AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

DSLRಗೆ ಟಕ್ಕರ್ ಕೊಡುವ ಕ್ಯಾಮೆರಾ: ಮಾರುಕಟ್ಟೆಗೆ ಶವೋಮಿ 14, ಶವೋಮಿ 14 ಆಲ್ಟ್ರಾ ಎಂಟ್ರಿ

Xiaomi 14, Xiaomi 14 Ultra Launched: ಡಿಎಸ್​ಎಲ್​ಆರ್ ಕ್ಯಾಮೆರಾಗೆ ಟಕ್ಕರ್ ಕೊಡುವಂತಹ ಫೋನ್ ಶವೋಮಿ 14 ಮತ್ತು ಶವೋಮಿ 14 ಅಲ್ಟ್ರಾ ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್​ನಲ್ಲಿ Leica Summilux ಲೆನ್ಸ್ ನೀಡಲಾಗಿದೆ. ಇದು ಫೋಟೋವನ್ನು ಅದ್ಭುತವಾಗಿ ಸೆರೆ ಹಿಡಿಯುತ್ತದೆ.

DSLRಗೆ ಟಕ್ಕರ್ ಕೊಡುವ ಕ್ಯಾಮೆರಾ: ಮಾರುಕಟ್ಟೆಗೆ ಶವೋಮಿ 14, ಶವೋಮಿ 14 ಆಲ್ಟ್ರಾ ಎಂಟ್ರಿ
Xiaomi 14 and Xiaomi 14 Ultra
Vinay Bhat
|

Updated on:Feb 26, 2024 | 1:58 PM

Share

ಬಾರ್ಸಿಲೋನಾದಲ್ಲಿ ನಡೆಯುತ್ತಿರುವ ಮೊಬೈಲ್ ವರ್ಲ್ಡ್ ಕಾಂಗ್ರೆಸ್‌ನಲ್ಲಿ ಪ್ರಸಿದ್ಧ ಶವೋಮಿ ಕಂಪನಿ ತನ್ನ ಶವೋಮಿ 14 ಸರಣಿ ಅಡಿಯಲ್ಲಿ ಶವೋಮಿ 14 ಮತ್ತು ಶವೋಮಿ 14 ಅಲ್ಟ್ರಾವನ್ನು ಜಾಗತಿಕ ಮಾರುಕಟ್ಟೆಗಳಲ್ಲಿ ಬಿಡುಗಡೆ ಮಾಡಿದೆ. ಈ ಸರಣಿಯ ಮೂರನೇ ಫೋನ್, ಶವೋಮಿ 14 ಪ್ರೊ ಆಗಿದೆ. ಶವೋಮಿ 14 (Xiaomi 14) ಅಕ್ಟೋಬರ್ 2023 ರಲ್ಲಿ ಚೀನಾದಲ್ಲಿ ಅನಾವರಣಗೊಳಿಸಲಾಗಿತ್ತು. ಕೆಲವು ದಿನಗಳ ಹಿಂದೆ ಶವೋಮಿ 14 ಮತ್ತು ಶವೋಮಿ 14 ಆಲ್ಟ್ರಾ ಕ್ವಾಲ್ಕಂ ಸ್ನಾಪ್​ಡ್ರಾಗನರ್ 8 Gen 3 SoC ಯೊಂದಿಗೆ ರಿಲೀಸ್ ಆಗಿತ್ತು. ಅಚ್ಚರಿ ಎಂದರೆ ಈ ಫೋನ್​ನಲ್ಲಿ Leica Summilux ಲೆನ್ಸ್ ನೀಡಲಾಗಿದೆ. ಇದು ಫೋಟೋವನ್ನು ಅದ್ಭುತವಾಗಿ ಸೆರೆ ಹಿಡಿಯುತ್ತದೆ.

