AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

SIM card: ಸಿಮ್ ಕಾರ್ಡ್ ನ ಒಂದು ಮೂಲೆಯಲ್ಲಿ ಕಟ್ ಮಾಡಿರುತ್ತಾರೆ ಯಾಕೆ ಗೊತ್ತಾ? ಇಲ್ಲಿದೆ ಅಸಲಿ ವಿಷಯ

Why Cut In SIM Card: SIM ಕಾರ್ಡ್‌ ಮೂಲೆಯಲ್ಲಿ ಏಕೆ ಕತ್ತರಿಸಿರುತ್ತಾರೆ? ಸಿಮ್ ಕಾರ್ಡ್ ಅನ್ನು ಒಂದು ಮೂಲೆಯಿಂದ ಕತ್ತರಿಸಲಾಗುತ್ತದೆ, ಇದು ಏಕೆ ಎಂದು ನೀವು ಯೋಚಿಸಿದ್ದೀರಾ!

SIM card: ಸಿಮ್ ಕಾರ್ಡ್ ನ ಒಂದು ಮೂಲೆಯಲ್ಲಿ ಕಟ್ ಮಾಡಿರುತ್ತಾರೆ ಯಾಕೆ ಗೊತ್ತಾ? ಇಲ್ಲಿದೆ ಅಸಲಿ ವಿಷಯ
ಸಿಮ್ ಕಾರ್ಡ್ ನ ಒಂದು ಮೂಲೆಯಲ್ಲಿ ಕಟ್ ಮಾಡಿರುತ್ತಾರೆ ಯಾಕೆ ಗೊತ್ತಾ? ಇಲ್ಲಿದೆ ಅಸಲಿ ವಿಷಯ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Aug 31, 2022 | 12:00 PM

ನಾವು ದಿನನಿತ್ಯ ಬಳಸುವ ವಸ್ತುಗಳಲ್ಲಿ ವಿಜ್ಞಾನ-ತಂತ್ರಜ್ಞಾನ ಅಡಗಿದೆ. ಆದರೆ ನಮ್ಮ ಜೀವನದ ಒಂದು ಭಾಗವಾಗಿರುವ ತಂತ್ರಜ್ಞಾನದ ಬಗ್ಗೆ ನಮ್ಮಲ್ಲಿ ಕೆಲವರು ತಲೆಕೆಡಿಸಿಕೊಳ್ಳುವುದಿಲ್ಲ. ಅದು ಏಕೆ? ಅದಕ್ಕೆ ಕಾರಣವೇನು? ಇಂತಹ ಪ್ರಶ್ನೆಗಳನ್ನು ನಮ್ಮ ಮನೆಯ ಪುಟ್ಟ ಮಕ್ಕಳು ಆಗಾಗ ಕೇಳುತ್ತವೆ. ಆದರೆ ನಾವು ದೊಡ್ಡವರಾಗಿ ಜೀವನದಲ್ಲಿ ಒಂದು ಹಂತ ದಾಟಿದ ಬಳಿಕ, ನಮಗೆ ಅಂತಹ ಪ್ರಶ್ನೆಗಳು ರುಚಿಸುವುದಿಲ್ಲ. ಆದರೆ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಯಾವುದೇ ಇದ್ದರೂ ಅದಕ್ಕೆ ತಕ್ಕ ಉತ್ತರ, ವಿಶೇಷ ಅರ್ಥಗಳಿರುತ್ತವೆ ಎಂಬುದನ್ನು ಮನನ ಮಾಡಿಕೊಳ್ಳಬೇಕು.

ಸಾಮಾನ್ಯವಾಗಿ ನಮ್ಮ ದಿನನಿತ್ಯದ ಕೆಲಸದಲ್ಲಿ ಹಲವಾರು ವಿಷಯಗಳು ಇರುತ್ತವೆ. ಆದರೆ ಅದರ ಬಗ್ಗೆ ನಮಗೆ ಹೆಚ್ಚು ತಿಳಿದು ಬಂದಿರುವುದಿಲ್ಲ. ಅದರಲ್ಲಿ ಸಿಮ್ ಕಾರ್ಡ್ (SIM card) ಕೂಡ ಒಂದು. ಇನ್ನು, ಮೊಬೈಲ್ ಫೋನ್ (mobile phone) ಬಗ್ಗೆಯೂ ಹೆಚ್ಚು ಅರ್ಥವಾಗುವುದಿಲ್ಲ. ಸಿಮ್ ಅಳವಡಿಸಿದ ನಂತರವೇ ಮೊಬೈಲ್‌ನಿಂದ ಕರೆಗಳು ಅಥವಾ ಇತರ ಹಲವು ಕೆಲಸಗಳನ್ನು ಮಾಡಬಹುದು ಎಂಬುದು ಬೇಸಿಕ್ ತಿಳಿವಳಿಕೆಯಾಗಿದೆ. ಆದರೆ ಸಿಮ್ ಕಾರ್ಡ್ ಒಂದು ಮೂಲೆಯಿಂದ ಏಕೆ ಕಟ್ ಆಗಿರುತ್ತದೆ ಎಂದು ಯೋಚಿಸಿದ್ದೀರಾ..? ನಮ್ಮ ಈ ಲೇಖನದ ಮೂಲಕ ನೀವು ಅದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಿರಿ..

