ನಾನು ಮತ್ತು ಕುಲ್ದೀಪ್ ಒಟ್ಟಿಗೆ ಆಡುವುದನ್ನು ಬೇರ್ಪಡಿಸಿದ್ದು ಜಡೇಜಾ, ಅವರು ಸ್ಪಿನ್ನರ್ ಆಗಿದ್ದೆ ಇದಕ್ಕೆ ಕಾರಣ; ಯಜ್ವೇಂದ್ರ ಚಹಲ್
ಜಡೇಜಾ ವೇಗದ ಬೌಲರ್ ಆಗಿದ್ದರೆ, ನಾನು ಹಾಗೂ ಕುಲ್ದೀಪ್ ಇಬ್ಬರೂ ಒಟ್ಟಿಗೆ ಆಡಬಹುದಿತ್ತು ಎಂದು ಚಹಲ್ ಹೇಳಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಸೀಮಿತ ಓವರ್‌ಗಳ ತಂಡದಲ್ಲಿ ಕುಲದೀಪ್ ಯಾದವ್ ಮತ್ತು ಯಜ್ವೇಂದ್ರ ಚಹಲ್ ಒಟ್ಟಿಗೆ ಆಡಿದ ಸಮಯವಿತ್ತು. ಈ ಇಬ್ಬರು ಆಟಗಾರರು ‘ಕುಲ್ಚಾ’ ಎಂಬ ಹೆಸರಿನಿಂದ ಪ್ರಸಿದ್ಧರಾಗಿದ್ದರು. ಈ ಇಬ್ಬರೂ ಮಧ್ಯಮ ಓವರ್‌ಗಳಲ್ಲಿ ತಂಡಕ್ಕೆ ಬಹಳ ಉಪಯುಕ್ತವಾಗಿದ್ದರು ಮತ್ತು ರನ್‌ಗಳನ್ನು ಕಟ್ಟಿಹಾಕಿ ವಿಕೆಟ್‌ಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ ಇಬ್ಬರೂ ದೀರ್ಘಕಾಲ ಒಟ್ಟಿಗೆ ಆಡಲು ಸಾಧ್ಯವಾಗಲಿಲ್ಲ. ಈ ಇಬ್ಬರು ಕೊನೆಯದಾಗಿ 2019 ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಒಟ್ಟಿಗೆ ಆಡಿದರು. ಆ ಪಂದ್ಯದಲ್ಲಿ ಇಬ್ಬರೂ ಸಾಕಷ್ಟು ರನ್ ನೀಡಿದ್ದರು. ಒಟ್ಟಾಗಿ ಅವರು 20 ಓವರ್‌ಗಳಲ್ಲಿ 160 ರನ್ ನೀಡಿ ಕೇವಲ ಒಂದು ವಿಕೆಟ್ ಪಡೆದರು. ಅಂದಿನಿಂದ, ಇಬ್ಬರೂ ತಂಡದಿಂದ ಹೊರಗುಳಿದಿದ್ದಾರೆ.
ಇದರ ನಂತರ, ಇಬ್ಬರೂ ತಂಡದಲ್ಲಿ ಆಡಿದ್ದರೂ ಏಕಾಂಗಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಈ ಇಬ್ಬರು ಜೋಡಿಯಾಗಿ ಆಡಿಲ್ಲ. ಈಗ ಅವರ ಜೋಡಿ ಬೇರಾಗುಲು ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟ ಈ ಆಲ್ರೌಂಡರ್ ಕಾರಣವೆಂದು ಚಹಲ್ ಹೇಳಿದ್ದಾರೆ. ಈ ಆಟಗಾರನ ಮರಳುವಿಕೆಯಿಂದ ಕೇವಲ ಒಂದು ಸ್ಥಳ ಮಾತ್ರ ಉಳಿದಿದೆ ಎಂದು ಚಹಲ್ ನಂಬಿದ್ದಾರೆ. ಈ ಆಟಗಾರ ಬೇರ್ಯಾರು ಅಲ್ಲ ರವೀಂದ್ರ ಜಡೇಜಾ. ಜಡೇಜಾ ಆಗಮನದೊಂದಿಗೆ ಅವರು ಬ್ಯಾಟಿಂಗ್ ಜೊತೆಗೆ ಬೌಲಿಂಗ್ ಕೂಡ ಮಾಡುತ್ತಾರೆ. ಹೀಗಾಗಿ ತಂಡದಲ್ಲಿ ಈಗ ಕೇವಲ ಒಂದು ಸ್ಥಳ ಮಾತ್ರ ಉಳಿದಿದೆ, ಆದ್ದರಿಂದ ಚಹಲ್ ಮತ್ತು ಕುಲದೀಪ್ ಈ ಇಬ್ಬರಲ್ಲಿ ಇಬ್ಬರು ಮಾತ್ರ ಆಡುತ್ತಾರೆ ಎಂದು ಚಹಲ್ ಹೇಳಿದರು.
