ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನ ಐದನೇ ದಿನ ಇಂದು. ಪಂದ್ಯದ ಎರಡು ದಿನಗಳು ಮಳೆಯಿಂದ ಸಂಪೂರ್ಣವಾಗಿ ರದ್ದಾದವು, ಈ ಎರಡು ದಿನಗಳಲ್ಲಿ ಒಂದು ಬಾಲ್ ಕೂಡ ಆಡಲಾಗಲಿಲ್ಲ. ಸೌತಾಂಪ್ಟನ್‌ನಲ್ಲಿ ಇಂದು ಉತ್ತಮ ಹವಾಮಾನದಿಂದಾಗಿ ಆಟವು ಸಮಯಕ್ಕೆ ಸರಿಯಾಗಿ ಪ್ರಾರಂಭವಾಗುವ ನಿರೀಕ್ಷೆಯಿತ್ತು. ಆದರೆ ಬೆಳಿಗ್ಗೆಯಿಂದಲೂ ಕಾಟ ಕೊಡದೆ ಶಾಂತವಾಗಿದ್ದ ಮಳೆರಾಯ, ಪಂದ್ಯ ಆರಂಭವಾಗುವ ಸಮಯಕ್ಕೆ ಸರಿಯಾಗಿ ಹಾಜರಾಗಿದ್ದಾನೆ. ಇದರಿಂದಾಗಿ 5ನೇ ದಿನದ ಮೊದಲ ಸೆಷನ್ ಆರಂಭವಾಗುವುದು ಕೊಂಚ ವಿಳಂಬವಾಗಿದೆ. ಈ ಬಗ್ಗೆ ಬಿಸಿಸಿಐ ತನ್ನ ಟ್ವಿಟರ್ ಖಾತೆಯಲ್ಲಿ ಅಧಿಕೃತ ಮಾಹಿತಿ ಹೊರಹಾಕಿದೆ. ಪಂದ್ಯದ ಮರು ಆರಂಭದ ಬಗ್ಗೆ ಯಾವುದೇ ಮಾಹಿತಿಯನ್ನು ಇದುವರೆಗೂ ನೀಡಲಾಗಿಲ್ಲ.
ಪಂದ್ಯದ ಪ್ರಸ್ತುತ ಸ್ಥಿತಿ
ಪಂದ್ಯದಲ್ಲಿ ಒಂದು ತಂಡ ಇಲ್ಲಿಯವರೆಗೆ ಒಂದು ಇನ್ನಿಂಗ್ಸ್ ಆಡಿದೆ. ಭಾರತ ತಂಡ 217 ರನ್ಗಳಿಗೆ ಆಲ್ಔಟ್ ಆಗಿದೆ. ಇದಕ್ಕೆ ಉತ್ತರವಾಗಿ ನ್ಯೂಜಿಲೆಂಡ್ ಎರಡು ವಿಕೆಟ್ ಕಳೆದುಕೊಂಡು 101 ರನ್ ಗಳಿಸಿದೆ. ಅಂದರೆ ನ್ಯೂಜಿಲೆಂಡ್ 116 ರನ್‌ಗಳ ಹಿನ್ನಡೆಯಲ್ಲಿದೆ. ಇದು ಪಂದ್ಯದ ಐದನೇ ದಿನವಾದ್ದರಿಂದ ಪಂದ್ಯವು ಡ್ರಾದತ್ತ ಸಾಗುತ್ತಿದೆ. ಪಂದ್ಯವನ್ನು ಡ್ರಾ ಮಾಡಿದರೆ, ಎರಡೂ ತಂಡಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಗುತ್ತದೆ.
ಟ್ರೋಫಿಯನ್ನು ಹಂಚಿಕೊಳ್ಳಲಾಗುವುದು
ಐದನೇ ದಿನ ಮತ್ತು ಮೀಸಲು ದಿನ ಸೇರಿದಂತೆ ಪಂದ್ಯದಲ್ಲಿ 2 ದಿನಗಳು ಉಳಿದಿವೆ. ಆದಾಗ್ಯೂ, ಎರಡು ದಿನಗಳಲ್ಲಿ ಯಾವುದೇ ಸ್ಪಷ್ಟ ಪಲಿತಾಂಶ ಬರದಿದ್ದರೆ, ಎರಡೂ ತಂಡಗಳನ್ನು ವಿಜೇತರು ಎಂದು ಘೋಷಿಸಲಾಗುತ್ತದೆ ಮತ್ತು ಟ್ರೋಫಿಯನ್ನು ಹಂಚಿಕೊಳ್ಳಲಾಗುತ್ತದೆ. ಪಂದ್ಯ ಪೂರ್ಣಗೊಳ್ಳದಿರುವ ಸಾಧ್ಯತೆ ಹೆಚ್ಚಿರುವುದರಿಂದ ನ್ಯೂಜಿಲೆಂಡ್ ತಂಡದ ಮೊದಲ ಇನ್ನಿಂಗ್ಸ್ ಇನ್ನೂ ಪೂರ್ಣಗೊಂಡಿಲ್ಲ. ಒಂದೆಡೆ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 217 ರನ್ ಗಳಿಸಿದರೆ, ನ್ಯೂಜಿಲೆಂಡ್ ಎರಡು ವಿಕೆಟ್‌ಗೆ 101 ರನ್ ಗಳಿಸಿದೆ.
Start of play on Day 5 has been delayed due to rain.#WTC21 Final pic.twitter.com/VX6bmSyRKb
— BCCI (@BCCI) June 22, 2021