ಶವೋಮಿ 14 ಮಾರ್ಚ್ 7 ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ ಮತ್ತು ಅಮೆಜಾನ್​ನಲ್ಲಿ ಮಾರಾಟ ಕಾಣಲಿದೆ ಎಂದು ಕಂಪನಿ ಹೇಳಿದೆ.

ಶವೋಮಿ 14 ಮತ್ತು ಶವೋಮಿ 14 ಆಲ್ಟ್ರಾ ಬೆಲೆಗಳು

ಶವೋಮಿ 14 ಜಾಗತಿಕ ಬೆಲೆಯು EUR 999 (ಭಾರತದಲ್ಲಿ ಸುಮಾರು ರೂ. 89,700) ನಿಂದ ಪ್ರಾರಂಭವಾಗುತ್ತದೆ. ಇದು ಕಪ್ಪು, ಬಿಳಿ ಮತ್ತು ಜೇಡ್ ಗ್ರೀನ್ ಬಣ್ಣದ ಆಯ್ಕೆಗಳಲ್ಲಿ 12GB/256GB ಮತ್ತು 12GB/512GB ಎರಡು ರೂಪಾಂತರಗಳಲ್ಲಿ ಲಭ್ಯವಿದೆ. ಶವೋಮಿ 14 ಆಲ್ಟ್ರಾ 16GB/512GB ಸ್ಟೋರೇಜ್ ರೂಪಾಂತರದಲ್ಲಿ ಬಿಡುಗಡೆಗೊಂಡಿದ್ದು, ಇದು ಕಪ್ಪು ಅಥವಾ ಬಿಳಿ ಬಣ್ಣದಲ್ಲಿ EUR 1,499 (ಸುಮಾರು 1.3 ಲಕ್ಷ ರೂ.) ಕ್ಕೆ ಲಭ್ಯವಿದೆ.

ಬರೋಬ್ಬರಿ 6,000mAh ಬ್ಯಾಟರಿ: ಮುಂದಿನ ವಾರ ಬರಲಿದೆ ಸ್ಯಾಮ್​ಸಂಗ್​ನ ಹೊಸ ಸ್ಮಾರ್ಟ್​ಫೋನ್

ಶವೋಮಿ 14 ಆಲ್ಟ್ರಾ ಫೀಚರ್ಸ್:

ಡಿಸ್‌ಪ್ಲೇ: ಶವೋಮಿ 14 ಆಲ್ಟ್ರಾ ದೊಡ್ಡದಾದ 6.73-ಇಂಚಿನ QHD+ LTPO OLED ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್, 3200 x 1440 ಪಿಕ್ಸೆಲ್‌ಗಳ ರೆಸಲ್ಯೂಶನ್, HDR10+, ಡಾಲ್ಬಿ ವಿಷನ್, 240Hz ಟಚ್ ಸ್ಯಾಂಪ್ಲಿಂಗ್ ದರ ಮತ್ತು 3000 ಪೀಕ್ ಬ್ರೈಟ್‌ನೆಸ್ ಹೊಂದಿದೆ.

ಪ್ರೊಸೆಸರ್: ಅಡ್ರಿನೊ 750 ಜಿಪಿಯು ಜೊತೆಗೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜನ್ 3 ಪ್ರೊಸೆಸರ್ ನೀಡಲಾಗಿದೆ.

RAM+ಸಂಗ್ರಹಣೆ : ಚಿಪ್‌ಸೆಟ್ ಅನ್ನು 16GB LPDDR5x RAM ಮತ್ತು 1TB UFS 4.0 ಸಂಗ್ರಹಣೆಯೊಂದಿಗೆ ಜೋಡಿಸಲಾಗಿದೆ.

ಸಾಫ್ಟ್‌ವೇರ್: ಆಂಡ್ರಾಯ್ಡ್ 14-ಆಧಾರಿತ HyperOS ಕಸ್ಟಮ್ ಮೂಲಕ ರನ್ ಆಗುತ್ತದೆ.