ಅದಕ್ಕೇ ಸಿಮ್ ಕಾರ್ಡ್ ಒಂದು ಮೂಲೆಯಲ್ಲಿ ಕಟ್ ಆಗಿರುತ್ತದೆ..

ಮೊದಲ ಸಿಮ್ ಕಾರ್ಡ್‌ಗಳನ್ನು ತಯಾರಿಸಿದಾಗ ಈಗಿನ ಸಿಮ್ ಕಾರ್ಡ್‌ಗಳಂತೆ ಮೂಲೆಯಲ್ಲಿ ಯಾವುದೇ ಕಟ್ ಇರಲಿಲ್ಲ. ಮೊಬೈಲ್ ಬಳಕೆದಾರರು ಸಿಮ್ ಅನ್ನು ಮೊಬೈಲ್​ ಒಳಗೆ ನಿರ್ದಿಷ್ಟ ಸ್ಲಾಟ್​ನಲ್ಲಿ ಸ್ಥಾಪಿಸಲು ಕಷ್ಟಪಡುತ್ತಿದ್ದರು. ಪ್ರತಿ ಬಾರಿ ಮೊಬೈಲ್​ ಸ್ಲಾಟ್​ನಲ್ಲಿ ಸಿಮ್ ಅನ್ನು ಹಿಮ್ಮುಖವಾಗಿ ಹಾಕಲಾಗುತಿತ್ತು. ಆದರೆ ಅದನ್ನು ಹೊರತೆಗೆಯಲು ಮತ್ತು ಅದನ್ನು ಮತ್ತೆ ಹಾಕಲು ಕಷ್ಟವಾಗುತ್ತಿತ್ತು. ಸಿಮ್ ಅಳವಡಿಸಲು ಎದುರಾಗುವ ತೊಂದರೆಗಳನ್ನು ಪರಿಗಣಿಸಿ ಟೆಲಿಕಾಂ ಕಂಪನಿಗಳು ಒಂದು ಮಹತ್ವದ ನಿರ್ಧಾರ ಕೈಗೊಂಡಿತು. ಅವರು ಸಿಮ್ ಕಾರ್ಡ್ ಅನ್ನು ಒಂದೇ ಬಾರಿಗೆ ಸರಿಯಾಗಿ ಒಳಗೆ ಕೂಡಿಸಲು ಅದರ ಮೂಲೆಯನ್ನು ಕತ್ತರಿಸುವುದಕ್ಕೆ ಅನುಮತಿಸಿದರು.

ಸಿಮ್ ಕಾರ್ಡ್ ರಚನೆಯಲ್ಲಿ ಬದಲಾವಣೆ..

ಹಾಗೆ ಕಟ್ ಮಾಡಲು ಆರಂಭಿಸಿದ ನಂತರ ಸಿಮ್ ಕಾರ್ಡ್‌ಗಳ ವಿನ್ಯಾಸದಲ್ಲಿ ನಿಧಾನವಾಗಿ ಇನ್ನೂ ಕೆಲ ಬದಲಾವಣೆಗಳು ಆಗುತ್ತಿವೆ. ಈ ಹಿಂದೆ ಸಿಮ್ ಗಾತ್ರ ದೊಡ್ಡದಾಗಿತ್ತು. ಅದು ಈಗ ಅದು ತುಂಬಾ ಚಿಕ್ಕದಾಗಿ, ಕ್ಯೂಟ್​ ಆಗಿದೆ ಎಂಬುದು ನೀವೂ ಗಮನಿಸಿರುತ್ತೀರಿ. ಏಕೆಂದರೆ ಈಗ ಬರುತ್ತಿರುವ ಮೊಬೈಲುಗಳಲ್ಲಿ ಸಣ್ಣ ಸಿಮ್ ಅನ್ನು ಮಾತ್ರ ಹೊಂದಿರುವಂತೆ ಸ್ಲಾಟ್​ ಮಾಡಲಾಗುತ್ತಿದೆ. ಸಿಮ್ಹಾ ಹಳೆಯ ದೊಡ್ಡ ಗಾತ್ರದ ಪ್ಲೇಟ್ ಅನ್ನು ಒದಗಿಸಿದ್ದರೂ, ಟೆಲಿಕಾಂ ಕಂಪನಿಗಳು ಹಳೆಯ ಫೋನ್‌ನಲ್ಲಿ ಸಿಮ್ ಸೇರಿಸಲು ಮತ್ತೊಂದು ಸಿಮ್ ಕಾರ್ಡ್‌ನ ಫ್ರೇಮ್ ಅನ್ನು ಸೇರಿಸಲು ಮತ್ತು ಬಳಸಲು ಯೋಜಿಸಿವೆ.

ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಮರ ರಸ್ತೆಗುರುಳಿ ವಾಹನ ಸಂಚಾರ ಅಸ್ತವ್ಯಸ್ತ
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಪ್ರತಿಭಟನೆಕಾರರಿಂದ ಪೊಲೀಸರ ಮೇಲೆ ಮಣ್ಣಿನ ಹೆಂಟೆಗಳಿಂದ ಹಲ್ಲೆ: ಪರಮೇಶ್ವರ್
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಸರ್ಕಾರದ ಭಾಗವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತಿರುವೆ:ಸಚಿವೆ
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ಕಾರು ಡಿಕ್ಕಿ ರಭಸಕ್ಕೆ ಬೈಕ್​​ನಲ್ಲಿದ್ದ ನಾಲ್ವರು ಚೆಲ್ಲಾಪಿಲ್ಲಿಯಾದ್ರು
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ನಾಲ್ಕು ತಿಂಗಳಿಂದ ಸಂಬಳ ಕೊಟ್ಟಿಲ್ಲ, 1 ತಿಂಗಳು ಸಂಬಳದ ಚೆಕ್ ಮಾನ್ಯವಾಗಿಲ್ಲ
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್
ಪಂದ್ಯದ ಬಳಿಕ ಸಹ ಆಟಗಾರನನ್ನು ಅಶ್ಲೀಲವಾಗಿ ಬೈದ ಶ್ರೇಯಸ್ ಅಯ್ಯರ್
ಆರ್​ಸಿಬಿಗೆ 18 ವರ್ಷಗಳಿಂದ ಕಪ್ ಮರೀಚಿಕೆಯಾಗಿದೆ, ಈ ಸಲ ನೀಗುವುದೇ ಬರ?
ಆರ್​ಸಿಬಿಗೆ 18 ವರ್ಷಗಳಿಂದ ಕಪ್ ಮರೀಚಿಕೆಯಾಗಿದೆ, ಈ ಸಲ ನೀಗುವುದೇ ಬರ?
ಅದ್ಭುತ ಡೈವಿಂಗ್ ಕ್ಯಾಚ್... ಟೀಕಾಕಾರರ ಬಾಯಿ ಮುಚ್ಚಿಸಿದ ಸರ್ಫರಾಝ್ ಖಾನ್
ಅದ್ಭುತ ಡೈವಿಂಗ್ ಕ್ಯಾಚ್... ಟೀಕಾಕಾರರ ಬಾಯಿ ಮುಚ್ಚಿಸಿದ ಸರ್ಫರಾಝ್ ಖಾನ್
ಹಾಲು ತರಕಾರಿ ಮಾರಲು ಬಿಡೋದಿಲ್ಲ ಅಂತ ಬಾಲಕೃಷ್ಣ ಯಾಕೆ ಹೇಳಿದ್ದಾರೋ? ಸಚಿವ
ಹಾಲು ತರಕಾರಿ ಮಾರಲು ಬಿಡೋದಿಲ್ಲ ಅಂತ ಬಾಲಕೃಷ್ಣ ಯಾಕೆ ಹೇಳಿದ್ದಾರೋ? ಸಚಿವ
ಬಾಯ್ ಡೆಲಿವರಿ ಮಾಡಲು ಹೋದಾಗ ಸ್ಕೂಟರ್​​ನಲ್ಲಿದ್ದ ಸಾಮಾನು ಲಪಟಾಯಿಸಿ ಪರಾರಿ
ಬಾಯ್ ಡೆಲಿವರಿ ಮಾಡಲು ಹೋದಾಗ ಸ್ಕೂಟರ್​​ನಲ್ಲಿದ್ದ ಸಾಮಾನು ಲಪಟಾಯಿಸಿ ಪರಾರಿ