AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Galaxy F15 5G: ಬರೋಬ್ಬರಿ 6,000mAh ಬ್ಯಾಟರಿ: ಮುಂದಿನ ವಾರ ಬರಲಿದೆ ಸ್ಯಾಮ್​ಸಂಗ್​ನ ಹೊಸ ಸ್ಮಾರ್ಟ್​ಫೋನ್

Samsung Galaxy F15 5G India Launch Date: ಸ್ಯಾಮ್​ಸಂಗ್ ಗ್ಯಾಲಕ್ಸಿ F15 5G ಭಾರತದಲ್ಲಿ ಮಾರ್ಚ್ 4 ರಂದು ಮಧ್ಯಾಹ್ನ 12 ಗಂಟೆಗೆ ಅನಾವರಣಗೊಳ್ಳಲಿದೆ. ಈ ಹ್ಯಾಂಡ್‌ಸೆಟ್ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಇದರಲ್ಲಿ ಬರೋಬ್ಬರಿ 6,000mAh ಬ್ಯಾಟರಿ ನೀಡಲಾಗಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ಇದೆ.

Galaxy F15 5G: ಬರೋಬ್ಬರಿ 6,000mAh ಬ್ಯಾಟರಿ: ಮುಂದಿನ ವಾರ ಬರಲಿದೆ ಸ್ಯಾಮ್​ಸಂಗ್​ನ ಹೊಸ ಸ್ಮಾರ್ಟ್​ಫೋನ್
samsung galaxy f15 5g
Vinay Bhat
|

Updated on: Feb 26, 2024 | 11:51 AM

Share

ದಕ್ಷಿಣ ಕೊರಿಯಾ ಮೂಲದ ಸ್ಯಾಮ್​ಸಂಗ್ ಕಂಪನಿ ಕೆಲವು ವಾರಗಳ ವಿರಾಮದ ಬಳಿಕ ಭಾರತೀಯ ಮಾರುಕಟ್ಟೆಗೆ ಹೊಸ ಸ್ಮಾರ್ಟ್​ಫೋನ್​ನೊಂದಿಗೆ ಬರುತ್ತಿದೆ. ಮುಂದಿನ ತಿಂಗಳು ದೇಶದಲ್ಲಿ ಸ್ಯಾಮ್​ಸಂಗ್ ತನ್ನ ಹೊಸ ಗ್ಯಾಲಕ್ಸಿ F15 5G (Samsung Galaxy F15 5G) ಅನ್ನು ಬಿಡುಗಡೆ ಮಾಡಲಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಮೀಸಲಾದ ಮೈಕ್ರೊಸೈಟ್ ಮುಂಬರುವ ಗ್ಯಾಲಕ್ಸಿ ಎಫ್-ಸರಣಿಯ ಸ್ಮಾರ್ಟ್‌ಫೋನ್‌ನ ವಿನ್ಯಾಸ ಮತ್ತು ಕೆಲವು ಫೀಚರ್ಸ್ ಬಗ್ಗೆ ಮಾಹಿತಿ ನೀಡಿದೆ.

ಗ್ಯಾಲಕ್ಸಿ F15 5G ಅನ್ನು ಮೀಡಿಯಾ ಟೆಕ್ ಡೈಮೆನ್ಸಿಟಿ 6100+ SoC ನಲ್ಲಿ ರನ್ ಮಾಡಲಾಗುತ್ತದೆ. ಇದರಲ್ಲಿ ಬರೋಬ್ಬರಿ 6,000mAh ಬ್ಯಾಟರಿ ನೀಡಲಾಗಿದೆ. ಉಳಿದಂತೆ ಈ ಹೊಸ ಫೋನಿನ ಬೆಲೆ ಎಷ್ಟು?, ಏನೆಲ್ಲ ಫೀಚರ್ಸ್ ಇರಬಹುದು? ಎಂಬುದನ್ನು ನೋಡೋಣ.

ಗೀಸರ್ ಸ್ವಿಚ್ ಆಫ್ ಮಾಡಲು ಮರೆತು ಆಫೀಸ್​ಗೆ ಹೋದರೆ ಏನಾಗುತ್ತದೆ?

