ಭಾರತದಲ್ಲಿ 5ಜಿ (5G) ಯುಗ ಆರಂಭವಾಗಿ ತಿಂಗಳುಗಳು ಕಳೆದಿದ್ದು ಬಳಕೆದಾರರಿಂದ ಉತ್ತಮ ಪ್ರತಿಕ್ರಿಯೆ ಕೇಳಿಬರುತ್ತಿದೆ. ರಿಲಯನ್ಸ್ ಜಿಯೋ (JIO) ಹಾಗೂ ಭಾರ್ತಿ ಏರ್ಟೆಲ್ ಪೈಪೋಟಿಗೆ ಬಿದ್ದಂತೆ ವೇಗವಾಗಿ ಅನೇಕ ನಗರಗಳಲ್ಲಿ 5ಜಿ ಸೇವೆಯನ್ನು ಆರಂಭಿಸುತ್ತಿದೆ. ಇದೀಗ ಏರ್ಟೆಲ್ ಒಟ್ಟು 80 ಕ್ಕೂ ಅಧಿಕ ಪ್ರದೇಶಗಳಲ್ಲಿ 5ಜಿ ಲಭ್ಯವಾಗುವಂತೆ ಮಾಡಿದೆ. ಅಲ್ಲದೆ ಕೊಹಿಮಾ, ಇಟಾನಗರ್, ಐಜ್ವಾಲ್, ಗ್ಯಾಂಗ್ಟಾಕ್, ಸಿಲ್ಚಾರ್, ದಿಬ್ರುಗಢ್ ಮತ್ತು ಟಿನ್ಸುಕಿಯಾದಲ್ಲಿ ವಾಸಿಸುವ ಏರ್ಟೆಲ್ (Airtel) ಬಳಕೆದಾರರು ಈಗ ಹೆಚ್ಚಿನ ವೇಗದ ಏರ್‌ಟೆಲ್ 5G ಪ್ಲಸ್ ಸೇವೆಗಳನ್ನು ಉಚಿತವಾಗಿ ಬಳಸಬಹುದು ಎಂದು ಕಂಪನಿ ಹೇಳಿದೆ.
ಏರ್ಟೆಲ್ 5G ಪ್ಲಸ್ ಹೊಸದಾಗಿ ಏಳು ರಾಜ್ಯಗಳಾದ್ಯಂತ ಪ್ರಾರಂಭಿಸುವುದರೊಂದಿಗೆ ಏರ್ಟೆಲ್ 5G ಲಭ್ಯವಿರುವ ನಗರಗಳ ಸಂಖ್ಯೆ 80 ದಾಟಿದೆ. ಈ ನಗರಗಳಲ್ಲಿ ವಾಸಿಸುವ ಜನರು ತಮ್ಮ 5G ಸಕ್ರಿಯಗೊಳಿಸಿದ ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಈ ಸೇವೆಗಳನ್ನು ಬಳಸಲು ಸಾಧ್ಯವಾಗುತ್ತದೆ ಎಂದು ಕಂಪನಿ ಭರವಸೆ ನೀಡಿದೆ. ಯಾವ ರಾಜ್ಯಗಳ ಯಾವ ನಗರಗಳಲ್ಲಿ ಏರ್ಟೆಲ್ 5ಜಿ ಸೇವ್ ಲಭ್ಯವಿದೆ ಎಂಬುದನ್ನು ನೋಡುವುದಾದರೆ…
WhatsApp Web: ನೀವು ವಾಟ್ಸ್ಆ್ಯಪ್ ವೆಬ್ ಬಳಸುತ್ತಿದ್ದೀರಾ?: ಬರುತ್ತಿದೆ ಅಚ್ಚರಿ ಗೊಳಿಸುವ ಹೊಸ ಫೀಚರ್
ಅಸ್ಸಾಂ- ಗುವಾಹಟಿ, ತಿನ್ಸುಕಿಯಾ, ದಿಬ್ರುಗಢ್, ಸಿಲ್ಚಾರ್
ಆಂಧ್ರಪ್ರದೇಶ- ವೈಜಾಗ್, ವಿಜಯವಾಡ, ರಾಜಮಂಡ್ರಿ, ಕಾಕಿನಾಡ, ಗುಂಟೂರು, ಕರ್ನೂಲ್ ಮತ್ತು ತಿರುಪತಿ
