ಹರಾರೆ (ಜಿಂಬಾಬ್ವೆ): ಪಾಕಿಸ್ತಾನ ಮತ್ತು ಜಿಂಬಾಬ್ವೆ ತಂಡಗಳ ನಡುವಣ ಎರಡನೆಯ ಟಿ 20 ಅಂತಾರಾಷ್ಟ್ರೀಯ ಪಂದ್ಯ ವೀರೋಚಿತವಾಗಿತ್ತು. ಪಂದ್ಯದಲ್ಲಿ ಕೇವಲ 119 ರನ್ ಗುರಿ ನೀಡಿ, ಅಷ್ಟು ಅಲ್ಪ ಮೊತ್ತವನ್ನೇ ರಕ್ಷಿಸಿಕೊಂಡು ತಮ್ಮ ತಾಯ್ನಾಡಿನಲ್ಲಿ ಪಾಕಿಸ್ತಾನಕ್ಕೆ ಮಣ್ಣುಮುಕ್ಕಿಸುವಲ್ಲಿ ಜಿಂಬಾಬ್ವೆ ಬೌರ್ಗಳು ಯಶಸ್ವಿಯಾಗಿದ್ದಾರೆ. ಇದನ್ನು ಆಸ್ವಾದಿಸಿದ ನೆಟ್ಟಿಗರು ಟ್ವಿಟ್ಟರ್ನಲ್ಲಿ ಹಬ್ಬ ಆಚರಿಸಿದ್ದಾರೆ! ಮೂರು ಪಂದ್ಯಗಳ ಟಿ 20 ಸರಣಿಯಲ್ಲಿ ಇದೀಗ ಜಿಂಬಾಬ್ವೆ 1-1 ಸಮ ಮಾಡಿಕೊಂಡಿದ್ದು, ಅಂತಿಮ ಪಂದ್ಯ ಕುತೂಹಲದ ಗಣಿಯಾಗಿದೆ.
ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಶುಕ್ರವಾರ ನಡೆದ ಎರಡನೆಯ ಟಿ 20 ಅಂತಾರಾಷ್ಟ್ರೀಯ ಪಂದ್ಯದಲ್ಲಿ ಜಿಂಬಾಬ್ವೆ 19 ರನ್ಗಳಿಂದ ಪಾಕಿಸ್ತಾನವನ್ನು ಬಗ್ಗುಬಡಿದಿದೆ. ಅಂದಹಾಗೆ ಪಾಕಿಸ್ತಾನದ ವಿರುದ್ಧ ಟಿ 20 ಸರಣಿಯಲ್ಲಿ ಜಿಂಬಾಬ್ವೆ ತಂಡ ಸಾಧಿಸಿದ ಮೊದಲ ಗೆಲುವು ಇದಾಗಿದೆ. ಬಾಬರ್ ಅಜಾಮ್, ಫಕರ್ ಜಮಾನ್, ಮೊಹಮದ್ ರಿಜ್ವಾನ್ ಮುಂತಾದ ಖಡಕ್ ಬ್ಯಾಟ್ಸ್ಮನ್ಗಳನ್ನು ಹೊಂದಿರುವ ಪಾಕಿಸ್ತಾನದ ವಿರುದ್ಧ ಸಾಧಿಸಿದ ಈ ಜಯ ಕಂಡು ಜಿಂಬಾಬ್ವೆ ತಂಡದ ಆಟಗಾರರನ್ನು ನೆಟ್ಟಿಗರು ಮನಸಾರೆ ಅಭಿನಂದಿಸಿದ್ದಾರೆ. ಪೂರ್ಣ ಪ್ರಮಾಣದ ತಂಡದೊಂದಿಗೆ ಕೇವಲ 119 ರನ್ ಬೆನ್ನುಹತ್ತಿದ ಪಾಕಿಸ್ತಾನದ ಬ್ಯಾಟ್ಸ್ಮನ್ಗಳು ಇಡೀ ತಂಡವಾಗಿ ನರ್ವಸ್ ನೈಂಟೀಸ್ನಲ್ಲಿ ಮುಗ್ಗರಿಸಿದೆ. ಶತಕ ತಲುಪುವುದಕ್ಕೂ ಮುನ್ನ 99 ರನ್ಗೆ ಆಲೌಟ್ ಆಗಿಬಿಟ್ಟಿದೆ.
