Chinese smartphone: 12,000 ರೂ. ಒಳಗಿನ ಚೀನಿ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸುವ ಪ್ರಶ್ನೆ ಇಲ್ಲ : ರಾಜೀವ್ ಚಂದ್ರಶೇಖರ್

| Updated By: ಅಕ್ಷಯ್​ ಪಲ್ಲಮಜಲು​​

Updated on: Aug 31, 2022 | 5:38 PM

ಪಿಟಿಐ ವರದಿಗಳ ಪ್ರಕಾರ, ಎಲೆಕ್ಟ್ರಾನಿಕ್ ಮತ್ತು ಐಟಿ ರಾಜ್ಯ ಸಚಿವರು ಭಾರತದಿಂದ ತಮ್ಮ ರಫ್ತುಗಳನ್ನು ಹೆಚ್ಚಿಸಲು ಚೀನಾದ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಸರ್ಕಾರ ಮನವಿ ಮಾಡಿದೆ ಎಂದು ಹೇಳಿದ್ದಾರೆ.

Chinese smartphone: 12,000 ರೂ. ಒಳಗಿನ ಚೀನಿ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸುವ ಪ್ರಶ್ನೆ ಇಲ್ಲ : ರಾಜೀವ್ ಚಂದ್ರಶೇಖರ್
ಸಾಂದರ್ಭಿಕ ಚಿತ್ರ
Follow us on

ದೆಹಲಿ: 12,000 ರೂ. ಒಳಗಿನ ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್‌ಗಳನ್ನು ನಿಷೇಧಿಸುವ ಯಾವುದೇ ಯೋಜನೆಯನ್ನು ಭಾರತ ಸರ್ಕಾರ ಹೊಂದಿಲ್ಲ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಐಟಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಚೀನಾದ ಕಂಪನಿಗಳು ಭಾರತದಲ್ಲಿ 12,000 ರೂ. ಮೊಬೈಲ್ ಫೋನ್‌ಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸುವ ಸರ್ಕಾರದ ವರದಿಯ ಯೋಜನೆ ಕುರಿತ ಪ್ರಶ್ನೆಗೆ ಅವರ ಉತ್ತರದಲ್ಲಿ ಈ ಪ್ರತಿಕ್ರಿಯೆ ಬಂದಿದೆ.

ಭಾರತ ದೇಶೀಯ ಬ್ರಾಂಡ್‌ಗಳನ್ನು ನಿರ್ಮಿಸಲು ಎದುರು ನೋಡುತ್ತಿದೆ ಎಂದು ವ್ಯಕ್ತಪಡಿಸಿದರು. ಭಾರತದ ಎಲೆಕ್ಟ್ರಾನಿಕ್ ಪರಿಸರ ವ್ಯವಸ್ಥೆಯು ಭವಿಷ್ಯದಲ್ಲಿ ಹೆಚ್ಚಿನ ರಾಷ್ಟ್ರೀಯ ತಂತ್ರಜ್ಞಾನ ಕಂಪನಿಗಳನ್ನು ಒಳಗೊಳ್ಳುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಪಿಟಿಐ ವರದಿಗಳ ಪ್ರಕಾರ, ಎಲೆಕ್ಟ್ರಾನಿಕ್ ಮತ್ತು ಐಟಿ ರಾಜ್ಯ ಸಚಿವರು ಭಾರತದಿಂದ ತಮ್ಮ ರಫ್ತುಗಳನ್ನು ಹೆಚ್ಚಿಸಲು ಚೀನಾದ ಸ್ಮಾರ್ಟ್‌ಫೋನ್ ಕಂಪನಿಗಳಿಗೆ ಸರ್ಕಾರ ಮನವಿ ಮಾಡಿದೆ ಎಂದು ಹೇಳಿದ್ದಾರೆ. ನಾವು ಕೆಲವು ಚೀನೀ ಬ್ರಾಂಡ್‌ಗಳೊಂದಿಗೆ ಪಾರದರ್ಶಕವಾಗಿ ಬೆಳೆದಿದ್ದೇವೆ ಮತ್ತು ಇದರ ಜೊತೆಗೆ ನಮ್ಮ ದೇಶದ ಫೋನ್​ಗಳನ್ನು ರಫ್ತುಗಳನ್ನು ಮಾಡುತ್ತವೆ ಎಂಬುದು ನಮ್ಮ ನಿರೀಕ್ಷೆಯಾಗಿದೆ ಎಂದು ನಾವು ಹೇಳಿದ್ದಾರೆ.

ಚೀನಾ ಫೋನ್​ಗಳನ್ನು ಮಾರುಕಟ್ಟೆಯಿಂದ ನಿಷೇಧಿಸುವ ಯಾವುದೇ ಪ್ರಶ್ನೆ ಇಲ್ಲ ಈ ಬಗ್ಗೆ ನಮ್ಮಲ್ಲಿ ಯಾವುದೇ ಪ್ರಸ್ತಾವನೆ ಇಲ್ಲ ಮತ್ತು ಈ ವಿಚಾರ ಎಲ್ಲಿಂದ ಸೃಷ್ಟಿಯಾಗಿದೆ ಎಂಬುದು ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ.