iQOO Z9: ಬಹುನಿರೀಕ್ಷಿತ ಐಕ್ಯೂ Z9 5G ಬಿಡುಗಡೆ ದಿನಾಂಕ ಬಹಿರಂಗ: ಯಾವಾಗ ನೋಡಿ

iQOO Z9 India Launch Date: ಐಕ್ಯೂ Z9 ಸ್ಮಾರ್ಟ್​ಫೋನ್ ಅನ್ನು ಮಾರ್ಚ್ 12 ರಂದು ಭಾರತೀಯ ಗ್ರಾಹಕರಿಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಅಧಿಕೃತವಾಗಿ ದೃಢಪಡಿಸಿದೆ. ಇತ್ತೀಚಿನ ವರದಿಯ ಪ್ರಕಾರ, ಈ ಫೋನ್ ಭಾರತದಲ್ಲಿ ರೂ. 25,000 ಕ್ಕಿಂತ ಕಡಿಮೆ ಬೆಲೆಯೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ಈ ಸ್ಮಾರ್ಟ್‌ಫೋನ್ ವಿಭಿನ್ನ ಶೇಖರಣಾ ರೂಪಾಂತರಗಳೊಂದಿಗೆ ಬರಲಿದೆ.

iQOO Z9: ಬಹುನಿರೀಕ್ಷಿತ ಐಕ್ಯೂ Z9 5G ಬಿಡುಗಡೆ ದಿನಾಂಕ ಬಹಿರಂಗ: ಯಾವಾಗ ನೋಡಿ
iQOO Z9 5G
Follow us
Vinay Bhat
|

Updated on: Feb 27, 2024 | 10:29 AM

ಕಳೆದ ಕೆಲವು ವಾರಗಳಿಂದ ಭಾರತದಲ್ಲಿ ಭಾರೀ ಸದ್ದು ಮಾಡತ್ತಿದ್ದ ಐಕ್ಯೂ Z9 (iQOO Z9) ಸ್ಮಾರ್ಟ್​ಫೋನ್ ಬಗ್ಗೆ ಹೊಸ ವಿಚಾರ ಬೆಳಕಿಗೆ ಬಂದಿದೆ. ಇದೀಗ ಸ್ಮಾರ್ಟ್‌ಫೋನ್ ಬ್ರ್ಯಾಂಡ್ ಮುಂಬರುವ ಫೋನ್‌ನ ಬಿಡುಗಡೆ ದಿನಾಂಕವನ್ನು ಪ್ರಕಟಿಸಿದೆ. ಕಂಪನಿಯ ಪ್ರಕಾರ, ಐಕ್ಯೂ Z9 ಮುಂದಿನ ತಿಂಗಳು ಭಾರತದಲ್ಲಿ ಅನಾವರಣಗೊಳ್ಳಲಿದೆ. ಮುಂಬರುವ ಐಕ್ಯೂ Z9 ಭಾರತದಲ್ಲಿ ಖರೀದಿಸಲು ಅಮೆಜಾನ್​ನಲ್ಲಿ ಲಭ್ಯವಿರುತ್ತದೆ ಎಂದು ಕಂಪನಿಯು ಬಹಿರಂಗಪಡಿಸಿದೆ. ಹೊಸ ಐಕ್ಯೂ Z9 ಸ್ಮಾರ್ಟ್​ಫೋನ್​ ಭಾರತದ ಬಿಡುಗಡೆ ದಿನಾಂಕ, ಬೆಲೆ ಮತ್ತು ಇತರ ಪ್ರಮುಖ ವಿವರಗಳ ಕುರಿತು ಮಾಹಿತಿ ಇಲ್ಲಿದೆ.

ಐಕ್ಯೂ Z9 ಭಾರತದ ಬಿಡುಗಡೆ ದಿನಾಂಕ

ಹಲವು ಊಹಾಪೋಹಗಳ ನಂತರ, ಐಕ್ಯೂ Z9 ಸ್ಮಾರ್ಟ್​ಫೋನ್ ಅನ್ನು ಮಾರ್ಚ್ 12 ರಂದು ಭಾರತೀಯ ಗ್ರಾಹಕರಿಗೆ ಬಿಡುಗಡೆ ಮಾಡಲಾಗುವುದು ಎಂದು ಕಂಪನಿಯು ಅಧಿಕೃತವಾಗಿ ದೃಢಪಡಿಸಿದೆ.

