ಏರ್‌ಟೆಲ್‌ನ ಸ್ಫೋಟಕ ಯೋಜನೆ: ಕೇವಲ 49 ರೂ. ಗೆ ಅನ್ಲಿಮಿಟೆಡ್ ಡೇಟಾ

|

Updated on: Feb 27, 2024 | 11:45 AM

Airtel Best data Plan: ಏರ್‌ಟೆಲ್‌ನ ರೂ. 49 ಡೇಟಾ ಪ್ಯಾಕ್ ನಿಮಗೆ ಒಂದು ದಿನದ ಮಾನ್ಯತೆಯೊಂದಿಗೆ ಅನಿಯಮಿತ ಡೇಟಾದ ಪ್ರಯೋಜನವನ್ನು ನೀಡುತ್ತದೆ. ಆದರೆ, ಈ ಯೋಜನೆಯಲ್ಲಿ ನೀವು 20GB ವರೆಗೆ ಮಾತ್ರ ಅನಿಯಮಿತ ಡೇಟಾವನ್ನು ಪಡೆಯುತ್ತೀರಿ, ನಂತರ ಇಂಟರ್ನೆಟ್ ವೇಗವು 64 Kbps ಗೆ ಕಡಿಮೆಯಾಗುತ್ತದೆ.

ಏರ್‌ಟೆಲ್‌ನ ಸ್ಫೋಟಕ ಯೋಜನೆ: ಕೇವಲ 49 ರೂ. ಗೆ ಅನ್ಲಿಮಿಟೆಡ್ ಡೇಟಾ
Airtel
Follow us on

ಏರ್‌ಟೆಲ್ (Airtel) ಬಳಕೆದಾರರಿಗೊಂದು ಸಂತಸದ ಸುದ್ದಿ. ಏರ್‌ಟೆಲ್ ತನ್ನ ರೂ. 49 ಡೇಟಾ ಪ್ಯಾಕ್ ಅನ್ನು ಬದಲಾಯಿಸಿದೆ. ಈ ಯೋಜನೆಯನ್ನು ರೀಚಾರ್ಜ್ ಮಾಡುವ ಬಳಕೆದಾರರು ಈಗ ಅನಿಯಮಿತ ಡೇಟಾವನ್ನು ಪಡೆಯುತ್ತಾರೆ. ಏರ್‌ಟೆಲ್‌ನ ಈ ಯೋಜನೆಯು ಅಗ್ಗದ ಡೇಟಾ ಪ್ಯಾಕ್ ಆಗಿದೆ. ಟೆಲಿಕಾಂ ಕ್ಷೇತ್ರದಲ್ಲಿನ ಪೈಪೋಟಿ ಮತ್ತು ಜಿಯೋ-ವೊಡಾಫೋನ್ ಐಡಿಯಾಕ್ಕೆ ಟಕ್ಕರ್ ಕೊಡಲು ಏರ್​ಟೆಲ್ ಇದರಲ್ಲಿ ಅನಿಯಮಿತ ಡೇಟಾವನ್ನು ನೀಡುತ್ತಿದೆ. ಈ ಯೋಜನೆಗೆ ಸಂಬಂಧಿಸಿದ ಎಲ್ಲಾ ವಿವರಗಳ ಬಗ್ಗೆ ಇಲ್ಲಿದೆ ನೋಡಿ ಮಾಹಿತಿ.

ಏರ್‌ಟೆಲ್‌ನ ರೂ. 49 ಡೇಟಾ ಪ್ಯಾಕ್ ನಿಮಗೆ ಒಂದು ದಿನದ ಮಾನ್ಯತೆಯೊಂದಿಗೆ ಅನಿಯಮಿತ ಡೇಟಾದ ಪ್ರಯೋಜನವನ್ನು ನೀಡುತ್ತದೆ. ಆದರೆ, ಈ ಯೋಜನೆಯಲ್ಲಿ ನೀವು 20GB ವರೆಗೆ ಮಾತ್ರ ಅನಿಯಮಿತ ಡೇಟಾವನ್ನು ಪಡೆಯುತ್ತೀರಿ, ನಂತರ ಇಂಟರ್ನೆಟ್ ವೇಗವು 64 Kbps ಗೆ ಕಡಿಮೆಯಾಗುತ್ತದೆ. ಅಂದರೆ, ಏರ್‌ಟೆಲ್‌ನ ಈ ಯೋಜನೆಯಲ್ಲಿ 1GB ಡೇಟಾದ ಬೆಲೆ ಸುಮಾರು 2.45 ರೂಪಾಯಿಗಳಾಗಿವೆ.