ಬಿಹಾರ- ಪಾಟ್ನಾ, ಮುಜಾಫರ್‌ಪುರ, ಬೋಧಗಯಾ ಮತ್ತು ಭಾಗಲ್‌ಪುರ
ದೆಹಲಿ
ಗುಜರಾತ್- ಅಹಮದಾಬಾದ್, ಸೂರತ್, ವಡೋದರಾ ಮತ್ತು ರಾಜ್ಕೋಟ್
ಹರಿಯಾಣ- ಗುರುಗ್ರಾಮ್, ಪಾಣಿಪತ್, ಫರಿದಾಬಾದ್, ಅಂಬಾಲಾ, ಕರ್ನಾಲ್, ಸೋನಿಪತ್, ಯಮುನಾನಗರ ಮತ್ತು ಬಹದ್ದೂರ್ಗಢ
ಹಿಮಾಚಲ ಪ್ರದೇಶ – ಶಿಮ್ಲಾ
ಜಮ್ಮು ಮತ್ತು ಕಾಶ್ಮೀರ- ಜಮ್ಮು, ಶ್ರೀನಗರ, ಸಾಂಬಾ, ಕಥುವಾ, ಉಧಂಪುರ, ಅಖ್ನೂರ್, ಕುಪ್ವಾರ, ಲಖನ್‌ಪುರ್ ಮತ್ತು ಖೌರ್
ಜಾರ್ಖಂಡ್- ರಾಂಚಿ ಮತ್ತು ಜಮ್ಶೆಡ್‌ಪುರ
ಕರ್ನಾಟಕ – ಬೆಂಗಳೂರು
ಕೇರಳ- ಕೊಚ್ಚಿ, ತಿರುವನಂತಪುರಂ, ಕೋಝಿಕ್ಕೋಡ್ ಮತ್ತು ತ್ರಿಶೂರ್
ಮಹಾರಾಷ್ಟ್ರ- ಮುಂಬೈ, ನಾಗ್ಪುರ ಮತ್ತು ಪುಣೆ
ಮಧ್ಯಪ್ರದೇಶ – ಇಂದೋರ್
ಮಣಿಪುರ-ಇಂಫಾಲ್
ಒಡಿಶಾ- ಭುವನೇಶ್ವರ್, ಕಟಕ್, ರೌರ್ಕೆಲ, ಪುರಿ
ರಾಜಸ್ಥಾನ- ಜೈಪುರ, ಕೋಟಾ ಮತ್ತು ಉದಯಪುರ
ತಮಿಳುನಾಡು- ಚೆನ್ನೈ, ಕೊಯಮತ್ತೂರು, ಮಧುರೈ, ಹೊಸೂರು ಮತ್ತು ತಿರುಚ್ಚಿ
ತೆಲಂಗಾಣ- ಹೈದರಾಬಾದ್, ವಾರಂಗಲ್ ಮತ್ತು ಕರೀಂನಗರ
ಸಿಕ್ಕಿಂ- ಗ್ಯಾಂಗ್ಟಾಕ್
ಮಿಜೋರಾಂ- ಐಜ್ವಾಲ್
ಅರುಣಾಚಲ ಪ್ರದೇಶ- ಇಟಾನಗರ
ನಾಗಾಲ್ಯಾಂಡ್-ಕೊಹಿಮಾ
ಛತ್ತೀಸ್‌ಗಢ-ರಾಯಪುರ ಮತ್ತು ದುರ್ಗ್-ಭಿಲೈ
ತ್ರಿಪುರ-ಅಗರ್ತಲಾ
ಉತ್ತರಾಖಂಡ- ಡೆಹ್ರಾಡೂನ್
ಉತ್ತರ ಪ್ರದೇಶ- ವಾರಣಾಸಿ, ಲಕ್ನೋ, ಆಗ್ರಾ, ಮೀರತ್, ಗೋರಖ್‌ಪುರ, ಕಾನ್ಪುರ್, ಪ್ರಯಾಗರಾಜ್, ನೋಯ್ಡಾ ಮತ್ತು ಗಾಜಿಯಾಬಾದ್
ಪಶ್ಚಿಮ ಬಂಗಾಳ- ಸಿಲಿಗುರಿ
