆಂಡ್ ತಂಡಗಳು ಕಣಕ್ಕಿಳಿದಿದ್ದು. ಯಾರು ಗೆಲ್ಲುತ್ಥಾರೆ, ಪಂದ್ಯದಲ್ಲಿ ಏನೇನು ದಾಖಲೆ, ಬೆಳವಣಿಗೆಗಳು ಆಗುತ್ತವೆ ಎಂದು ಇಲ್ಲಿ ಮಾಹಿತಿ ಪಡೆಯಬಹುದು. ಟಿವಿ9 ಡಿಜಿಟಲ್ನಲ್ಲಿ ಕ್ರಿಕೆಟ್ಗಾಗಿ ವಿಶೇಷ ಪುಟ ತೆರೆಯಲಾಗಿದೆ. ಅಲ್ಲಿಯೂ ಕ್ರಿಕೆಟ್ ಬಗ್ಗೆ ಹಲವು ವಿಶೇಷ ಮಾಹಿತಿಗಳನ್ನು ಓದಬಹುದು. ಅದಕ್ಕಾಗಿ ಈ ಲಿಂಕ್ ಕ್ಲಿಕ್ ಮಾಡಿ ಟಿವಿ9 ಡಿಜಿಟಲ್- ಕ್ರಿಕೆಟ್