ತಂಡದ ಕ್ಯಾಪ್ಟನ್- ಬ್ಯಾಟ್ಸ್ಮನ್ ಬಾಬರ್ ಅಜಾಮ್ ಅರ್ಧ ಸೆಂಚುರಿ ಬಾರಿಸುತ್ತಾರೆ ಅಂದುಕೊಂಡಿತ್ತು ಪಾಕಿಸ್ತಾನ. ಆದರೆ 45 ಬಾಲ್ನಲ್ಲಿ 41 ರನ್ ಬಾರಿಸುವಷ್ಟರಲ್ಲಿಯೇ ಬಾಬರ್ ಏದುಸಿರುಬಿಟ್ಟರು. ಆದರೂ ತಂಡದ ಅರ್ಧ ಮೊತ್ತವನ್ನು ಅವರೊಬ್ಬರೇ ಬಾರಿಸಿದರು ಎಂಬುದು ಗಮನಾರ್ಹ. ಕ್ಯಾಪ್ಟನ್ ಬಿಟ್ಟರೆ ಇನ್ನಿಬ್ಬರು ಬ್ಯಾಟ್ಸ್ಮನ್ಗಳು ಮಾತ್ರವೇ ಎರಡಂಕಿ ಮೊತ್ತ ಬಾರಿಸುವಲ್ಲಿ ಯಶಸ್ವಿಯಾದರು.
ಪಾಕಿಸ್ತಾನದ ಕ್ರಿಕೆಟ್ ಪ್ರೇಮಿಗಳು ತಮ್ಮ ತಂಡದ ಕಳಪೆ ಪ್ರದರ್ಶನವನ್ನು ಕಂಡು ಸಹಜವಾಗಿಯೇ ಕುದ್ದುಹೋಗಿದ್ದಾರೆ. ಆದರೆ ವಿಶ್ವದ ಇತರೆ ಕ್ರಿಕೆಟ್ ಪ್ರೇಮಿಗಳು ಟ್ವಿಟ್ಟರ್ನಲ್ಲಿ ಪಾಕ್ ಪ್ರದರ್ಶನ ಕಂಡು ಆಟಗಾರರನ್ನು ಗೋಳುಹೊಯ್ದುಕೊಂಡಿದ್ದಾರೆ.
ಪಂದ್ಯದ ಆರಂಭದಲ್ಲಿ ಪಾಕ್ ಬೌಲರ್ಗಳು ಜಿಂಬಾಬ್ವೆ ಬ್ಯಾಟ್ಸ್ಮನ್ಗಳನ್ನು 20 ಓವರ್ಗಳಲ್ಲಿ 118 ರನ್ಗೆ 9 ವಿಕೆಟ್ ಸ್ಕೋರ್ಗೆ ಕಟ್ಟಿಹಾಕುವಲ್ಲಿ ಯಶಸ್ವಿಯಾಗಿ, ಜಯದ ಕನಸು ಕಾಣತೊಡಗಿದ್ದರು. ಆದರೆ ಗುರಿ ಬೆನ್ನತ್ತಿದ ಪಾಕ್ಗೆ ಮೈದಾನದಲ್ಲಿ ಆಗಿದ್ದೇ ಬೇರೆ..
ಜಿಂಬಾಬ್ವೆ ತಂಡದ ಲ್ಯೂಕ್ ಜೋಂಗ್ವೆ (Luke Jongwe) 3.5 ಓವರ್ಗಳಲ್ಲಿ 18 ರನ್ ನೀಡಿ ಪಾಕ್ನ 4 ವಿಕೆಟ್ಗಳನ್ನು ಧೂಳೀಪಟ ಮಾಡಿಬಿಟ್ಟರು. ಅಲ್ಲಿಗೆ ಹೆಚ್ಚು ಪ್ರತಿರೋಧ ತೋರದೆ ಪಾಕ್ ತಂಡ ಸೋಲೊಪ್ಪಿಕೊಂಡಿತು. ಮುಂದೆ ಟ್ವಿಟ್ಟರ್ನಲ್ಲಿ ಮೀಮ್ಗಳ ರಣಕೇಕೆ ಕಂಡು ಬೆಚ್ಚಿಬಿದ್ದರು.
(Zim vs Pak 2nd T20I at Harare Zimbabwe defeated Pakistan by Defending 119 Triggers Meme-Fest On Twitter)
This loss is humiliating. Middlie-order crisis is worrying before WT20. Well bowled by Zimbabwe and congratulations to @ArshadIqbal32
for your T20i debut.#ZIMvPAK #ZIMvsPAK— Shahrukh (@ThisisShahrukh) April 23, 2021
Misbah UL Haque at Pakistan Cricket team talk tonight after lost the game against Zimbabwe ??#ZIMvPAK #PAKvZIM #BabarAzam #zimvspak #ZIMvsPAK #PAKvsZIM #Pakistan #Cricket #babar_azam
— Abdullah Neaz (@cric_neaz) April 23, 2021
Asif Ali walking back to the pavilion after scoring a duck #ZIMvPAK pic.twitter.com/VCwlFjd9Ub
— Ramiya 🙂 (@Yeh_tu_hoga) April 23, 2021
Published On - 1:11 pm, Sat, 24 April 21