ಭಾರತದಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಫೋನ್ಗಳು ಒಂದರ ಹಿಂದೆ ಒಂದರಂತೆ ಬಿಡುಗಡೆ ಆಗುತ್ತಿದೆ. ಇವುಗಳು ಬಜೆಟ್ ಬೆಲೆಗೆ ಅಥವಾ ಮಧ್ಯಮ ಬೆಲೆಗೆ ಸಿಗುತ್ತಿರುವುದರಿಂದ ಬೇಗನೆ ಸೋಲ್ಡ್ ಔಟ್ ಕೂಡ ಆಗುತ್ತದೆ. ಇತ್ತೀಚೆಗಷ್ಟೆ ದಕ್ಷಿಣ ಕೊರಿಯಾ ಮೂಲದ ಸ್ಯಾಮ್ಸಂಗ್ (Samsung) ಕಂಪನಿ ಕೂಡ ಕ್ಯಾಮೆರಾ ಪ್ರಿಯರಿಗಾಗಿ ಗ್ಯಾಲಕ್ಸಿ F ಸರಣಿಯ ಅಡಿಯಲ್ಲಿ 108 ಮೆಗಾಪಿಕ್ಸೆಲ್ ಕ್ಯಾಮೆರಾ ಇರುವ ಗ್ಯಾಲಕ್ಸಿ F54 5G (Galaxy F54 5G) ಸ್ಮಾರ್ಟ್‌ಫೋನ್ ಅನಾವರಣ ಮಾಡಿತ್ತು. ಇದೀಗ ಈ ಫೋನ್ ಇಂದಿನಿಂದ ಖರೀದಿಗೆ ಸಿಗುತ್ತಿದೆ.
ಬೆಲೆ ಎಷ್ಟು?:
ಗ್ಯಾಲಕ್ಸಿ F54 5G ಫೋನ್ ಒಂದು ಸ್ಟೋರೇಜ್ ಆಯ್ಕೆಯಲ್ಲಷ್ಟೆ ಬಿಡುಗಡೆ ಆಗಿದೆ. ಇದರ 8GB RAM ಮತ್ತು 256GB ಸ್ಟೋರೇಜ್ ಆಯ್ಕೆಗೆ 27,999 ರೂ. ನಿಗದಿ ಮಾಡಲಾಗಿದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್ಕಾರ್ಟ್, ಸ್ಯಾಮ್ಸಂಗ್ ಇಂಡಿಯಾದ ಅಧಿಕೃತ ವೆಬ್ಸೈಟ್ ಮತ್ತು ಪ್ರಮುಖ ರಿಟೇಲ್ ಸ್ಟೋರ್ಗಳಲ್ಲಿ ಇಂದಿನಿಂದ ಖರೀದಿಗೆ ಸಿಗುತ್ತಿದೆ. ಬಳಕೆದಾರರಿ ಹೆಚ್ಡಿಎಫ್ಸಿ ಅಥವಾ ಎಸ್ಬಿಐ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ 2,000 ರೂ. ಗಳ ಡಿಸ್ಕೌಂಟ್ ಸಿಗಲಿದೆ.
Redmi 12: ಶಓಮಿ ರೆಡ್ಮಿ ಹೊಸ ಫೋನ್ ಭಾರತದ ಮಾರುಕಟ್ಟೆಗೆ ಎಂಟ್ರಿ ಶೀಘ್ರದಲ್ಲಿ!