ಜಡೇಜಾ ವೇಗದ ಬೌಲರ್ ಆಗಿದ್ದರೆ ತೊಂದರೆ ಇರುತ್ತಿರಲಿಲ್ಲ ಜಡೇಜಾ ವೇಗದ ಬೌಲರ್ ಆಗಿದ್ದರೆ, ನಾನು ಹಾಗೂ ಕುಲ್ದೀಪ್ ಇಬ್ಬರೂ ಒಟ್ಟಿಗೆ ಆಡಬಹುದಿತ್ತು ಎಂದು ಚಹಲ್ ಹೇಳಿದ್ದಾರೆ. ಇಂಡಿಯಾ ಟುಡೇ ಜೊತೆ ಮಾತನಾಡಿದ ಚಹಲ್, ತಂಡಕ್ಕೆ 7 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಬಲ್ಲ ಆಲ್ರೌಂಡರ್ ಅಗತ್ಯವಿದೆ. ನಾನು ಮತ್ತು ಕುಲದೀಪ್ ಆಡುತ್ತಿದ್ದಾಗ, ಹಾರ್ದಿಕ್ ಪಾಂಡ್ಯ ಯಾವಾಗಲೂ ಇದ್ದರು ಮತ್ತು ಅವರು ಬೌಲಿಂಗ್ ಮಾಡುತ್ತಿದ್ದರು. 2018 ರಲ್ಲಿ ಹಾರ್ದಿಕ್ ಪಾಂಡ್ಯ ಗಾಯಗೊಂಡರು ಮತ್ತು ರವೀಂದ್ರ ಜಡೇಜಾ ಆಲ್‌ರೌಂಡರ್ ಆಗಿ ಸೀಮಿತ ಓವರ್‌ಗಳಲ್ಲಿ ಮರಳಿದರು. ಅವರು ನಂ -7 ರಲ್ಲಿ ಬ್ಯಾಟಿಂಗ್ ಮಾಡುವ ಸಾಮಥ್ರ್ಯ ಹೊಂದಿದ್ದಾರೆ. ದುರದೃಷ್ಟವಶಾತ್ ಅವರು ಸ್ಪಿನ್ನರ್. ಅವರು ಮಧ್ಯಮ ವೇಗದ ಬೌಲರ್ ಆಗಿದ್ದರೆ ನಾವು ಒಟ್ಟಿಗೆ ಆಡಬಹುದಿತ್ತು ಎಂದು ಚಹಲ್ ವಿವರಿಸಿದ್ದಾರೆ.
ನನಗೆ ಯಾವುದೇ ಬೇಸರವಿಲ್ಲ ಆದರೆ, ಚಹಲ್ ಈ ಬಗ್ಗೆ ಬೇಸರ ವ್ಯಕ್ತಪಡಿಸಿಲ್ಲ. ನಾನು ಇಲ್ಲದೆ ತಂಡ ಗೆದ್ದರೆ, ನಾನು ತಂಡದ ವಿಜಯದಲ್ಲಿ ಬಾಗಿಯಾಗಲು ಖುಷಿಪಡುತ್ತೇನೆ. ಮುಂದಿನ ಸರಣಿಗಳಲ್ಲಿ ಅವಕಾಶ ಸಿಕ್ಕರೆ ಕುಲದೀಪ್ ಮತ್ತು ನಾನು ಪ್ರತಿ ಸರಣಿಯಲ್ಲಿ 50-50 ಪಂದ್ಯಗಳನ್ನು ಆಡುತ್ತೇವೆ. ಐದು ಬಾರಿ ಸರಣಿಯಲ್ಲಿ ಕುಲದೀಪ್ ಮೂರು ಪಂದ್ಯಗಳನ್ನು ಆಡುತ್ತಾನೆ, ಕೆಲವೊಮ್ಮೆ ನನಗೆ ಅವಕಾಶ ಸಿಗುತ್ತದೆ. ನಮಗೂ ಅವಕಾಶಗಳು ಸಿಗುತ್ತಿದ್ದವು. ತಂಡಕ್ಕೆ 7 ನೇ ಸ್ಥಾನದಲ್ಲಿ ಆಲ್ರೌಂಡರ್ ಅಗತ್ಯವಿದೆ. ನಾನು ತಂಡದಲ್ಲಿಲ್ಲದಿದ್ದರೂ ಟೀಂ ಗೆಲ್ಲುತ್ತಿದ್ದರೆ ನನಗೆ ಅದೇ ಸಾಕು ಎಂದು ಚಹಲ್ ಹೇಳಿದ್ದಾರೆ.