ಕ್ಯಾಮೆರಾಗಳು: 50MP ಸೋನಿ LYT900 ಮುಖ್ಯ ಕ್ಯಾಮೆರಾ, 50MP ಸೋನಿ IMX858 ಟೆಲಿಫೋಟೋ ಜೂಮ್ ಲೆನ್ಸ್, 50MP ಸೋನಿ IMX858 ಟೆಲಿಫೋಟೋ ಜೂಮ್ ಲೆನ್ಸ್ ಮತ್ತು 50MP ಅಲ್ಟ್ರಾವೈಡ್ ಶೂಟರ್ ಇದೆ. ಸೆಲ್ಫಿಗಳು ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾವನ್ನು ಕಾಣಬಹುದು.

ಬ್ಯಾಟರಿ: 90W ವೈರ್ಡ್ ಚಾರ್ಜಿಂಗ್ ಮತ್ತು 80W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 5,300mAh ಬ್ಯಾಟರಿಯನ್ನು ಹೊಂದಿದೆ.

ಸಂಪರ್ಕ: 5G, Wi-Fi, ಬ್ಲೂಟೂತ್, GPS, NFC, ಮತ್ತು ಚಾರ್ಜಿಂಗ್‌ಗಾಗಿ USB-C ಟೈಪ್-C ಪೋರ್ಟ್.

ಗೀಸರ್ ಸ್ವಿಚ್ ಆಫ್ ಮಾಡಲು ಮರೆತು ಆಫೀಸ್​ಗೆ ಹೋದರೆ ಏನಾಗುತ್ತದೆ?

ಶವೋಮಿ 14 ಫೀಚರ್ಸ್

ಡಿಸ್​ಪ್ಲೇ: ಶವೋಮಿ 14 ಫೋನ್ 6.36-ಇಂಚಿನ 1.5K C8 LTPO OLED ಡಿಸ್​ಪ್ಲೇ ಜೊತೆಗೆ 120Hz ರಿಫ್ರೆಶ್ ದರ, 3000 nits ಗರಿಷ್ಠ ಬ್ರೈಟ್​ನೆಸ್ ಮತ್ತು ಗೊರಿಲ್ಲಾ ಗ್ಲಾಸ್ ವಿಕ್ಟಸ್ ರಕ್ಷಣೆಯನ್ನು ಹೊಂದಿದೆ. ಪ್ರೊಸೆಸರ್: ಈ ಫೋನ್ ಅಡ್ರಿನೊ ಜಿಪಿಯು ಜೊತೆಗೆ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 8 ಜನ್ 3 ಚಿಪ್ಸೆಟ್​ನಿಂದ ಚಾಲಿತವಾಗಿದೆ.

OS : ಆಂಡ್ರಾಯ್ಡ್ 14-ಆಧಾರಿತ HyperOS ಕಸ್ಟಮ್ ಸ್ಕಿನ್ ಔಟ್ ಆಫ್ ದಿ ಬಾಕ್ಸ್ ಮೂಲಕ ರನ್ ಆಗುತ್ತದೆ.

ಕ್ಯಾಮೆರಾಗಳು: ಶವೋಮಿ 14 50MP ಪ್ರಾಥಮಿಕ ಕ್ಯಾಮೆರಾ, 50MP ಅಲ್ಟ್ರಾ-ವೈಡ್ ಸಂವೇದಕ ಮತ್ತು 50MP ಟೆಲಿಫೋಟೋ ಸಂವೇದಕವನ್ನು ಹೊಂದಿದೆ. ಮುಂಭಾಗದಲ್ಲಿ 32MP ಸ್ನ್ಯಾಪರ್ ಇದೆ.

ಬ್ಯಾಟರಿ, ಚಾರ್ಜಿಂಗ್: 90W ವೇಗದ ಚಾರ್ಜಿಂಗ್ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 4,610mAh ಬ್ಯಾಟರಿ ಇದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:57 pm, Mon, 26 February 24

ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