ಮಾರುಕಟ್ಟೆಯಲ್ಲಿ ಇಂದು ದಿನಕ್ಕೊಂದರಂತೆ ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತಿರುವ ಕಾರಣ ಯಾವುದನ್ನು ಖರೀದಿಸಬೇಕು ಎಂಬ ಗೊಂದಲ ಹೆಚ್ಚಿನವರಲ್ಲಿ ಉಂಟಾಗುತ್ತದೆ. ಅದೇನೇ ಇದ್ದರೂ ಸದ್ಯ ಸ್ಮಾರ್ಟ್ಫೋನ್ಗಳ ಮಾರಾಟ ಮಾತ್ರ ಭರ್ಜರಿ ಆಗಿ ನಡೆಯುತ್ತಿದೆ. ಅದರಲ್ಲೂ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ (Flipkart Big Billion Days sale) ಮಾರಾಟದ ಸಮಯದಲ್ಲಿ ಅತಿ ಕಡಿಮೆ ಬೆಲೆಗೆ ಹಲವಾರು ಅತ್ಯುತ್ತಮ ಫೋನುಗಳು ಸೇಲ್ ಕಾಣುತ್ತಿದೆ. ನಾವು ನಿಮಗೆ ಈ ಹಬ್ಬದ ಸಮಯದಲ್ಲಿ 20,000 ರೂ. ಒಳಗೆ ಖರೀದಿಸಬಹುದಾದ ಆಕರ್ಷಕ ಸ್ಮಾರ್ಟ್ಫೋನ್ಗಳ ಬಗ್ಗೆ ತಿಳಿಸಿಕೊಡುತ್ತೇವೆ.
ಮೋಟೋರೊಲಾ ಕಂಪನಿಯ ಮೋಟೋ g54 5G ನಂಬಲಾಗದ ಬೆಲೆಗೆ ಲಭ್ಯವಿದೆ. ಇದು 15 ಸಾವಿರಕ್ಕಿಂತ ಕಡಿಮೆ ಬೆಲೆಯನ್ನು ಹೊಂದಿದೆ. 12GB RAM ಮತ್ತು 256 GB ಸಂಗ್ರಹಣೆ ಹೊಂದಿರುವ ಈ ಫೋನ್ನಲ್ಲಿ ಗೇಮಿಂಗ್‌ಗಾಗಿ ಅತ್ಯಂತ ಶಕ್ತಿಶಾಲಿ ಮೀಡಿಯಾಟೆಕ್ ಡೈಮೆನ್ಸಿಟಿ 7020 ಆಕ್ಟಾ-ಕೋರ್ ಪ್ರೊಸೆಸರ್ ಅಳವಡಿಸಲಾಗಿದೆ. 6.5-ಇಂಚಿನ FHD+ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಈ ಫೋನ್ ಈಗ 12,999 ರೂ. ಗೆ ಸೇಲ್ ಆಗುತ್ತಿದೆ. 50MP ಪ್ರಾಥಮಿಕ ಕ್ಯಾಮೆರಾವನ್ನು ಹೊಂದಿದೆ. TurboPower 33W ಚಾರ್ಜರ್‌ಗೆ 6,000mAh ಬ್ಯಾಟರಿ ಇದೆ.
ಕ್ಯಾಮೆರಾ, ಬ್ಯಾಟರಿ, ಪ್ರೊಸೆಸರ್ ಎಲ್ಲವೂ ಸೂಪರ್: ಅಮೆಜಾನ್ ಸೇಲ್ನಲ್ಲಿರುವ 30,000 ರೂ. ಒಳಗಿನ ಸ್ಮಾರ್ಟ್ಫೋನ್ಸ್
ಇದು 6.72-ಇಂಚಿನ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರವನ್ನು ನೀಡುತ್ತದೆ. ಸ್ನಾಪ್‌ಡ್ರಾಗನ್ 695 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. 5,000mAh ಬ್ಯಾಟರಿ, 108MP ಕ್ಯಾಮೆರಾ, ಒನ್ಪ್ಲಸ್ನ 2 ವರ್ಷಗಳ OS ನವೀಕರಣಗಳು ಮತ್ತು 3 ವರ್ಷಗಳ ಭದ್ರತಾ ನವೀಕರಣಗಳನ್ನು ನೀಡುತ್ತದೆ. ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಮಾರಾಟದ ಸಮಯದಲ್ಲಿ ಇದರ 8GB+128GB ರೂಪಾಂತರ 19,999 ರೂ. ಗೆ ಲಭ್ಯವಿದೆ.
ಈ ಫೋನಿನ 4GB RAM + 128GB ಸಂಗ್ರಹಣೆಯು ಕೇವಲ ರೂ. 15,999 ಕ್ಕೆ ಲಭ್ಯವಾಗುತ್ತಿದೆ. ಅಂತೆಯೆ 6GB RAM + 128 GB ಬೆಲೆ 17,499 ರೂ. ಆಗಿದೆ. ಇದು 6.67-ಇಂಚಿನ AMOLED ಡಿಸ್ಪ್ಲೇ, 120Hz ರಿಫ್ರೆಶ್ ದರವನ್ನು ನೀಡುತ್ತದೆ. ಕ್ವಾಲ್ಕಂ ಸ್ನಾಪ್‌ಡ್ರಾಗನ್ 4 Gen 1 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸುತ್ತದೆ. 5G ಮತ್ತು Wi-Fi ಬೆಂಬಲದೊಂದಿಗೆ, 48MP ಮುಖ್ಯ ಕ್ಯಾಮೆರಾವನ್ನು ಒಳಗೊಂಡಿದೆ. 5000mAh ಬ್ಯಾಟರಿಯೊಂದಿಗೆ ಬರುತ್ತದೆ. ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಇದೆ.
ರಿಯಲ್ ಮಿ 11 5G ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಇದರ 8GB + 256GB ರೂ. 19,999 ಮತ್ತು 8GB + 128GB ಆಯ್ಕೆಯು 18,999 ರೂ. ಗೆ ಸೇಲ್ ಆಗುತ್ತಿದೆ. ಇದು 120Hz ರಿಫ್ರೆಶ್ ದರದೊಂದಿಗೆ 6.72-ಇಂಚಿನ IPS LCD ಡಿಸ್ಪ್ಲೇಯನ್ನು ಹೊಂದಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6100 ಪ್ಲಸ್ ಚಿಪ್‌ಸೆಟ್ ನೀಡಲಾಗಿದೆ. 108MP ಪ್ರಾಥಮಿಕ ಕ್ಯಾಮೆರಾ ಇದರಲ್ಲಿದ್ದು, ಆಕರ್ಷಕವಾಗಿದೆ. 5000mAh ಬ್ಯಾಟರಿಯನ್ನು ಹೊಂದಿದೆ. 67W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