DSLRಗೆ ಟಕ್ಕರ್ ಕೊಡುವ ಕ್ಯಾಮೆರಾ: ಮಾರುಕಟ್ಟೆಗೆ ಶವೋಮಿ 14, ಶವೋಮಿ 14 ಆಲ್ಟ್ರಾ ಎಂಟ್ರಿ

ಐಕ್ಯೂ Z9 ನಿರೀಕ್ಷಿತ ಬೆಲೆ

ಇತ್ತೀಚಿನ ವರದಿಯ ಪ್ರಕಾರ, ಐಕ್ಯೂ Z9 5G ಫೋನ್ ಭಾರತದಲ್ಲಿ ರೂ. 25,000 ಕ್ಕಿಂತ ಕಡಿಮೆ ಬೆಲೆಯೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ. ಆದಾಗ್ಯೂ, ಈ ಸ್ಮಾರ್ಟ್‌ಫೋನ್ ವಿಭಿನ್ನ ಶೇಖರಣಾ ರೂಪಾಂತರಗಳೊಂದಿಗೆ ಬರಲಿದೆ. ಪ್ರತಿಯೊಂದೂ ಸ್ಟೋರೇಜ್ ಆವೃತ್ತಿಗೆ ವಿಭಿನ್ನ ಬೆಲೆ ಇರುತ್ತದೆ. ಈ ಫೋನಿನ ಬಗ್ಗೆ ಅನೇಕ ಫೀಚರ್​ಗಳು ಸೋರಿಕೆ ಆಗಿವೆ. ಆದರೆ, ಈ ಬಗ್ಗೆ ಕಂಪನಿ ಈವರೆಗೆ ಯಾವುದೇ ಅಧಿಕೃತ ಮಾಹಿತಿ ಹೊರಹಾಕಿಲ್ಲ.

ಡಿಸ್‌ಪ್ಲೇ: ಐಕ್ಯೂ Z9 6.67-ಇಂಚಿನ AMOLED 120Hz ಡಿಸ್‌ಪ್ಲೇ ಮತ್ತು 1800 nits ನ ಗರಿಷ್ಠ ಬ್ರೈಟ್​ನೆಸ್ ಅನ್ನು ಹೊಂದಿದೆ.

ಚಿಪ್‌ಸೆಟ್: ಈ ಸ್ಮಾರ್ಟ್​ಫೋನ್​ನಲ್ಲಿ ಮೀಡಿಯಾಟೆಕ್ ಡೈಮೆನ್ಸಿಟಿ 7200 SoC ನೀಡಲಾಗಿದೆ ಎಂಬ ಮಾತಿದೆ.

ಹಿಂಬದಿಯ ಕ್ಯಾಮೆರಾಗಳು: ಮುಂಬರುವ ಐಕ್ಯೂ ಫೋನ್ 50MP ಸೋನಿ IMX882 OIS ಮುಖ್ಯ ಕ್ಯಾಮೆರಾ ಮತ್ತು ಹೆಚ್ಚುವರಿ ಸೆಕೆಂಡರಿ ಸಂವೇದಕಗಳೊಂದಿಗೆ ಬರುವ ಸಾಧ್ಯತೆ ಇದೆ.

ಬರೋಬ್ಬರಿ 6,000mAh ಬ್ಯಾಟರಿ: ಮುಂದಿನ ವಾರ ಬರಲಿದೆ ಸ್ಯಾಮ್​ಸಂಗ್​ನ ಹೊಸ ಸ್ಮಾರ್ಟ್​ಫೋನ್

ಸಂಗ್ರಹಣೆ: ಐಕ್ಯೂ Z9 8GB RAM ನೊಂದಿಗೆ ಬರಬಹುದು, ವರ್ಚುವಲ್ RAM ಬೆಂಬಲದ ಮೂಲಕ RAM ಅನ್ನು ದ್ವಿಗುಣಗೊಳಿಸುವ ಆಯ್ಕೆ ಇರಬಹುದು.

ಸಾಫ್ಟ್‌ವೇರ್: ಈ ಫೋನ್ ಆಂಡ್ರಾಯ್ಡ್ 14 ಅನ್ನು ಆಧರಿಸಿ Funtouch OS 14 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಚಾರ್ಜಿಂಗ್: ಬ್ಯಾಟರಿಗೆ ಸಂಬಂಧಿಸಿದ ಅಧಿಕೃತ ಮಾಹಿತಿ ಇರದಿದ್ದರೂ, 44W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುವ ನಿರೀಕ್ಷೆಯಿದೆ. 5000 ಬ್ಯಾಟರಿ ಇರಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