ಬಹುನಿರೀಕ್ಷಿತ ಐಕ್ಯೂ Z9 5G ಬಿಡುಗಡೆ ದಿನಾಂಕ ಬಹಿರಂಗ: ಯಾವಾಗ ನೋಡಿ

ಏರ್‌ಟೆಲ್‌ನ ರೂ. 49 ಡೇಟಾ ಪ್ಯಾಕ್ ಈ ಹಿಂದೆ 6 GB ಹೈ-ಸ್ಪೀಡ್ ಡೇಟಾವನ್ನು ನೀಡುತ್ತಿತ್ತು. ಈ ಯೋಜನೆಯ ಮಾನ್ಯತೆ ಒಂದೇ ಆಗಿರುತ್ತದೆ. ಈ ಹಿಂದೆಯೂ ಈ ಯೋಜನೆಯು 1 ದಿನದ ವ್ಯಾಲಿಡಿಟಿಯೊಂದಿಗೆ ಲಭ್ಯವಿತ್ತು. ಈಗ ಏರ್‌ಟೆಲ್ ಈ ಯೋಜನೆಯ ಪ್ರಯೋಜನಗಳನ್ನು ಹೆಚ್ಚಿಸಿ ಹೆಚ್ಚಿನ ಡೇಟಾವನ್ನು ನೀಡುತ್ತಿದೆ.

ರೂ. 49 ಡೇಟಾ ಪ್ಯಾಕ್‌ನಲ್ಲಿ ಬದಲಾವಣೆಯ ನಂತರ, ಏರ್‌ಟೆಲ್ ಅಂತಹ ಎರಡು ಯೋಜನೆಗಳನ್ನು ಹೊಂದಿದೆ. ಇದರಲ್ಲಿ ಬಳಕೆದಾರರು ಅನಿಯಮಿತ ಇಂಟರ್ನೆಟ್ ಅನ್ನು ಪಡೆಯುತ್ತಾರೆ. ಇದನ್ನು ಹೊರತುಪಡಿಸಿ, ನೀವು ಏರ್‌ಟೆಲ್‌ನ ರೂ. 99 ಡೇಟಾ ಪ್ಯಾಕ್‌ನೊಂದಿಗೆ ಅನಿಯಮಿತ ಡೇಟಾವನ್ನು ಪಡೆಯುತ್ತೀರಿ. ರೂ. 99 ಪ್ಲಾನ್‌ನ ವ್ಯಾಲಿಡಿಟಿ 2 ದಿನಗಳು.

DSLRಗೆ ಟಕ್ಕರ್ ಕೊಡುವ ಕ್ಯಾಮೆರಾ: ಮಾರುಕಟ್ಟೆಗೆ ಶವೋಮಿ 14, ಶವೋಮಿ 14 ಆಲ್ಟ್ರಾ ಎಂಟ್ರಿ

ಜಿಯೋದ ಅಗ್ಗದ ಯೋಜನೆ

ನೀವು ರಿಲಯನ್ಸ್ ಜಿಯೋದ ಗ್ರಾಹಕರಾಗಿದ್ದರೆ, ಜಿಯೋ ನಿಮಗಾಗಿ ಉತ್ತಮ ಯೋಜನೆಯನ್ನು ಹೊಂದಿದೆ. ಈ ಜಿಯೋ ಯೋಜನೆಯ ಬೆಲೆ ರೂ. 249 ಆಗಿದೆ. ಈ ರೀಚಾರ್ಜ್‌ನಲ್ಲಿ ಅನೇಕ ಇತರ ಪ್ರಯೋಜನಗಳು ಲಭ್ಯವಿದೆ. ಈ ಪ್ಲಾನ್ 23 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಗ್ರಾಹಕರಿಗೆ ದಿನಕ್ಕೆ 2 GB ಡೇಟಾವನ್ನು ನೀಡಲಾಗುತ್ತದೆ. ಅಂದರೆ ಗ್ರಾಹಕರು 23 ದಿನಗಳಲ್ಲಿ ಒಟ್ಟು 46 GB ಡೇಟಾವನ್ನು ಪಡೆಯುತ್ತಾರೆ.

ಈ ಪ್ರಿಪೇಯ್ಡ್ ಯೋಜನೆಯಲ್ಲಿ ಅನಿಯಮಿತ ಧ್ವನಿ ಕರೆಗಳು ಸಹ ಲಭ್ಯವಿದೆ. ಜಿಯೋದ ಈ ಯೋಜನೆಯಲ್ಲಿ ಸ್ಥಳೀಯ, STD ಮತ್ತು ರೋಮಿಂಗ್ ಕರೆಗಳು ಸಹ ಉಚಿತವಾಗಿ ಲಭ್ಯವಿವೆ. ಜೊತೆಗೆ ದಿನಕ್ಕೆ ಉಚಿತ 100 SMS ಗಳ ಪ್ರಯೋಜನ ಪಡೆಯಬಹುದು. ಆದರೆ, ಯಾವುದೇ ಓಟಿಟಿ ಚಂದಾದಾರಿಕೆ ಉಚಿತವಾಗಿ ನೀಡಿಲ್ಲ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