ಏರ್ಟೆಲ್ 4G ಗೆ ಹೋಲಿಸಿದರೆ 30 ಪಟ್ಟು ಹೆಚ್ಚಿನ ವೇಗವನ್ನು 5G ನೀಡುತ್ತದೆ ಎಂದು ಕಂಪನಿ ಹೇಳಿದೆ. 5ಜಿ ತಂತ್ರಜ್ಞಾನವು ತಡೆರಹಿತ ಕವರೇಜ್, ಶತಕೋಟಿ ಡಿವೈಸ್ಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ವೇಗದಲ್ಲಿ ಉತ್ತಮ ಗುಣಮಟ್ಟದ ವಿಡಿಯೊ ಕರೆ ಸೇವೆಗಳನ್ನು ಒದಗಿಸುತ್ತದೆ. ಉತ್ತಮ ಮತ್ತು ಗುಣಮಟ್ಟದ ವಿಡಿಯೋ ಅಥವಾ ಚಲನಚಿತ್ರವನ್ನು ಮೊಬೈಲ್ ಸಾಧನದಲ್ಲಿ ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಲು (ಜನಸಂದಣಿ ಇರುವ ಪ್ರದೇಶಗಳಲ್ಲಿಯೂ ಸಹ) ಅನುಮತಿಸುತ್ತದೆ. ಜಿಯೋ 5G ಗಿಂತ ಭಿನ್ನವಾಗಿ ಏರ್ಟೆಲ್ ತನ್ನ 5G ಸೇವೆಗಳನ್ನು ಎಲ್ಲರಿಗೂ ನೀಡುತ್ತದೆ. ಆದ್ದರಿಂದ, ಬಳಕೆದಾರರು ಕನಿಷ್ಟ ರೀಚಾರ್ಜ್ ಯೋಜನೆಯನ್ನು ಪಡೆಯಬೇಕಾಗಿಲ್ಲ. ಬದಲಾಗಿ, ಏರ್‌ಟೆಲ್ 5G ಈಗಿರುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತದೆ.
ನಿಮ್ಮಲ್ಲಿ ಹಳೆಯ ಸ್ಮಾರ್ಟ್ಫೋನ್ಗಳಿದ್ದರೆ ಹೊಸ 5ಜಿ ಫೋನನ್ನು ಖರೀದಿಸುವಂತೆ ಏರ್ಟೆಲ್ ಬಳಕೆದಾರರ ಬಳಿ ಮನವಿ ಮಾಡಿದೆ. ಮುಖ್ಯವಾದ ಅಂಶ ಎಂದರೆ ನಿಮ್ಮ ಮೊಬೈಲ್ನಲ್ಲಿ ಈಗಿರುವ ಏರ್ಟೆಲ್ ಸಿಮ್ ಮೂಲಕವೇ 5ಜಿ ಕಾರ್ಯನಿರ್ವಹಿಸಲಿದೆ. ಅಂದರೆ 5ಜಿ ಸೇವೆ ಪಡೆಯಲು ಯಾವುದೇ ಹೊಸ ಸಿಮ್ನ ಅಗತ್ಯವಿಲ್ಲ. ನಿಮ್ಮ ಪ್ರದೇಶದಲ್ಲಿ 5ಜಿ ಲಭ್ಯವಾಗುತ್ತಿದೆ ಎಂದಾದರೆ ಸ್ಮಾರ್ಟ್ಫೋನ್ನಲ್ಲಿ ನೆಟ್ವರ್ಕ್ ಸೆಟ್ಟಿಂಗ್ಗೆ ಹೋಗಿ 5ಜಿ ಅನ್ನು ಚಾಲ್ತಿ ಮಾಡಿದರೆ ಸಾಕು.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:33 am, Fri, 17 February 23