ಫೀಚರ್ಸ್ ಏನಿದೆ?:
ಗ್ಯಾಲಕ್ಸಿ F54 5G ಸ್ಮಾರ್ಟ್‌ಫೋನ್ ಅಧಿಕ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯ ಹೊಂದಿರಲಿದ್ದು, 6.7 ಇಂಚಿನ ಫುಲ್ ಹೆಚ್ಡಿ ಪ್ಲಸ್ ಅಮೋಲೆಡ್ ಡಿಸ್‌ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ರೇಟ್ನಿಂದ ಕೂಡಿದ್ದು, ಸ್ಕ್ರೀನ್ಗೆ ಗೋರಿಲ್ಲ ಗ್ಲಾಸ್ 5 ಪ್ರೊಟೆಕ್ಷನ್ ನೀಡಲಾಗಿದೆ. ಬಲಿಷ್ಠವಾದ ಸ್ಯಾಮ್‌ಸಂಗ್‌ನ Exynos 1380 ಪ್ರೊಸೆಸರ್ ಪ್ರೊಸೆಸರ್ ಬಲದಲ್ಲಿ ಕಾರ್ಯನಿರ್ವಹಿಸಲಿದ್ದು, ಇತ್ತೀಚಿಗಿನ 13 ಓಎಸ್ ಸಪೋರ್ಟ್ ಸಹ ಪಡೆದುಕೊಂಡಿದೆ.
ಕ್ಯಾಮೆರಾ ವಿಚಾರಕ್ಕೆ ಬರುವುದಾದರೆ, ಈ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ತ್ರಿವಳಿ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿರಲಿದ್ದು, ಮುಖ್ಯ ಕ್ಯಾಮೆರಾವು ಬರೋಬ್ಬರಿ 108 ಮೆಗಾ ಪಿಕ್ಸೆಲ್ ಸೆನ್ಸಾರ್ನಿಂದ ಕೂಡಿದೆ. ಇದು ಫೋಟೋಗ್ರಫಿಗೆ ಸೂಕ್ತವಾಗಿದ್ದು ಅತ್ಯುತ್ತಮ ಕ್ವಾಲಿಟಿಯಲ್ಲಿ ವಿಡಿಯೋವನ್ನು ಸೆರೆಹಿಡಿಯುತ್ತದೆ. ಇದರಲ್ಲಿರುವ ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಅಲ್ಟ್ರಾ ವೈಡ್ ಲೆನ್ಸ್ ಪಡೆದಿರಲಿದೆ. ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಮತ್ತು ಸೆಲ್ಫಿ ಕ್ಯಾಮೆರಾ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದರ ಜೊತೆಗೆ ನೈಟೋಗ್ರಫಿ ಎಂಬ ವಿಶೇಷ ಆಯ್ಕೆ ನೀಡಾಗಿದ್ದು, ಇದರ ಮೂಲಕ ಮಂದ ಬೆಳಕಿನಲ್ಲಿ ಕೂಡ ಅತ್ಯುತ್ತಮ ಫೋಟೋ ಕ್ಲಿಕ್ಕಿಸಬಹುದು.
ಗ್ಯಾಲಕ್ಸಿ F54 5G ಫೋನ್ ದೀರ್ಘ ಸಮಯ ಬಾಳಕೆ ಬರುವ 6,000mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದ್ದು, ಜೊತೆಗೆ 25W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಒಳಗೊಂಡಿದೆ. ಇದು 5G ಬೆಂಬಲ ಪಡೆದುಕೊಂಡಿದೆ. ಜೊತೆಗೆ 4ಜಿ ಎಲ್ಟಿಇ, GPS, Wi-Fi 6, ಬ್ಲೂಟೂತ್ 5.2, ಮತ್ತು USB 2.0 ಟೈಪ್-C ಪೋರ್ಟ್ ಆಯ್ಕೆಗಳು ಇರಲಿವೆ. ಮಧ್ಯಮ ಬೆಲೆಗೆ ಉತ್ತಮ ಕ್ಯಾಮೆರಾ, ಪ್ರೊಸೆಸರ್, ಬಿಗ್ ಬ್ಯಾಟರಿಯ ಫೋನ್ ಖರೀದಿಸುವ ಪ್ಲಾನ್ನಲ್ಲಿ ನೀವಿದ್ದರೆ ಈ ಫೋನ್ ಒಳ್ಳೆಯ ಆಯ್ಕೆ ಆಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