ಸ್ಯಾಮ್​ಸಂಗ್​ನ ಮತ್ತೆರಡು ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಇಳಿಕೆ: ಯಾವ ಫೋನ್?

|

Updated on: Jan 18, 2024 | 2:53 PM

Galaxy A34 5G and Galaxy A54 5G price cut: ಸ್ಯಾಮ್​ಸಂಗ್ ಗ್ಯಾಲಕ್ಸಿ A54 5G ಮತ್ತು ಗ್ಯಾಲಕ್ಸಿ A34 5G ಮತ್ತೆರಡು ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿತ ಮಾಡಿದೆ. ಭಾರತದಲ್ಲಿ ಕಳೆದ ವರ್ಷ ಈ ಫೋನ್ ಅನಾವರಣಗೊಂಡಿತ್ತು. ನೀವು ಮಧ್ಯಮ ಶ್ರೇಣಿಯ ಸ್ಯಾಮ್‌ಸಂಗ್ ಫೋನ್ ಅನ್ನು ಹುಡುಕುತ್ತಿದ್ದರೆ, ಈ ಫೋನುಗಳು ಅತ್ಯುತ್ತಮ ಆಯ್ಕೆ ಆಗಿದೆ.

ಸ್ಯಾಮ್​ಸಂಗ್​ನ ಮತ್ತೆರಡು ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಇಳಿಕೆ: ಯಾವ ಫೋನ್?
Galaxy A34 5G and Galaxy A54 5G
Follow us on
ದಕ್ಷಿಣ ಕೊರಿಯಾ ಮೂಲದ ಪ್ರಸಿದ್ಧ ಸ್ಯಾಮ್​ಸಂಗ್ (Samsung) ಕಂಪನಿ ಭಾರತದಲ್ಲಿ ತನ್ನ ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ಇಳಕೆ ಮಾಡಿ ಮಾರಾಟ ಮಾಡುತ್ತಿದೆ. ಮೊನ್ನೆಯಷ್ಟೆ ತನ್ನ ನಾಲ್ಕು ಫೋನ್ ಗ್ಯಾಲಕ್ಸಿ M14 , ಗ್ಯಾಲಕ್ಸಿ F14 , ಗ್ಯಾಲಕ್ಸಿ M04 ಮತ್ತು ಗ್ಯಾಲಕ್ಸಿ F04 ಬೆಲೆಯನ್ನು ಕಡಿಮೆ ಮಾಡಿತ್ತು. ಇದೀಗ ಸ್ಯಾಮ್​ಸಂಗ್ ಗ್ಯಾಲಕ್ಸಿ A54 5G ಮತ್ತು ಗ್ಯಾಲಕ್ಸಿ A34 5G ಮತ್ತೆರಡು ಸ್ಮಾರ್ಟ್‌ಫೋನ್‌ಗಳ ಬೆಲೆ ಕಡಿತ ಮಾಡಿದೆ. ಭಾರತದಲ್ಲಿ ಕಳೆದ ವರ್ಷ ಈ ಫೋನ್ ಅನಾವರಣಗೊಂಡಿತ್ತು. ನೀವು ಮಧ್ಯಮ ಶ್ರೇಣಿಯ ಸ್ಯಾಮ್‌ಸಂಗ್ ಫೋನ್ ಅನ್ನು ಹುಡುಕುತ್ತಿದ್ದರೆ, ಈ ಫೋನುಗಳು ಅತ್ಯುತ್ತಮ ಆಯ್ಕೆ ಆಗಿದೆ.
ಫೋನ್‌ಗಳು ಶೇಖರಣಾ     ರೂಪಾಂತರಗಳು      ಬಿಡುಗಡೆ ಬೆಲೆ      ರಿಯಾಯಿತಿ ದರ
Galaxy A34 5G                   6GB+128GB                 N / A                   25,499 ರೂ
                                              8GB+128GB                 30,999 ರೂ        27,499 ರೂ
                                              8GB+256GB                 32,999 ರೂ        29,499 ರೂ
Galaxy A54 5G                   8GB+128GB                 38,999 ರೂ        35,499 ರೂ
                                              8GB+256GB                 40,999 ರೂ        37,499 ರೂ
ಕ್ಯಾಮೆರಾ ಪ್ರಿಯರನ್ನು ದಂಗಾಗಿಸಿರುವ ಒಪ್ಪೋ ರೆನೋ 11 ಪ್ರೊ 5G ಇಂದಿನಿಂದ ಖರೀದಿಗೆ ಲಭ್ಯ: ಬೆಲೆ ಎಷ್ಟು?