ಸ್ಯಾಮ್​ಸಂಗ್ ಗ್ಯಾಲಕ್ಸಿ F15 5G ಭಾರತದಲ್ಲಿ ಮಾರ್ಚ್ 4 ರಂದು ಮಧ್ಯಾಹ್ನ 12 ಗಂಟೆಗೆ ಅನಾವರಣಗೊಳ್ಳಲಿದೆ. ಈ ಹ್ಯಾಂಡ್‌ಸೆಟ್ ಕಂಪನಿಯ ಅಧಿಕೃತ ವೆಬ್‌ಸೈಟ್ ಮತ್ತು ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಹೊಸ ಗ್ಯಾಲಕ್ಸಿ F ಸರಣಿಯ ಸ್ಮಾರ್ಟ್‌ಫೋನ್‌ನ ಆಗಮನದ ಬಗ್ಗೆ ಇ-ಕಾಮರ್ಸ್ ವೆಬ್‌ಸೈಟ್ ತನ್ನ ವೆಬ್‌ಸೈಟ್‌ನಲ್ಲಿ ಲ್ಯಾಂಡಿಂಗ್ ಪುಟವನ್ನು ಕೂಡ ರಚಿಸಿದೆ. ಇದು ಆಶ್ ಬ್ಲ್ಯಾಕ್, ಗ್ರೂವಿ ವೈಲೆಟ್ ಮತ್ತು ಜಾಝಿ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ ಎಂದು ಹೇಳಲಾಗಿದೆ.

ಫ್ಲಿಪ್​ಕಾರ್ಟ್​ ಪಟ್ಟಿಯ ಪ್ರಕಾರ ಗ್ಯಾಲಕ್ಸಿ F15 5G ಫೋನ್ ಸೂಪರ್ AMOLED ಡಿಸ್​ಪ್ಲೇಯನ್ನು ಹೊಂದಿದೆ. ಇದು ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6100+ ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. 6,000mAh ಬ್ಯಾಟರಿಯನ್ನು ಹೊಂದಿದೆ. ಇದು ಇದು ಒಂದೇ ಚಾರ್ಜ್‌ನಲ್ಲಿ ಎರಡು ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ, ಸ್ಯಾಮ್‌ಸಂಗ್ ಹೊಸ ಫೋನ್‌ಗೆ ನಾಲ್ಕು ತಲೆಮಾರುಗಳ ಆಂಡ್ರಾಯ್ಡ್ ನವೀಕರಣಗಳು ಮತ್ತು ಐದು ವರ್ಷಗಳ ಭದ್ರತಾ ನವೀಕರಣಗಳನ್ನು ಒದಗಿಸುವುದಾಗಿ ಭರವಸೆ ನೀಡಿದೆ.

ಬಿಸಿಲ ಬೇಗೆಗೆ ಬಾಂಬ್​ನಂತೆ ಸಿಡಿಯುತ್ತೆ ಮೊಬೈಲ್: ನಿರ್ಲಕ್ಷಿಸದಿರಿ

ಗ್ಯಾಲಕ್ಸಿ ಎಫ್ 15 5 ಜಿ ಸ್ಮಾರ್ಟ್​ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಯೂನಿಟ್ ಅನ್ನು ಹೊಂದಿದೆ. ಹಾಗೆಯೆ ಸಿಂಗಲ್ ಸೆಲ್ಫಿ ಶೂಟರ್ ಅನ್ನು ಇರಿಸಲು ಡಿಸ್​ಪ್ಲೇ ಮೇಲೆ ವಾಟರ್‌ಡ್ರಾಪ್-ಶೈಲಿಯ ನಾಚ್ ಅನ್ನು ನೀಡಲಾಗಿದೆ. ಆದಾಗ್ಯೂ, ದೇಶದಲ್ಲಿ ಈ ಸ್ಮಾರ್ಟ್‌ಫೋನ್‌ನ ಬೆಲೆಯ ವಿವರಗಳು ಸದ್ಯಕ್ಕೆ ತಿಳಿದಿಲ್ಲ, ಮೂಲಗಳ ಪ್ರಕಾರ ಈ ಫೋನಿನ ಬೆಲೆ ರೂ. 15,000 ಇರಬಹುದೆಂದು ಅಂದಾಜಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಆಲ್ಕೋಹಾಲ್ ಬಾಟಲಿ ಕದಿಯಲು ಹೋಗಿ ಕಿಟಕಿ ಸರಳಲ್ಲಿ ತಲೆ ಸಿಲುಕಿಸಿಕೊಂಡ ಕುಡುಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಐಎಎಫ್ ಪೈಲಟ್ ಲೋಕೇಂದ್ರ ಸಿಂಧುಗೆ 1 ತಿಂಗಳ ಮಗನಿಂದ ಅಂತಿಮನಮನ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