ಗ್ಯಾಲಕ್ಸಿ A34 5G ಫೀಚರ್ಸ್

ಡಿಸ್​ಪ್ಲೇ: ಗ್ಯಾಲಕ್ಸಿ A34 5G 6.6-ಇಂಚಿನ ಪೂರ್ಣ HD+ sAMOLED ಡಿಸ್​ಪ್ಲೇ, 120Hz ರಿಫ್ರೆಶ್ ದರವನ್ನು ಹೊಂದಿದೆ.
ಚಿಪ್‌ಸೆಟ್: ಈ ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080 SoC ಜೊತೆಗೆ Mali-G68 MC4 GPU ನಿಂದ ಚಾಲಿತವಾಗಿದೆ.
ಹಿಂಬದಿಯ ಕ್ಯಾಮೆರಾಗಳು: ಹಿಂಬದಿಯ ಕ್ಯಾಮೆರಾಗಳಲ್ಲಿ, f/1.8 ಅಪರ್ಚರ್ ಹೊಂದಿರುವ 48MP OIS ಪ್ರಾಥಮಿಕ ಸಂವೇದಕ, LED ಫ್ಲ್ಯಾಷ್, 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 5MP ಮ್ಯಾಕ್ರೋ ಲೆನ್ಸ್ ಅನ್ನು ಅಳವಡಿಸಲಾಗಿದೆ.
ಮುಂಭಾಗದ ಕ್ಯಾಮೆರಾ: ಸೆಲ್ಫಿಗಳಿಗಾಗಿ, ಗ್ಯಾಲಕ್ಸಿ A34 5G 13MP ಮುಂಭಾಗದ ಸ್ನ್ಯಾಪರ್ ಅನ್ನು ಹೊಂದಿದೆ.
OS: ಗ್ಯಾಲಕ್ಸಿ A34 5G ಇತ್ತೀಚಿನ ಆಂಡ್ರಾಯ್ಡ್ 13-ಆಧಾರಿತ OneUI 5.1 ಕಸ್ಟಮ್ ಸ್ಕಿನ್‌ನಲ್ಲಿ ರನ್ ಆಗುತ್ತದೆ.
ಬ್ಯಾಟರಿ: ಗ್ಯಾಲಕ್ಸಿ A34 5G 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ 5,000mAh ಬ್ಯಾಟರಿಯನ್ನು ಹೊಂದಿದೆ.
ಇತರ ವೈಶಿಷ್ಟ್ಯಗಳು: ಹೆಚ್ಚುವರಿ ವೈಶಿಷ್ಟ್ಯಗಳಲ್ಲಿ ಭದ್ರತೆಗಾಗಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕ, ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP67 ರೇಟಿಂಗ್, ಸ್ಟೀರಿಯೋ ಸ್ಪೀಕರ್‌ಗಳು ಮತ್ತು ಡಾಲ್ಬಿ ಅಟ್ಮಾಸ್ ಸೇರಿವೆ.

ಗ್ಯಾಲಕ್ಸಿ A54 5G

ಡಿಸ್​ಪ್ಲೇ: ಗ್ಯಾಲಕ್ಸಿ A54 5G 6.4-ಇಂಚಿನ FHD+ sAMOLED ಡಿಸ್​ಪ್ಲೇ, 120Hz ರಿಫ್ರೆಶ್ ದರವನ್ನು ಹೊಂದಿದೆ.
ಚಿಪ್‌ಸೆಟ್: ಈ ಫೋನ್ Mali-G68 MP5 GPU ಜೊತೆಗೆ ಎಕ್ಸಿನೊಸ್ 1380 SoC ನಿಂದ ಚಾಲಿತವಾಗಿದೆ.
ಹಿಂದಿನ ಕ್ಯಾಮೆರಾಗಳು: 50MP OIS ಪ್ರಾಥಮಿಕ ಸಂವೇದಕ, 12MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 5MP ಡೆಪ್ತ್ ಯೂನಿಟ್ ಇದೆ.
ಸೆಲ್ಫಿ ಕ್ಯಾಮೆರಾ: 32MP ಫ್ರಂಟ್ ಸ್ನ್ಯಾಪರ್ ನೀಡಲಾಗಿದೆ.
OS: ಈ ಫೋನ್ ಇತ್ತೀಚಿನ ಆಂಡ್ರಾಯ್ಡ್ 13-ಆಧಾರಿತ OneUI 5.1 ಕಸ್ಟಮ್ ಸ್ಕಿನ್‌ನಲ್ಲಿ ರನ್ ಆಗುತ್ತದೆ.
ಬ್ಯಾಟರಿ: 25W ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ 5,000mAh ಬ್ಯಾಟರಿಯನ್ನು ಹೊಂದಿದೆ.
ಇತರ ವೈಶಿಷ್ಟ್ಯಗಳು: ಗ್ಯಾಲಕ್ಸಿ A54 5G ಡಾಲ್ಬಿ ಅಟ್ಮಾಸ್, IP67 ರೇಟಿಂಗ್, ಟೈಪ್-ಸಿ ಪೋರ್ಟ್, ವೈ-ಫೈ, ಬ್ಲೂಟೂತ್ 5.3, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸಂವೇದಕವನ್ನು ನೀಡಲಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